ಮಹಾರಾಷ್ಟ್ರ: ಸಂವಿಧಾನ ಬದಲಿಸುವ ಬಗ್ಗೆ ಮಾತನಾಡುತ್ತಿರುವವರಿಗೆ ದೇಶ ತಕ್ಕ ಪಾಠ ಕಲಿಸಿದೆ ಎಂದು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಶುಕ್ರವಾರ ಹೇಳಿದ್ದಾರೆ.
ಶೇಷರಾವ್ ಚವ್ಹಾಣ್ ಅವರ ಉರ್ದು ಅನುವಾದದ ಇಂಗ್ಲಿಷ್ ಪುಸ್ತಕ “ಪದ್ಮವಿಭೂಷಣ ಶರದ್ ಪವಾರ್ – ದಿ ಗ್ರೇಟ್ ಎನಿಗ್ಮಾ” ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ರಾಜಕೀಯ ಪರಿಸ್ಥಿತಿ ಬದಲಾಗಬೇಕು ಎಂದ ಪವಾರ್, “ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂದು ಯೋಚಿಸಬೇಕು. ದೇಶವು ತಪ್ಪು ಕೈಗೆ ಬೀಳದಂತೆ ನೋಡಿಕೊಳ್ಳಬೇಕು” ಎಂದು ಹೇಳಿದರು.
