ರಾಹುಲ್‌ಗಾಂಧಿ ಚುನಾವಣೆಗೆ ಸ್ವರ್ಧಿಸದಂತೆ ಮಾಡುವ ಯೋಜಿತ ಷಡ್ಯಂತ್ರದ ಭಾಗವಾಗಿತ್ತು.
ಕರ್ನಾಟಕದ ಕೋಲಾರದಲ್ಲಿ 2019 ರ ಏಪ್ರಿಲ್ 13 ರಂದು ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ರಾಹುಲ್‌ಗಾಂಧಿಯವರು ‘ಎಲ್ಲ ಕಳ್ಳರು ಮೋದಿ ಎಂಬ ಉಪನಾಮವನ್ನು ಹೇಗೆ ಹೊಂದಿದ್ದಾರೆ’ ಎಂದು ಪ್ರಶ್ನಿಸಿದ್ದರು.ಈ ಸಂಬಂಧ ಗುಜರಾತಿನ ಮಾಜಿ ಸಚಿವ ಪೂರ್ಣಿಶ್ ಮೋದಿ ಎಂಬವರು ರಾಹುಲ್ ವಿರುದ್ಧ 2019 ರಲ್ಲಿ ಸೂರತ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಮೋದಿ ಉಪನಾಮ ಟೀಕೆ ಕುರಿತು ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತಿನ ಸೂರತ್ ಮೆಜಿಸ್ಟ್ರೇಟ್ ಕೋರ್ಟ್ ನಲ್ಲಿ ತಪ್ಪಿತಸ್ಥ ಎಂದು ತೀರ್ಪು ನೀಡಿ,ಎರಡು ವರ್ಷಗಳ ಶಿಕ್ಷೆ ವಿಧಿಸಿತ್ತು. ಶಿಕ್ಷೆಗೆ ತಡೆ ನೀಡಲು ಗುಜರಾತ್ ಹೈಕೋರ್ಟು ನಿರಾಕರಿಸಿತ್ತು. ಅದನ್ನು ಪ್ರಶ್ನಿಸಿ ರಾಹುಲ್ ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಶಿಕ್ಷೆಗೆ ತಡೆಯಾಜ್ಞೆ ನೀಡಿತು.
ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡುವಾಗ ಕೆಲವು ಗಮನಾರ್ಹ ಸಂಗತಿಗಳನ್ನು ಉಲ್ಲೇಖಿಸಿರುವುದು ಗುಜರಾತಿನ ಎರಡೂ ಕೋರ್ಟ್ ಗಳ ತೀರ್ಪಿನ ಹಿನ್ನೆಲೆಯಲ್ಲಿ ರಾಜಕೀಯ ಒತ್ತಡವಿರುವ ಅನುಮಾನಕ್ಕೆ ಪುಷ್ಠಿ ನೀಡುವಂತಿದೆ.
ವಾಸ್ತವದಲ್ಲಿ ಗುಜರಾತಿನ ಕೋರ್ಟುಗಳ ತೀರ್ಪುಗಳು ಮಾನನಷ್ಟ ಪ್ರಕರಣ ದಾಖಲಿಸಿದ ಪೂರ್ಣೆಶ್ ಮೋದಿ ಕೂಡ ಉಲ್ಲೇಖಿಸದಿರುವ ಅಂಶಗಳನ್ನು ಸ್ವಯಂಪ್ರೇರಿತವಾಗಿ ಗಣನೆಗೆ ತೆಗೆದುಕೊಂಡು ಈ ಕೇಸಿನಲ್ಲಿ ಅತೀವ ಮುತುವರ್ಜಿ ವಹಿಸಿದ ಚಹರೆಯನ್ನು ನ್ಯಾಯತಜ್ಞರು ಗುರುತಿಸಿದ್ದಾರೆ. ಶಿಕ್ಷೆಯ ಪ್ರಮಾಣ 2 ವರ್ಷಕ್ಕಿಂತ ಒಂದು ದಿನ ಕಡಿಮೆಯಾದರೂ ರಾಹುಲ್‌ಗಾಂಧಿ ಸಂಸತ್ ಸದಸ್ಯತ್ವದಿಂದ ಅನರ್ಹಗೊಳ್ಳುವ ನಿಬಂಧನೆಗಳು ಅನ್ವಯವಾಗುತ್ತಿರಲಿಲ್ಲ.ಆದರೆ ಗುಜರಾತ್ ಕೋರ್ಟ್ ಭರ್ತಿ ಎರಡು ವರ್ಷಗಳ ಶಿಕ್ಷೇಯನ್ನೇ ನೀಡಿತು.!

ಗುಜರಾತಿನ ವಿಚಾರಣಾ ನ್ಯಾಯಾಲಯವು ರಾಹುಲ್‌ಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸುವಾಗ ಅದು ತನ್ನ ಆದೇಶ ಸಮರ್ಥಿಸುವಂತಹ ಯಾವುದೇ ಕಾರಣಗಳನ್ನು ನೀಡಿಲ್ಲವೆಂದು ಹೇಳಿರುವ ಸುಪ್ರೀಂಕೋರ್ಟ್ ಇದು ಅರಿವಿಲ್ಲದೆ ಆಗಿರುವ, ಜಾಮೀನು ಪಡಯಬಹುದಾದ ಮತ್ತು ಸರಿಪಡಿಸಿಕೊಳ್ಳಬಹುದಾದ ಅಪರಾಧವಾಗಿದ್ದರಿಂದ ಸಂಸತ್ ಸದಸ್ಯತ್ವ ಅನರ್ಹಗೊಳ್ಳುವ ಭರ್ತಿ ಎರಡು ವರ್ಷಗಳ ಜೈಲು ಶಿಕ್ಷೆಯ ಅಗತ್ಯವಿರಲಿಲ್ಲವೆಂದು ಅಭಿಪ್ರಾಯಪಟ್ಟಿದೆ. ತನ್ಮೂಲಕ ಸುಪ್ರೀಂಕೋರ್ಟ್ ಗುಜರಾತಿನ ಕೆಳ ಹಂತದ ನ್ಯಾಯಾಲಯಗಳು ಮಾಡಿದ ತಪ್ಪನ್ನು ಸರಿಪಡಿಸಿ ಭಾರತೀಯ ನ್ಯಾಯ ವ್ಯವಸ್ಥೆಯ ಮೇಲಿರುವ ನಂಬಿಕೆಯನ್ನು ಮತ್ತಷ್ಟು ಎತ್ತರಕ್ಕೇರಿಸಿದೆ.ಸುಪ್ರೀಂ ಕೋರ್ಟಿನ ಆದೇಶದಿಂದ ದುರ್ಬಲವಾದ ಪ್ರಕರಣಕ್ಕೆ ಕೆಳಹಂತದ ನ್ಯಾಯಲಯಗಳು ನೀಡಿದ ತೀರ್ಪು ಎಷ್ಟು ಅತಾರ್ತಿಕವಾಗಿದ್ದವು ಎಂಬುದನ್ನು ಸ್ಪಷ್ಟವಾಗಿ ನಿರೂಪಿಸಿದೆ.
ಇದೇ ಪ್ರಕರಣದಲ್ಲಿ ಸಾವರ್ಕರ್ ಮೊಮ್ಮಗನೂ ಸೇರಿದಂತೆ ಮೋದಿ ಹೆಸರಿನ ಹಲವರು ಬೇರೆ ಬೇರೆ ಕೋರ್ಟುಗಳಲ್ಲಿ ಪ್ರಕರಣ ದಾಖಲಿಸಿದ್ದರು. ಇದು ರಾಹುಲ್ ಗಾಂಧಿಯವರನ್ನು ಚುನಾವಣೆಗೆ ಸ್ವರ್ಧಿಸದಂತೆ ಮಾಡುವ ಯೋಜಿತ ಷಡ್ಯಂತ್ರದ ಭಾಗವಾಗಿತ್ತು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.ಆದರೆ ಸುಪ್ರೀಂ ಕೋರ್ಟ್ ಅವರೆಲ್ಲರ ಯೋಜನೆಯನ್ನು ಬುಡಮೇಲುಗೊಳಿಸಿದೆ.
ಮತ್ತೊಂದೆಡೆ ಪ್ರಕರಣ ದಾಖಲಿಸಿದ ಪೂರ್ಣೇಶ್ ಮೋದಿಯ ಜಾತಿ ‘ಮೋದಿ’ ಯಾಗಿಲ್ಲ ಎಂಬ ವಾದವೂ ಕೇಳಿ ಬರುತ್ತಿದೆ.ನುರಿತ ಕಾನೂನುತಜ್ಞರು ವಕೀಲರೂ ಆದ ಅಭಿಷೇಕ್ ಸಿಂಗ್ ಅವರ ಪ್ರಬಲ ವಾದದ ಮುಂದೆ ರಾಹುಲ್‌ಗಾಂಧಿ ವಿರೋಧಿಗಳ ಯಾವ ಆಟವೂ ನಡೆಯದೆ ಬಾಲ ಮಡಚಿ ತೆಪ್ಪಗಿರುವಂತೆ ಮಾಡಿತು. ಈ ತೀರ್ಪು ಕಾಂಗ್ರೆಸ್ಸಿಗರು ಮಾತ್ರವಲ್ಲ. ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯ ಮೇಲೆ ನಂಬಿಕೆಯಿರುವ ದೇಶದ ಪ್ರತಿಯೊಬ್ಬರಿಗೂ ಸಂತಸ, ಸಂಭ್ರಮದ ಸಂಗತಿಯಾಗಿದೆ,