ಪೊಲೀಸ್ ಸಿಬ್ಬಂದಿಯೇ ಶಾಮೀಲು ಶಂಕೆ.! ಪೊಲೀಸ್ ಸಿಬ್ಬಂದಿಯನ್ನೇ ಅಪರಾಧಿಯನ್ನಾಗಿ ಪರಿಗಣಿಸಬೇಕು; ಗಾಯಾಳುಗಳ ಆಕ್ರೋಶ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣಾವ್ಯಾಪ್ತಿಯ, ಸೂಲದಹಳ್ಳಿ ಯಲ್ಲಿ ಡಿ.5ರಂದು ಹೊಲದ ವಿಚಾರದಲ್ಲಿ, ದಾಯಾದಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಒಂದು ಗುಂಪಿನವರ ಮೇಲೆ ಮತ್ತೊಂದು ಗುಂಪು ಮಾರಣಾಂತಿಕ ಹಲ್ಲೆಮಾಡಿದ ಪರಿಣಾಮ ಮೂವರು ತೀವ್ರವಾಗಿ ಮಾರಣಾಂತಿಕ ಗಾಯಗೊಂಡಿದ್ದಾರೆ. ಗಾಯಳುಗಳು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ, ತುರ್ತಾಗಿ ಅಗತ್ಯ ಪ್ರಥಮ ಚಿಕಿತ್ಸೆ ಪಡಿದಿದ್ದಾರೆ.

ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ, ಖಾನಾಹೊಸಹಳ್ಳಿ ಠಾಣಾ ಪೊಲೀಸರು ಆಸ್ಪತ್ರೆಗೆ ಆಗಮಿಸಿ, ಗಾಯಾಳುಗಳನ್ನು ಭೇಟಿಯಾಗಿ ಗಾಯಾಳುಗಳ ಹೇಳಿಕೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಗಾಯಾಳುಗಳು ಹೇಳಿಕೆಯಂತೆ, ನೈಜ್ಯ ಘಟನಾವಳಿಯ ಅಂಶಗಳನ್ನು ದಾಖಲಸಿಕೊಳ್ಳದೇ ಖಾಲಿ ಪೇಪರ್ ಗಳಲ್ಲಿ ಗಾಯಾಳುಗಳಿಂದ ಸಹಿಹಾಕಿಸುವ ಪ್ರಯತ್ನ ನಡೆಸಿದ್ದಾರೆ ಎಂಬ ಆರೋಪವನ್ನು ಗಾಯಾಳುಗಳು ಮಾಡಿದ್ದಾರೆ.

ಖಾನಾಹೊಸಹಳ್ಳಿಯ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯೋರ್ವರ ಕುಮ್ಮಕ್ಕಿನಿಂದಲೇ ಈ ಘಟನೆ ನಡೆಯಲು ಕಾರಣ ಎಂಬುದು ಗಾಯಾಳುಗಳ ಗಂಭೀರ ಆರೋಪವಾಗಿದ್ದು, ಮೊದಲನೇ ಆರೋಪಿಯನ್ನಾಗಿ ಪೊಲೀಸ್ ಸಿಬ್ಬಂದಿಯನ್ನು ಮಾಡಬೇಕು, ಈ ಘಟನೆಗೆ ಮೂಲಕಾರಣವಾಗಿದ್ದು ಅದೇ ಪೊಲೀಸ್ ಸಿಬ್ಬಂದಿ, ಈತನನ್ನು ಅಪರಾಧಿಯಾಗಿ ಪರಿಗಣಿಸಬೇಕಾಗಿದೆ ಎಂದು ಗಾಯಳುಗಳು ದೂರಿದ್ದಾರೆ.
ಈ ಕಾರಣಕ್ಕಾಗಿ ಪೊಲೀಸರು ಗಾಯಾಳುಗಳ ಹೇಳಿಕೆ ನಮೂದಿಸದೇ, ನೀವು ಖಾಲಿ ಪೇಪರ್ ಗಳಲ್ಲಿ ಸಹಿ ಮಾಡಿಕೊಡಿ ನೀಮ್ಮ ಹೇಳಿಕೆಯಂತೆಯೇ ನಾವು ದೂರು ದಾಖಲಿಸಿಕೊಳ್ಳುತ್ತೇವೆ ಎಂದಿದ್ದಾರೆ. ಅದನ್ನು ತಾವು ಸಮ್ಮತಿ ನೀಡಿಲ್ಲ, ಪೊಲೀಸರು ಪ್ರಭಾವಕ್ಕೆ ಒಳಗಾಗಿ ದೂರಿನಲ್ಲಿ ನಮ್ಮ ಹೇಳಿಕೆಯಲ್ಲಿನ ಅಂಶಗಳನ್ನು, ಕೈ ಬಿಡುವ ಸಾಧ್ಯ ಇರುವ ಕಾರಣ ನಾವು ತದನಂತರ ವೈದ್ಯರ ಸಲಹೆ ಮೇರೆಗೆ ಅರವನ್ನು, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಜರುಗಿ ಮೂರು ದಿನಗಳಾದರೂ ಈವರೆಗೂ ಹೊಸಹಳ್ಳಿ ಪೋಲೀಸರು ತಮ್ಮ ಹೇಳಿಕೆಯಂತೆ ಪ್ರಕರಣ ದಾಖಲಿಸಿಲ್ಲ ಎಂದು ಗಾಯಾಳುಗಳು ಅರೋಪಿಸಿದ್ದಾರೆ.
