ಬೆಂಗಳೂರು ಗಾರ್ಡನ್ ಸಿಟಿ ಬದಲಿಗೆ ಗಾರ್ಬೇಜ್ ಸಿಟಿ ಎಂಬ ಮಾತಿಗೆ ಪೂರಕವಾದಂತಿದೆ.
✍️. ಕೆ. ಎ ಹನೀಫ್
ಬೆಂಗಳೂರಿನಲ್ಲಿ ವಾಣಿಜ್ಯ, ವಸತಿ ಸೇರಿದಂತೆ ಹೆಚ್ಚಿನ ಅವೈಜ್ಞಾನಿಕ ಕಟ್ಟಡಗಳ ನಿರ್ಮಾಣದ ಸಂದರ್ಭ ಕೆಲವು ಅಧಿಕಾರಿಗಳಿಂದ ಹಿಡಿದು ರಾಜಕಾರಣಿಗಳು ತಮ್ಮ ಚೇಲಾಗಳು ಸೇರಿದಂತೆ ಇತರರೊಂದಿಗೆ ಲಂಚ ಮಾತ್ರವಲ್ಲದೇ ತಮ್ಮತಮ್ಮ ಪಕ್ಷ, ಜಾತಿ ಧರ್ಮ ಎಂಬ ಹೆಸರಿನಲ್ಲಿ ರಾಜಿಯಾಗುತ್ತಿದ್ದಾರೆ ಎಂದನಿಸುತ್ತದೆ.

ಬೆಂಗಳೂರಿನಲ್ಲಿ ಕೆರೆಗಳ ಒತ್ತುವರಿ ಸೇರಿದಂತೆ ಅವೈಜ್ಞಾನಿಕ, ಅಕ್ರಮ ಕಟ್ಟಡಗಳಿಂದ ಕೂಡಿ ಚರಂಡಿಗಳ ಮೂಲಕ ಸರಿಯಾಗಿ ನೀರಿನ ಹರಿಯುವಿಕೆ ಇಲ್ಲದೆ ಪ್ರತಿ ಮಳೆಗಾಲದ ಸಂದರ್ಭ ಬೆಂಗಳೂರಿನ ಪರಿಸ್ಥಿತಿ ಶೋಚನೀಯವಾಗಿದ್ದು, ಇಂದು ಬೆಂಗಳೂರು ಗಾರ್ಡನ್ ಸಿಟಿ ಬದಲಿಗೆ ಗಾರ್ಬೇಜ್ ಸಿಟಿ ಎಂಬ ಮಾತಿಗೆ ಪೂರಕವಾದಂತಿದೆ.
ಹಾಗೆಯೇ ದೇಶದಲ್ಲಿ ನಮ್ಮ ರಾಜ್ಯ ಹೆಚ್ಚಿನ ತೆರಿಗೆ ನೀಡುವ ರಾಜ್ಯಗಳಲ್ಲಿ ಒಂದಾಗಿದೆ. ಕೇಂದ್ರ ಸರ್ಕಾರದಲ್ಲಿ ಹೆಚ್ಚಿನ ಉತ್ತರ ಭಾರತೀಯ ರಾಜ್ಯಗಳ ಸಂಸದರು, ಮಂತ್ರಿಗಳಿದ್ದು, ಅಧಿಕಾರ ನಡೆಸುತ್ತಿದ್ದಾರೆ. ಆದರೆ ತಮ್ಮತಮ್ಮ ರಾಜ್ಯಗಳಲ್ಲಿರುವ ಮಾನವ ಸಂಪನ್ಮೂಲವನ್ನು ಸರಿಯಾಗಿ ಬಳಕೆ ಮಾಡದೆ, ಅಭಿವೃದ್ಧಿ ಇಲ್ಲದ ಕಾರಣ ಅಲ್ಲಿನ ಯುವಜನರು ಉದ್ಯೋಗಕ್ಕಾಗಿ ನಮ್ಮ ರಾಜ್ಯದ ಬೆಂಗಳೂರಿನಂಥ ನಗರಗಳ ಕಡೆಗೆ ವಲಸೆ ಬರುತ್ತಾರೆ. ಆದರೂ ಸಹ ಕೇಂದ್ರ ಸರ್ಕಾರ ಪ್ರತಿ ಸಲ ಬಜೆಟ್ ನಲ್ಲಿ ನಮ್ಮ ರಾಜ್ಯಕ್ಕೆ ಸರಿಯಾಗಿ ಅನುದಾನವನ್ನು ನೀಡದಿರುವುದು ವಿಪರ್ಯಾಸ.

ಅದೇ ರೀತಿ ಬೆಂಗಳೂರಿನ ಇತಿಮಿತಿ ಇಲ್ಲದ IT, BT ಕಂಪನಿಗಳು ಸೇರಿದಂತೆ ಅತಿಯಾದ ಕೈಗಾರೀಕರಣದಿಂದಾಗಿ structure ಜತೆಗೆ culture ಸಹ ಎಲ್ಲಾ ಹಾಳಾಗುತ್ತಿದ್ದು ಭವಿಷ್ಯದಲ್ಲಿ ಮಂಗಳೂರು, ಮೈಸೂರಿನಂಥ ನಗರಗಳಿಗೆ ಪಾಠವಾಗಲಿದೆ ಎಂದು ಹೇಳಬಹುದು
