ಪಾಣೆಮಂಗಳೂರು ನೇತ್ರಾವತಿ ಸೇತುವೆಯಲ್ಲಿ ಬೈಕ್ ಜೊತೆ ಮೊಬೈಲ್, ಚಪ್ಪಲಿ ಪತ್ತೆ..ಪುತ್ತೂರು ನಗರಸಭಾ ಸದಸ್ಯ ರಮೇಶ್ ರೈ ನಾಪತ್ತೆ..ತೀವ್ರ ಶೋಧ..

ಕರಾವಳಿ

ಪಾಣೆಮಂಗಳೂರು ಹಳೆ ಸೇತುವೆಯಲ್ಲಿ ಬೈಕ್, ಚಪ್ಪಲಿ, ಮೊಬೈಲ್ ಫೋನ್ ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದಂತೆ ಪುತ್ತೂರು ನಗರಸಭೆಯ ಕೌನ್ಸಿಲರ್ ನೆಲ್ಲಿಕಟ್ಟೆ ರಮೇಶ್ ರೈ ಅವರದ್ದೆಂದು ತಿಳಿದುಬಂದಿದೆ.

ತನ್ನ ಸೊತ್ತುಗಳನ್ನು ಸೇತುವೆಯಲ್ಲಿಟ್ಟು ರಮೇಶ್ ರೈ ನೇತ್ರಾವತಿ ನದಿಗೆ ಹಾರಿದ್ದಾರೆ ಎಂಬ ಬಲವಾದ ಸಂಶಯ ಮೂಡಿಬಂದಿದೆ. ಇದೀಗ ಸೇತುವೆಯಲ್ಲಿ ಭಾರಿ ಜನ ಜಮಾಯಿಸಿದ್ದು ನೇತ್ರಾವತಿ ನದಿಯಲ್ಲಿ ಹುಡುಕಾಟ ಆರಂಭವಾಗಿದೆ.

ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ರಮೇಶ್ ರೈ ಅವರು ಜಯಗಳಿಸಿದ್ದರು‌. ಕುಟುಂಬಸ್ಥರು ಹಾಗೂ ಅಪಾರ ಸಂಖ್ಯೆಯ ಬಂಧು-ಮಿತ್ರರು ಪಾಣೆಮಂಗಳೂರು ಸೇತುವೆ ಬಳಿ ಜಮಾಯಿಸಿದ್ದಾರೆ.

ಸಾಧು ಸ್ವಭಾವದ ಸ್ನೇಹಮಯಿ ವ್ಯಕ್ತಿಯಾಗಿದ್ದ ರಮೇಶ್ ರೈ ಕೆಲಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂಬ ಮಾಹಿತಿ ಸ್ನೇಹಿತರ ಮೂಲಗಳಿಂದ ತಿಳಿದು ಬಂದಿದೆ.