ರಮೇಶ್ ಬಾಬು, ದಿನೇಶ್ ಅಮೀನ್ ಮಟ್ಟು, ಡಾ.ಆರತಿ ಕೃಷ್ಣ, ಡಿಜಿ ಸಾಗರ್ ನಾಲ್ವರು ಪೈನಲ್
ವಿಧಾನ ಪರಿಷತ್ತಿಗೆ ನಾಲ್ವರ ಹೆಸರುಗಳನ್ನು ರಾಜ್ಯ ಸರ್ಕಾರ ಅಂತಿಮಗೊಳಿಸಿದೆ. ಸಮಾಜಸೇವೆ, ಶಿಕ್ಷಣ, ಸಹಕಾರ ಕ್ಷೇತ್ರದ ಕೋಟಾದಡಿ ಕೆಪಿಸಿಸಿ ವಕ್ತಾರ ರಮೇಶ್ ಬಾಬು, ಪತ್ರಕರ್ತರ ಕೋಟಾದಡಿ ದಿನೇಶ್ ಅಮೀನ್ ಮಟ್ಟು, ಅನಿವಾಸಿ ಭಾರತೀಯ ಸೇವೆ, ಮಹಿಳಾ, ಸಮಾಜ ಸೇವೆ ಕೋಟಾದಡಿ ಡಾ.ಆರತಿ ಕೃಷ್ಣ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಧ್ಯಕ್ಷರಾದ ಡಿಜಿ ಸಾಗರ್ ಹೆಸರುಗಳನ್ನುಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದೆ.
ಈ ನಾಲ್ವರನ್ನು ಪರಿಷತ್ ಗೆ ನಾಮನಿರ್ದೇಶನ ಎಂದು ಸಿದ್ದರಾಮಯ್ಯ ಸರ್ಕಾರ ರಾಜ್ಯಪಾಲರಿಗೆ ಶಿಫಾರಸು ಮಾಡಿದೆ. ಖಾಲಿ ಇರುವ ಪರಿಷತ್ ನ ನಾಲ್ಕು ಸ್ಥಾನಗಳಿಗೆ ಹಲವಾರು ಕಾಂಗ್ರೆಸ್ ನಾಯಕರು ತೀವ್ರ ಲಾಬಿ ನಡೆಸಿದ್ದರು.
ರಾಜ್ಯ ವಿಧಾನ ಪರಿಷತ್ನ ನಾಲ್ಕು ಸ್ಥಾನಗಳಿಗೆ ಸರ್ಕಾರ ನಾಮನಿರ್ದೇಶನ ಮಾಡುವ ಹಿನ್ನೆಲೆ ಇದೀಗ ನಾಲ್ವರು ಎಂಎಲ್ಸಿಗಳ ಹೆಸರು ಫೈನಲ್ ಎನ್ನಲಾಗಿದೆ. ಈ ಹೆಸರುಗಳು ಅಂತಿಮವಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ ಎಂದು ಹೇಳಲಾಗಿದೆ.
