ಮಾದಕ ವ್ಯಸನಕ್ಕೆ ಬಲಿಯಾದ ಅಪ್ರಾಪ್ತ ಬಾಲಕಿ, ಹಲವು ಪುರುಷರೊಂದಿಗೆ ಲೈಂಗಿಕ ಸಂಬಂಧ, ಸುಮಾರು19 ಜನರಿಗೆ ಏಡ್ಸ್

ರಾಷ್ಟ್ರೀಯ

ಮಾದಕ ವ್ಯಸನಕ್ಕೆ ಬಲಿಯಾದ 17 ವರ್ಷದ ಬಾಲಕಿಯೊಬ್ಬಳು ಹಲವಾರು ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿ, ಸರಿ-ಸುಮಾರು19 ಜನರಿಗೆ ಎಚ್ಐವಿ ಹರಡಿಸಿದ್ದಾಳೆ. ಉತ್ತರಾಖಂಡದ ರಾಮನಗರ ಪಟ್ಟಣದ ಗುಲರ್‌ಘಟ್ಟಿ ಪ್ರದೇಶದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಈ ಬಾಲಕಿ ಆರ್ಥಿಕವಾಗಿ ತೀರಾ ಹಿಂದುಳಿದ ಕುಟುಂಬದಿಂದ ಬಂದವಳಾಗಿದ್ದು, ಡ್ರಗ್ಸ್ ಸೇವನೆಗೆ ತನ್ನ ಲೈಂಗಿಕ ಸಂಪರ್ಕದಿಂದ ಬಂದ ಹಣವನ್ನು ಖರ್ಚು ಮಾಡುತ್ತಿದ್ದಳು ಎನ್ನಲಾಗಿದೆ.

ಆಕೆಯೊಂದಿಗೆ ಸಂಪರ್ಕ ಹೊಂದಿದವರಲ್ಲಿ ವಿವಾಹಿತ ಪುರುಷರೂ ಸೇರಿದ್ದಾರೆ. ಆಕೆಗೆ ಎಚ್‌ಐವಿ ಇದೆ ಎಂದು ಅವರಿಗೆ ತಿಳಿದಿರಲಿಲ್ಲ ಎನ್ನಲಾಗಿದೆ. ಇದರಿಂದಾಗಿ, ಕೆಲವು ವಿವಾಹಿತ ಪುರುಷರಿಂದ ತಮ್ಮ ಪತ್ನಿಯರಿಗೂ ವೈರಸ್ ಹರಡಿದೆ ಎನ್ನಲಾಗಿದೆ.

ಅ ಪ್ರದೇಶದಲ್ಲಿ ಹಲವಾರು ಯುವಕರು ತೀವ್ರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಇದಕ್ಕಾಗಿ ಅವರು ಇಂಟಿಗ್ರೇಟೆಡ್ ಕೌನ್ಸೆಲಿಂಗ್ ಮತ್ತು ಟೆಸ್ಟಿಂಗ್ ಸೆಂಟರ್ ಗೆ ಭೇಟಿ ನೀಡಿ ಪರೀಕ್ಷಿಸಿದಾಗ ಎಚ್‌ಐವಿ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ನಂತರ ತನಿಖೆಯಲ್ಲಿ, ಈ ಬಾಲಕಿಯಿಂದಲೇ ವೈರಸ್ ಹರಡಿರುವ ಸಾಧ್ಯತೆ ಇದೆ ಎಂಬುವುದು ಬೆಳಕಿಗೆ ಬಂದಿತ್ತು. ಕೌನ್ಸೆಲಿಂಗ್ ಸಂದರ್ಭದಲ್ಲಿ, ಆಕೆ ದೀರ್ಘಕಾಲದಿಂದ ಸೋಂಕಿತ ಪುರುಷರೊಂದಿಗೆ ಲೈಂಗಿಕವಾಗಿ ಸಕ್ರಿಯವಾಗಿದ್ದಳು ಎಂದು ತಿಳಿದುಬಂದಿದೆ.