ಸ್ಥಳೀಯ ನಾಗರೀಕರ ಮೇಲೆಯೇ ರೋಷಾ ವೇಷ, ಗೂಂಡಾಗಿರಿ ತೋರ್ಪಡಿಸುವ ಮಾರ್ವಾಡಿಗಳ ದಬ್ಬಾಳಿಕೆಗೆ ಮುಕ್ತಿ ಯಾವಾಗ.?
ಇಲ್ಲಿನ ನೆಲ, ಜಲ ಉಪಯೋಗಿಸಿ ಇಲ್ಲಿಯೇ ವ್ಯವಹಾರ ಮಾಡಿ ಇಲ್ಲಿನ ನಾಗರಿಕರ ಮೇಲೆ ದಬ್ಬಾಳಿಕೆ ನಡೆಸುತ್ತಾ ಗೂಂಡಾಗಿರಿ ಪ್ರದರ್ಶಿಸುವ ಮಾರ್ವಾಡಿಗಳ ಆಟಾಟೋಪ ಜಾಸ್ತಿಯಾಗಿದೆ. ಗುಜರಾತ್, ಉತ್ತರ ಭಾರತ ಮೊದಲಾದ ಕಡೆಯಿಂದ ವ್ಯವಹಾರಕ್ಕೆ ಬಂದು ಇಲ್ಲಿಯೇ ಸೆಟ್ಲ್ ಆಗಿ ಸ್ಥಳೀಯ ನಾಗರೀಕರ ಮೇಲೆಯೇ ರೋಷಾ ವೇಷ ತೋರ್ಪಡಿಸುವ ಮಾರ್ವಾಡಿಗಳ ದಬ್ಬಾಳಿಕೆಗೆ ಮುಕ್ತಿ ಯಾವಾಗ.? ಬೆಂಗಳೂರು, ಮಂಗಳೂರು ನಂತಹ ಮಹಾನಗರಗಳಲ್ಲಿ ವ್ಯಾಪಾರದಲ್ಲಿ ಮಾರ್ವಾಡಿಗಳದ್ದೇ ರಾಜ ದರ್ಬಾರ್. ನಗರ ಪ್ರದೇಶಗಳಲ್ಲಿ ವ್ಯಾಪಾರ ನಡೆಸಲು ಮೀಸೆ ತೂರಿಸಿ ನುಗ್ಗುವ ಇವರು ನಂತರ ಇಡೀ ವ್ಯವಹಾರವನ್ನೇ ಕಬ್ಜಾ ಮಾಡಿಕೊಂಡು ಆ ನಂತರ ಆ ಪ್ರದೇಶವನ್ನೇ ಮಾರ್ವಾಡಿ ಏರಿಯಾ ಆಗಿ ಪರಿವರ್ತಿಸುವಲ್ಲಿ ಇವರು ಜಾಣರು. ಮೊದಮೊದಲಿಗೆ ಅಲ್ಲಿನ ನಾಗರೀಕರನ್ನು ವಿಶ್ವಾಸಕ್ಕೆ ಪಡೆದರೆ, ಆ ನಂತರ ಇವರದ್ದೇ ದರ್ಬಾರ್. ಹೇಳುವವರು ಕೇಳುವವರು ಯಾರೂ ಇಲ್ಲ. ಕನ್ನಡಿಗರನ್ನು ಕೆಲಸಕ್ಕೂ ನೇಮಿಸದೆ, ಮಾರ್ವಾಡಿಗಳನ್ನೇ ನೇಮಕ ಮಾಡಿಕೊಳ್ಳುತ್ತಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಪಾರ್ಕಿಂಗ್ ಏರಿಯಾದ ಬಗ್ಗೆ ಈ ಮಾರ್ವಾಡಿಗಳು ಕನ್ನಡಿಗರೊಂದಿಗೆ ಗಲಾಟೆ ಮಾಡಿದ್ದು ಇದೆ. ಕನ್ನಡ ಪರ ಸಂಘಟನೆಗಳು ಕಣ್ಣು ಮುಚ್ಚಿ ಕುಳಿತಂತಿದೆ. ಆನೆ ನಡೆದದ್ದೇ ದಾರಿ ಅನ್ನುವಂತೆ ಮಾರ್ವಾಡಿಗಳದ್ದೇ ಕಾರುಬಾರು. ಎಲ್ಲಿಂದಲೋ ಬಂದು ಎಲ್ಲವನ್ನೂ ಹತೋಟಿಗೆ ಪಡೆಯುವುದು ಮಾತ್ರವಲ್ಲ ಇಲ್ಲಿನ ನಾಗರೀಕರ ಮೇಲೆಯೇ ದೌರ್ಜನ್ಯ ಎಸಗುತ್ತಾರೆ. ಮಂಗಳೂರಿನ ರಾವ್ ಆಂಡ್ ರಾವ್ ಸರ್ಕಲ್ ಬಳಿಯ ಏರಿಯಾ, ಮಾರ್ಕೆಟ್, ಬಂದರು ಏರಿಯಾ, ದ.ಕ ಜಿಲ್ಲೆಯ ಆಯಕಟ್ಟಿನ ಪ್ರದೇಶಗಳು ಮಾರ್ವಾಡಿಗಳದ್ದೇ ಏರಿಯಾ ಆಗಿ ಮಾರ್ಪಟ್ಟಿದೆ. ಇಲ್ಲಿನ ನಿವಾಸಿಗಳು ಆ ಏರಿಯಾಕ್ಕೆ ಹೋದರೆ ನಾವು ಎಲ್ಲೋ ಗುಜರಾತ್, ರಾಜಸ್ಥಾನಕ್ಕೆ ಬಂದು ಬಿಟ್ಟಿದೆಯೋ ಅನ್ನುವ ಅನುಮಾನ ಮೂಡುತ್ತದೆ.

ಮೊನ್ನೆಯಷ್ಟೇ ಬೆಂಗಳೂರಿನ ಚಿಕ್ಕಪೇಟೆ ಏರಿಯಾ ಬಳಿ ನಡೆದ ಮಾರ್ವಾಡಿಗಳ ಕ್ರೌರ್ಯ ಬೆಚ್ಚಿಬೀಳಿಸುವಂತದ್ದು. ಇಲ್ಲಿ ವ್ಯಾಪಾರ ಮಾಡುವುದಕ್ಕೆ ಬಂದು ಇಲ್ಲಿನ ನಾಗರಿಕರ ಮೇಲೆ ಮನಸೋ ಇಚ್ಛೆ ಕ್ರೌರ್ಯ ಮೆರೆದಿರುವುದು ನಾಗರಿಕ ಸಮಾಜ ಒಪ್ಪುವಂತದ್ದಲ್ಲ. ಕೆ ಆರ್ ಮಾರ್ಕೆಟ್ ಮಾಯಾ ಸಿಲ್ಕ್ ಮಾಲೀಕ ಉದಯ್ ರಾಮ್ ಎಂಬಾತ ಮಳಿಗೆಯಲ್ಲಿ ಸೀರೆ ಕದ್ದಿದ್ದಾರೆ ಅನ್ನುವ ಕಾರಣಕ್ಕೆ ಮಹಿಳೆಯೊಬ್ಬರಿಗೆ ಹಿಗ್ಗಾಮುಗ್ಗಾ ಥಳಿಸಿ, ಬೂಟು ಕಾಲಿನಿಂದ ಮಹಿಳೆ ಖಾಸಾಗಿ ಅಂಗಕ್ಕೆ ಒದ್ದು ತನ್ನ ರಾಕ್ಷಸಿತನ ಪ್ರದರ್ಶಿಸಿದ ಘಟನೆ ವರದಿಯಾಗಿದೆ. ಹೊಡೆತಕ್ಕೆ ಮಹಿಳೆ ನೋವಿನಿಂದ ನರಳುತ್ತಿದ್ದರೂ ಕಿಂಚಿತ್ತೂ ಕರುಣೆ ತೋರದೇ ರಾಕ್ಷಸರಂತೆ ವರ್ತಿಸಿದ್ದಾರೆ. ಸಾರ್ವಜನಿಕರು ಮೊಬೈಲ್ ನಲ್ಲಿ ದೃಶ್ಯ ಸೆರೆ ಹಿಡಿದಿದ್ದಾರೆ. ಈ ಘಟನೆ ವೈರಲ್ ಆಗಿದ್ದು, ಕರ್ನಾಟಕದಾದ್ಯಂತ ವ್ಯಾಪಕ ಆಕ್ರೋಶ ಮತ್ತು ಖಂಡನೆಗೆ ಕಾರಣವಾಗಿದೆ.

ಇತ್ತೀಚೆಗೆ ಜೆ.ಬಿ.ನಗರ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಕವಿತಾ ಮತ್ತು ಸಿಬ್ಬಂದಿ ಡ್ರಂಕ್ ಆಯಂಡ್ ಡ್ರೈವ್ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಪಾನಮತ್ತ ಆದಿತ್ಯ ಅಗರ್ವಾಲ್, ಪಿಎಸ್‌ಐ ಕವಿತಾ ಹಾಗೂ ಸಿಬ್ಬಂದಿ ಜತೆಗೆ ಅನುಚಿತ ವರ್ತನೆ ತೋರಿ, ಹಿಂದಿ-ಇಂಗ್ಲಿಷ್‌ನಲ್ಲಿ ಮಾತನಾಡುವಂತೆ ಕೂಗಾಡಿ, ಅಸಭ್ಯ ಪದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ. ಪೊಲೀಸ್ ಸಿಬ್ಬಂದಿ ಜೊತೆಗೆ ವಾಗ್ವಾದ ನಡೆಸಿ ಅವಾಚ್ಯ ಶಬ್ಧಗಳಿಂದ ಬೈದಿದ್ದಾನೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಈ ಸಂಬಂಧ ಪಿಎಸ್‌ಐ ಕವಿತಾ ಅವರು ಇಂದಿರಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿ ಆದಿತ್ಯನನ್ನು ಬಂಧಿಸಿದ್ದಾರೆ. ರಾಜ್ಯದಲ್ಲಿ ಅನ್ಯಭಾಷಿಕರ ದಬ್ಬಾಳಿಕೆ ಹಾಗೂ ಉದ್ಧಟತನ ಹೆಚ್ಚಾಗಿದೆ. ಇಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
