ಮುಲ್ಕಿ: ಮಂಗಳೂರು ನಗರ ಪೊಲೀಸರ ಜಂಟಿ ಕಾರ್ಯಾಚರಣೆ; 35 ಲಕ್ಷ ರೂ. ಮೌಲ್ಯದ 1 ಕೆಜಿ 42 ಗ್ರಾಂ ಹೈಡ್ರೊವಿಡ ಗಾಂಜಾ ಸಹಿತ ಆರೋಪಿತೆಯ ಬಂಧನ

ಕರಾವಳಿ

ಮುಲ್ಕಿ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಹೈಡ್ರೊವಿಡ ಗಾಂಜಾ ಮಾದಕ ದ್ರವ್ಯವನ್ನು ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಆರೋಪಿತೆ ಸುಹಾನ, ಸಾಗರ ತಾಲೂಕು ಶಿವಮೋಗ್ಗ. ಹಾಲಿ ಕುಂದಾಪುರ ಕಾಲೇಜಿನ ಅಂತಿಮ ವರ್ಷದ BCA ವಿದ್ಯಾರ್ಥಿನಿ ಸುಹಾನಾ ಎಂಬಾಕೆಯನ್ನು ವಶಕ್ಕೆ ಪಡೆದು ಅವಳ ಬಳಿ ಇದ್ದ ಸುಮಾರು 35,00,000. ರೂ ಮೌಲ್ಯದ ಒಂದು ಕೆಜಿ 42 ಗ್ರಾಂ ಹೈಡ್ರೊವಿಡ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ಮೊಬೈಲ್ ಪೋನ್ ಮತ್ತು ಇತರ ಸೊತ್ತು ವಶಪಡಿಸಿಕೊಳ್ಳಲಾಗಿದೆ.

ಮಾದಕ ವಸ್ತುವಾದ ಗಾಂಜಾವನ್ನು ಆರೋಪಿತೆಯು ಚೆನ್ನೈ ನಿಂದ ತರಿಸಿ, ಮಂಗಳೂರಿನಲ್ಲಿ ಅಕ್ರಮವಾಗಿ ಪೂರೈಕೆ ಮಾಡಿ ಹಣ ಗಳಿಸುವ ಉದ್ದೇಶದಿಂದ ತಂದಿರುವುದಾಗಿ ತಿಳಿದು ಬಂದಿರುತ್ತದೆ. ಸದ್ರಿ ಆರೋಪಿತೆಯ ವಿರುದ್ದ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. ಸಂ: 32/2026 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಈ ಕಾರ್ಯಾಚರಣೆಯನ್ನು ಪಣಂಬೂರು ACP ತಂಡ ಹಾಗೂ ಮೂಲ್ಕಿ ಪೊಲೀಸರ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಮಾದಕ ಸ್ವತ್ತಿನೊಂದಿಗೆ ಆರೋಪಿತೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿತೆಯ ಮೇಲೆ ಕಾವೂರು ಪೊಲೀಸ್ ಠಾಣಾ ಅ. ಕ್ರ 37/2026 ಕಲಂ: 8(C), 22(C) NDPS Act. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ಕಸ್ಟಮ್ O. R No: 177/2025-26 U/S 20(b), 2(B), 23(b), 27(A) & 29 NDPS Act.ನಂತೆ ಈ ಹಿಂದೆ ಪ್ರಕರಣ ದಾಖಲಾಗಿರುತ್ತದೆ.