ಮಂಗಳೂರು ನಗರ ಪೊಲೀಸರ ಕಾರ್ಯಾಚರಣೆ; 3.138 ಕೆ.ಜಿ ಗಾಂಜಾದೊಂದಿಗೆ ಆರೋಪಿಯ ಬಂಧನ

ಕರಾವಳಿ

ಮೇರಿಹಿಲ್ ಹ್ಯಾಲಿಪ್ಯಾಡ್ ಮೈದಾನದ ಬಳಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಗಾಂಜಾ ಮಾದಕ ವಸ್ತುವನ್ನು ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಆರೋಪಿ ಇರ್ಷಾದ್ @ ಇರ್ಷಾ ಹಿಲರಿಯ ನಗರ ಮುಕ್ಕಚೇರಿ ಉಳ್ಳಾಲ ಎಂಬಾತನನ್ನು ಕಾವೂರು ಪೊಲೀಸರು ವಶಕ್ಕೆ ಪಡೆದು, ಆತನ ಬಳಿ ಇದ್ದ ಸುಮಾರು 3 ಕೆಜಿ 138 ಗ್ರಾಂ ತೂಕದ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ಮೊಬೈಲ್ ಪೋನ್, ಸ್ಕೂಟರ್ ಮತ್ತು ಇತರ ಸೊತ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ.

ಆರೋಪಿತನ ವಿರುದ್ದ ಕಾವೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. ಸಂ: 74/2026 ರಂತೆ ಪ್ರಕರಣ ದಾಖಲಿಸಲಾಗಿದೆ. ಪಣಂಬೂರು ಎಸಿಪಿ ಪೊಲೀಸರ ತಂಡ ಹಾಗೂ ಕಾವೂರು ಪೊಲೀಸರ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಮಾದಕ ಸ್ವತ್ತುವಿನೊಂದಿಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನ ವಿರುದ್ದ ಉಳ್ಳಾಲ ಪೊಲೀಸ್ ಠಾಣಾ ಅ. ಕ್ರ. ಸಂ: 106/2019 ಹಾಗೂ ಮಂಗಳೂರು CSP PS CRIME NO: 06/2024 ರಂತೆ ಈ ಮೊದಲು ಎರಡು ಪ್ರಕರಣಗಳು ದಾಖಲಾಗಿರುತ್ತದೆ.