ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹಮದ್ ಮುಸ್ಲಿಯಾರ್ ವಫಾತ್

ಕರಾವಳಿ

ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿಯಾಗಿದ್ದ ತ್ವಾಖಾ ಅಹಮದ್ ಮುಸ್ಲಿಯಾರ್ ಇಂದು ಬೆಳಿಗ್ಗೆ ಮಂಗಳೂರಿನ ಖಾಸಾಗಿ ಅಸ್ಪತ್ರೆಯಲ್ಲಿ ವಫಾತಾಗಿದ್ದಾರೆ. ಕಳೆದ ಹಲವಾರು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಮೊಹಲ್ಲಾಗಳ ಖಾಝಿಯಾಗಿ ದೀರ್ಘ ಕಾಲದಿಂದ ಸೇವೆ ಸಲ್ಲಿಸಿದಾದರು. ತ್ವಾಕಾ ಉಸ್ತಾದ್ ಎಂದು ಜನಾನುರಾಯಿಯಾಗಿದ್ದರು. ಜಿಲ್ಲೆಯ ಖಾಝಿಯಾದ ನಂತರ ಸಮಸ್ತ ಪರ ಸಂಘಟನೆಗೆ ಜೀವ ತುಂಬಿದ್ದರು. ಅಗಾಧ ಪಾಂಡಿತ್ಯ ಹೊಂದಿದ್ದ ಅವರು ದಾರುನ್ನೂರು ಎಜ್ಯುಕೇಶನ್ ಸೆಂಟರ್ ಸ್ಥಾಪಕರಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದರು.

ತ್ವಾಖಾ ಅಹಮದ್ ಮುಸ್ಲಿಯಾರ್ ನಿಧನದಿಂದ ಜಿಲ್ಲೆಯ ಪ್ರಮುಖ ಉಲೇಮಾ ಕೊಂಡಿಯೊಂದು ಕಳಚಿದಂತಾಗಿದೆ. ಖಾಝಿಯವರ ಜನಾಝದ ಅಂತಿಮ ದರ್ಶನಕ್ಕೆ ಇದೀಗ ಝೀನತ್ ಭಕ್ಷ್ ಜುಮಾ ಮಸೀದಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.