ನಮಾಝ್ ಮುಗಿಸಿ ಬರುತ್ತಿದ್ದ ವ್ಯಕ್ತಿಯನ್ನು ರಾಡಿನಿಂದ ಹೊಡೆದು ಟಿಪ್ಪರಿನಡಿಗೆ ಹಾಕಿ ಕೊಂದ ಮಹಾ ಪಾಪಿ.!
ಟಿಪ್ಪರ್ ಚಲಾಯಿಸಿ ಚಾಲಕನಿಂದ ವ್ಯಕ್ತಿಯ ಕೊಲೆ.ಧೂಳು ಬರುವ ಹಾಗೆ ವಾಹನವನ್ನು ಚಲಾಯಿಸಬೇಡ ನಿಧಾನವಾಗಿ ಹೋಗೆಂದು ಹೇಳಿದ ಕಾರಣ ವ್ಯಕ್ತಿಗೆ ಟಿಪ್ಪರ್ ಚಾಲಕ ರಾಡ್ ನಿಂದ ಹೊಡೆದು, ಟಿಪ್ಪರ್ ಚಲಾಯಿಸಿ ಕೊಲೆ ಮಾಡಿದ ಘಟನೆ ಶುಕ್ರವಾರ ಮೂಡುಬಿದಿರೆಯ ಕೋಟೆಬಾಗಿಲಿನಲ್ಲಿ ನಡೆದಿದೆ.ಕೋಟೆಬಾಗಿಲಿನ ನಿವಾಸಿ ಪಯಾಝ್ ಎಂಬವರೆ ಹತ್ಯೆಗೀಡಾದ ವ್ಯಕ್ತಿ.
ಪಯಾಝ್ ಅವರು ಶುಕ್ರವಾರ ಕೋಟೆಬಾಗಿಲು ಮಸೀದಿಗೆ ನಮಾಝ್ ಗೆ ತೆರಳುವ ಸಂಧರ್ಭ ಕೋಟೆಬಾಗಿಲು ನಿವಾಸಿ, ಟಿಪ್ಪರ್ ಚಾಲಕ ಆರೀಸ್ ಎಂಬಾತ ಅತೀ ವೇಗದಿಂದ ಟಿಪ್ಪರ್ ಚಲಾಯಿಸಿಕೊಂಡು ಹೋಗಿದ್ದು ಆಗ ಅಲ್ಲೇ ನಡೆದುಕೊಂಡು ಹೋಗುತ್ತಿದ್ದ ಫಯಾಝ್ ಅವರ ಮೇಲೆ ಧೂಳನ್ನು ಹಾರಿಸಿದ್ದಾನೆ . ಆಗ ಕೋಪಗೊಂಡ ಫಯಾಝ್ ಅವರು ನಿಧಾನ ಹೋಗುವಂತೆ ಹೇಳಿದ್ದು ಈ ಸಂದರ್ಭ ಇಬ್ಬರ ಮದ್ಯೆ ಮಾತಿಗೆ ಮಾತು ಬೆಳೆದು ಚಕಾಮಕಿ ನಡೆದಿದೆ.
ನಮಾಝ್ ಮುಗಿಸಿಕೊಂಡು ಹಿಂತಿರುವ ಸಂದರ್ಭದಲ್ಲಿಯೂ ಇವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದ್ದು ಈ ಸಂಧರ್ಭ ಫಯಾಝ್ ಅವರು ಟಿಪ್ಪರಿನ ಮೇಲೆ ಹೋಗಿ ಮಾತನಾಡಿದ್ದು ಆಗ ಹಾರೀಸ್ ಯಾವುದೋ ಮಾರಾಕಾಸ್ತ್ರದಿಂದ ಪಯಾಝ್ ರವರ ತಲೆ ಭಾಗಕ್ಕೆ ಹೊಡೆದು ಟಿಪ್ಪರನ್ನು ಸ್ಟಾರ್ಟ್ ಮಾಡಿ ಮುಂದಕ್ಕೆ ಚಲಾಯಿಸಿದ್ದು,ಆಯತಪ್ಪಿ ಫಯಾಝ್ ರಸ್ತೆಗೆ ಬಿದ್ದಿದ್ದಾರೆ. ಬಿದ್ದ ಅವರ ಮೇಲೆಯೇ ಟಿಪ್ಪರನ್ನು ಹಾಯಿಸಿದ್ದಾನೆ.
ರಾಡಿನ ಏಟು ಮತ್ತು ಟಿಪ್ಪರಿನ ಅಡಿಗೆ ಬಿದ್ದ ಫಯಾಝ್ ಅವರನ್ನು ಸಾರ್ವಜನಿಕರು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮೃತಪಟ್ಟರೆನ್ನಲಾಗಿದೆ.ಟಿಪ್ಪರ್ ಚಾಲಕ ಹಾರೀಸ್ ಟಿಪ್ಪರನ್ನು ಅರ್ಧ ದಾರಿಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಹಾರೀಸ್ ವಾಹನ ಚಲಾಯಿಸುವ ಸಂದರ್ಭದಲ್ಲಿ ಗಾಂಜಾ ಸೇವನೆ ಮಾಡಿದ್ದಾನೆಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅರೋಪಿ ಚಾಲಕನ ಪತ್ತೆಗಾಗಿ ಮೂಡುಬಿದಿರೆ ಪೊಲೀಸರು ಬಲೆ ಬೀಸಿದ್ದಾರೆ.
