ಮಂಗಳೂರು:ವಿಶ್ವ ವಿಧ್ಯಾನಿಲಯದ ಇತಿಹಾಸ ವಿಭಾಗದ ಪ್ರೊ. ಉದಯ ಬಾರ್ಕೂರು ಹೃದಯಾಘಾತದಿಂದ ಮೃತ್ಯು

ಕರಾವಳಿ

ಮಂಗಳೂರು ವಿ ವಿ ಯ ಇತಿಹಾಸ ವಿಭಾಗದ ಸೀನಿಯರ್ ಪ್ರೊಫೆಸರ್, ಪ್ರೊ. ಉದಯ ಬಾರ್ಕೂರು ಹೃದಯಾಘಾತದಿಂದ ಇಂದು ಸಂಜೆ ನಮ್ಮನ್ನಗಲಿದ್ದಾರೆ. ಇತಿಹಾಸವನ್ನು ವಸ್ತುನಿಷ್ಟವಾಗಿ ನೋಡಬಲ್ಲ, ವಿವರಿಸಬಲ್ಲ, ಬರೆಯಬಲ್ಲ ಅಪರೂಪದ ಪ್ರತಿಭಾವಂತ ಉದಯ ಬಾರ್ಕೂರು. ಎರಡು ದಶಕಗಳ ಹಿಂದೆ ಮಂಗಳೂರಿನ ಪ್ರಗತಿಪರರ ವಿನಂತಿಗೆ ಓಗೊಟ್ಟು “ಟಿಪ್ಪು ಇತಿಹಾಸ ಕಥನ” ಪುಸ್ತಕ, ಮಧ್ಯ ಪ್ರಾಚ್ಯದ ಇತಿಹಾಸ,ವರ್ತಮಾನದ ರಾಜಕಾರಣದ ಕುರಿತು ಅಪಾರ ಜ್ಞಾನಹೊಂದಿದ್ದ ಇವರು ಆ ಕುರಿತು ಒಳನೋಟಗಳುಲ್ಲ ಬರವಣಿಗೆ ದಾಖಲಿಸಿದ್ದರು.

ಎಡ, ದಲಿತ ಚಳುವಳಿಗಳ ಬೆಂಬಲಿಗರಾಗಿದ್ದರು. ಪ್ರಗತಿಪರ ಕಾರ್ಯಕ್ರಮಗಳಲ್ಲಿ ಆಹ್ವಾನಿಸಿದಾಗಲೆಲ್ಲಾ ಬಂದು ಭಾಗಿಯಾಗುತ್ತಿದ್ದರು. ಅವರ ದಿಢೀರ್ ಅಗಲಿಕೆ ಆಘಾತವನ್ನುಂಟು ಮಾಡಿದೆ.ಅವರ ನಿಧನಕ್ಕೆ ಡಿವೈಎಫ್ಐ ರಾಜ್ಯಾಧ್ಯ ಮುನೀರ್ ಕಾಟಿಪಳ್ಳ, ವಿಚಾರವಾದಿ ಪ್ರೊ. ನರೇಂದ್ರ ನಾಯಕ್, ಅಖಿಲ ಭಾರತ ವಕೀಲರ ಸಂಘದ ಯಶವಂತ ಮರೋಳಿ, ಪ್ರಗತಿಪರ ಚಿಂತಕರ ವೇದಿಕೆಯ ಡಾ. ಕೃಷ್ಣಪ್ಪ ಕೊಂಚಾಡಿ, ಪ್ರೊ. ರಾಜೇಂದ್ರ ಉಡುಪ, ಮಂಗಳೂರು ಸಮುದಾಯದ ವಾಸುದೇವ ಉಚ್ಚಿಲ ಸಂತಾಪಗಳನ್ನು ಸಲ್ಲಿಸಿದ್ದಾರೆ.