ವಕ್ಪ್ ಮಸೂದೆ 2024, ಜನರ ಆಕಾಂಕ್ಷೆಗಳಿಗೆ ವಿರುದ್ಧವಾಗಿದೆ. ಸರ್ವಾನುಮತದಿಂದ ತಿರಸ್ಕರಿಸಿ, ಹಿಂತೆಗೆದುಕೊಳ್ಳುವಂತೆ ಕೇಂದ್ರಕ್ಕೆ ಒತ್ತಾಯ

ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಕರ್ನಾಟಕ ವಿಧಾನಸಭೆ ಬುಧವಾರ ನಿರ್ಣಯವನ್ನು ಅಂಗೀಕರಿಸಿದೆ. ವಕ್ಪ್ ಮಸೂದೆ 2024, ರಾಜ್ಯದ ಜನರ ಸಾರ್ವತ್ರಿಕ ಆಕಾಂಕ್ಷೆಗಳಿಗೆ ವಿರುದ್ಧವಾಗಿರುವುದರಿಂದ ಸದನವು ಸರ್ವಾನುಮತದಿಂದ ತಿರಸ್ಕರಿಸಿದೆ ಮತ್ತು ಶಾಸನವನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರವನ್ನು ಒತ್ತಾಯಿಸಿದೆ ಎಂದು ಎಚ್.ಕೆ.ಪಾಟೀಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಕಾಯ್ದೆಯು ದೇಶದ ಎಲ್ಲಾ ವರ್ಗದ ಜನರ ಆಕಾಂಕ್ಷೆಗಳು ಮತ್ತು ಅವಕಾಶಗಳನ್ನು ಪ್ರತಿಬಿಂಬಿಸುವುದಿಲ್ಲ. ವಕ್ಫ್ ಕಾಯ್ದೆಯ ತಿದ್ದುಪಡಿಯನ್ನು ಈ ಸದನವು ಸರ್ವಾನುಮತದಿಂದ ತಿರಸ್ಕರಿಸುತ್ತದೆ. ಏಕೆಂದರೆ ಇದು ಕರ್ನಾಟಕದ ಜನರ ಸಾರ್ವತ್ರಿಕ ಆಕಾಂಕ್ಷೆಗಳು ಮತ್ತು ಜಾತ್ಯತೀತ ತತ್ವಗಳಿಗೆ […]

Continue Reading

2028 ರ ಚುನಾವಣೆಯಲ್ಲಿ ಬಿಜೆಪಿಗೆ ಕಂಟಕವಾಗಲಿದ್ದರಾ ಯತ್ನಾಳ್.?

ಹಿಂದುತ್ವದ ಫೈರ್ ಬ್ರ್ಯಾಂಡ್ ಕಟ್ಟುತ್ತಾರಂತೆ ಹೊಸ ಪ್ರಾದೇಶಿಕ ಪಕ್ಷ..ಧರ್ಮ ಸಂಕಟದಲ್ಲಿ ಬಿಜೆಪಿ ಹೈಕಮಾಂಡ್.! ಹಿಂದೂತ್ವದ ಫೈರ್ ಬ್ರ್ಯಾಂಡ್ ಬಸವನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಪಾಲಿಗೆ ಭಸ್ಮಾಸುರರಾಗಿ ರೂಪಾಂತರಗೊಂಡಿದ್ದಾರೆ. ಯತ್ನಾಳ್ ತಂಡದ ಭಿನ್ನಮತಕ್ಕೆ ಕುಮ್ಮಕ್ಕು ಕೊಟ್ಟ ಬಿಜೆಪಿ ಪ್ರಭಾವಿಗಳೇ ಶೇಕ್ ಆಗಿದ್ದಾರೆ. ಅದಕ್ಕೆ ಕಾರಣ ಯತ್ನಾಳ್ ಪ್ರಾದೇಶಿಕ ಪಕ್ಷ ಕಟ್ಟುತ್ತಾರೆ ಅನ್ನುವ ಸುದ್ದಿ. ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಕುಟುಂಬದ ಪ್ರಭಾವವನ್ನು ಕುಗ್ಗಿಸಲು ಯತ್ನಾಳ್ ಆಂಡ್ ಟೀಮನ್ನು ಬಿಜೆಪಿಯ ಕೆಲವು ಪ್ರಭಾವಶಾಲಿಗಳೇ ಮುನ್ನೆಲೆಗೆ ತಂದಿದ್ದರು. ಸಂಘಪರಿವಾರ ಕೂಡ ಪರೋಕ್ಷವಾಗಿ ಯತ್ನಾಳ್ […]

Continue Reading

ಹೆಚ್ಚಿನ ಅಂಕ, ಕೆಲಸದ ಆಸೆ ತೋರಿಸಿ ವಿದ್ಯಾರ್ಥಿನಿಯ ಮೇಲೆ ನಿರಂತರ ಅತ್ಯಾಚಾರ; ವಿಡಿಯೋ ಮಾಡಿ ಬ್ಲಾಕ್‌ ಮೇಲ್‌ ಮಾಡುತ್ತಿದ್ದ ಶಿಕ್ಷಕ ರಜನೀಶ್ ಕುಮಾರ್

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಕಾಲೇಜಿನ ಶಿಕ್ಷಕನೊಬ್ಬ ತನ್ನ ಕಾಲೇಜಿನ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ ಅದನ್ನು ರೆಕಾರ್ಡ್‌ ಮಾಡಿ ಬ್ಲಾಕ್‌ಮೇಲ್‌ ಮಾಡಿದ ಆರೋಪ ಕೇಳಿ ಬಂದಿದೆ. ರಜನೀಶ್ ಕುಮಾರ್ ಎಂಬ ಶಿಕ್ಷಕ ಸೇಥ್ ಫೂಲ್ ಚಂದ್ ಬಾಗ್ಲಾ ಪಿಜಿ ಕಾಲೇಜಿನ ಶಿಕ್ಷಕನಾಗಿದ್ದಾನೆ. ಆರೋಪಗಳು ಬೆಳಕಿಗೆ ಬಂದ ನಂತರ ಆಡಳಿತ ಮಂಡಳಿಯು ಆತನನ್ನು ಅಮಾನತುಗೊಳಿಸಿದೆ. ಶಿಕ್ಷಕ ಕುಮಾರ್ ಪರಾರಿಯಾಗಿದ್ದಾನೆ. ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ಆತನ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, […]

Continue Reading

ಸೌಜನ್ಯ ನ್ಯಾಯಕ್ಕಾಗಿ ಸಭೆ, ಪ್ರತಿಭಟನೆ ನಡೆಸಬಹುದು : ಹೈಕೋರ್ಟ್ ಮಹತ್ವದ ಆದೇಶ

ಸೌಜನ್ಯ ನ್ಯಾಯಕ್ಕಾಗಿ ಶಾಂತಿಯುತ ಪ್ರತಿಭಟನೆ, ಸಭೆಗಳನ್ನು ನಡೆಸಬಹುದು ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.ಮಾರ್ಚ್ 18, 2025 ಸಂಜೆ 5.30 ಕ್ಕೆ ಎಐಟಿಯುಸಿ ಸಭಾಂಗಣದಲ್ಲಿ ಆಯೋಜಿಸಿದ್ದ ಸೌಜನ್ಯ ನ್ಯಾಯಕ್ಕಾಗಿ ಸಮಾಲೋಚನಾ ಸಭೆಯನ್ನು ನಿಲ್ಲಿಸುವಂತೆ ಶೇಷಾದ್ರಿಪುರ ಪೊಲೀಸರು ನೀಡಿದ್ದ ನೋಟಿಸ್ ಬಗೆಗಿನ ರಿಟ್ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಈ ಆದೇಶ ನೀಡಿದ್ದಾರೆ. ಸಾಹಿತಿ-ಚಿಂತಕ- ಹೋರಾಟಗಾರರ ಸಮಾಲೋಚನಾ ಸಭೆಯ ಸಂಚಾಲಕರದಲ್ಲೊಬ್ಬರಾದ ವಿನಯ್ ಶ್ರೀನಿವಾಸ್ ಮತ್ತು ವಿಜಯಭಾಸ್ಕರ್ ಪರವಾಗಿ ಹಿರಿಯ ನ್ಯಾಯವಾದಿ ಶ್ರುತಿ ಚಗಂತಿ […]

Continue Reading

ಭಾರತೀಯ ಟ್ರಸ್ಟ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ನೋಂದಾಯಿಸಲಾದ ಮಸೀದಿ ಮತ್ತು ಅದರ ಜಮೀನು, ಆಸ್ತಿಗಳು ವಕ್ಫ್ ಪರಿಕಲ್ಪನೆಯಲ್ಲಿ ಬರಲಾರದು.

✍️. ಮಹಮ್ಮದ್ ಅಸ್ಫಾಕ್ ಕೃಷ್ಣಾಪುರ ಮಸೀದಿಗಳು ಮುಸ್ಲಿಮರ ಅವಿಭಾಜ್ಯ ಅಂಗವಾಗಿದೆ. ಒಬ್ಬ ಮುಸ್ಲಿಂ ನಿರ್ದಿಷ್ಟ ಸಮಯದಲ್ಲಿ ಸಾಮೂಹಿಕ ನಮಾಜಿಗೆ ಹಾಜರಾಗುವ ಮೂಲಕ ಮಸೀದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾನೆ. ಏಕೆಂದರೆ ಮಸೀದಿಗಳಲ್ಲಿ ಸಾಮೂಹಿಕವಾಗಿ ನಿರ್ವಹಿಸುವ ನಮಾಜ್ ಮನೆಯಲ್ಲಿ ನಿರ್ವಹಿಸುವ ನಮಾಜಿಗಿಂತ ಎರಡು ಪಟ್ಟು ಶ್ರೇಷ್ಠವಾಗಿರುತ್ತದೆ. ಒಂದು ಕಟ್ಟಡವು ಮಸೀದಿಯ ಸ್ಥಾನಮಾನವನ್ನು ಪಡೆಯಬೇಕಾದರೆ ಅದು ಶರೀಯತ್ ನಿರ್ದೇಶಿಸಿದ ಪಾವಿತ್ರ್ಯತೆ ಮತ್ತು ಸಿಂಧುತ್ವದ ಪ್ರಾಥಮಿಕ ಷರತ್ತುಗಳನ್ನು ಪೂರೈಸಬೇಕಾಗುತ್ತದೆ.ಆದುದರಿಂದ ಖಾಸಗಿ ಒಡೆತನಕ್ಕೆ ಸೇರಿದ ಜಮೀನಿನಲ್ಲಿ ಮಸೀದಿಗಳ ರಚನೆಯನ್ನು ಮಸೀದಿಗಳಾಗಿ ಪರಿಗಣಿಸಲಾಗುವುದಿಲ್ಲಕುರಾನ್ ಹೇಳುತ್ತದೆ. “ಖಂಡಿತವಾಗಿಯೂ […]

Continue Reading

ಕೋಮುವಾದಿಗಳಿಂದ ಹಿಂದೂ ಸಮಾಜ ಅಪಾಯದಲ್ಲಿ.!

ಶೋಷಿತರ ಮಕ್ಕಳಿಗೆ ‘ನಾಮ, ಕೇಸರಿ ಶಾಲೇ’ ಗತಿ.. ದೊಡ್ಡವರ ಮಕ್ಕಳು ವಿದೇಶದಲ್ಲಿ ಉನ್ನತ ವಿದ್ಯಾರ್ಜನೆ.! ಬಿಜೆಪಿ ಹಾಗೂ ಅದರ ಜತೆ ಗುರುತಿಸಿಕೊಂಡಿರುವವರು, ರಾಜಕೀಯ ಲಾಭಕ್ಕಾಗಿ ಹಿಂದೂಗಳು, ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ಹೇಳುತ್ತಿದ್ದಾರೆ. ಸಂಘಪರಿವಾರದ ಸಂಘಟನೆಗಳು ನಮಸ್ತೆ ಸದಾ ವತ್ಸಲಾ ಮಾತೃಭೂಮಿಯಲ್ಲಿ ಹಿಂದೂ ಧರ್ಮ ಹಾಗೂ ಭಾರತ ಮಾತೆಯನ್ನು ರಕ್ಷಣೆ ಮಾಡುತ್ತೇವೆ ಎಂದು ದಿನಕ್ಕೆ ಎರಡು ಬಾರಿ ಹಾಡುತ್ತಾರೆ. ಆದರೆ ನಿಜವಾಗಿ ಹಿಂದೂ ಧರ್ಮಕ್ಕೆ ಅಪಾಯವಿರುವುದು ಕೋಮುವಾದಿ ಹಿಂದೂಗಳಿಂದ ಅನ್ನುವುದಂತೂ ಸ್ಪಷ್ಟ. ಹಿಂದೂ ಧರ್ಮದ ಶೋಷಿತ ಸಮುದಾಯದ […]

Continue Reading

ಸಾಲಿಗ್ರಾಮ ಮಕ್ಕಳ ಮೇಳದ ಸುವರ್ಣ ಪರ್ವ ಉದ್ಘಾಟನೆ

ಯಕ್ಷಗಾನ ಬೆಳವಣಿಗೆಗೆ ಮಕ್ಕಳ ಮೇಳಗಳ ಕೊಡುಗೆ ಅನನ್ಯ : ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಉಡುಪಿ : ಕರ್ನಾಟಕ ಯಕ್ಷಗಾನ ಅಕಾಡೆಮಿ ಮಕ್ಕಳಿಗೆ ಯಕ್ಷಗಾನ ಕಲಿಕೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ವಿದ್ಯಾವಂತರು ಯಕ್ಷಗಾನಕ್ಕೆ ಬರಬೇಕು ಎಂಬುದೇ ಇದರ ಉದ್ದೇಶ. ಈ ನಿಟ್ಟಿನಲ್ಲಿ ಸಾಲಿಗ್ರಾಮ ಮಕ್ಕಳ ಮೇಳ ಯಕ್ಷಸೇವೆಯಲ್ಲಿ 50 ವರ್ಷಗಳನ್ನು ಪೂರೈಸಿರುವುದನ್ನು ಎಷ್ಟು ಅಭಿನಂದಿಸಿದರೂ ಸಾಲದು. ಮಕ್ಕಳ ಮೇಳವನ್ನು ಕಟ್ಟಿ ದೇಶವಿದೇಶಗಳಲ್ಲಿ ಯಕ್ಷಗಾನ ಕಂಪನ್ನು ಹರಡಿದ ಶ್ರೀಧರ ಹಂದೆ ಅವರ ಕೊಡುಗೆಯನ್ನು ಯಕ್ಷಲೋಕ ಮರೆಯುವಂತಿಲ್ಲ ಎಂದು ಕರ್ನಾಟಕ ಯಕ್ಷಗಾನ […]

Continue Reading

ಅಮಿತ್ ಷಾ ಪರೀಕ್ಷೆಯಲ್ಲಿ ವಿಜಯೇಂದ್ರ ಪಾಸಾದರು. ಕೂಡ್ಲಿಗಿಯಲ್ಲಿ ಸೆಟ್ಲಾದರು ಶ್ರೀರಾಮುಲು

ಇಫ್ತಿಕಾರ್ ಅಲಿ ಎಂದರೆ ಸಾಕು. ಕಾಂಗ್ರೆಸ್, ಬಿಜೆಪಿ, ಸಂಘ ಪರಿವಾರ ಸೇರಿದಂತೆ ಎಲ್ಲರ ಜತೆಗೂ ಲಿಂಕಿದೆ. ✍️. ಆರ್.ಟಿ.ವಿಠ್ಠಲಮೂರ್ತಿ ಕಳೆದ ಗುರುವಾರ ಬಿಜೆಪಿ ನಾಯಕರಾದ ಯತ್ನಾಳ್, ರಮೇಶ್ ಜಾರಕಿಹೊಳಿ ಮತ್ತಿತರರು ರಹಸ್ಯ ಸಭೆ ನಡೆಸಿದ್ದಾರೆ. ವಿಧಾನಸಬೆಯ ಮೊಗಸಾಲೆಯಲ್ಲಿರುವ ಪ್ರತಿಪಕ್ಷ ನಾಯಕರ ಕೊಠಡಿಯಲ್ಲಿ ನಡೆದ ಈ ಸಭೆ ಆರೆಸ್ಸೆಸ್ ನಾಯಕರು ತಮಗೆ ನೀಡಿದ ಸಂದೇಶದ ಬಗ್ಗೆ ಚರ್ಚಿಸಿದೆ.ಅಂದ ಹಾಗೆ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಅಂತರ್ಯುದ್ದದ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ನಾಯಕರು ಸ್ಥಳೀಯ ಆರೆಸ್ಸೆಸ್ ನಾಯಕರಿಗೆ ಒಂದು ಸಂದೇಶ ನೀಡಿದ್ದಾರೆ. […]

Continue Reading

ಧರ್ಮಸ್ಥಳದ ವಕೀಲರಿಂದ ಲೀಗಲ್ ನೋಟಿಸ್ ವಂಚನೆ ! ಕಸಾಪ ಅಧ್ಯಕ್ಷ ಮಹೇಶ್ ಜೋಶಿಗೆ ಎಸ್ ಬಾಲನ್ ಲೀಗಲ್ ನೋಟಿಸ್ !

ಧರ್ಮಸ್ಥಳದ ವಕೀಲರು ಲೀಗಲ್ ನೋಟಸ್ ನೀಡಿದ್ದಾರೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಬೆಂಗಳೂರಿನಲ್ಲಿ ಸಾಹಿತಿ-ಚಿಂತಕರ ಸಭೆಗೆ ನೀಡಲಾಗಿದ್ದ ಸಭಾಂಗಣವನ್ನು ರದ್ದುಗೊಳಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿಗೆ ಹೋರಾಟಗಾರರ ಪರವಾಗಿ ಎಸ್ ಬಾಲನ್ ಲೀಗಲ್ ನೋಟಿಸ್ ನೀಡಿದ್ದಾರೆ. ಎಸ್ ಬಾಲನ್ ಅವರು ನೀಡಿರುವ ಲೀಗಲ್ ನೋಟಿಸ್ ನಲ್ಲಿ ”ಧರ್ಮಸ್ಥಳದ ವಕೀಲರ ಹೆಸರಿನಲ್ಲಿ ನೀಡಲಾದ ಲೀಗಲ್ ನೋಟಿಸ್ ಗೆ ವಿಳಾಸ, ಲೆಟರ್ ಹೆಡ್, ಸಂಪರ್ಕ ಸೇರಿದಂತೆ ಯಾವುದೇ ತಲೆ-ಬಾಲ ಇಲ್ಲವಾಗಿದ್ದು, ಸೌಜನ್ಯ ಪರ ಹೋರಾಟಗಾರರನ್ನು ದಾರಿ ತಪ್ಪಿಸಲು ಹೈಕೋರ್ಟ್ […]

Continue Reading

ಕೂಳೂರಿನ ಶಾಕೀರ್ ಎಂಬವರನ್ನು ಕಂಬಕ್ಕೆ ಕಟ್ಟಿ ಹಾಕಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪ್ರಕರಣ; ಎಲ್ಲಾ ಆರೋಪಿಗಳು ಖುಲಾಸೆ

2015ರಲ್ಲಿ ಮಂಗಳೂರು ನಗರದ ಅತ್ತಾವರ ಎಂಬಲ್ಲಿ ಕಂಬಕ್ಕೆ ಕಟ್ಟಿ ಹಾಕಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 19 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಮಂಗಳೂರಿನ ಒಂದನೇ1 ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. 2015ರ ಆ. 14ರಂದು ಸಂಜೆ ಸಹೋದ್ಯೋಗಿಗೆ ಹಣ ಕೊಡಲು ಅತ್ತಾವರಕ್ಕೆ ಬಂದಿದ್ದ ಕೂಳೂರಿನ ಶಾಕೀರ್‌ ಎಂಬವರಿಗೆ ಅನ್ಯಮತೀಯ ಎನ್ನುವ ಕಾರಣಕ್ಕೆ ಅವಾಚ್ಯ ಶಬ್ದಗಳಿಂದ ಬೈದು, ಕಾರಿನಿಂದ ಎಳೆದು ಹಾಕಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿತ್ತು.ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ […]

Continue Reading