ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಮನೆ, ಕಚೇರಿ ಮೇಲೆ ಲೋಕಾಯುಕ್ತ ರೈಡ್

ಕೆಂಪು, ಕಲ್ಲು ಕ್ವಾರೆ ಪರ್ಮೀಟ್ ಗಾಗಿ ಲಕ್ಷಾಂತರ ರೂಪಾಯಿ ಪೀಕಿಸುವ ಆರೋಪ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ 25 ಕಡೆ ದಾಳಿ ನಡೆಸಿದ್ದು, ಭ್ರಷ್ಟರ ಬೇಟೆ ಆರಂಭಿಸಿದ್ದಾರೆ. ಮಂಗಳೂರು ಲೋಕಾಯುಕ್ತ ಎಸ್ಪಿ ನಟರಾಜ್ ನೇತೃತ್ವದಲ್ಲಿ ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಎಂ.ಸಿ ಕೃಷ್ಣವೇಣಿ ಅವರ ಕಚೇರಿ ಮತ್ತು ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ನಡುವೆಯೇ ಕೃಷ್ಣವೇಣಿ ಅವರ ಬೆಂಗಳೂರು, ಚಿಕ್ಕಾಬಳ್ಳಾಪುರದ ಮನೆಗಳ ಮೇಲೂ ಏಕಕಾಲದಲ್ಲಿ ದಾಳಿ ನಡೆದಿದೆ ಎಂದು […]

Continue Reading

ಕನ್ಯಾನ ಸಮೀಪದ ಒಂಟಿ ಮನೆಯೊಳಗೆ ಮನೆ ಮಾಲಿಕ ಮೌರಿಸ್ ಡಿಸೋಜಾರವರ ಶವ ಪತ್ತೆ. ಇದೊಂದು ವ್ಯವಸ್ಥಿತ ಕೊಲೆ.?

ವಿಟ್ಲ ಸಮೀಪದ ಕನ್ಯಾನ ಗ್ರಾಮದ ಪಂಜಾಜೆ ನಿವಾಸಿ ಮೌರಿಸ್ ಡಿಸೋಜಾ(61)ಮೃತ ವ್ಯಕ್ತಿ. ಪತ್ನಿ ಮತ್ತು ಮಕ್ಕಳು ಕೆಲ ವರ್ಷಗಳ ಹಿಂದೆ ಬಿಟ್ಟು ಹೋಗಿದ್ದು ಆ ಬಳಿಕ ಒಬ್ಬಂಟಿಯಾಗಿ ಮೌರಿಸ್ ಡಿಸೋಜಾ ವಾಸಿಸುತ್ತಿದ್ದರು. ಕೃಷಿಕರಾಗಿರುವ ಮೌರಿಸ್ ಅವರ ಮನೆಗೆ ಇಂದು ಬೆಳಗ್ಗೆ ಕೂಲಿ ಕೆಲಸದವರು ಬಂದಾಗ ಮನೆಯೊಳಗೆ ಮಲಗಿದ ಸ್ಥಿತಿಯಲ್ಲಿ ಮಾಲಿಕನ ಶವ ಪತ್ತೆಯಾಗಿದೆ. ಎರಡು ದಿನಗಳ ಹಿಂದೆಯೇ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಇದೊಂದು ಆಕಸ್ಮಿಕ ಸಾವೋ ಅಥವಾ ಕೊಲೆಯೋ ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ. ಘಟನಾ ಸ್ಥಳಕ್ಕೆ […]

Continue Reading

ರಕ್ಷಣಾ ಪೂರೈಕೆ ಅಕ್ರಮಗಳ ಕುರಿತಾದ ಭಾರತೀಯ-ಅಮೆರಿಕನ್ ಸಿಇಒ ವಿರುದ್ಧದ ಸಿಬಿಐ ಪ್ರಕರಣದ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ

ಬೆಂಗಳೂರು: ರೇಡಿಯೋ ತರಂಗಾಂತರ ಪೂರೈಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಸಿಬಿಐ ಪ್ರಕರಣವನ್ನು ವಜಾಗೊಳಿಸುವಂತೆ ಕೋರಿ ಭಾರತೀಯ ಮೂಲದ ಅಮೆರಿಕ ಪ್ರಜೆ ಹಾಗೂ ಕ್ಯಾಲಿಫೋರ್ನಿಯಾ ಮೂಲದ ಎಕಾನ್ ಇಂಕ್‌ನ ಸಿಇಒ ಸೂರ್ಯ ಸರೀನ್ ಸಲ್ಲಿಸಿರುವ ಅರ್ಜಿಯ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಕಾಯ್ದಿರಿಸಿದೆ. 2009 ರಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಗೆ ಜನರೇಟರ್‌ಗಳನ್ನು ಪೂರೈಸಿತ್ತು. DRDO ಘಟಕವಾದ ಡಿಫೆನ್ಸ್ ಏವಿಯಾನಿಕ್ಸ್ ರಿಸರ್ಚ್ ಎಸ್ಟಾಬ್ಲಿಷ್‌ಮೆಂಟ್ (DARE) ಗೆ 35 ವೋಲ್ಟೇಜ್-ನಿಯಂತ್ರಿತ ಆಂದೋಲಕ-ಆಧಾರಿತ RF ಜನರೇಟರ್‌ಗಳನ್ನು ಪೂರೈಸಲು […]

Continue Reading

ಮೂಡಬಿದ್ರೆಯ ಜನಸ್ನೇಹಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್

ಮೂಡಬಿದ್ರೆ ತಾಲೂಕು ಆಡಳಿತ ಸೌಧ ಬ್ರೋಕರ್ ಗಳ ಕೊಂಪೆಯಾಗಿಬಿಟ್ಟಿದೆ. ಇಲ್ಲಿ ತಾಲೂಕು ರಚನೆಯಾದರೂ ಪರ್ಮನೆಂಟ್ ತಹಶೀಲ್ದಾರ್ ಇಲ್ಲದೇ ಇರುವುದು ಇಲ್ಲಿನ ಆಡಳಿತದ ವೈಫಲ್ಯ ಎಂದು ಹೇಳಬಹುದು. ತಾಲೂಕು ಆಡಳಿತ ಸೌಧ ಬಕಾಸುರರ ಅಡ್ಡೆಯಾದರೂ, ಇದ್ದುದರಲ್ಲಿ ತಹಶೀಲ್ದಾರ್ ಪರವಾಗಿಲ್ಲ ಅನ್ನುವ ಮಾತು ನಾಗರಿಕ ವಲಯಗಳಿಂದ ಕೇಳಿ ಬರುತ್ತಿದೆ. ಮೂಲ್ಕಿ ತಹಶೀಲ್ದಾರ್ ಆಗಿರುವ ಪ್ರದೀಪ್ ಕುರ್ಡೇಕರ್ ಮೂಡಬಿದ್ರೆಯ ಪ್ರಭಾರ ತಹಶೀಲ್ದಾರ್. ಜನಮೆಚ್ಚಿದ, ಜನಸ್ನೇಹಿ ಅಧಿಕಾರಿ ಅನ್ನುವ ಇಮೇಜಿದೆ. ಸಾರ್ವಜನಿಕರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಉತ್ತಮ ಬಾಂಧವ್ಯ ಕೂಡ ಇದೆ. ಸಾರ್ವಜನಿಕರು […]

Continue Reading

ಬೆಂಗಳೂರು: ರೌಡಿಗಳೊಂದಿಗೆ ಪೊಲೀಸರ ಸಾಥ್ ಆರೋಪ; ಕಮೀಷನರ್ ಖುದ್ದು ಹಾಜರಿಗೆ ಕೋರ್ಟ್ ಸಮನ್ಸ್

ಬೆಂಗಳೂರು: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬೆಂಗಳೂರಿನ ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿನ ಪ್ರಕರಣವೊಂದರಲ್ಲಿ ಸ್ಥಳೀಯ ಪೊಲೀಸರ ಕರ್ತವ್ಯಲೋಪ ಪ್ರಕರಣದಲ್ಲಿ ಖುದ್ದು ಹಾಜರಾಗುವಂತೆ ನಗರ ಪೊಲೀಸ್ ಆಯುಕ್ತರಿಗೆ ಬೆಂಗಳೂರಿನ ನ್ಯಾಯಾಲಯವು ಸಮನ್ಸ್ ಹೊರಡಿಸಿದೆ. ಬೆಂಗಳೂರಿನ ಹೆಣ್ಣೂರು ಠಾಣಾವ್ಯಾಪ್ತಿಯಲ್ಲಿ ಕೆಲವು ದಿನಗಳ ಹಿಂದೆ ಕೇರಳ ಮೂಲದ ವ್ಯಕ್ತಿಯ ಕೌಟುಂಬಿಕ ವ್ಯಾಜ್ಯದ ನಡುವೆ ಕೆಲವು ರೌಡಿಗಳು ಸಜಿ ಜೋಸೆಫ್ ಎಂಬವರ ಜಮೀನಿಗೆ ನುಗ್ಗಿ ದಾಂದಲೆ ನಡೆಸಿದ್ದ ಘಟನೆ ಭಾರೀ ಸುದ್ದಿಯಾಗಿತ್ತು. ತಾವು ಸಚಿವ ಭೈರತಿ ಸುರೇಶ್ ಸಹಚರರೆಂದು ಹೇಳಿ ಸ್ಥಳೀಯ ರೌಡಿಗಳು ಜಮೀನು ಬಿಟ್ಟುಕೊಡುವಂತೆ […]

Continue Reading

ನಕ್ಸಲ್ ವಾದಿ ವಿಕ್ರಂಗೌಡರ ಎನ್ಕೌಂಟರ್ ನ್ಯಾಯಾಂಗ ತನಿಖೆಗೊಳಪಡಿಸಿ: ಸಿಪಿಐಎಂ.

ನಿನ್ನೆ ದಿನ ನಡೆದ ಪೋಲಿಸ್ ದಾಳಿಯಲ್ಲಿ ನಕ್ಸಲ್ ವಾದಿ ವಿಕ್ರಂ ಗೌಡರ ಹತ್ಯೆಯಾಗಿದೆ ಎಂದು ರಾಜ್ಯ ಸರ್ಕಾರ ಪ್ರಕಟಿಸಿದೆ. ಗುಂಡಿನ ಚಕಮಕಿಯಲ್ಲಿ ಈ ಹತ್ಯೆಯಾಗಿದೆ ಎಂದು ವಿವರಿಸಲಾಗಿದೆ. ಆದರೆ 50-60 ಜನರ ಸಶಸ್ತ್ರ ಪೋಲೀಸರ ತಂಡಕ್ಕೆ ನಾಲ್ಕು ಜನ ನಕ್ಸಲರ ತಂಡವನ್ನು ಬಂಧಿಸಲಾಗಲಿಲ್ಲವೆ ಎಂಬ ಪ್ರಶ್ನೆಯು, ಪೋಲೀಸ್ ಕ್ರಮವನ್ನು ಸಂಶಯಿಸಲಾಗುತ್ತಿದೆ. ಆದ್ದರಿಂದ ರಾಜ್ಯದ ಜನತೆ ನಿಜವನ್ನು ತಿಳಿಯುವಂತಾಗಲು ಈ ಪ್ರಕರಣವನ್ನು ಉನ್ನತ ನ್ಯಾಯಾಂಗ ತನಿಖೆಗೊಳಪಡಿಸಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ ) ರಾಜ್ಯದ ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತದೆ. […]

Continue Reading

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ; ಹಣ ಹಂಚಿದ ಆರೋಪ, ಐದು ಕೋಟಿ ಜೊತೆಗೆ ಸಿಕ್ಕಿ ಬಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಹಣ ಹಂಚುವ ಕುರಿತು ವಿಪಕ್ಷ ನಾಯಕರಿಂದ ಆಕ್ರೋಶ ವ್ಯಕ್ತವಾಗಿದೆ. ಬಹುಜನ ವಿಕಾಸ್ ಅಘಾಡಿ ಕಾರ್ಯಕರ್ತರು ಹಣ ಹಂಚಿದ್ದಾರೆ ಎನ್ನುವ ಆರೋಪದ ಮೇಲೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವೆ ಅವರಿಗೆ ಥಳಿಸಿದ್ದಾರೆ. ವಿನೋದ್ ತಾವೆ ವಿರಾರ್ ಪಟ್ಟಣದಲ್ಲಿರುವ ಹೋಟೆಲ್‌ವೊಂದರಲ್ಲಿ, ಚುನಾವಣಾ ಕಾರ್ಯಕರ್ತರು ಹಾಗೂ ಮತದಾರರಿಗೆ ರೂಪಾಯಿ 5 ಕೋಟಿ ನಗದು ಹಂಚುತ್ತಿದ್ದರು ಎಂದು ಆರೋಪಿಸಲಾಗಿದೆ. ಹೋಟೆಲ್‌ನಲ್ಲಿ ಕಾರ್ಯಕರ್ತರು ಹಾಗೂ ಮತದಾರರಿಗೆ ರಾಪಾಯಿ 5 ಕೋಟಿ ನಗದು ಹಂಚುತ್ತಿರುವಾಗ ವಿನೋದ್ ತಾವೆ ಸಿಕ್ಕಿಬಿದ್ದಿದ್ದಾರೆ ಎಂದು […]

Continue Reading

ಮೂಡಬಿದ್ರೆ: ಮಿನಿ ವಿಧಾನಸೌಧ ಬಕಾಸುರರ ಸ್ವರ್ಗ

ಕಂದಾಯ, ರೆಕಾರ್ಡ್, ಸರ್ವೇ ಇಲಾಖೆಯಲ್ಲಿ ನುಂಗಣ್ಣರು.! ಮೂಡಬಿದ್ರೆ ತಾಲ್ಲೂಕಾದ ನಂತರ ವರ್ಷದ ಹಿಂದೆ ತಾಲೂಕು ಆಡಳಿತ ಸೌಧ (ಮಿನಿ ವಿಧಾನಸೌಧ) ತಲೆ ಎತ್ತಿ ನಿಂತಿದೆ. ಆಡಳಿತ ಸೌಧ ನೋಡುಗರ ಕಣ್ಮನ ಸೆಳೆಯುತ್ತಿದೆ. ಅಷ್ಟೊಂದು ಅಚ್ಚುಕಟ್ಟಾಗಿ ಆಡಳಿತ ಸೌಧ ಇದೆ. ಇದನ್ನು ಅಲ್ಲಗಳೆಯಲಾಗದು. ಆದರೆ ಕಟ್ಟಡ ಚಂದವಿದ್ದರೆ ಸಾಕಾ, ಅಲ್ಲಿನ ಸಾರ್ವಜನಿಕರಿಗೆ ಉತ್ತಮ ಸೇವೆ ಲಭಿಸಬೇಡವೇ? ಚಂದದ ಆಡಳಿತ ಸೌಧದ ಒಳಹೊಕ್ಕರೆ ಗಬ್ಬೆದ್ದು ನಾರುವ ಅಧಿಕಾರಿಗಳ ಬಗ್ಗೆ ಇಲ್ಲಿನ ನಾಗರಿಕರು ಹಿಡಿಶಾಪ ಹಾಕುತ್ತಿದ್ದಾರೆ. ಅಷ್ಟಕ್ಕೂ ತಾಲೂಕು ಆಡಳಿತ ಸೌಧದಲ್ಲಿ […]

Continue Reading

ಸಿಪಿಐಎಂ ಇದರ ಮೂರು ದಿನಗಳ ಜಿಲ್ಲಾ ಸಮ್ಮೇಳನಕ್ಕೆ ತೆರೆ

ಬಿಜೆಪಿ ಒಂದು ಸ್ವತಂತ್ರ ರಾಜಕೀಯ ಪಕ್ಷವೇ ಅಲ್ಲ. ಆರ್ ಎಸ್ ಎಸ್ ಇಶಾರೆಯಂತೆ ಕಾರ್ಯನಿರ್ವಹಿಸುವ ಒಂದು ಗುಂಪು ಕಾರ್ಪೊರೇಟ್ ಬಂಡವಾಳದಾರರ ರಕ್ಷಣೆಗೆ ಬಿಜೆಪಿ ಪಕ್ಷ, ಸರಕಾರ ದುಡಿಯುತ್ತದೆ. ಧರ್ಮಾಂಧತೆ, ಫ್ಯಾಸಿಸಂ ಮೂಲಕ ಅದು ದೇಶದ ಅಸ್ಮಿತೆಯನ್ನೇ ನಾಶಪಡಿಸುತ್ತಿದೆ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ದ‌‌ಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನದ ಸಮಾರೋಪದ ಪ್ರಯುಕ್ತ ಸಿಪಿಐಎಂ ಕಾರ್ಯಕರ್ತರು ಮಂಗಳೂರು ನಗರದಲ್ಲಿ ಬೃಹತ್ ರ್ಯಾಲಿ ನಡೆಸಿ ಗಮನ ಸೆಳೆದರು. ಕೆಂಪು ಟೊಪ್ಪಿ, ಶಾಲು, ಅಂಗಿ ಧರಿಸಿದ ಯುವಜನರು ಉತ್ಸಾಹದಿಂದ ಘೋಷಣೆಗಳನ್ನು ಕೂಗುತ್ತಾ […]

Continue Reading

ಹಾಡಹಗಲೇ ಮನೆಗೆ ನುಗ್ಗಿ ಎಂಟು ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳ್ಳತನ.

ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಮಂಕುಡೆಯಲ್ಲಿ ಕಳ್ಳರ ಕೃತ್ಯ. ಬಂಟ್ವಾಳ ತಾ.ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಮಂಕುಡೆ ಕಲ್ಕಾಜೆ ಎಂಬಲ್ಲಿನ ಗಣೇಶ್ ಶೆಟ್ಟಿ ಎಂಬವರ ಮನೆಯಲ್ಲಿ ಇಂದು ಮಧ್ಯಾಹ್ನ ಕಳ್ಳತನ ನಡೆದಿದೆ. ಗಣೇಶ್ ಶೆಟ್ಟಿ ಬೆಳಗ್ಗೆ ಕೂಲಿ ಕೆಲಸಕ್ಕೆ ಹೋಗಿದ್ದು ಪತ್ನಿ ಮಧ್ಯಾಹ್ನ 12.45ರ ಸುಮಾರಿಗೆ ಮನೆಗೆ ಬೀಗ ಹಾಕಿ ಪೇಟೆಗೆ ಹೋಗಿದ್ಜರು. 2ಗಂಟೆ ಸುಮಾರಿಗೆ ಪೇಟೆಯಿಂದ ಮರಳಿ ಬಂದ ಗಣೇಶ್ ಶೆಟ್ಟಿಯವರ ಪತ್ನಿ ಮುಂಬಾಗಿಲ ಬೀಗ ತೆಗೆದು ಒಳಗೆ ಹೋದಾಗ ಹಿಂಬಾಗಿಲು ಮುರಿದು […]

Continue Reading