ಫರಂಗಿಪೇಟೆ: ಗ್ಯಾಂಗ್ ವಾರ್ ಆರೋಪಿಗಳು ಅಂದರ್; ‘ಪಲ್ಟಿ’ ಇನ್ನೂ ಭೂಗತ

ಅಕ್ರಮ ಗೋ ಮಾಂಸ ಕಾದಾಟ..ಹತ್ಯಾಯತ್ನ ಸುತ್ತಮುತ್ತ.. ವಾರದ ಹಿಂದೆ ಜಿಲ್ಲೆಯನ್ನು ಬೆಚ್ಚಿಬೀಳಿಸಿದ ಫರಂಗಿಪೇಟೆಯ ಗ್ಯಾಂಗ್ ವಾರ್ ಆರೋಪಿಗಳ ಪೈಕಿ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರು ಮಂದಿ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ. ಫರಂಗಿಪೇಟೆಯ ಅಮ್ಮೆಮ್ಮಾರ್ ನಲ್ಲಿ ನಡೆಯುತ್ತಿದ್ದ ಅಕ್ರಮ ಗೋ ಮಾಂಸ ಕಾದಾಟಕ್ಕೆ ಎರಡು ಗ್ಯಾಂಗ್ ಮಧ್ಯೆ ತಲವಾರು ಕಾಳಗ ನಡೆದಿತ್ತು. ಗ್ಯಾಂಗಿನ ಹುಡುಗರು ಕತ್ತಿಯನ್ನು ಕೈಯಲ್ಲಿಡಿದು ಝಳಪಿಸುವ ಹಾಗೂ ಹಲ್ಲೆ ನಡೆಸುವ ದೃಶ್ಯಾವಳಿಗಳು ಆ ನಂತರ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಅಮ್ಮೆಮ್ಮಾರ್ […]

Continue Reading

ವಿದ್ಯಾರಣ್ಯರೂ, ಪೇಜಾವರರೂ ಮತ್ತು ಹರಿಪ್ರಸಾದರೂ….

ರಾಜಕೀಯ ಅರಗಿಸಿಕೊಳ್ಳಲಾಗದ ಈಗಿನ ಪೇಜಾವರ ಸ್ವಾಮೀಜಿಗಳು ದ್ವೈತ ಪ್ರಚಾರ, ಕೃಷ್ಣ ಕೈಂಕರ್ಯ ಮಾಡುವುದು ಬಿಟ್ಟು ರಾಜಕೀಯ ಮಾಡುವುದು ಯಾಕೆ.? ಸ್ವಾಮೀಜಿಗಳು ರಾಜಕೀಯ ಮಾತನಾಡಿದ ಬಳಿಕ ರಾಜಕೀಯ ಶೈಲಿಯ ಟೀಕೆಯನ್ನು ಎದುರಿಸಬೇಕೇ ವಿನಹ ಜಾತಿ ಪರದೆಯ ಹಿಂದೆ ಅವಿತು ಅತ್ತು ರಕ್ಷಣೆಗಾಗಿ ಯಾರನ್ನೋ ಪ್ರಚೋದಿಸಬಾರದು. ✍️. ನವೀನ್ ಸೂರಿಂಜೆ. ಪತ್ರಕರ್ತರು ಸ್ವಾಮಿಗಳು ರಾಜಕೀಯ ಮಾತನಾಡಿದ ಬಳಿಕ ರಾಜಕೀಯ ಪ್ರತಿಕ್ರಿಯೆ ಕೇಳಲು ತಯಾರಿರಬೇಕು. ಪ್ರತಿಕ್ರಿಯೆ ಬಂದಾಗ ತನ್ನ ಸಮುದಾಯವನ್ನು ರಾಜಕಾರಣಿ ವಿರುದ್ದ ಎತ್ತಿಕಟ್ಟುವ ವ್ಯಕ್ತಿಗಳು ರಾಜಕೀಯ ಮಾತನಾಡಬಾರದು. ದಿವಂಗತ ಪೇಜಾವರ […]

Continue Reading

ಶಸ್ತ್ರಚಿಕಿತ್ಸೆ ನಡೆಯುತ್ತಿದ್ದ ವೇಳೆ ಅನಾರೋಗ್ಯ ಪೀಡಿತ ಯುವಕ ಹೃದಯಾಘಾತದಿಂದ ಸಾವು.

ಕಡಬ ತಾಲೂಕಿನ ಕರ್ಮಾಯಿ ನಿವಾಸಿ ಜಾರ್ಜ್ ಅವರ ಪುತ್ರ ಜೈಸನ್ ಜಾರ್ಜ್ (29) ಮೃತಪಟ್ಟ ಯುವಕ. ಅನಾರೋಗ್ಯದಿಂದ ಬಳಲುತ್ತಿದ್ದ ಈತನನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಶನಿವಾರದಂದು ಶಸ್ತ್ರಚಿಕಿತ್ಸೆ ನಡೆಯುತ್ತಿದ್ದ ವೇಳೆಯಲ್ಲೇ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಮೃತ ಜೈಸನ್ ತಂದೆ, ತಾಯಿ, ಸಹೋದರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Continue Reading

ಕಡಬ ಕೋಡಿಂಬಾಳದಲ್ಲಿ ನಡೆದ ದುರ್ಘಟನೆ: ಚಲಿಸುತ್ತಿದ್ದ ಆಕ್ಟಿವಾ ಮೇಲೆ ಭಾರಿ ಗಾತ್ರದ ಮರ ಬಿದ್ದು ಸವಾರ ಸ್ಥಳದಲ್ಲೇ ಸಾವು.

ಕಡಬ-ಪಂಜ ರಸ್ತೆಯ ಕೋಡಿಂಬಾಳ ಸಮೀಪದ ಪುಳಿಕುಕ್ಕು ಎಂಬಲ್ಲಿ ಶನಿವಾರ ಬೆಳಗ್ಗೆ ನಡೆದ ಅಘಾತಕಾರಿ ಘಟನೆ. ಎಡಮಂಗಲ ಗ್ರಾಮದ ದೇವಸ್ಯ ಸುಬ್ಬಣ್ಣ ಗೌಡರ ಪುತ್ರ ಎಡಮಂಗಲ ಸಿ.ಎ.ಬ್ಯಾಂಕಿನ ಪಿಗ್ಮಿ ಸಂಗ್ರಾಹಕ ಸೀತಾರಾಮ ಗೌಡ(58) ಮೃತಪಟ್ಟ ಸವಾರ. ದೀಪಾವಳಿ ಪ್ರಯುಕ್ತ ಮನೆಯಲ್ಲಿ ದೈವಕ್ಕೆ ಹರಕೆ ಇದ್ದುದರಿಂದ ಕೋಳಿ ತರಲು ಕಡಬಕ್ಕೆ ಹೋಗಿ ತನ್ನ ಮನೆಗೆ ಹಿಂತಿರುಗುವಾಗ ರಸ್ತೆ ಬದಿಯ ಭಾರಿ ಗಾತ್ರದ ದೂಪದ ಮರವೊಂದು ಚಲಿಸುತ್ತಿದ್ದ ದ್ವಿಚಕ್ರ ವಾಹನದ ಸವಾರ ಸೀತಾರಾಮ ಗೌಡರ ತಲೆ ಮೇಲೆಯೇ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. […]

Continue Reading

ಲಂಚ ಪ್ರಕರಣ: ವೈಟ್ ಫೀಲ್ಡ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ರನ್ನು ಬಂಧಿಸಿದ ಲೋಕಾಯುಕ್ತ ಪೊಲೀಸರು

ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರಿಂದ 25 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ವೈಟ್ ಫೀಲ್ಡ್ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ಗಂಗಾಧರಯ್ಯ ಎಂಬವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 24 ರಂದು ವರ್ತೂರು ಬಳಿಯ ನಿವಾಸಿ ಅಂಬರೀಶ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಎಫ್‌ಐಆರ್ ನಲ್ಲಿ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಮತ್ತು ಇತರರನ್ನು ಹೆಸರಿಸಲಾಗಿದೆ. ಆರೋಪಿಗಳಿಗೆ ನ್ಯಾಯಾಲಯ ಈಗಾಗಲೇ ಜಾಮೀನು […]

Continue Reading

ಮಂಗಳೂರು: ಬೈಕ್ ಅಪಘಾತ; ಪಿ.ಎ ಕಾಲೇಜು ವಿದ್ಯಾರ್ಥಿ ಸಲ್ಮಾನ್ ಫಾರೀಸ್ ಮೃತ್ಯು

ಉಳ್ಳಾಲ ಕಲ್ಲಾಪು ನೇತ್ರಾವತಿ ಸೇತುವೆ ಬಳಿ ನಡೆದ ಬೈಕ್ ಅಪಘಾತದಲ್ಲಿ ಸವಾರ ಮೃತಪಟ್ಟು, ಸಹಸವಾರ ಗಂಭೀರ ಗಾಯಗೊಂಡ ಘಟನೆ ಇಂದು ಸಂಜೆ ನಡೆದಿದೆ. ಮೃತಪಟ್ಟ ಯುವಕನನ್ನು ಬಂಟ್ವಾಳ ಲೊರೊಟ್ಟೋ ಪದವು ಟಿಪ್ಪುನಗರ ನಿವಾಸಿ ಸಲ್ಮಾನ್ ಫಾರೀಸ್ ಎಂದು ಗುರುತಿಸಲಾಗಿದೆ. ಈತ ದೇರಳಕಟ್ಟೆ ಪಿ.ಎ ಕಾಲೇಜಿನ ಫಾರ್ಮಸಿ ಕಲಿಯುವ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡ ಸಹ ಸವಾರ ಮುಹಮ್ಮದ್ ಶಾಕೀರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ.

Continue Reading

ಅಪ್ರಾಪ್ತ ಹುಡುಗಿಯ ಹುಚ್ಚಾಟ; 20 ಮಂದಿ HIV ಸೋಂಕಿಗೆ ಒಳಗಾಗಿರುವ ಆಘಾತಕಾರಿ ಘಟನೆ

ಡ್ರಗ್ಸ್ ಖರೀದಿಗಾಗಿ ಪುರುಷರನ್ನು ತನ್ನ ಬುಟ್ಟಿಗೆ ಹಾಕಿಕೊಂಡು, ಲೈಂಗಿಕ ಸುಖ ನೀಡಿ, ಉಚಿತ HIV ನೀಡಿದ ಅಪ್ರಾಪ್ತೆ ರಾಜ್ಯದಲ್ಲಿ ಎಚ್ ಐ ವಿ ಸೋಂಕು ಮತ್ತೆ ಜನರನ್ನು ಕಾಡುತ್ತಿದ್ದು, ಸೋಂಕಿನ ಸುಳಿಗೆ ಸುಶಿಕ್ಷಿತರು ಹಾಗೂ ಯುವ ಜನಾಂಗ ಹೆಚ್ಚಾಗಿ ಸಿಲುಕಿರುವುದು ಕಂಡುಬಂದಿದೆ. ಇತ್ತೀಚೆಗೆ ಅಪ್ರಾಪ್ತ ವಯಸ್ಸಿನ ಹುಡುಗಿಯ ಹುಚ್ಚಾಟಕ್ಕೆ ಸರಿ ಸುಮಾರು 20 ಮಂದಿ HIV ಸೋಂಕಿಗೆ ಒಳಗಾಗಿರುವ ಆಘಾತಕಾರಿ ಘಟನೆ ರಾಮನಗರದ ನೈನಿತಾಲ್ ಎಂಬ ಪ್ರದೇಶದಲ್ಲಿ ನಡೆದಿದೆ. ಈ ಹುಡುಗಿ ಡ್ರಗ್ಸ್ ಚಟಕ್ಕೆ ದಾಸಳಾಗಿದ್ದಳು. ಡ್ರಗ್ಸ್ […]

Continue Reading

ಮೌಲ್ಯ ಕಳೆದುಕೊಳ್ಳುತ್ತಿರುವ ರಾಜ್ಯೋತ್ಸವ ಪ್ರಶಸ್ತಿ!

ಅನರ್ಹರ ಸಾಲಲ್ಲಿ ಅರ್ಹರು ಸೇರಿಕೊಂಡಾಗ ಅವರಿಗೆ ಮುಜುಗರವಾಗುವುದು ಸಹಜ ಮೌಲ್ಯ ಕಳೆದುಕೊಳ್ಳುತ್ತಿರುವ ರಾಜ್ಯೋತ್ಸವ ಪ್ರಶಸ್ತಿ! ಹೌದು ರಾಜ್ಯೋತ್ಸವ ‌ಪ್ರಶಸ್ತಿ ಮೌಲ್ಯ ಕಳೆದುಕೊಳ್ಳುತ್ತಿವೆ. ಅದಕ್ಕೆ ಕಾರಣ ನೂರಾರು. ಅನರ್ಹರ ಸಾಲಲ್ಲಿ ಅರ್ಹರು ಸೇರಿಕೊಂಡಾಗ ಅವರಿಗೆ ಮುಜುಗರವಾಗುವುದು ಸಹಜ. ರಾಜ್ಯಮಟ್ಟದಲ್ಲಿ ನೀಡುವ ಪ್ರಶಸ್ತಿಯ ಜೊತೆ ಹಣ+ಚಿನ್ನವಿದೆ‌. ಜಿಲ್ಲಾ ಮಟ್ಟದಲ್ಲಿ ನೀಡುವ ಈ ಪ್ರಶಸ್ತಿಯ ಜೊತೆ ನಯಾಪೈಸೆಯಿಲ್ಲ. ಆದರೂ ಈ ಪ್ರಶಸ್ತಿಯನ್ನು ದಕ್ಕಿಸಿಕೊಳ್ಳಲು ನಡೆಸುವ ಪ್ರಯತ್ನ ಅಚ್ಚರಿ ಹುಟ್ಟಿಸಿವೆ. ಈ ಬಾರಿ‌ ಜಿಲ್ಲಾ ಮಟ್ಟದಲ್ಲಿ ನೀಡುವ ಪ್ರಶಸ್ತಿಯ ಹೆಸರನ್ನು ಬದಲಾಯಿಸಲಾಗಿದೆ. ಜಿಲ್ಲಾ […]

Continue Reading

ಬಜಪೆ: ಕಟೀಲು ನಿವಾಸಿ ತಾರಾನಾಥ ಹತ್ಯೆ ಪ್ರಕರಣ; ಆರೋಪಿ ದೇವಕಿ ಅಂದರ್

ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮೂಲ್ಕಿ ತಾಲೂಕು ಕೊಂಡೆಮೂಲ ಗ್ರಾಮದ ಕಟೀಲು ನಿವಾಸಿ ಬಾಬು ಮುಗೇರ ಎಂಬವರ ಮಗನಾದ ತಾರಾನಾಥ (39) ಎಂಬವರ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ದಿನಾಂಕ 27-10-2024 ರಂದು ಗಿಡಿಗೆರೆ ದರ್ಖಾಸ್ ಎಂಬಲ್ಲಿ ಕುರುಚಲು ಗಿಡದ ಟ್ಯಾಂಕ್ ಬಳಿ ಕುತ್ತಿಗೆಗೆ ವಾಯರ್ ನ್ನು ಸುತ್ತಿ ಕೊಲೆ ಮಾಡಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಿದ ಬಜಪೆ ಪೋಲಿಸ್ ಠಾಣೆಯ ನಿರೀಕ್ಷಕರಾದ ಸಂದೀಪ್ ಜಿ ಎಸ್ ರವರು ತನಿಖೆ […]

Continue Reading

ಹೃದಯ ವಿದ್ರಾವಕ ಘಟನೆ; ಒಂದೇ ದಿನದ ಅಂತರದಲ್ಲಿ ಇಬ್ಬರು ಸಹೋದರರು ಕಾಮಾಲೆ ರೋಗಕ್ಕೆ ಬಲಿ.!

ಸಾಹೀರ್, ಅನ್ವರ್ ಮೃತ ದುರ್ದೈವಿಗಳು.. ಬಾವಿಯ ನೀರಿನಲ್ಲಿ ಪತ್ತೆಯಾಯಿತು ಡೆಡ್ಲಿ ವೈರಸ್.. ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ಕೇರಳ ಕಣ್ಣೂರಿನ ತಳಿಪರಂಬ ಪುರಸಭಾ ವ್ಯಾಪ್ತಿಯಲ್ಲಿ ಹೆಪಾಟೈಟಿಸ್ ಎ (ಕಾಮಾಲೆ ರೋಗ) ಉಲ್ಬಣಗೊಂಡು ಒಂದೇ ದಿನದ ಅಂತರದಲ್ಲಿ ಇಬ್ಬರು ಸಹೋದರರು ಮೃತಪಟ್ಟ ಹೃದಯವಿದ್ರಾವಕ ಘಟನೆ ಹಿದಾಯತ್ ನಗರದಲ್ಲಿ ನಡೆದಿದೆ. ಎಂ. ಸಾಹೀರ್ (40) ಮಂಗಳವಾರದಂದು ನಿಧನವಾದರೆ ಅವರ ಸಹೋದರ ಅನ್ವರ್ (36) ಬುಧವಾರದಂದು ಸಾವನ್ನಪ್ಪಿದ್ದಾರೆ. ಅವರು ಕೋಝಿಕ್ಕೋಡ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಇವರ ಕುಟುಂಬ […]

Continue Reading