ಲಾಗೋಸ್: 31.5 ಕೆ.ಜಿ ಕೊಕೇನ್‌ ವಶಪಡಿಸಿಕೊಂಡ ನೈಜೀರಿಯಾ ಪೊಲೀಸರು, 22 ಭಾರತೀಯರ ಬಂಧನ

ಲಾಗೋಸ್: ಹಡಗಿನಲ್ಲಿದ್ದ 31.5 ಕೆ.ಜಿ ಕೊಕೇನ್‌ ವಶಪಡಿಸಿಕೊಂಡ ನೈಜೀರಿಯಾ ಪೊಲೀಸರು, 22 ಭಾರತೀಯರನ್ನು ಬಂಧಿಸಿದ್ದಾರೆ. ಲಾಗೋಸ್‌ನ ಅಪಾಪಾ ಬಂದರಿನ ಜಿಡಿಎನ್‌ಎಲ್‌ ಟರ್ಮಿನಲ್‌ನಲ್ಲಿದ್ದ ‘ಎಂವಿ ಅರುಣ ಹುಲ್ಯ’ ಎಂಬ ವ್ಯಾಪಾರಿ ಹಡಗನ್ನು ಶೋಧಿಸಿದ ನೈಜೀರಿಯಾದ ಮಾದಕವಸ್ತು ನಿಗ್ರಹ ದಳದ ಅಧಿಕಾರಿಗಳಿಗೆ ಕೊಕೇನ್ ದೊರೆತಿದೆ. ಎಂದು ವೆಬ್‌ ಪೋರ್ಟಲ್‌ ‘ಪಂಚ್’ ವರದಿ ಮಾಡಿದೆ. ಕೊಕೇನ್‌ ಪತ್ತೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾದವರಲ್ಲಿ ಹಡಗಿನ ಮಾಸ್ಟರ್‌ ಶರ್ಮಾ ಶಶಿ ಭೂಷಣ್‌ ಮತ್ತು 21 ಸಿಬ್ಬಂದಿ ಇದ್ದಾರೆ ಎಂದು ಮಾಧ್ಯಮ ಮತ್ತು ವಕಾಲತ್ತು ನಿರ್ದೇಶಕ ಫೆಮಿ […]

Continue Reading

ವೆಂಟಿಲೇಟರ್ ಜೀವ ಉಳಿಸುವ ಸಾಧನವಾಗಿರಬೇಕು, ಅದು ಆಸ್ಪತ್ರೆಗೆ ಆದಾಯ ತರುವ ಸಾಧನವಾಗಿರಬಾರದು: ಕೇಂದ್ರ ಆರೋಗ್ಯ ಸಚಿವಾಲಯ

ಔಷಧವು ವ್ಯವಹಾರವಾಗುತ್ತಿರುವ ಈ ಸಮಯದಲ್ಲಿ, ಕೇಂದ್ರ ಆರೋಗ್ಯ ಸಚಿವಾಲಯವು ಸಾಮಾನ್ಯ ಜನರಿಗೆ ಪರಿಹಾರ ನೀಡುವ ಹೊಸ ಮಾರ್ಗಸೂಚಿಗಳನ್ನ ಹೊರಡಿಸಿದೆ. ವೆಂಟಿಲೇಟರ್ ಜೀವ ಉಳಿಸುವ ಸಾಧನವಾಗಿರಬೇಕು, ಆದರೆ ಅದು ಆಸ್ಪತ್ರೆಗೆ ಆದಾಯ ತರುವ ಸಾಧನವಾಗಿರಬಾರದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಚಿಕಿತ್ಸೆಯ ಅವಧಿಯನ್ನು ಅನಗತ್ಯವಾಗಿ ವಿಸ್ತರಿಸುವುದು ಮತ್ತು ಕುಟುಂಬ ಸದಸ್ಯರನ್ನು ವೆಚ್ಚಗಳ ಬಗ್ಗೆ ಕತ್ತಲೆಯಲ್ಲಿಡುವುದು ಮುಂತಾದ ದೂರುಗಳನ್ನು ಆರೋಗ್ಯ ಸೇವೆಗಳ ನಿರ್ದೇಶನಾಲಯ ಗಂಭೀರವಾಗಿ ಪರಿಗಣಿಸಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ವೆಚ್ಚದ ಬಗ್ಗೆ ಹೆಚ್ಚುತ್ತಿರುವ ಕಳವಳಗಳನ್ನು ಗಮನದಲ್ಲಿಟ್ಟುಕೊಂಡು, ಆರೋಗ್ಯ ಸಚಿವಾಲಯದ ಅಡಿಯಲ್ಲಿ […]

Continue Reading

ಮಂಗಳೂರು ಗರೋಡಿ ‘ಕೋಳಿ ಅಂಕ’ ವಿಚಾರ; ಅಪಪ್ರಚಾರ ಬಗ್ಗೆ FIR

“Kalyug Kalki Post” ಎಂಬ ಶೀರ್ಷಿಕೆಯಡಿ ಒಂದು ದುರುದ್ದೇಶಪೂರಿತ ಹಾಗೂ ಪ್ರಚೋದನಾತ್ಮಕ ಪೋಸ್ಟ್ ಮಂಗಳೂರು: ಬಂದರು ನಗರಿ ಮಂಗಳೂರಿನ ಪ್ರಸಿದ್ಧ ಗರೋಡಿ ಕ್ಷೇತ್ರದ ಉತ್ಸವ ಸಂದರ್ಭದಲ್ಲಿ ‘ಕೋಳಿ ಅಂಕ’ ನಡೆಸುವ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ‘ಕೋಳಿ ಅಂಕ’ವು ಉತ್ಸವ ಸಂದರ್ಭದ ಮೋಜಿನ ಆಟವಾಗಿದೆಯೇ ಹೊರತು ಜಾತ್ರಾ ಸಂಪ್ರದಾಯದ ಭಾಗ ಅಲ್ಲ ಎಂದು ಆಸ್ತಿಕರ ಹೇಳಿಕೊಂಡರೆ, ಇನ್ನೂ ಕೆಲವರು ಈ ಸ್ಪರ್ಧೆಗೆ ಅವಕಾಶ ನೀಡಲೇಬೇಕು ಎಂದು ಪಟ್ಟು ಹಿಡಿಯುತ್ತಿದ್ದಾರೆ. ಈ ನಡುವೆ, ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಹಾಗೂ […]

Continue Reading

ಬಜಪೆ ಪೊಲೀಸರ ಕಾರ್ಯಾಚರಣೆ: ಬಿಹಾರ ಮೂಲದ ಗಾಂಜಾ ವ್ಯಾಪಾರಿಗಳ ಬಂಧನ, ಒಂದು ಕೆ.ಜಿ ಗಾಂಜಾ ವಶ

ಬಿಹಾರ ರಾಜ್ಯದಿಂದ ರೈಲ್ವೆ ಮುಖಾಂತರ ಮಂಗಳೂರಿಗೆ ಗಾಂಜಾ ತಂದು, ಕೂಲಿ ಕಾರ್ಮಿಕರಿಗೆ ಮಾರಾಟ ಮಾಡಲು ಯತ್ನಿಸಿದ ಅಂತರಾಜ್ಯ ಗಾಂಜಾ ವ್ಯಾಪಾರಿಗಳನ್ನು ಖಚಿತ ಮಾಹಿತಿ ಮೇರೆಗೆ ಬಂಧಿಸುವಲ್ಲಿ ಬಜಪೆ ಪೊಲೀಸರು ಯಶಸ್ವಿಯಾಗಿರುತ್ತಾರೆ. ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿಗುಡ್ಡೆ ಕ್ರಾಸ್ ರಸ್ತೆಯ ಬದಿಯಲ್ಲಿ ಸುಮಾರು 1 ಕೆ.ಜಿ ತೂಕದ ಮಾದಕವಸ್ತು ಗಾಂಜಾವನ್ನು ವಶದಲ್ಲಿರಿಸಿಕೊಂಡು ಅಕ್ರಮವಾಗಿ ಮಾರಾಟ ಮಾಡಲೆತ್ನಿಸಿದ ಬಿಹಾರ ಮೂಲದ ಸುನಿಲ್ ಕುಮಾರ್, ಹಾಲಿ ವಾಸ: ಕೃಷ್ಣಾಪುರ ಕಾಟಿಪಳ್ಳ ಸುರತ್ಕಲ್‌ ಮತ್ತು ಬ್ರಿಜೇಶ್ ಶ್ರಿನಿವಾಸ್ತವ, ಹಾಲಿವಾಸ: ಕೃಷ್ಣಾಪುರ ಕಾಟಿಪಳ್ಳ […]

Continue Reading

ಮೂರು ಮಂದಿ ಅಪ್ರಾಪ್ತರು ಸೇರಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಹುಬ್ಬಳ್ಳಿ: ಮೂವರು ಅಪ್ರಾಪ್ತರು ಸೇರಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಅಷ್ಟೇ ಅಲ್ಲದೆ ವಿಡಿಯೋ ಕೂಡ ಮಾಡಿಟ್ಟಿಕೊಂಡು ತಮ್ಮ ವಿಕೃತಿ ಮೆರೆದಿದ್ದಾರೆ. 13 ವರ್ಷ ವಯಸ್ಸಿನ ಬಾಲಕಿಯ ಮೇಲೆ 14 ರಿಂದ 15 ವರ್ಷ ವಯಸ್ಸಿನ ಮೂವರು ಬಾಲಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಾಲಕಿಯ ಪೋಷಕರು ಇಲ್ಲದಿದ್ದಾಗ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ಹುಡುಗರು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಸದ್ಯ ಬಾಲಕಿಯನ್ನು ರಕ್ಷಿಸಲಾಗಿದ್ದು, ಮೂವರು ಬಾಲಕರನ್ನು […]

Continue Reading

ವಿಟ್ಲ: ಗಣೇಶ್ ಪೂಜಾರಿ ಎಂಬಾತನನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಹಾಸನ ಜಿಲ್ಲೆಯ ಆಲೂರು ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು

ಮಂಗಳೂರು ಸಹಾಯಕ ಆಯುಕ್ತರು ಹಾಗೂ ಉಪ-ವಿಭಾಗೀಯ ದಂಡಾಧಿಕಾರಿಗಳು ಇವರ ಆದೇಶದ ಮೇರೆಗೆ ಗಣೇಶ ಯಾನೆ ಗಣೇಶ್ ಪೂಜಾರಿ ಎಂಬಾತನನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಹಾಸನ ಜಿಲ್ಲೆಯ ಆಲೂರು ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ. ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಗಣೇಶ ಯಾನೆ ಗಣೇಶ ಪೂಜಾರಿ, ಬಡಕೋಡಿ, ಕೇಪು ಗ್ರಾಮ, ಬಂಟ್ವಾಳ ತಾಲೂಕು. ಈತನ ಮೇಲೆ ಹಲ್ಲೆ, ದೊಂಬಿ, ಕೊಲೆಯತ್ನ, ಜೂಜು ಮತ್ತು ಸರಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿಯಂತಹ ಒಟ್ಟು14 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಈತನನ್ನು ವಿಟ್ಲ […]

Continue Reading

ಮಂಗಳೂರು ಪೊಲೀಸರ ಕಾರ್ಯಾಚರಣೆ: 21 ಕೆ.ಜಿ ತೂಕದ ಗಾಂಜಾ ವಶ; ಕುಖ್ಯಾತ ಆರೋಪಿಗಳ ಬಂಧನ, ಪ್ರಕರಣ ದಾಖಲು

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಚೊಕ್ಕಬೆಟ್ಟು ಗ್ರಾಮದ ಪರಮೇಶ್ವರಿ ನಗರದ, 2ನೇ ಕ್ರಾಸ್ ನ ಬೆನಕ ಎಂಬ ಹೆಸರಿನ ಮನೆಯ ಬಳಿ ಗಾಂಜಾವನ್ನು ಮಾರಾಟ ಮಾಡುವ ಸಲುವಾಗಿ ಕಾರಿನಲ್ಲಿ ದಾಸ್ತಾನು ಮಾಡಿರುವ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿದ ಪೊಲೀಸರು ಆರೋಪಿಗಳಾದ ಪ್ರದೀಪ್ ಪೂಜಾರಿ, ಶಾಲೆಮಜಲು, ಉಳಾಯಿಬೆಟ್ಟು ಗ್ರಾಮ, ಗುರುಪುರ. ಇದೀಗ ವಾಸ ಚೊಕ್ಕಬೆಟ್ಟು, ಸುರತ್ಕಲ್ ಹಾಗೂ ವಸಂತ ಪೂಜಾರಿ ಚಿತ್ರಾಪುರ, ಮಂಗಳೂರು ಎಂಬವರನ್ನು ದಸ್ತಗಿರಿ ಮಾಡಿ, ಅವರ ವಶದಲ್ಲಿದ್ದ ಸುಮಾರು 21 ಕೆ.ಜಿ 450 ಗ್ರಾಂ […]

Continue Reading

ಬಂಟ್ವಾಳ: ಬ್ಯಾಂಕ್ ಆಫ್ ಬರೋಡಾ ಶಾಖೆಯ ಜಂಟಿ ವ್ಯವಸ್ಥಾಪಕ ಸುಬ್ರಹ್ಮಣ್ಯಂ ಎಂಬವರು ಲಕ್ಷಾಂತರ ರೂ. ನಗದು ಮತ್ತು ಚಿನ್ನ ವಂಚಿಸಿ ಪರಾರಿ

ಪೆರ್ನೆ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯ ಎಟಿಎಂಗೆ ನಿಗದಿತ ನಗದು ಜಮಾ ಮಾಡದೆ, ಕಡಿಮೆ ಹಣ ಜಮಾ ಮಾಡಿ ದುರುಪಯೋಗಪಡಿಸಿ, ವಂಚನೆ ಮಾಡಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 121/2025 ರಂತೆ ಸುಬ್ರಹ್ಮಣ್ಯಂ, ಪುಲುಗುಜ್ಜು ಎಂಬವರ ಮೇಲೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 04-09-2023 ರಿಂದ 19-12-2025 ರ ಅವಧಿಯಲ್ಲಿ ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಆರೋಪಿತ ಸುಬ್ರಹ್ಮಣ್ಯಂ, ಪುಲುಗುಜ್ಜು ಎಂಬವರು ಬ್ಯಾಂಕ್ ಆಫ್ ಬರೋಡಾ ಪೆರ್ನೆ ಶಾಖೆಯ […]

Continue Reading

ಗುರುಪುರ ಕೈಕಂಬ ವಿಜಯ ನರ್ಸಿಂಗ್ ಹೋಂ ವೈದ್ಯರ ಬೇಜವಾಬ್ದಾರಿತನಕ್ಕೆ ಮಗು ಬಲಿಯಾದ ಪ್ರಕರಣ: ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಿದ ಜಿಲ್ಲಾಡಳಿತ

ಸಮರ್ಪಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ: ಸಂತೋಷ್ ಬಜಾಲ್ ಒತ್ತಾಯ ಗುರುಪುರ- ಕೈಕಂಬ ಬಳಿಯ ವಿಜಯ ನರ್ಸಿಂಗ್ ಹೋಮ್ ನಲ್ಲಿ ಇತ್ತೀಚೆಗೆ ಹೆರಿಗೆಗೆ ದಾಖಲಾಗಿದ್ದ ವೇಳೆ ವೈದ್ಯರ ಕರ್ತವ್ಯ ಲೋಪ, ಬೇಜವಾಬ್ದಾರಿತನದಿಂದ ಬಂಟ್ವಾಳ ಅಮ್ಮುಂಜೆ ಪರಿಸರ ನಿವಾಸಿ ಬಾಣಂತಿ ದಿವ್ಯ ನವೀನ್ ಪೂಜಾರಿಯವರ ಮಗು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿ ಆಸ್ಪತ್ರೆಯ ಪ್ರಮುಖ ವೈದ್ಯರ ವಿರುದ್ಧ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ ಹಿನ್ನಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ, […]

Continue Reading

ಅಂಬಲಪಾಡಿ ನಾಟಕೋತ್ಸವ ಸಮಾರೋಪ, ರಂಗಸನ್ಮಾನ ನಾಟಕಗಳಿoದ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಸಾಧ್ಯ : ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್

ಉಡುಪಿ : ರಂಗಭೂಮಿಗೆ ತನ್ನದೇ ಆದ ಇತಿಹಾಸವಿದೆ. ಸಮಾಜದ ವಿವಿಧ ಮುಖಗಳ ಅನಾವರಣೆ, ಸಾಮಾಜಿಕ ಪಿಡುಗುಗಳ ಬಗ್ಗೆ ನಾಟಕಗಳು ಬೆಳಕು ಚೆಲ್ಲಿ ಸಮಸ್ಯೆಗಳ ಪರಿಹಾರಕ್ಕೂ ಕಾರಣವಾಗಿವೆ ಎಂದು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಹೇಳಿದರು. ಅವರು ಗುರುವಾರ ರಂಗಭೂಮಿ ಉಡುಪಿ ವತಿಯಿಂದ ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದಲ್ಲಿ ದಿ.ನಿ.ಬೀ.ಅಣ್ಣಾಜಿ ಬಲ್ಲಾಳರ ಸ್ಮರಣಾರ್ಥ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಹಮ್ಮಿಕೊಂಡ ಎರಡು ದಿನಗಳ […]

Continue Reading