ಗ್ರಾಮ ಪಂಚಾಯತ್ ಗಳಿಗೆ ಲೋಕಾಯುಕ್ತರಿಂದ ಟ್ರಿಟ್ ಮೆಂಟ್; ಸ್ವಯಂ ಪ್ರೇರಿತ ದೂರು ದಾಖಲಿಸಿ ಕಾರ್ಯಾಚರಣೆ. ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ

ಭ್ರಷ್ಟಾಚಾರದ ಕೂಪವಾಗಿ ಮಾರ್ಪಟ್ಟಿದ್ದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸಮಗ್ರ ಆಡಳಿತ ವ್ಯವಸ್ಥೆಯ ವಿರುದ್ಧವೇ ಲೋಕಾಯುಕ್ತ ಇಲಾಖೆ ಸಮರ ಸಾರಿದ್ದು, ತಾಲೂಕಿನ ಎಲ್ಲಾ 25 ಗ್ರಾಮ ಪಂಚಾಯಿತಿಗಳ ವಿರುದ್ಧ ಮೊದಲ ಬಾರಿಗೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿ ಕಾರ್ಯಾಚರಣೆ ನಡೆಸಿದೆ. ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಕಳೆದ ಸೆಪ್ಟೆಂಬರ್ 30 ಮತ್ತು ಡಿಸೆಂಬರ್ 2 ರಂದು ಶ್ರೀನಿವಾಸಪುರ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ದಿಢೀರ್ ಭೇಟಿ ನೀಡಿದಾಗ ಕಂಡಿದ್ದು ಕೇವಲ ಅವ್ಯವಸ್ಥೆ ಮತ್ತು ಅರಾಜಕತೆ. ಜನರ […]

Continue Reading

ರಹಸ್ಯ ಸರ್ವೆ; ಹೈಕಮಾಂಡ್ ಮೌನ.!, ನಾಯಕತ್ವ ಬದಲಾವಣೆಗೆ ಇದು ಸೂಕ್ತ ಸಮಯವಲ್ಲ; ಆಂತರಿಕ ಸರ್ವೆಯಿಂದ ಸಿಎಂ ಕನಸಿಗೆ ತಡೆ

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು ಜೋರಾಗಿ ಕೇಳಿಬರುತ್ತಿದೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕಾಗಿ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಟ್ರಬಲ್ ಶೂಟರ್ ಡಿಕೆಶಿ ಸಂಕಷ್ಟದ ಸಮಯದಲ್ಲಿ ಪಕ್ಷದ ಬೆನ್ನೆಲುಬಾಗಿ ನಿಂತವರು. ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಎಷ್ಟೇ ಒತ್ತಡವಿದ್ದರೂ ಅವರು ನಾಯಕತ್ವದ ಬಗ್ಗೆ ಜಗ್ಗುತ್ತಿಲ್ಲ. ಕಾರಣ ಹೈಕಮಾಂಡ್‌ನ ಈ ನಡೆಗೆ ಬಲವಾದ ಆಘಾತಕಾರಿ ಕಾರಣವೊಂದು ಈಗ ಬಯಲಿಗೆ ಬಂದಿದೆ. ಡಿ.ಕೆ. ಶಿವಕುಮಾರ್ ಅವರು ಸಾರ್ವಜನಿಕವಾಗಿ, ಪಕ್ಷದಲ್ಲಿ ಎಲ್ಲವೂ ಸರಿಯಿದೆ, ಯಾವುದೇ ಗೊಂದಲಗಳಿಲ್ಲ ಎಂದು ಹೇಳಿಕೆ ನೀಡುತ್ತಲೇ […]

Continue Reading

ಬಿಜೆಪಿ-ಜೆಡಿಎಸ್ ಮೈತ್ರಿಕೂಟದಲ್ಲಿ ಇದೀಗ ತೀವ್ರ ಅಸಮಾಧಾನದ ಹೊಗೆ; ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಇಲ್ಲ

ಜೆಡಿಯು ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲಿದೆ. ಕರ್ನಾಟಕದಲ್ಲಿ ಬಿಜೆಪಿ ನಾಯಕರು ಮೈತ್ರಿ ಧರ್ಮ ಪಾಲಿಸುತ್ತಿಲ್ಲ: ಎಚ್.ಡಿ. ದೇವೇಗೌಡ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಓಟಕ್ಕೆ ಲಗಾಮು ಹಾಕುವ ಉದ್ದೇಶ ಹಾಗೂ ಅಧಿಕಾರ ಪಡೆಯಲು ಒಂದಾಗಿದ್ದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದಲ್ಲಿ ಇದೀಗ ತೀವ್ರ ಅಸಮಾಧಾನದ ಹೊಗೆಯಾಡುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಅನಿವಾರ್ಯವಾಗಿ ಒಂದಾಗಿದ್ದ ಉಭಯ ಪಕ್ಷಗಳು, ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ಭವಿಷ್ಯದ ರಾಜಕೀಯ ಅಸ್ತಿತ್ವದ ಪ್ರಶ್ನೆ ಬಂದಾಗ ಬೇರೆ ಬೇರೆಯಾಗಿ ಮೈತ್ರಿ ಮುರಿಯುವ ಹಂತಕ್ಕೆ […]

Continue Reading

ಮಳಲಿ: ಅನೈತಿಕ ಪೊಲೀಸ್ ಗಿರಿ; ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು; ಪ್ರತ್ಯೇಕ ಪ್ರಕರಣ ದಾಖಲು

ಅಮಾಯಕರ ಪೋಟೋ ವೈರಲ್ ಮಾಡಿದರೆ ಕ್ರಮ ಎಂದ ಪೊಲೀಸ್ ಕಮಿಷನರ್ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮಳಲಿ ನಾರ್ಲಪದವು ಎಂಬಲ್ಲಿ ತಂದೆ ಮಗಳ ಮೇಲೆ ಅನೈತಿಕ ಪೊಲೀಸ್ ಗಿರಿ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು, ಕೃತ್ಯಕ್ಕೆ ಸಂಬಂಧಿಸಿ ಎರಡೂ ಕಡೆ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಮೂಲರಪಟ್ನ ನಿವಾಸಿ ಅಬ್ದುಲ್ ಸತ್ತಾರ್ ಎಂಬವರು ತನ್ನ ಅಪ್ರಾಪ್ತ ವಯಸ್ಸಿನ ಮಗಳ ಜೊತೆ ಬೈಕಿನಲ್ಲಿ ತೆರಳುತ್ತಿದ್ದಾಗ ಮಳಲಿ ನಾರ್ಲಪದವು ಬಳಿ ಟಾಟಾ ಸುಮೊ ವಾಹನದಲ್ಲಿ ಬಂದ ಇಬ್ಬರು ಬೈಕನ್ನು ಅಡ್ಡಗಟ್ಟಿ, […]

Continue Reading

ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ: ಮಾಜಿಗಳದ್ದೇ ದರ್ಬಾರ್.!

ಅಧಿಕಾರ ಅವಧಿ ಮುಗಿದರೂ ಅಧಿಕಾರ ಗುಂಗಿನಿಂದ ಹೊರಬರದ ಸದಸ್ಯರು; ಪ್ರತಿಭೆಗಳ ‘ಮಾಸ್ಟರ್’ ಪೀಸ್.! ಅಬ್ಬಬ್ಬಾ..ಅಧಿಕಾರದ ಅವಧಿ ಮುಗಿದು ಹತ್ತಿರ ಹತ್ತಿರ ಆರು ತಿಂಗಳಾಗುತ್ತಾ ಬಂದರೂ ಅಧಿಕಾರದ ಗುಂಗಿನಿಂದ ಇನ್ನೂ ಹೊರಬಂದಿಲ್ಲ. ಫ್ಲೆಕ್ಸ್, ಸಮಾರಂಭಗಳಲ್ಲಿ ಇವರದ್ದೇ ರಾರಾಜಿಸುವ ಪೋಟೋಗಳು. ಸರಕಾರ ಅಧಿಕೃತವಾಗಿ ಸುತ್ತೋಲೆ ಹೊರಡಿಸಿದರೂ ತಾವಿನ್ನೂ ಮಾಜಿಗಳು ಎಂಬುದನ್ನು ಮರೆತು ಹಾಲಿ ರೀತಿ ವರ್ತಿಸುತ್ತಿದ್ದಾರೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ವಕ್ಫ್ ಸಲಹಾ ಸಮಿತಿಯ ಕಥೆ ವ್ಯಥೆಯ ಕಥೆ. ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅವಧಿ […]

Continue Reading

ವಾಹನ ಚಾಲನಾ ಪರವಾನಿಗೆಯ ಅವಧಿ ಮುಗಿದ ನಂತರ ಸ್ವಯಂಚಾಲಿತವಾಗಿ ವಿಸ್ತರಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 14ರ ತಿದ್ದುಪಡಿ ಮಾಡದ ಕೊನೆಯ ನಿಬಂಧನೆಯಲ್ಲಿ ಒದಗಿಸಿದಂತೆ, ಚಾಲನಾ ಪರವಾನಗಿಯು ಈಗ ಅದರ ಅವಧಿ ಮುಗಿದ ನಂತರ ಸ್ವಯಂಚಾಲಿತವಾಗಿ ವಿಸ್ತರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 2019ರ ತಿದ್ದುಪಡಿ ಕಾಯ್ದೆಯ ನಂತರ, ಅವಧಿ ಮುಗಿದ ದಿನಾಂಕದ ಮರುದಿನದಿಂದಲೇ, ನವೀಕರಣವಿಲ್ಲದೆ, ಅವಧಿ ಮುಗಿದ ಪರವಾನಗಿಯನ್ನು ಹೊಂದಿರುವ ವ್ಯಕ್ತಿಯು ಅಂತಹ ಪರವಾನಗಿಯನ್ನು ಹೊಂದಿದ್ದ ವಾಹನಗಳನ್ನು ಓಡಿಸಲು ಅಸಮರ್ಥನಾಗಿದ್ದಾನೆ ಎಂದು ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಎಸ್ ವಿ ಎನ್ ಭಟ್ಟಿ ಅವರ ಪೀಠವು […]

Continue Reading

ಬೆದರಿಸಿ ಬಲವಂತವಾಗಿ ಬಡ್ಡಿ ವಸೂಲಿ ಮಾಡುತ್ತಿದ್ದ ಪ್ರಕರಣದಲ್ಲಿ ಕೋಡಿಕೆರೆ ಗ್ಯಾಂಗಿನ ನಾಲ್ವರು ಆರೋಪಿಗಳು ಅಂಧರ್

ಅಧಿಕ ಬಡ್ಡಿಗೆ ಸಾಲ ನೀಡಿ, ಬಳಿಕ ಸಾಲ ಪಡೆದವರನ್ನು ಬೆದರಿಸಿ ಬಲವಂತವಾಗಿ ಬಡ್ಡಿ ವಸೂಲಿ ಮಾಡುತ್ತಿದ್ದ ಪ್ರಕರಣದಲ್ಲಿ ಕೋಡಿಕೆರೆ ಗ್ಯಾಂಗಿನ ನಾಲ್ವರು ಆರೋಪಿಗಳನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಗಜೇಂದ್ರ ಬಜಿಲಕೇರಿ, ಶರತ್ ಗಟ್ಟಿ, ಪ್ರದೀಪ್ ಮತ್ತು ಧನರಾಜ್ ವಳಚ್ಚಿಲ್ ಎಂದು ಗುರುತಿಸಲಾಗಿದ್ದು, ಇವರು ಮನೋಜ್ ಕೋಡಿಕೆರೆ ಗ್ಯಾಂಗ್ ನ ಸದಸ್ಯರು. ಬಡ್ಡಿಗೆ ಹಣ ನೀಡಿ ಬಡ್ಡಿ ದಂಧೆ ನಡೆಸುತ್ತಿದ್ದ ಆರೋಪಿಗಳು ಬೆದರಿಸಿ ಬಡ್ಡಿ ವಸೂಲಿ ಮಾಡುತ್ತಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ […]

Continue Reading

ಸುರತ್ಕಲ್: ಆರೋಗ್ಯದ ಹಕ್ಕಿನ ಹೋರಾಟವನ್ನು ಜನತೆಯ ನಡುವೆ ವಿಸ್ತಾರಗೊಳಿಸಲು ನಿರ್ಧಾರ; ಯಶಸ್ವಿ ಸಮಾಲೋಚನಾ ಸಭೆ

ಸುರತ್ಕಲ್ ನಲ್ಲಿ ಸಮುದಾಯ ಆಸ್ಪತ್ರೆ, ಮಂಗಳೂರಿನಲ್ಲಿ ಕಿದ್ವಾಯಿ ಕ್ಯಾನ್ಸರ್, ಜಯದೇವ ಹೃದಯದ ಆಸ್ಪತ್ರೆಗಳ ಸ್ಥಾಪನೆ ಸೇರಿದಂತೆ ಸರಕಾರಿ ಆಸ್ಪತ್ರೆಗಳ ಬಲವರ್ಧನೆಯ ಬೇಡಿಕೆಗಳ ಮೇಲೆ ನಡೆಯುತ್ತಿರುವ ಹೋರಾಟದ ಮುಂದಿನ ಹಂತದ ಕುರಿತು ಚರ್ಚಿಸಲು ಚೊಕ್ಕಬೆಟ್ಟು MJM ಸಭಾಂಗಣದಲ್ಲಿ‌ ಆಯೋಜಿಸಿದ ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಮಾಲೋಚನಾ ಸಭೆ ಯಶಸ್ವಿಯಾಗಿ ನಡೆಯಿತು. ಮುಂದಿನ‌ ಹಂತದಲ್ಲಿ ಸುರತ್ಕಲ್ ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳಲ್ಲಿ ಇರುವ ಸಂಘ ಸಂಸ್ಥೆಗಳನ್ನು‌ ಸಂಪರ್ಕಿಸುವುದು, ಸಮುದಾಯ ಆಸ್ಪತ್ರೆ, ಕ್ಯಾನ್ಸರ್, ಹೃದಯದ ಆಸ್ಪತ್ರೆಗಳ ಸ್ಥಾಪನೆ ಸಹಿತ ಹೋರಾಟ ಸಮಿತಿ ಮುಂದಿಟ್ಟಿರುವ […]

Continue Reading

ಡಿ. 29, 30 : ರಂಗಭೂಮಿ ರಂಗಶಿಕ್ಷಣ ಮಕ್ಕಳ ನಾಟಕೋತ್ಸವ

ಡಿ. 31 ಹಾಗೂ ಜನವರಿ 1 ರಂದು ದಿ| ನಿ.ಬೀ.ಅಣ್ಣಾಜಿ ಬಲ್ಲಾಳರ ಸ್ಮರಣಾರ್ಥ ಅಂಬಲಪಾಡಿ ನಾಟಕೋತ್ಸವ ಉಡುಪಿ : ರಂಗಭೂಮಿ ಉಡುಪಿ ವತಿಯಿಂದ ಈ ವರ್ಷದ “ರಂಗಭೂಮಿ ರಂಗ ಶಿಕ್ಷಣ” ಅಭಿಯಾನದಲ್ಲಿ ಉಡುಪಿ ನಗರದ ಆಯ್ದ 11 ಪ್ರೌಢಶಾಲೆಗಳ 250 ಕ್ಕೂ ಅಧಿಕ ಮಕ್ಕಳ ಭಾಗವಹಿಸುವಿಕೆಯಲ್ಲಿ 11 ಹೆಸರಾಂತ ನಿರ್ದೇಶಕರಿಂದ ತಯಾರಾದ 11 ಕಿರು ನಾಟಕಗಳ ಪ್ರದರ್ಶನ `ರಂಗಭೂಮಿ ರಂಗಶಿಕ್ಷಣ ಮಕ್ಕಳ ನಾಟಕೋತ್ಸವ ‘ ಡಿ.29 ಮತ್ತು ಡಿ.30 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 […]

Continue Reading

ಬಜ್ಪೆ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಒಂದು ಪಾಠ

ಕಾಂಗ್ರೆಸ್ ನಾಯಕತ್ವದ ಸ್ವಯಂಕೃತ ಅಪರಾಧಗಳಿಂದ ಉಂಟಾದ ಈ ಸ್ಥಿತಿಗೆ ಈಗ ಅನುಕಂಪ ತೋರುವವರು ಯಾರೂ ಉಳಿದಿಲ್ಲ: ಮುನೀರ್ ಕಾಟಿಪಳ್ಳ ಬಜ್ಪೆ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಒಂದು ಪಾಠ (ಕಲಿಯಲು/ಅರ್ಥ ಮಾಡಿಕೊಳ್ಳಲು ಸಿದ್ದರಿರುವುದು ಅನುಮಾನ) ಅಲ್ಪ ಸಂಖ್ಯಾತ ಸಮುದಾಯದ ಮತದಾರರು ನಿರ್ಣಾಯಕರಾಗಿದ್ದ ಈ ಪಟ್ಟಣ ಪಂಚಾಯತ್ ಗಳು ಎಲ್ಲಾ ಕಾಲದಲ್ಲೂ ಬಿಜೆಪಿ ಪಾಲಿಗೆ ಕಬ್ಬಿಣದ ಕಡಲೆಯಾಗಿತ್ತು. ಈ ಸಲದ ಚುನಾವಣೆಯಲ್ಲಿ‌ ಮಾತ್ರ ಯಾವ ಅಡತಡೆಯೂ ಇಲ್ಲದೆ ಗೆಲುವಿನ ಗೆರೆ ದಾಟಿದ್ದಾರೆ. ಈ ಸೋಲು […]

Continue Reading