ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಿಳಾ ಆಫೀಸರ್ಸ್ ಟಾರ್ಗೆಟ್.. ಪುರುಷ ಪ್ರಧಾನ ವ್ಯವಸ್ಥೆಯ ಷಡ್ಯಂತ್ರಕ್ಕೆ ‘ನಾರಿಮಣಿ’ ಯರೇ ಬಲಿಪಶು.!

ಯಾರಿಗೂ ಜಗ್ಗದ, ಬಗ್ಗದ ಗಟ್ಟಿಗಿತ್ತಿ ಗಣಿ ಮೇಡಂ.! ಉಫ್.. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ರಾಜಕಾರಣ ಮಾತ್ರ ಮೇಳೈಸುತ್ತದೆ ಎಂದು ನೀವು ನಂಬಿ ಕೂತರೆ ಅದು ನಿಮ್ಮ ಮೂರ್ಖತನ. ಇಲ್ಲಿನ ಪುರುಷ ಪ್ರಧಾನ ವ್ಯವಸ್ಥೆ ಗಟ್ಟಿಗಿತ್ತಿ, ಧೈರ್ಯಶಾಲಿ ದೊಡ್ಡ ದೊಡ್ಡ ಗ್ರೇಡ್ ನ ಮಹಿಳಾ ಅಧಿಕಾರಿಗಳನ್ನು ಷಡ್ಯಂತ್ರ ನಡೆಸಿ ಬಲಿಪಶು ಮಾಡುವ ವ್ಯವಸ್ಥಿತ ಸಂಚು ಕೂಡ ಬಹಳ ಕರಾರುವಾಕ್ಕಾಗಿ ನಡೆಯುತ್ತಿದೆ. ತಮ್ಮ ತಾಳಕ್ಕೆ ಕುಣಿಯದ ಅಧಿಕಾರಿಗಳನ್ನು ಬೆದರಿಸಿ ತಮ್ಮ ಮರ್ಜಿಗೆ ಒಳಪಡಿಸುವ, ಅದಕ್ಕೂ ಬಗ್ಗದಿದ್ದರೆ ಲೋಕಾಯುಕ್ತ ರೈಡ್ […]

Continue Reading

ರಾಜ್ಯದಲ್ಲಿ ಪ್ರಸವ ಮರಣ ಸಂಖ್ಯೆಯಲ್ಲಿ ಗಣನೀಯ ಇಳಿಕೆ: ಸ್ತ್ರೀ ಸಂಕುಲದ ಮೊಗದಲ್ಲಿ ನಗು

ಲಕ್ಷಕ್ಕೆ 133 ರಿಂದ 58 ಕ್ಕೆ ತಗ್ಗಿದ ಸಾವು; ಹೊಸ ಸಮೀಕ್ಷೆಯಲ್ಲಿ ಬಹಿರಂಗ ರಾಜ್ಯದಲ್ಲಿ ಹೆರಿಗೆ ಸಂದರ್ಭದಲ್ಲಿನ ತಾಯಂದಿರ ಸಾವಿನ ಪ್ರಮಾಣ ಇಳಿಮುಖವಾಗಿರುವುದು ಬೆಳಕಿಗೆ ಬಂದಿದೆ. ಕರ್ನಾಟಕದಲ್ಲಿ ತಾಯಿ ಮರಣ ಅನುಪಾತವು ಇಳಿಮುಖಗೊಂಡಿರುವುದು ಹೊಸ ಸಮೀಕ್ಷೆಯಿಂದ ಬಹಿರಂಗವಾಗಿದ್ದು ಸ್ತ್ರೀ ಸಂಕುಲದ ಮುಖದಲ್ಲಿ ನಗು ಮೂಡಿಸಿದೆ. ಭಾರತದ ರಿಜಿಸ್ಟ್ರಾರ್ ಜನರಲ್ ಬಿಡುಗಡೆ ಮಾಡಿರುವ ಸ್ಯಾಂಪಲ್ ರಿಜಿಸ್ಟ್ರೇಷನ್ ವ್ಯವಸ್ಥೆಯ ಹೊಸ ವರದಿಯನ್ವಯ 2019-21 ನೇ ಸಾಲಿನಲ್ಲಿ ಪ್ರತಿ ಲಕ್ಷ ಹೆರಿಗೆಯಲ್ಲಿ 63 ರಷ್ಟಿದ್ದ ತಾಯಿ ಮರಣದ ಸಂಖ್ಯೆ 2020-22 ರಲ್ಲಿ […]

Continue Reading

ಆತ್ಮಹತ್ಯೆ ಮತ್ತು ಮಾದಕ ವ್ಯಸನದ ಕುರಿತ ಜಾಗೃತಿಗಾಗಿ ಬೆಂಗಳೂರಿನಲ್ಲಿ ಆದಿತ್ಯವಾರ ನಡೆಯುವ ವಾಲ್ಕಥಾನ್ ಕಾರ್ಯಕ್ರಮ ಯಶಸ್ವಿಗೊಳಿಸಿ -: ಜಿ. ಎ. ಬಾವಾ.

ಸಿ.ಎ ನೌಫಲ್ & ಕಂಪೆನಿ ಮತ್ತು ಯೂತ್ ಮೂವ್ ಮೆಂಟ್ ಆಫ್ ಇಂಡಿಯಾ ಜಂಟಿ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಆದಿತ್ಯವಾರ ನಡೆಯುವ ವಾಲ್ಕಥಾನ್ ಜಾಗೃತಿ ಕಾರ್ಯಕ್ರಮದಲ್ಲಿ ಎಲ್ಲಾ ಯುವಕರು, ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ನಿವೃತ್ತ DCP ಜಿ.ಎ ಬಾವಾ ಕರೆ ನೀಡಿದರು. ಮಾದಕ ವ್ಯಸನದ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು, ಕೋಮು ಸಾಮರಸ್ಯ ಮೂಡಿಸುವುದು ಮತ್ತು ಸಂಚಾರ ಸುರಕ್ಷತೆಯನ್ನು ಹೆಚ್ಚಿಸುವ ಜಾಗೃತಿ ಮೂಡಿಸುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಯುವ ಸಮೂಹವು ಭಾಗವಹಿಸಬೇಕು ಎಂದು ಹೇಳಿದ ಬಾವಾ, […]

Continue Reading

ಸಾರ್ವಜನಿಕವಾಗಿ ಮಾರಕಾಸ್ತ್ರ ಹಿಡಿದು ತಿರುಗಾಡಿದರೆ ರೌಡಿಶೀಟರ್ ಕೇಸು ಫಿಕ್ಸ್: ಪೊಲೀಸ್ ಕಮಿಷನರ್ ಎಚ್ಚರಿಕೆ

ಅಪ್ರಾಪ್ತರು ಕ್ರೈಂ ಫೀಲ್ಡಿನತ್ತ ಆಕರ್ಷಿತರಾಗುವುದನ್ನು ತಡೆಯಲು ಬೆಳಗಾವಿ ಪೊಲೀಸರಿಂದ ಆಂಟಿ ಸ್ಟಾಬ್ಯುಲಿಂಗ್ ವಿಂಗ್ ರಚನೆ ಬೆಳಗಾವಿ ಜಿಲ್ಲೆಯಲ್ಲಿ ಕ್ರಿಮಿನಲ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾರ್ವಜನಿಕವಾಗಿ ಮಾರಕಾಸ್ತ್ರ ಹಿಡಿದುಕೊಂಡು ಸಮಾಜದಲ್ಲಿ ಭಯಭೀತಿ ಸೃಷ್ಟಿಸುವ ಸಮಾಜ ವಿದ್ರೋಹಿಗಳ ಕೃತ್ಯ ಮಿತಿಮೀರುತ್ತಿದ್ದು ಪೊಲೀಸ್ ಇಲಾಖೆ ಇದೀಗ ಇದಕ್ಕೆ ಕಡಿವಾಣ ಹಾಕಲು ವಿಶೇಷ ತಂಡ ರಚಿಸಿ ಕಾರ್ಯಾಚರಣೆಗೆ ಇಳಿದಿದೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಕಾಲೇಜು ವಿದ್ಯಾರ್ಥಿ ಮಾಂಜ್ ಸನದಿ ಎಂಬಾತನ ಮೇಲೆ ನಡೆದ ಚಾಕು ಇರಿತ ಪ್ರಕರಣದಲ್ಲಿ ಅಪ್ರಾಪ್ತ ಇಬ್ಬರು […]

Continue Reading

ಹರಿಶ್ಚಂದ್ರ ಸಾಲ್ಯಾನ್ ಅವರ ನುಡಿಮುತ್ತು ಕೃತಿ ಬಿಡುಗಡೆ : ಉತ್ತಮ ಕೃತಿಗಳಿಂದ ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯ : ಡಾ.ತಲ್ಲೂರು

ಉಡುಪಿ : ಕೃತಿಗಳು ಲೇಖಕನ ಮನದಾಳದ, ಜೀವಾನಾನುಭವದ ಮಾತುಗಳಾಗಿರುತ್ತವೆ. ಆದ್ದರಿಂದ ಉತ್ತಮ ಕೃತಿಗಳಿಂದ ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಮೂಲ್ಕಿಯ ಪುನರೂರು ಟೂರಿಸ್ಟ್ ಹೋಂ ಸಭಾಂಗಣದಲ್ಲಿ ಬುಧವಾರ ನಡೆದ ಲೇಖಕ ಹರಿಶ್ವಂದ್ರ ಪಿ. ಸಾಲಿಯಾನ್ ಮೂಲ್ಕಿ ಅವರ ‘ನುಡಿ ಮುತ್ತು’ ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದು ಪುಸ್ತಕ ಓದುವವರ ಸಂಖ್ಯೆ ವಿರಳವಾಗಿದೆ ನಿಜ, ಆದರೆ ಉತ್ತಮ ಕೃತಿಗಳನ್ನು ಓದುವವರು […]

Continue Reading

ಇನ್ಮುಂದೆ ರಾಜ್ಯದ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮೂರನೇ ಶನಿವಾರ ಬ್ಯಾಗ್ ರಹಿತ ದಿನ: ಶಿಕ್ಷಣ ಇಲಾಖೆ ಆದೇಶ

ರಾಜ್ಯದ ಉರ್ದು ಶಾಲೆಗಳಿಗೆ ಮೂರನೇ ಶುಕ್ರವಾರದಂದು ಆಚರಿಸುವಂತೆ ಸೂಚನೆ ಶಾಲಾ ಮಕ್ಕಳಿಗೆ ಬ್ಯಾಗ್ ಹೊರೆಯಾಗುತ್ತಿರುವ ಆರೋಪಗಳು ಕೇಳಿ ಬರುತ್ತಿರುವ ಹೊತ್ತಿನಲ್ಲಿ ತಿಂಗಳಲ್ಲಿ ಒಂದು ದಿನ ಮಕ್ಕಳಿಗೆ ಬ್ಯಾಗ್ ರಹಿತ ದಿನ ವನ್ನಾಗಿ ಆಚರಿಸುವ ಮೂಲಕ ಮಕ್ಕಳ ಮನೋಬಲ ಹೆಚ್ಚಿಸಲು ರಾಜ್ಯ ಶಿಕ್ಷಣ ಇಲಾಖೆ ಮಹತ್ವದ ಕ್ರಮಗಳನ್ನು ಕೈಗೊಂಡಿದೆ.2025-26 ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪ್ರತಿ ತಿಂಗಳ 3 ನೇ ಶನಿವಾರ ಬ್ಯಾಗ್ ರಹಿತ ‘ಸಂಭ್ರಮ ಶನಿವಾರ’ ಆಚರಿಸಲು ಶಿಕ್ಷಣ ಇಲಾಖೆ ಸುತ್ತೋಲೆ […]

Continue Reading

ಮಂಗಳೂರು: ಲೋಕಾಯುಕ್ತ ಬೇಟೆ; ಸಿಂಗಲ್ ಸೈಟ್, ಪ್ರಾಪರ್ಟಿ ಕಾರ್ಡಿಗೆ ಲಂಚ; ಸರ್ವೆಯರ್ ನಂದೀಶ್, ದಲ್ಲಾಳಿ ದಿವಾಕರ್ ಅಂದರ್

ಜಮೀನಿನ ಸಿಂಗಲ್ ಸೈಟ್ ನಕ್ಷೆ ಹಾಗೂ ಪ್ರಾಪರ್ಟಿ ಕಾರ್ಡ್ ಮಾಡಿಸುವುದಕ್ಕಾಗಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ನಡೆಸಿದ ದಾಳಿಯ ವೇಳೆ ಸರ್ವೆಯರ್ ಮತ್ತು ದಲ್ಲಾಳಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ತನ್ನ ತಾಯಿಯ ಹೆಸರಿನಲ್ಲಿರುವ ಕಂಕನಾಡಿ ಮತ್ತು ಬಜಾಲ್ ಗ್ರಾಮದ ಜಮೀನಿನ ಸಿಂಗಲ್ ಸೈಟ್ ನಕ್ಷೆ ಹಾಗೂ ಪ್ರಾಪರ್ಟಿ ಕಾರ್ಡ್ ಮಾಡಿಸಲು 2025ರ ಫೆಬ್ರವರಿಯಲ್ಲಿ ಮಂಗಳೂರು ಯು.ಪಿ.ಒ.ಆರ್ ಕಚೇರಿಗೆ ಅರ್ಜಿ ಸಲ್ಲಿಸಲಾಗಿತ್ತು. ಬಳಿಕ ಸರ್ವೆಯರ್ ನಂದೀಶ್ 2025ರ ಎಪ್ರಿಲ್‌ನಲ್ಲಿ ಸರ್ವೆ ನಡೆಸಿ ಲಂಚಕ್ಕೆ ಬೇಡಿಕೆ ಸಲ್ಲಿಸಿದ್ದರು. 6,500 ರೂ.ವನ್ನು […]

Continue Reading

ದುಬಾಯಿ: ಜೂನ್ 29 ರಂದು ಸಾಧಕರಿಗೆ ಸನ್ಮಾನದ ಜೊತೆ ದಶಮಾನದ ಸಂಭ್ರಮ; ಅದ್ದೂರಿಯ ಕಾರ್ಯಕ್ರಮಕ್ಕೆ ಕ್ಷಣಗಣನೆ

ದುಬೈ: ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ದಶಮಾನೋತ್ಸವ ಕಾರ್ಯಕ್ರಮವು ಇದೇ ಬರುವ ಜೂನ್ 29 ರಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ದುಬೈ (ಯುಎಇ) ಘಟಕದ ಸಹಯೋಗದೊಂದಿಗೆ ನಗರದ ಕರಾಮದ ಇಂಡಿಯನ್ ಹೈಸ್ಕೂಲ್ ನ ಶೇಖ್ ರಷೀದ್ ಆಡಿಟೋರಿಯಂನಲ್ಲಿ ಜರಗಲಿರುವುದು ಎಂದು ಯಕ್ಷಗಾನ ಅಭ್ಯಾಸ ಕೇಂದ್ರದ ಸಂಚಾಲಕರಾದ ದಿನೇಶ್ ಶೆಟ್ಟಿ ಕೊಟ್ಟಿಂಜರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸುತ್ತ ಜೂನ್ 29 ರಂದು ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 7 ಗಂಟೆಯ ವರೆಗೆ ನಡೆಯುವ ಕಾರ್ಯಕ್ರಮಗಳಲ್ಲಿ ದಶಮ ಸಂಭ್ರಮದ ಪ್ರಯುಕ್ತ ಯುಎಇಯ […]

Continue Reading

”ಜನಪರ’ ಖ್ಯಾತಿಯ ದರ್ಶನ್ ಎಚ್.ವಿ, ದ.ಕ ಜಿಲ್ಲಾಧಿಕಾರಿ

ಖಡಕ್ ಐಪಿಎಸ್ ಇದ್ದರೆ ಸಾಕಾ..ದಕ್ಷ ಐಎಎಸ್ ಬೇಡವೇ ಎಂಬ ಬಗ್ಗೆ ಮೊದಲ ಬಾರಿ ವರದಿ ಮಾಡಿದ್ದೆ ಸ್ಪೆಷಲ್ ನ್ಯೂಸ್ ಮಂಗಳೂರಿನಲ್ಲಿ ನಡೆಯುತ್ತಿದ್ದ ನಿರಂತರ ಕೋಮು ಹಿಂಸೆ, ದ್ವೇಷ ಭಾಷಣ ಮಟ್ಟ ಹಾಕಲು ರಾಜ್ಯ ಸರಕಾರ ಪೊಲೀಸ್ ಇಲಾಖೆಯಲ್ಲಿ ಖಡಕ್ ಆಫೀಸರ್ಸ್ ಗಳನ್ನು ತಂದು ಫೀಲ್ಡಿಗೆ ಇಳಿಸಿತ್ತು. ಆದರೆ ಜಿಲ್ಲಾಧಿಕಾರಿಗಳನ್ನು ಬದಲಾವಣೆ ಮಾಡದೆ ಹಾಗೆಯೇ ಉಳಿಸಿತ್ತು. ಸ್ಪೆಷಲ್ ನ್ಯೂಸ್ ವೆಬ್ ಮೀಡಿಯಾ ಈ ಬಗ್ಗೆ ಜೂನ್ 9 ರಂದು ಸಮಗ್ರ ವರದಿಯನ್ನು ಪ್ರಕಟಿಸಿತ್ತು. ಬಹುಶಃ ಜಿಲ್ಲೆಯಲ್ಲಿ ದಕ್ಷ ಐಎಎಸ್ […]

Continue Reading

ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಗರ್ಭಿಣಿ ಮೃತಪಟ್ಟ ಪ್ರಕರಣ: ವೈದ್ಯಕೀಯ ನಿರ್ಲಕ್ಷ ಮತ್ತು ಸೇವಾ ನ್ಯೂನ್ಯತೆ, ಹತ್ತು ಲಕ್ಷ ರೂ. ಪರಿಹಾರಕ್ಕೆ ಆದೇಶ: ದ ಕ ಜಿಲ್ಲಾ ಗ್ರಾಹಕರ ನ್ಯಾಯಾಲಯ

ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯ ನಂತರ ಗರ್ಭಿಣಿ ಮೃತಪಟ್ಟ ಪ್ರಕರಣದಲ್ಲಿ ದ ಕ ಜಿಲ್ಲಾ ಗ್ರಾಹಕರ ನ್ಯಾಯಾಲಯ, ವೈದ್ಯರಿಂದ ಮತ್ತು ಆಸ್ಪತ್ರೆಯಿಂದ ವೈದ್ಯಕೀಯ ನಿರ್ಲಕ್ಷ ಮತ್ತು ಸೇವಾ ನ್ಯೂನ್ಯತೆ ಸಂಭವಿಸಿದೆ ಎಂದು ತೀರ್ಪು ನೀಡಿ, ದೂರುದಾರ (ಮೃತಳ ಗಂಡ) ರವರಿಗೆ ವೈದ್ಯರು ಮತ್ತು ಆಸ್ಪತ್ರೆ 10 ಲಕ್ಷ ಪರಿಹಾರ ನೀಡಬೇಕೆಂದು ಆದೇಶಿಸಿದೆ. ವ್ಯಾಜ್ಯ ವೆಚ್ಚವಾಗಿ ರೂ.30 ಸಾವಿರ ನೀಡುವಂತೆ ಆದೇಶ ನೀಡಿದೆ. ಅದೇ ರೀತಿ 10 ಲಕ್ಷದ ಮೊತ್ತದ ಜೊತೆಗೆ 6 ಶೇಕಡಾ ಬಡ್ಡಿಯನ್ನು ಪ್ರಕರಣ ದಾಖಲಾತಿ […]

Continue Reading