ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅಖಿಲ ಭಾರತ ವಕೀಲರ ಸಂಘದ ಸಹಿ ಸಂಗ್ರಹ ಅಭಿಯಾನ

ತಿಂಗಳೊಳಗಾಗಿ ಬೇಡಿಕೆ ಈಡೇರಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸಿ “ನಮ್ಮ ನಡೆ ವಿಧಾನಸೌಧ ಕಡೆ”; ಅಖಿಲ ಭಾರತ ವಕೀಲರ ಒಕ್ಕೂಟ, ಎಚ್ಚರಿಕೆ ಅಖಿಲ ಭಾರತ ವಕೀಲರ ಒಕ್ಕೂಟ (AILU) ರಾಜ್ಯ ಕರೆಯ ಅನ್ವಯ ಇಂದು ಅಖಿಲ ಭಾರತ ವಕೀಲರ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ನೇತ್ರತ್ವದಲ್ಲಿ ಮಂಗಳೂರಿನ ನ್ಯಾಯಾಲಯದ ಆವರಣದಲ್ಲಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಅಖಿಲ ಭಾರತ ವಕೀಲರ ಒಕ್ಕೂಟದ ಜಿಲ್ಲಾ ಅಧ್ಯಕ್ಷರು ಮತ್ತು ಹಿರಿಯ ವಕೀಲರಾದ ಯಶವಂತ ಮರೋಳಿ, ಜಿಲ್ಲಾ ಉಪಾಧ್ಯಕ್ಷರಾದ […]

Continue Reading

ಕಾಂಗ್ರೆಸ್ ಹೈಕಮಾಂಡ್‌ ಸಚಿವ ಸಂಪುಟ ಪುನಾರಚನೆಗೆ ಚಿಂತನೆ

ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಅಮಾಯಕರ ಹತ್ಯೆ, ಕಾರ್ಯಕರ್ತರ ಮುನಿಸು, ಆಡಳಿತ ವೈಪಲ್ಯ ವರದಿಗಳು ಹೈಕಮಾಂಡ್‌ ಅಂಗಳಕ್ಕೆ ಕಾಂಗ್ರೆಸ್ ಹೈಕಮಾಂಡ್‌ ಸಚಿವ ಸಂಪುಟ ಪುನಾರಚನೆಗೆ ಸೂಚನೆ ನೀಡುವ ದಿಸೆಯಲ್ಲಿ ಚಿಂತನೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ರಾಜ್ಯ ನಾಯಕರೊಂದಿಗೆ ಕಾಂಗ್ರೆಸ್ ವರಿಷ್ಠ ರಾಹುಲ್‌ ಗಾಂಧಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಹೈಕಮಾಂಡ್‌ ರಾಜ್ಯ ನಾಯಕತ್ವಕ್ಕೆ ಬುಲಾವ್‌ ನೀಡಿದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ದೆಹಲಿಯಲ್ಲಿದ್ದು, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ […]

Continue Reading

ಬಂಟ್ವಾಳ: ಕೋಟಿ ಕೋಟಿ ವಂಚನೆ ಆರೋಪ; ಅಡಿಕೆ ವ್ಯಾಪಾರಿ ನೌಫಾಲ್ ವಿರುದ್ಧ ದೂರು

ಬಂಟ್ವಾಳ ಬಡ್ಡಕಟ್ಟೆಯಲ್ಲಿ ಎ.ಬಿ ಸುಪಾರಿ ಅಂಗಡಿಯನ್ನು ಹೊಂದಿರುವ ನಾವೂರು ಮೈಂದಾಳ ನಿವಾಸಿ ನೌಫಾಲ್ ಎಂಬಾತ ಕೃಷಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿ ಪರಾರಿಯಾಗಿದ್ದು, ಇದೀಗ ಐವತ್ತಕ್ಕೂ ಅಧಿಕ ಕೃಷಿಕರು ತಮ್ಮ ಹಣಕ್ಕಾಗಿ ಬಂಟ್ವಾಳ ನಗರ ಠಾಣೆಯ ಮೆಟ್ಟಿಲೇರಿದ ಘಟನೆ ವರದಿಯಾಗಿದೆ. ಸ್ಥಳೀಯ ಕೃಷಿಕರ ವಿಶ್ವಾಸಾರ್ಹ ವರ್ತಕನಾಗಿದ್ದ ನೌಫಾಲ್ ಜೊತೆಗೆ ಇಲ್ಲಿನ ಕೃಷಿಕರು ಎರಡು ಮೂರು ದಶಕಗಳಿಂದ ವ್ಯವಹಾರ ನಡೆಸುತ್ತಿದ್ದರು, ಒಣ ಅಡಿಕೆಯನ್ನು ನೀಡುತ್ತಿದ್ದರು. ಈವರೆಗೂ ತನ್ನ ವ್ಯವಹಾರದಲ್ಲಿ ಪಾರದರ್ಶಕತೆ ಹೊಂದಿದ್ದು ಕೃಷಿಕರ ಮನ ಗೆದ್ದಿದ್ದ. ಕೃಷಿಕರಿಗೆ ಅಗತ್ಯಕ್ಕೆ ತಕ್ಕಂತೆ […]

Continue Reading

ಮಂಗಳೂರಿಗೆ ಆಗಮಿಸಿದ ಬಿಜೆಪಿ ರಾಜ್ಯ ಮಟ್ಟದ ನಿಯೋಗದಿಂದ ಜಿಲ್ಲಾಢಳಿತಕ್ಕೆ ಅಕ್ಷರಶಃ ಬೆದರಿಕೆ

“ನಮ್ಮವರ ತಂಟೆಗೆ ಬಂದರೆ ಜೋಕೆ” ಧಮ್ಕಿ ಮಾದರಿಯಲ್ಲಿ ಬೆದರಿಸಿ, ಪತ್ರಿಕಾಗೋಷ್ಟಿಯಲ್ಲಿ ಗೂಂಡಾಗಿರಿಯ ಭಾಷೆ, ಇದು ತೀರಾ ಖಂಡನೀಯ: ಸಿಪಿಐಎಂ ಮಂಗಳೂರಿಗೆ ಆಗಮಿಸಿದ ಬಿಜೆಪಿ ರಾಜ್ಯ ಮಟ್ಟದ ನಿಯೋಗ ಪೊಲೀಸ್ ಇಲಾಖೆ ಹಾಗು ಜಿಲ್ಲಾಡಳಿತವನ್ನು ಅಕ್ಷರಶಃ ಬೆದರಿಸಿ ಹೋಗಿದೆ. ಅದರಲ್ಲೂ ಕೋಮು ಶಕ್ತಿಗಳನ್ನು ನಿಯಂತ್ರಿಸಲು ಹೊರಟಿರುವ ಜಿಲ್ಲೆಯ ನೂತನ ಎಸ್ ಪಿ ಅರುಣ್ ಕುಮಾರ್, ನಗರ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿಯವರನ್ನು ಅದು ಎಂತಹದ್ದೇ ನಟೋರಿಯಸ್ ಗಳು ಆಗಿದ್ದರೂ ಸರಿ “ನಮ್ಮವರ ತಂಟೆಗೆ ಬಂದರೆ ಜೋಕೆ” ಎಂದು ಅವರ […]

Continue Reading

ಸಾಮಾನ್ಯ ವಿದ್ಯಾರ್ಥಿಯಾಗಿದ್ದ ನನ್ನ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹ ನೀಡಿ, ನನ್ನಲ್ಲಿ ಆತ್ಮ ವಿಶ್ವಾಸ ಬೆಳೆಸಿದ್ದು ಪುತ್ತೂರು ಕಮ್ಯೂನಿಟಿ ಸೆಂಟರ್: ಡಾ. ವಾಜಿದ

ಟ್ಯೂಶನ್ ಕೊಡುತ್ತಾ ಬಿಡಿಎಸ್ ಶಿಕ್ಷಣ ಮಾಡುತ್ತಿದ್ದ ಯುವತಿ ಇಂದು ಜಾಗತಿಕ ಯುವ ಸಮ್ಮೇಳನದಲ್ಲಿ NSS ಪ್ರತಿನಿಧಿ. ಈಕೆ ಹಲವು ಸಂಘ ಸಂಸ್ಥೆಗಳಿಗೆ ಶೈಕ್ಷಣಿಕ ಸಲಹೆಗಾರ್ತಿ ಕರ್ನಾಟಕ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ NSS ವಿಭಾಗದ, ಕೆವಿಜಿ ಡೆಂಟಲ್ ಕಾಲೇಜ್ ಇದರ ಪ್ರತಿನಿಧಿಯಾಗಿ ಯೆನೆಪೋಯ ಯುನಿವರ್ಸಿಟಿಯಲ್ಲಿ ನಡೆದ ಜಾಗತಿಕ ಯುವ ಸಮ್ಮೇಳನದಲ್ಲಿ ಭಾಗವಹಿಸಿ, ಪ್ರಗತಿಯ ಭಾರತಕ್ಕೆ ಯುವ ಸಮೂಹದ ಆಲೋಚನೆಗಳನ್ನು ಪರಿಚಯಿಸಿದ ಡಾ ವಾಜಿದಾರವರು ಪುತ್ತೂರು ಕಮ್ಯೂನಿಟಿ ಸೆಂಟರ್ ಬಗ್ಗೆ ಹೀಗೆ ಬರೆಯುತ್ತಾರೆ. ಪುತ್ತೂರು […]

Continue Reading

ನಿವೇಶನಕ್ಕೆ ಬದಲಿ ಜಾಗ ಗುರುತು. ಆರು ತಿಂಗಳಲ್ಲಿ ವಿತರಿಸುವ ಭರವಸೆ

ಕುಪ್ಪೆಪದವು ನಿವೇಶನ ವಂಚಿತರ ಧರಣಿ ತಾತ್ಕಾಲಿಕ ಸ್ಥಗಿತ : ಭರವಸೆ ಈಡೇರದಿದ್ದಲ್ಲಿ ಆಗಸ್ಟ್ 15 ರಿಂದ ಧರಣಿ ಪುನರಾರಂಭಿಸಲು ನಿರ್ಧಾರ ಹಕ್ಕು ಪತ್ರ ಪಡೆದು ನಿವೇಶನ ಸ್ವಾಧೀನ ದೊರಕದೆ ವಂಚನೆಗೊಳಗಾಗಿರುವ ಕುಪ್ಪೆಪದವು ಗ್ರಾಮದ 97 ಕುಟುಂಬಗಳು ಕಳೆದ 11 ದಿನಗಳಿಂದ ನಡೆಸುತ್ತಿದ್ದ ಹಗಲು ರಾತ್ರಿ ಧರಣಿಯನ್ನು ತಹಶೀಲ್ದಾರ್ ಭರವಸೆಯ ಹಿನ್ನಲೆಯಲ್ಲಿ ಆಗಸ್ಟ್ 15 ರವರಗೆ ತಾತ್ಕಾಲಿಕವಾಗಿ ಹಿಂಪಡೆದರು. ಭರವಸೆ ಈಡೇರದಿದ್ದಲ್ಲಿ ಸ್ವಾತಂತ್ರ್ಯ ದಿನದಂದು ಧ್ವಜಾರೋಹಣ ಮಾಡಿ ಧರಣಿಯನ್ನು ಪುನರಾರಂಭಿಸುವುದಾಗಿ ಪ್ರಕಟಿಸಿದರು. ಕುಪ್ಪೆ ಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ […]

Continue Reading

ಕರಾವಳಿಯ ಮತೀಯ ಹಿಂಸೆಗೆ ಅಡ್ಡ ಕಸುಬುಗಳು ಕಾರಣವಾ.? ಲವ್ ಜಿಹಾದ್, ಜಾನುವಾರು ಸಾಗಾಟ , ದ್ವೇಷ ಭಾಷಣದ ಪ್ರಭಾವ ಎಷ್ಟು? ಫೀಡ್ ಬ್ಯಾಕ್ ಏನು ಹೇಳುತ್ತದೆ.?

ಖಡಕ್ ಐಪಿಎಸ್ ಇದ್ದರೆ ಸಾಕಾ.. ದಕ್ಷ ಐಎಎಸ್ ಕೂಡ ಬೇಡವೇ.? ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಾಟೆ ಜಾಸ್ತಿಯಾಗಿದೆ, ಮತೀಯ ಹತ್ಯೆಗಳು ತಾಂಡವವಾಡುತ್ತಿದೆ. ಅಲ್ಲಿಗೆ ಹೋಗಿ ಒಮ್ಮೆ ನೋಡಿ ಬಾ ಮಹರಾಯ.. ಎಂದು ಬಿ ಕೆ ಹರಿಪ್ರಸಾದ್ ಅವರನ್ನು ಮುಖ್ಯಮಂತ್ರಿಯವರು ಕೇಳಿಕೊಂಡದಕ್ಕೆ ಶಾಂತಿ ಬಿತ್ತುವ ರಾಯಭಾರಿ ರೀತಿಯಲ್ಲಿ ಮಂಗಳೂರಿಗೆ ಬಿ ಕೆ ಹರಿಪ್ರಸಾದ್ ಬಂದು ಹೋಗಿದ್ದಾರೆ. ವಿವಿಧ ಪ್ರಜ್ಞಾವಂತ ಸಂಘಸಂಸ್ಥೆಗಳ ಮುಖಂಡರು, ಧಾರ್ಮಿಕ ನಾಯಕರ ಜೊತೆ ಮೀಟಿಂಗ್ ಮೇಲೆ ಮೀಟಿಂಗ್ ಮಾಡಿ ಹೋಗಿದ್ದಾರೆ. ಆದರೆ ಇಷ್ಟಕ್ಕೆ […]

Continue Reading

ಕೊಳತ್ತಮಜಲು ಅಬ್ದುಲ್ ರಹಿಮಾನ್ ಕೊಲೆ: ಮೂಡಬಿದ್ರೆ ಗಂಟಾಲ್ ಕಟ್ಟೆಯಲ್ಲಿ ಪೊಲೀಸರಿಂದ ಶೋಧ

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕುರಿಯಾಳ ಇರಾ ಕಾಂಬೋಡಿ ಎಂಬಲ್ಲಿ ಮೇ 27 ರಂದು ಮರಳು ಆರ್ಡರ್ ಹೆಸರಿನಲ್ಲಿ ಮೋಸದಿಂದ ಕರೆಸಿ ಕೊಳತ್ತಮಜಲು ನಿವಾಸಿ ಅಬ್ದುಲ್ ರಹಿಮಾನ್ ನನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಖಲಂದರ್ ಶಾಫಿ ಎಂಬಾತನ ಮೇಲೆ ಗಂಭೀರ ಹಲ್ಲೆ ನಡೆಸಿದ್ದರು. ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ್ಕಾಗಿ ಈ ಹತ್ಯೆ ನಡೆದಿತ್ತು. ಘಟನೆಯ ಸಂಬಂಧ ಪೊಲೀಸರು ಐದು ತಂಡಗಳನ್ನು ರಚಿಸಿ ಹಂತಕರ ಪತ್ತೆಗೆ ಇಳಿದಿತ್ತು. ಹತ್ಯೆಯಾದ ಎರಡೇ ದಿನದಲ್ಲಿ ಮೂವರು ಆರೋಪಿಗಳಾದ ದೀಪಕ್ […]

Continue Reading

ಬಂಟ್ವಾಳ: ಒಡಹುಟ್ಟಿದವರಿಂದಲೇ ತಮ್ಮನಿಗೆ ಮಾಸಿಕ ಹಿಂಸೆ,ಹುಚ್ಚನೆಂಬ ಹಣೆಪಟ್ಟಿ, ಆಶ್ರಮಕ್ಕೆ ಸೇರ್ಪಡೆ; ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲು

ಹುಚ್ಚನೆಂಬ ಹಣೆಪಟ್ಟಿ ಕಟ್ಟಿ ಬಲಾತ್ಕಾರವಾಗಿ ಆಶ್ರಮಕ್ಕೆ ಸೇರ್ಪಡೆ, ಎಟಿಎಂನಿಂದ 1.50 ಲಕ್ಷ ಡ್ರಾ. ಒಡಹುಟ್ಟಿದ ಅಣ್ಣಂದಿರೇ ಆಸ್ತಿ ಕಬಳಿಕೆ ಉದ್ದೇಶವನ್ನಿಟ್ಟುಕೊಂಡು, ವೀಲುನಾಮೆ ಯಾನೆ ಮರಣ ಶಾಸನ ದಾಖಲೆಯನ್ನು ಸೃಷ್ಟಿಸಿ, ವಂಚನೆ, ವಿಶ್ವಾಸದ್ರೋಹ, ಪ್ರಾಣ ಬೆದರಿಕೆ ಹಾಗೂ ಸುಲಿಗೆ ಮಾಡಿದ್ದಾರೆ ಎಂದು 51 ವರ್ಷ ಪ್ರಾಯದ ಬಂಟ್ವಾಳ ತಾಲೂಕು, ಬರಿಮಾರು ಗ್ರಾಮದ ಪುರುಷಕೋಡಿ ನಿವಾಸಿ ವಲೇರಿಯನ್ ಲಸ್ರಾದೊ ಇವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನೀಡಿದ ಲಿಖಿತ ದೂರಿನಂತೆ ಜೂನ್ 6ರಂದು ಪ್ರಕರಣ ದಾಖಲಾಗಿದೆ. ಪಿರಿಯಾದುದಾರ ವಿವಾಹ ವಿಚ್ಛೇದನವಾದ […]

Continue Reading

ಕುಪ್ಪೆಪದವು ನಿವೇಶನ ವಂಚಿತರ ಹಗಲು ರಾತ್ರಿ ಧರಣಿ 10 ನೇ ದಿನಕ್ಕೆ. ಧರಣಿ ಮಂಟಪದಲ್ಲೆ ಬೀಡಿ ಕಟ್ಟುವ ದುಡಿಮೆ ಆರಂಭಿಸಿದ ಸಂತ್ರಸ್ತರು

ಬೀಡಿ ಕಟ್ಟದಿದ್ದರೆ ಬದುಕಿನ ಬಂಡಿ ಸಾಗುವುದಿಲ್ಲ, ಧರಣಿ ನಿಲ್ಲಿಸಿದರೆ ನಿವೇಶನ ದೊರಕುವುದಿಲ್ಲ ಶಾಸಕ ಭರತ್ ಶೆಟ್ರು 97 ಕುಟುಂಬಗಳಿಗೆ 7 ವರ್ಷಗಳ ಹಿಂದೆ ಹಕ್ಕು ಪತ್ರ ವಿತರಿಸಿ, ಈವರೆಗೂ ನಿವೇಶನ ಸ್ವಾಧೀನ ನೀಡದೆ ವಂಚಿಸಿರುವುದರ ವಿರುದ್ಧ ಗ್ರಾಮದ ನಿವೇಶನ ರಹಿತರು ನಡೆಸುತ್ತಿರುವ ಹಗಲು ರಾತ್ರಿ ಧರಣಿ 10 ನೇ ದಿನಕ್ಕೆ ಪ್ರವೇಶಿಸಿದೆ. ಧರಣಿ ನಿರತರಲ್ಲಿ ಬಹುತೇಕರು ಬೀಡಿ ಕಾರ್ಮಿಕರು. ಧರಣಿ ದೀರ್ಘಗೊಳ್ಳುತ್ತಿರುವುದರಿಂದ ಅವರ ಆದಾಯವಾದ ಬೀಡಿ ಕಟ್ಟುವ ದುಡಿಮೆಗೂ ಕಡಿವಾಣ ಬಿದ್ದಿತ್ತು. ಬೀಡಿ ಕಟ್ಟದಿದ್ದರೆ ಬದುಕಿನ ಬಂಡಿ […]

Continue Reading