ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಕೋಮು ದ್ವೇಷ ಪೋಸ್ಟ್: ಬಂಟ್ವಾಳದ ಯತೀಶ್ ವಿರುದ್ಧ ಎಫ್ಐಆರ್

ಜಿಲ್ಲಾ ಎಸ್ಪಿ ವ್ಯಾಪ್ತಿಯಲ್ಲಿ ಸಾಮಾಜಿಕ ಜಾಲತಾಣದ ಮೇಲೆ ತೀವ್ರ ನಿಗಾ..ದ್ವೇಷಕಾರಿ ಪೋಸ್ಟ್ ಹಾಕುವವರ ಚಳಿ ಬಿಡಿಸಲು ಮುಂದಾದ ಪೊಲೀಸ್ ಇಲಾಖೆ ಮಂಗಳೂರಿನಲ್ಲಿ ನಿರಂತರ ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡುವ ಪ್ರಕರಣಗಳು ನಡೆಯುತ್ತಿರುವುದರಿಂದ ಇದನ್ನು ಮಟ್ಟ ಹಾಕಲು ಉಡುಪಿಯಿಂದ ಮಂಗಳೂರಿಗೆ ವರ್ಗಾವಣೆಯಾಗಿ ಬಂದಿರುವ ಜಿಲ್ಲಾ ಎಸ್ಪಿ ಅರುಣ್ ಇದೀಗ ತನ್ನ ವ್ಯಾಪ್ತಿಯಲ್ಲಿ ಸಾಮಾಜಿಕ ಜಾಲತಾಣದ ಮೇಲೆ ತೀವ್ರ ನಿಗಾ ವಹಿಸಿದ್ದಾರೆ. ಕರಾವಳಿಯಲ್ಲಿ ಕೋಮು ಸೌಹಾರ್ದ ಕೆಡಲು ಸಾಮಾಜಿಕ ಜಾಲತಾಣದ ಪಾತ್ರ ಬಹಳಷ್ಟಿದೆ. ಇದೀಗ ನಿರಂತರವಾಗಿ ಸಾಮಾಜಿಕ ತಾಣಗಳಲ್ಲಿ […]

Continue Reading

ಪೊಲೀಸರು ಸಕಾರಣವಿಲ್ಲದೆ ವಾಹನಗಳನ್ನು ತಡೆಯಬಾರದು. ದಿಢೀರನೆ ಅಡ್ಡಬಂದು ವಾಹನಗಳ ಕೀಲಿಕೈ ತೆಗೆದುಕೊಳ್ಳಬಾರದು.

ಸಂಚಾರ ಪೊಲೀಸರ ಅಮಾನವೀಯ, ದುರ್ನಢತನೆಯ ವರ್ತನೆಯಿಂದ ಮಗು ಬಿದ್ದು ಮೃತಪಟ್ಟಿರುವ ಘಟನೆ ಬಳಿಕ ಎಚ್ಚೆತ್ತುಕೊಂಡ ರಾಜ್ಯ ಪೊಲೀಸ್‌ ಇಲಾಖೆಯು ವಾಹನ ತಪಾಸಣೆ ಮಾಡುವಾಗ ಕೈಗೊಳ್ಳಬೇಕಾದ ಸುರಕ್ಷಾ ಕ್ರಮಗಳ ಬಗ್ಗೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ಕೆಲವು ಮಾರ್ಗಸೂಚಿ ಹೊರಡಿಸಿದ್ದಾರೆ. ವಾಹನಗಳಿಗೆ ಸಂಬಂಧಪಟ್ಟ ದಾಖಲೆ ಪರೀಕ್ಷಿಸಲು ಸಕಾರಣವಿಲ್ಲದೆ ವಾಹನಗಳನ್ನು ತಡೆಯಬಾರದು. ಕಣ್ಣಿಗೆ ಕಾಣುವ ಸಂಚಾರ ನಿಯಮ ಉಲ್ಲಂಘನೆಗಳು ಕಂಡುಬಂದಲ್ಲಿ ಮಾತ್ರವೇ ಅಂತಹ ವಾಹನಗಳನ್ನು ನಿಲ್ಲಿಸಿ ಪ್ರಕರಣ ದಾಖಲಿಸುವುದು. ಹೆದ್ದಾರಿಗಳಲ್ಲಿ ಜಿಗ್‌ ಜಾಗ್‌ ಮಾದರಿಯಲ್ಲಿ ಬ್ಯಾರಿಕೇಡ್‌ ಹಾಕಿ ವಾಹನಗಳನ್ನು ತಡೆಯಬಾರದು. ರಸ್ತೆಯಲ್ಲಿ […]

Continue Reading

ಮುಲ್ಕಿ: ಅವಿಭಜಿತ ದ.ಕ-ಉಡುಪಿ ಜಿಲ್ಲೆಯ ಸಮಾನ ಮನಸ್ಕರ ಸಭೆ

ಪುತ್ತೂರು ವೈದ್ಯರ ಸಂಘದ ಮತೀಯ ಪಕ್ಷಪಾತಿ ನಡೆಗೆ ಖಂಡನೆ, ಕರಾವಳಿಯ ಸೌಹಾರ್ದತೆಗೆ ಒಗ್ಗಟ್ಟಾಗಿ ದುಡಿಯಲು ಪಣ ಭಾರತ ವೈದ್ಯರ ಸಂಘ (ಐಎಂಎ) ಪುತ್ತೂರು ಘಟಕದ ಮತೀಯ ತಾರತಮ್ಯದ ನಡೆ, ಮುನೀರ್ ಕಾಟಿಪಳ್ಳ, ಹಾಗು ಅಬ್ದುಸ್ಸಲಾಂ ಪುತ್ತಿಗೆ ಮೇಲೆ ಮೊಕದ್ದಮೆ ದಾಖಲಿಸಿರುವ ಪ್ರಕರಣ ಹಾಗು ಕರಾವಳಿಯಲ್ಲಿ ನಡೆಯುತ್ತಿರುವ ಸರಣಿ ಕೊಲೆ, ಕೋಮು ಸಂಘರ್ಷದ ಬೆಳವಣಿಗೆಯ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳ ಪ್ರಮುಖರು ಮುಲ್ಕಿ ಪಟ್ಟಣದ ಖಾಸಗಿ ಹೊಟೇಲ್ ನ ಸಭಾಂಗಣದಲ್ಲಿ ಸಭೆ ನಡೆಸಿದರು. […]

Continue Reading

ಬಕ್ರೀದ್ ಹಬ್ಬಕ್ಕಾಗಿ ಆಡು ಖರೀದಿಗೆ ರಾಜಸ್ಥಾನಕ್ಕೆ ತೆರಳಿದ ಉಪ್ಪಿನಂಗಡಿಯ ಇಬ್ಬರು ನಾಪತ್ತೆ..ಆಡು ನೀಡದೆ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ ಕಿಡಿಗೇಡಿಗಳು

ಆಡು ಖರೀದಿಸಿ ತರಲು ರಾಜಸ್ಥಾನಕ್ಕೆ ಹೋದಾಗ ಅಲ್ಲಿನವರಿಂದ ಲಕ್ಷಾಂತರ ರೂಪಾಯಿ ವಂಚನೆಗೊಳಗಾಗಿದ್ದಲ್ಲದೆ ಪ್ರಾಣ ಬೆದರಿಕೆಯನ್ನೂ ಎದುರಿಸುತ್ತಿದ್ದ ಉಪ್ಪಿನಂಗಡಿ ನೆಕ್ಕಿಲಾಡಿಯ ಇಬ್ಬರು ರಾಜಸ್ಥಾನದಲ್ಲಿ ನಾಪತ್ತೆ ಆಗಿದ್ದು, ಅವರ ಮನೆಯವರು ಕಂಗಾಲಾಗಿದ್ದಾರೆ. ಬಕ್ರೀದ್ ಹಬ್ಬಕ್ಕಾಗಿ ಆಡುಗಳನ್ನು ತರಲು ನೆಕ್ಕಿಲಾಡಿಯ ಮುಹಮ್ಮದ್ ಝುಬೇರ್ ಹ್ಯಾರೀಸ್ ಎಂಬುವರು ಸ್ನೇಹಿತನೊಂದಿಗೆ ರಾಜಸ್ಥಾನಕ್ಕೆ ತೆರಳಿದ್ದರು. ಅವರು ಆಡು ತರದೆ ಹಣ ಕಳೆದುಕೊಂಡು ನಾಪತ್ತೆ ಆಗಿದ್ದಾರೆ ಎಂದು ಝುಬೈರ್ ಅವರ ತಂದೆ ಇಬ್ರಾಹಿಂ ಮಾಧ್ಯಮದ ಮುಂದೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ‘ನನ್ನ ಮಗ ಹಾಗೂ ಆತನ ಸ್ನೇಹಿತ ಆಡುಗಳನ್ನು […]

Continue Reading

ಅಧಿಕಾರ ಸ್ವೀಕರಿಸಿ ಕೆಲವೇ ಗಂಟೆಗಳಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ಜಿಲ್ಲಾ ಎಸ್ಪಿ ಅರುಣ್

ನಾಲ್ಕು ವರ್ಷಗಳಿಂದ ಒಂದೇ ಠಾಣೆಯಲ್ಲಿ ಗೂಟ ಹೊಡೆದಿರುವ ಪೊಲೀಸರ ಮಾಹಿತಿ ನೀಡಿ; ತಪ್ಪು ಮಾಹಿತಿ ನೀಡಿದರೆ ಶಿಸ್ತು ಕ್ರಮದ ಎಚ್ಚರಿಕೆ ಈ ಹಿಂದೆ ಉಡುಪಿ ಎಸ್ಪಿಯಾಗಿ ದಕ್ಷ ಅಧಿಕಾರಿ ಎಂದೇ ಖ್ಯಾತಿ ಪಡೆದಿದ್ದ ಡಾ. ಅರುಣ್ ನಿನ್ನೆ ಸಂಜೆ ದಕ್ಷಿಣ ಕನ್ನಡ ನೂತನ ಪೊಲೀಸ್ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಜಿಲ್ಲಾ ವ್ಯಾಪ್ತಿಯ ಪೊಲೀಸ್ ಠಾಣಾಧಿಕಾರಿಗಳಿಗೆ ವಿಶೇಷ ಟಾಸ್ಕ್ ವೊಂದನ್ನು ನೀಡಿದ್ದು, ಕಳೆದ ನಾಲ್ಕು ವರ್ಷಗಳಿಂದ ಒಂದೇ ಠಾಣೆಗಳಲ್ಲಿ ಝಂಡಾ ಹೂಡಿರುವ ಎಎಸ್ಐ, […]

Continue Reading

ಕೊಳತ್ತಮಜಲು ರಹಿಮಾನ್ ಕೊಲೆಯ ಕತೆ ಕೇಳಿದರೆ ನೀವು ಬೆಚ್ಚಿ ಬೀಳುತ್ತೀರಿ, ಹೆಮ್ಮೆಯ ತುಳುನಾಡಿಗೆ ಈ ಗತಿ ತಂದಿಟ್ಟವರು ಯಾರು: ಮುನೀರ್ ಕಾಟಿಪಳ್ಳ

ಸಿಪಿಐಎಂ ದ.ಕ. ಜಿಲ್ಲಾ ಸಮಿತಿಯ ನಿಯೋಗ ಇತ್ತೀಚೆಗೆ ಮತಾಂಧರಿಂದ ಹತ್ಯೆಗೀಡಾದ ಕೊಳ್ತಮಜಲು ಅಬ್ದುಲ್ ರೆಹಮಾನ್ ಮನೆಗೆ ಇಂದು ಭೇಟಿ ನೀಡಿತು. ನೊಂದಿರುವ ಕುಟುಂಬಕ್ಕೆ ಸಾಂತ್ವನ ಹೇಳಿತು. ಪೊಳಲಿ ದೇವಸ್ಥಾನದಿಂದ ಸುಮಾರು ನಾಲ್ಕು ಕಿ ಮೀ ದೂರದ ಕೊಳತ್ತಮಜಲು ಎಂಬ ತೀರಾ ಗ್ರಾಮೀಣ ಪ್ರದೇಶದಲ್ಲಿರುವ ಅಬ್ದುಲ್ ರೆಹಮಾನ್ ಮನೆಗೆ ಭೇಟಿ ನೀಡಿದಾಗ, ಮನೆಯ ಮುಂಭಾಗ ಸಾವಿನ ಮೂರನೆ ದಿನದ ಪ್ರಾರ್ಥನೆಯ ಅಡುಗೆಯ ಸಿದ್ದತೆ ನಡೆಯುತ್ತಿತ್ತು. ನಿರ್ಮಾಣ ಹಂತದ ರೆಹಮಾನ್ ಮನೆಯ ಮುಂಭಾಗ ಪ್ರಾರ್ಥನಾ ಕೂಟಕ್ಕಾಗಿ ಚಪ್ಪರ ಹಾಕಲಾಗಿತ್ತು. ಅಜ್ಜನ […]

Continue Reading

ರಾಜ್ಯದಲ್ಲಿನ ಯಾವುದೇ ಭಾಗವನ್ನು ನಿರ್ಲಕ್ಷಿಸುವುದಿಲ್ಲ; ಕರಾವಳಿ ಭಾಗದಲ್ಲಿ ಹೆಚ್ಚಿನ ರೀತಿಯಲ್ಲಿ ಗಮನ ಹರಿಸಬೇಕಿದೆ: ಗೃಹ ಸಚಿವರು

ಬೆಂಗಳೂರು: ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಘಟನಾವಳಿಗಳಿಗೆ ಸಂಬಂಧಿಸಿದಂತೆ ಅಲ್ಲಿನ ಜನರು ಆಪೇಕ್ಷೆ ಮೇರೆಗೆ ಪೊಲೀಸ್ ಅಧಿಕಾರಿಗಳನ್ನು ವರ್ಗಾಯಿಸಿದ್ದೇವೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಲಿನ ಜನಸಮುದಾಯ ಆಪೇಕ್ಷೆ ಪಟ್ಟಿದ್ದರಿಂದ ಅಧಿಕಾರಿಗಳನ್ನು ವರ್ಗಾಯಿಸಿದ್ದೇವೆ.‌ ಕಳೆದ ಬಾರಿ ಭೇಟಿ ನೀಡಿದಾಗ ಅಧಿಕಾರಿಗಳನ್ನು ಬದಲಾಯಿಸುವಂತೆ ಒತ್ತಾಯಿಸಿದ್ದರು. ಕೂಡಲೇ ಬದಲಾಯಿಸುವುದು ಸರಿಯಲ್ಲ‌ ಎಂಬ ಕಾರಣಕ್ಕೆ ಮಾಡಿರಲಿಲ್ಲ. ಈ ಬಾರಿಯೂ ಧ್ವನಿ ಎತ್ತಿದ್ದರಿಂದ ಬದಲಾಯಿಸಿದ್ದೇವೆ‌ ಎಂದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಘಟನೆಗಳನ್ನು ಸರ್ಕಾರ […]

Continue Reading

ಖಾದರ್, ಐವನ್, ಭಂಡಾರಿ, ಹರೀಶ್ ಕುಮಾರ್ ವಿಫಲ ರಾಜಕಾರಣಿಗಳು.. ಕರಾವಳಿ ಜನಸಾಮಾನ್ಯರೆಡೆಯಲ್ಲಿ ಬಿ.ಕೆ ಹರಿಪ್ರಸಾದ್ ಶೈನಿಂಗ್.!

ಇದೀಗ ಕರಾವಳಿ ಭಾಗದಲ್ಲಿ ನಡೆಯುತ್ತಿರುವ ನಿರಂತರ ಕೋಮು ದಳ್ಳುರಿಗೆ ನಲುಗಿ ಹೋಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಅಲ್ಪಸಂಖ್ಯಾತ, ದಮನಿತ ಸಮುದಾಯಗಳು ಬಿ ಕೆ ಹರಿಪ್ರಸಾದ್ ರಂತಹ ಸಚ್ಚಾರಿತ್ರ್ಯ, ಪ್ರಬಲ ಸೈದ್ಧಾಂತಿಕ ಉಳ್ಳ ನಾಯಕರು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಬರಲಿ ಎಂದು ಆಶಿಸುತ್ತಿದ್ದಾರೆ. ಕರಾವಳಿ ಕೋಮುವಾದಕ್ಕೆ ಅಂತ್ಯ ಹಾಡಲು ಬಿ ಕೆ ಸಮರ್ಥರು, ಅವರಿಗೆ ಅಧಿಕಾರ ಕೊಡಿ ಎಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಕೂಡ ಇಲ್ಲಿನ ಇತರ ಅಧಿಕಾರಸ್ಥ ಕಾಂಗ್ರೆಸ್ ನಾಯಕರ […]

Continue Reading

ನಾವು ಮನುಷ್ಯರಾಗಿ ಒಟ್ಟಿಗೆ ಬದುಕುವ ಕನಸು: ದಕ್ಷಿಣ ಕನ್ನಡ ಮತ್ತು ಉಡುಪಿಗೆ ಒಂದು ಮಾನವೀಯ ಪಾಠ

ಒಳ್ಳೆಯದನ್ನು ಆಯ್ದು, ದ್ವೇಷವನ್ನು ಬಿಟ್ಟು, ಒಂದಾಗಿ ಬದುಕೋಣ ✍️. ಇಸ್ಮಾಯಿಲ್ ಸುನಾಲ್, ನ್ಯಾಯವಾದಿ ಮಂಗಳೂರು. ದಕ್ಷಿಣ ಕನ್ನಡ ಮತ್ತು ಉಡುಪಿ — ಪ್ರಕೃತಿಯ ಅನನ್ಯ ಸೌಂದರ್ಯದ ಭೂಮಿ. ಪಶ್ಚಿಮ ಘಟ್ಟದ ಹಸಿರು ಗುಡ್ಡಗಳು, ಸಮುದ್ರದ ನಿಶ್ಶಬ್ದ ತೀರಗಳು, ನದಿಗಳ ರಮಣೀಯ ಸೊಬಗು ಮತ್ತು ಅಳಿಸಲಾಗದ ಭಾಷಾ-ಸಾಂಸ್ಕೃತಿಕ ವೈವಿಧ್ಯ—all blend together into a soulful land. ಆದರೆ ಈ ಮಣ್ಣಲ್ಲಿ ಕಳೆದ ಕೆಲವು ವರ್ಷಗಳಿಂದ ಆಗುತ್ತಿರುವ ಅನ್ಯಾಯ, ಅನಾಚಾರ, ಸಾವು -ನೋವು ಇತ್ಯಾದಿಗಳು ಈ ಪಾವನ ಮಣ್ಣಿನಲ್ಲಿ […]

Continue Reading

ಅಶ್ರಫ್ ಕಲಾಯಿ ಮಾದರಿಯಲ್ಲೇ ರಹಿಮಾನ್ ಕೊಳತ್ತಮಜಲು ಹತ್ಯೆ: ಪಕ್ಕಾ ಕ್ರಿಮಿನಲ್ ಸಹಚರರ ಕೈವಾಡ ಶಂಕೆ

ಬಂಟ್ವಾಳ ತಾಲೂಕಿನ ಕೊಳತ್ತಮಜಲು ಕಾಂಬೋಡಿ ಇರಾ ಎಂಬಲ್ಲಿ ಮೇ 27 ರಂದು ನಡೆದ ಅಮಾಯಕ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೂ ಈ ಹಿಂದೆ ನಡೆದ ಅಶ್ರಫ್ ಕಲಾಯಿ ಹತ್ಯೆ ಪ್ರಕರಣಕ್ಕೂ ಸಾಮ್ಯತೆ ಕಂಡುಬರುತ್ತಿದೆ. ಅಮಾಯಕ ಅಬ್ದುಲ್ ರಹಿಮಾನ್ ನನ್ನು ಪೂರ್ವನಿಯೋಜಿತವಾಗಿ ಮರಳು ಆರ್ಡರ್ ಮಾಡಿ ಕರೆಸಿಕೊಂಡಿರುವುದು ಇದೀಗ ದೃಢಪಟ್ಟಿದೆ. ದೀಪಕ್ ಎಂಬಾತನ ಮನೆಗೆ ಮರಳು ತಂದು ಆನ್ ಲೋಡ್ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಹಂತಕರು ರಹಿಮಾನ್ ಕುತ್ತಿಗೆಯ ಹಿಂಭಾಗಕ್ಕೆ ಮಚ್ಚಿನಿಂದ ಕಡಿದು ಭೀಕರವಾಗಿ ಕೊಂದಿದ್ದರು. ಜೂನ್ […]

Continue Reading