ಗುರುಪುರ ನದಿಯಿಂದ ಅಕ್ರಮವಾಗಿ ಮರಳು ಲೂಟಿ; ಚಿರನಿದ್ರೆಯಲ್ಲಿರುವ ಭೂ ಮತ್ತು ಗಣಿ ವಿಜ್ಞಾನ ಇಲಾಖೆ

ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯ ಸೇತುವೆಗಳಿಗೆ ಗಂಢಾಂತರ ತಪ್ಪಿದ್ದಲ್ಲ.! ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ವ್ಯಾಪಕವಾಗಿ ನಡೆಯುತ್ತಿದ್ದು, ಇದನ್ನು ನಿಯಂತ್ರಿಸುವಲ್ಲಿ ಅಧಿಕಾರಿ ವರ್ಗ ಸಂಪೂರ್ಣ ವಿಫಲವಾಗಿದೆ. ಸರಕಾರದ ಅಧಿಕೃತ ಕಾನೂನುಗಳನ್ನು ಕಸದ ಬುಟ್ಟಿಗೆ ಎಸೆದು ಪ್ರಭಾವಿಗಳು ತಮಗೆ ಬೇಕಾದ ರೀತಿಯಲ್ಲಿ ಕಾನೂನುಗಳನ್ನು ರಚಿಸಿ ಅಧಿಕಾರಿ ವರ್ಗಕ್ಕೆ ‘ಮಾಮೂಲಿ’ ಸಂದಾಯ ಮಾಡಿ ಮರಳನ್ನು ದೋಚುತ್ತಿದ್ದಾರೆ. ಸರಕಾರದ ಖಜಾನೆಗೆ ವಂಚನೆ ಮಾಡಿ ಜೇಬನ್ನು ತುಂಬಿಸಿಕೊಳ್ಳುವ ಈ ದಂಧೆಕೋರರನ್ನು ನಿಯಂತ್ರಿಸುವ ತಾಕತ್ತು, ಧೈರ್ಯ ಎರಡನ್ನೂ ಎಂಜಲು ಕಾಸಿಗೆ ಅಧಿಕಾರಿಗಳು […]

Continue Reading

ಬೆಳ್ತಂಗಡಿ ಚಾರ್ಮಾಡಿ ಆಡಳಿತ ಸಮಿತಿ ವಜಾಗೊಳಿಸಿ, ಆಡಳಿತಾಧಿಕಾರಿ ನೇಮಿಸಿದ ವಕ್ಫ್ ಮಂಡಳಿ

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಜಲಾಲಿಯ ನಗರದ ಮುಹ್ಯುದ್ದೀನ್ ಜುಮಾ ಮಸೀದಿ ಆಡಳಿತ ಸಮಿತಿಯು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ನಿಯಮಾವಳಿ (ಬೈಲಾ) ಅಂಗೀಕರಿಸಿಲ್ಲ, ಲೆಕ್ಕ ಪರಿಶೋಧಕರಿಗೆ ಲೆಕ್ಕ ಪತ್ರ ಪ್ರಸ್ತುತಪಡಿಸಿಲ್ಲ ಹಾಗೂ ಆಡಳಿತ ಮಂಡಳಿಯನ್ನು ರಚಿಸಿ ಅದಕ್ಕೆ ರಾಜ್ಯ ವಕ್ಫ್ ಮಂಡಳಿಯಿಂದ ಅಂಗೀಕಾರ ಪಡೆಯದೆ ಸ್ವಯಂ ಘೋಷಿತ ಸಮಿತಿ ರಚಿಸಿಕೊಂಡಿರುವ ಕಾರಣಕ್ಕೆ ಆಡಳಿತ ಮಂಡಳಿಯನ್ನು ವಜಾಗೊಳಿಸಿ ರಾಜ್ಯ ವಕ್ಫ್ ಮಂಡಳಿ ಆದೇಶ ಹೊರಡಿಸಿದೆ. ಜೂನ್ 1 ರಂದು ಮಸ್ಜಿದ್ ಗೆ ಭೇಟಿ‌ ನೀಡಿದ ವಕ್ಫ್ ಜಿಲ್ಲಾ ಅಧಿಕಾರಿ […]

Continue Reading

ಸ್ವಯಂ ಘೋಷಿತ ಆಸ್ತಿ ತೆರಿಗೆ ವಿಪರೀತ ಹೆಚ್ಚಳ ; ಸಿಪಿಐಎಂ ತೀವ್ರ ಆಕ್ರೋಶ ; ಹೋರಾಟಕ್ಕೆ ನಿರ್ಧಾರ

ಮಂಗಳೂರು ಮಹಾನಗರ ಪಾಲಿಕೆ ಆಡಳಿತವು ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಅವೈಜ್ಞಾನಿಕ ರೀತಿಯಲ್ಲಿ ಸಂಗ್ರಹಿಸುವ ಮೂಲಕ ಜನಸಾಮಾನ್ಯರನ್ನು ಹಗಲು ದರೋಡೆ ನಡೆಸುತ್ತಿದೆ. ಮೂರು ವರುಷಗಳಿಗೊಮ್ಮೆ ತೆರಿಗೆಯನ್ನು ಪರಿಷ್ಕೃತಗೊಳಿಸಲಿರುವ ಅವಕಾಶಗಳನ್ನು ಕೈಬಿಟ್ಟು ಪ್ರತೀ ವರುಷ ಶೇಕಡಾ 3ರಷ್ಟು ಏರಿಸಲು ಮಾತ್ರ ಬಳಸಿಕೊಳ್ಳುತ್ತಿರುವುದು ತೀರಾ ಖಂಡನೀಯ. ಬೇಕಾಬಿಟ್ಟಿ ಜನರಿಂದ ಸಂಗ್ರಹಿಸುವ ತೆರಿಗೆಯ ಹಣವು ನಗರದ ಅಭಿವೃದ್ಧಿಗೆ ಬಳಕೆಯಾಗದೆ ಕೇವಲ ಭ್ರಷ್ಟಾಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬ ಸಂಶಯ ಜನರಲ್ಲಿ ಮನೆಮಾಡಿದೆ. ಈ ಕೂಡಲೇ ಪಾಲಿಕೆ ಬಿಜೆಪಿ ಆಡಳಿತವು ಹೆಚ್ಚಳಗೊಂಡಿರುವ ಸ್ವಯಂ ಘೋಷಿತ ಆಸ್ತಿ […]

Continue Reading

ಇನ್ನು ಮುಂದೆ ನಮ್ಮ ಕೈಯಲ್ಲಿ ಧ್ವಜ ಅಲ್ಲ, ದಂಡ ಇರುತ್ತದೆ, ಎಚ್ಚರಿಕೆ: ಪುನಿತ್ ಅತ್ತಾವರ

ಕಾಂಗ್ರೆಸ್ ಸರಕಾರ ಪರಿಸ್ಥಿತಿ ಕೈ ಮೀರುವ ಮುಂಚಿತವಾಗಿ ಎಚ್ಚೆತ್ತುಕೊಳ್ಳಲಿ: ಮುನೀರ್ ಕಾಟಿಪಳ್ಳ “ಮಸೀದಿಗಳ ಮುಂದೆ ಹನುಮಾನ್ ಚಾಲೀಸು ಪಠಣ ಮಾಡುವುದು ಖಂಡಿತಾ, ರಸ್ತೆ ಬದಿ ನಮಾಜು ಮಾಡಿದರೆ (ಮುಸ್ಲಿಮರನ್ನು ಮರ್ದಿಸಲು) ಇನ್ನು ಮುಂದೆ ನಮ್ಮ ಕೈಯಲ್ಲಿ ಧ್ವಜ ಅಲ್ಲ, ದಂಡ ಇರುತ್ತದೆ, ಎಚ್ಚರಿಕೆ…” ಎಂದು ಮಂಗಳೂರಿನ ಹೃದಯ ಭಾಗದಲ್ಲಿ ಜನರನ್ನು ಗುಂಪು ಸೇರಿಸಿ ಮುಸ್ಲಿಂ ಸಮುದಾಯಕ್ಕೆ ಬಹಿರಂಗ ಬೆದರಿಕೆ ಹಾಕಿದ ಬಜರಂಗ ದಳದ ಪುನೀತ್ ಅತ್ತಾವರ ಮೇಲೆ ಕೇಸು ದಾಖಲಿಸಲು, ಬಂಧಿಸಲು ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ […]

Continue Reading

ಸುರತ್ಕಲ್: ಮತ್ತೆ ತಲವಾರು ಕಾಳಗ

ಮನೋಜ್ ಕೋಡಿಕೆರೆ ತಂಡದ ಕೃತ್ಯ ಕೆಲವು ಸಮಯಗಳಿಂದ ಶಾಂತವಾಗಿದ್ದ ಸುರತ್ಕಲ್ ನಲ್ಲಿ ಇದೀಗ ಮತ್ತೆ ತಲವಾರು ಕಾಳಗ ನಡೆದಿದ್ದು, ಸ್ಥಳೀಯ ಜನತೆಯಲ್ಲಿ ಭಯಭೀತಿಯನ್ನು ಸೃಷ್ಟಿಸಿದೆ. ನಿನ್ನೆ ತಡರಾತ್ರಿ ಮನೋಜ್ ಕೋಡಿಕೆರೆ ತಂಡದ ಸದಸ್ಯರು ವೈಯುಕ್ತಿಕ ದ್ವೇಷದಿಂದ ರೌಡಿ ಶೀಟರ್ ಭರತ್ ಶೆಟ್ಟಿ ಮೇಲೆ ತಲವಾರು ದಾಳಿ ನಡೆಸಿದ್ದು, ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕುಳಾಯಿ ಯಲ್ಲಿ ತನ್ನ ಸ್ನೇಹಿತನೊಂದಿಗೆ ಬಾರ್ ಗೆ ಬಂದಿದ್ದ ಭರತ್ ಶೆಟ್ಟಿ ಮೇಲೆ ಮನೋಜ್ ಕೋಡಿಕೆರೆ ತಂಡದ ಸದಸ್ಯರಾದ […]

Continue Reading

ಶಾಲಾ ವಾಹನದಲ್ಲಿ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿ: ಮಂಗಳೂರು ಕಮೀಷನರ್

ಜೂನ್ ಮೊದಲ ವಾರದಲ್ಲಿ ಶಾಲಾ ಕಾಲೇಜುಗಳು ಆರಂಭಗೊಳ್ಳುತ್ತಿದ್ದು, ರಸ್ತೆಯಲ್ಲಿ ಶಾಲಾ ವಾಹನಗಳನ್ನು ನಿಲ್ಲಿಸಿ ಶಾಲಾ ಮಕ್ಕಳನ್ನು ಇಳಿಸುವುದು, ಹತ್ತಿಸುವುದು ಮಾಡಬಾರದು. ಶಾಲಾ ವಾಹನಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಅಧಿಕ ಮಕ್ಕಳನ್ನು ಸಾಗಿಸಬಾರದು ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಹೇಳಿದರು. ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ನಡೆದ ನಗರದ ಶಾಲಾ-ಕಾಲೇಜುಗಳ ಆಡಳಿತ ವರ್ಗ ಹಾಗೂ ಶಾಲಾ ವಾಹನಗಳ ಚಾಲಕರುಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ […]

Continue Reading

ನಮಾಜ್ ನಿಂದ ರಸ್ತೆ ತಡೆ ಎಂಬ ಪಿಟ್ಟಿ ಕೇಸ್ ಅನ್ನು ‘ಕ್ರಿಮಿನಲ್ ಕೂಟ’ ಎಂದ ಪೊಲೀಸರ ಮೇಲೆ ಕ್ರಮ ಯಾವಾಗ.?

✍️. ನವೀನ್ ಸೂರಿಂಜೆ, ಪತ್ರಕರ್ತರು ರಸ್ತೆಯಲ್ಲಿ ನಮಾಜ್ ಮಾಡಿರುವ ಪ್ರಕರಣದ ದೂರುದಾರರಾಗಿ ಎಫ್ಐಆರ್ ದಾಖಲಿಸಿರುವ ಪೊಲೀಸರ ವಿರುದ್ದ ಇಲಾಖಾ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು. ಎಫ್ಐಆರ್ ದಾಖಲಿಸಿರುವ ಪೊಲೀಸರ ಕ್ರಮ ಕಾನೂನು ಬದ್ದವಾಗಿಲ್ಲವಾಗಿದ್ದು ಕೋಮುದ್ವೇಷ ಸಾಧನೆಯಂತೆ ಮೇಲ್ನೊಟಕ್ಕೆ ಕಂಡು ಬರುತ್ತದೆ. ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದಿನಾಂಕ 28.05.2024 ರಂದು ಎಫ್ಐಆರ್ ದಾಖಲಾಗುತ್ತದೆ.‌ ದೂರುದಾರರು ಖುದ್ದು ಪೊಲೀಸ್ ಅಧಿಕಾರಿ ಸೋಮಶೇಖರ್. ಐಪಿಸಿ ಸೆಕ್ಷನ್ 341, 283, 143, 149 ಅಡಿಯಲ್ಲಿ ಕ್ರೈ ನಂ 85/2024 ದಾಖಲಾಗುತ್ತದೆ. ಎಫ್ಐಆರ್ […]

Continue Reading

ರಸ್ತೆಯಲ್ಲಿ ನಮಾಜ್ ಮಾಡುವುದು ಸುಮೊಟೋ ಕೇಸ್ ಹಾಕಿಕೊಳ್ಳುವಂತಹ ಗಂಭೀರ ಪ್ರಕರಣವೇ.?

✍️. ನವೀನ್ ಸೂರಿಂಜೆ, ಪತ್ರಕರ್ತರು ರಸ್ತೆಯಲ್ಲಿ ನಮಾಜ್ ಮಾಡುವುದು ಸುಮೊಟೋ ಕೇಸ್ ಹಾಕಿಕೊಳ್ಳುವಂತಹ ಗಂಭೀರ ಪ್ರಕರಣವೇ.? ಒಳ ಅಡ್ಡ ರಸ್ತೆಯೊಂದರ ಒಂದು ಭಾಗದಲ್ಲಿ ಮಾತ್ರ ಕೆಲವೇ ಕೆಲವು ಜನ ನಮಾಜ್ ಮಾಡಿದ್ದಾರೆ. ಮಂಗಳೂರಿನ ರಥಬೀದಿ ವೆಂಕಟರಮಣ ದೇವಸ್ಥಾನದ ರಥೋತ್ಸವ ಪ್ರತೀ ವರ್ಷ ನಡೆಯುತ್ತದೆ. ಇದಕ್ಕಾಗಿ ಒಂದಲ್ಲಾ, ಎರಡಲ್ಲ, ನಾಲ್ಕು ರಸ್ತೆಗಳನ್ನು ಬಂದ್ ಮಾಡಲಾಗುತ್ತದೆ. ಮಾರುಕಟ್ಟೆಯಿಂದ ಕುದ್ರೋಳಿ ಸಂಪರ್ಕಿಸುವ ಮುಖ್ಯ ರಸ್ತೆ, ಕೆ ಎಸ್ ರಾವ್ ರಸ್ತೆಯಿಂದ ರಥಬೀದಿ ಸಂಪರ್ಕಿಸುವ ಮುಖ್ಯ ರಸ್ತೆ, ವಾಣಿಜ್ಯ ಬಂದರಿನಿಂದ ರಥಬೀದಿ ಸಂಪರ್ಕಿಸುವ […]

Continue Reading

ಕೊಡಗನ ಕೋಳಿ ನುಂಗಿತ್ತಾ..’ ಬ್ಯಾರಿಸ್ ವರ್ಲ್ಡ್’ ನ್ನು ಇನ್ಪೊ ನುಂಗಿತ್ತಾ..!

ಕರಾವಳಿಯ ಬ್ಯಾರಿ ಮುಸ್ಲಿಮರ ಅದ್ಯಯನ ಮಾಡಿ ಆಕ್ರಂದನ ಎಂಬ ಸಾಕ್ಷ್ಯಚಿತ್ರವನ್ನು ಕಾಸಿಂ ಅಹ್ಮದ್ ಎಂಬವರ ಪ್ರೊತ್ಸಾಹದಿಂದ ನಿರ್ಮಿಸಿ ಸಮುದಾಯದಲ್ಲಿ ಸಾಮಾಜಿಕ ಜಾಗೃತಿ ಮೂಡಿಸಿ ಹಲವಾರು ಕ್ರಾಂತಿಕಾರಿ ಪರಿವರ್ತನೆ ಕಾರಣೀಕರ್ತನಾದ ಯುವಸಾಧಕ ಹನೀಫ್ ಪುತ್ತೂರು. ತದನಂತರದ ದಿನಗಳಲ್ಲಿ ರವೂಫ್ ಪುತ್ತಿಗೆಯವರ ಜೊತೆ ಸೇರಿ “ನಂಡೆ ಪೆಂಙಲ್” ಎಂಬ ಅಭಿಯಾನಕ್ಕೆ ಚಾಲನೆ ನೀಡಿದ್ದ ಈ ಯುವಕ. ಇಂದು ಪುತ್ತೂರು ತಾಲೂಕಿನಲ್ಲಿ ಕಮ್ಯುನಿಟಿ ಸೆಂಟರ್ ಎಂಬ ಸಂಸ್ಥೆಯನ್ನು ಕಟ್ಟಿ, ರಾಜ್ಯದಲ್ಲೇ ಮುಸ್ಲಿಮರಿಗೆ ಮಾದರಿ ಯೋಜನೆ ಮಾಡಿ ಚಿರಪರಿಚಿತನಾದ. ಸುನ್ನೀಟುಡೇ ಮೂಲಕ ವೈಚಾರಿಕ […]

Continue Reading

‘ಕೈ’ ಹಿಡಿದ ಮುಸಲ್ಮಾನರಿಗೆ ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ‘ಕೈ’ ಹಿಡಿಯುತ್ತಾ..? ‘ಕೈ’ ಕೊಡುತ್ತಾ.!

ಬಂಟ, ಬಿಲ್ಲವ ಆಯಿತು, ಬ್ಯಾರಿಗಳಿಗೂ ಸಿಗಲಿ ಅವಕಾಶ ದೇಶ ಕಾತುರದಿಂದ ಕಾಯುತ್ತಿರುವ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಇನ್ನೇನೂ ಕೆಲವೇ ಕೆಲವು ದಿನಗಳು ಬಾಕಿ ಇವೆ. ಇದರ ನಡುವೆಯೇ ಶಾಸಕರಿಂದ ಆಯ್ಕೆಯಾಗುವ ವಿಧಾನಪರಿಷತ್ ಚುನಾವಣೆ ಜೂನ್ ತಿಂಗಳಲ್ಲೇ ನಡೆಯಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಭೂತಪೂರ್ವ ವಿಜಯ ದಾಖಲಿಸಿರುವುದರಿಂದ 12 ಸ್ಥಾನಗಳ ಪೈಕಿ 7 ಸ್ಥಾನಗಳನ್ನು ನಿರಾಯಾಸವಾಗಿ ಗೆಲ್ಲಲಿದೆ. ಕಾಂಗ್ರೆಸ್ ಪಕ್ಷದಲ್ಲಿ ವಿಧಾನಪರಿಷತ್ ಚುನಾವಣೆ ಬಗ್ಗೆ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜನಸಂಖ್ಯೆ ಅನುಗುಣವಾಗಿ ಪ್ರಾತಿನಿಧ್ಯ […]

Continue Reading