MRPL ನಲ್ಲಿ ನಿರ್ಲಕ್ಷ್ಯಕ್ಕೆ ಆದಿವಾಸಿ ವಲಸೆ ಕಾರ್ಮಿಕ ಬಲಿ. ಸೂಕ್ತ ಪರಿಹಾರ, ಹಾಗೂ ಕಂಪೆನಿಯ ಮೇಲೆ ಕಠಿಣ ಕ್ರಮಕ್ಕೆ ಹೋರಾಟ ಸಮಿತಿ ಆಗ್ರಹ: ಮುನೀರ್ ಕಾಟಿಪಳ್ಳ

MRPL ನ ಹೈಡ್ರೋಲಿಕ್ ಘಟಕದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಮಿಕನಾಗಿ ನಿಯೋಜನೆಗೊಂಡಿದ್ದ ಮಂಗಲ್ ಎಂಬ ಜಾರ್ಖಂಡ್ ಮೂಲದ ಆದಿವಾಸಿಯೊಬ್ಬ ಕರ್ತವ್ಯದ ಸಂದರ್ಭದಲ್ಲಿ ಅವಘಡದಲ್ಲಿ ಮೃತ ಪಟ್ಟಿರುವುದಾಗಿ ಸುದ್ದಿಯಾಗಿದೆ. ಕಂಪೆನಿಯ ನಿರ್ಲಕ್ಷ್ಯ, ಸರಿಯಾದ ಜೀವರಕ್ಷಕ ವ್ಯವಸ್ಥೆಗಳಿಲ್ಲದೆ ಕೆಲಸಕ್ಕೆ ನಿಯೋಜಿಸಿರುವುದರಿಂದ ಈ ಅವಘಡ ಸಂಭವಿಸಿ ವಲಸೆ ಕಾರ್ಮಿಕ ಮೃತ ಪಟ್ಟಿರುವುದಾಗಿ ಮಾಹಿತಿಗಳಿದ್ದು, ಎಮ್ಆರ್ ಪಿಎಲ್ ಕಂಪೆನಿಯು ಮೃತ ಕಾರ್ಮಿಕನ ಕುಟುಂಬಕ್ಕೆ ಕನಿಷ್ಟ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು, ನಿರ್ಲಕ್ಷ್ಯದಿಂದ ಅವಘಡಕ್ಕೆ ಕಾರಣವಾಗಿರುವ ಕಂಪೆನಿಯ ವಿರುದ್ದ ರಾಜ್ಯ ಸರಕಾರ ಕಠಿಣ ಕ್ರಮಗಳನ್ನು […]

Continue Reading

ವಿದೇಶದಲ್ಲಿರುವ ಮಾಲಿಕರ ಬೀಗ ಹಾಕಿದ ಮನೆಗೆ ನುಗ್ಗಿ ಚಿನ್ನಾಭರಣ ಸಿಗದಿದ್ದಾಗ ಡಿ.ವಿ.ಆರ್ ಹೊತ್ತೊಯ್ದ ಕಳ್ಳರು.

ವಿಟ್ಲ : ವಿಟ್ಲ ಪಡ್ನೂರು ಗ್ರಾಮದ ಪರ್ತಿಪ್ಪಾಡಿ ಮಸೀದಿ ದ್ವಾರದ ಮುಂಭಾಗದ ಮನೆಯಲ್ಲಿ ಕಳ್ಳರ ಕೈಚಳಕ ನಡೆದಿದೆ. ಮನೆ ಮಾಲಿಕ ಎಂ.ಕೆ.ಖಲೀಲ್ ಕುಟುಂಬ ಸಮೇತ ಅರಬ್ ರಾಷ್ಟ್ರದ ಅಜ್ಮನ್ ನಲ್ಲಿದ್ದು ಆರು ತಿಂಗಳ ಹಿಂದಷ್ಟೇ ಊರಿಗೆ ಬಂದು ಹೋಗಿದ್ದರು. ಭಾನುವಾರ ಬೆಳಗ್ಗೆ ಪಕ್ಕದ ಮನೆಯವರು ನೋಡಿದಾಗ ಮುಂಭಾಗದ ಬಾಗಿಲು ತೆರೆದಿರುವುದನ್ನು ಗಮನಿಸಿ ಅನುಮಾನದಿಂದ ಮನೆಗೆ ಹೋಗಿ ನೋಡಿದಾಗ ಅಂಗಳದಲ್ಲಿದ್ದ ಸಿ.ಸಿ.ಕ್ಯಾಮರಾದ ದೃಷ್ಟಿ ಬದಲಾಯಿಸಿ ಮುಂಭಾಗದ ಬಾಗಿಲು ಮುರಿದು ಕಳ್ಳರು ಒಳನುಗ್ಗಿದ್ದರು. ಎ.ಸಿ.ಚಾಲು ಮಾಡಿಯೇ ಆರಾಮವಾಗಿ ನಾಲ್ಕು ಕಪಾಟುಗಳನ್ನು […]

Continue Reading

ಮೃತ ವ್ಯಕ್ತಿಯ ಸಾವಿನಲ್ಲಿ ಅನುಮಾನ ವ್ಯಕ್ತಪಡಿಸಿ ಮರು ತನಿಖೆಗೆ ದೂರು ನೀಡಿದ ಅಣ್ಣ

ನ್ಯಾಯಾಲಯದ ಆದೇಶದಂತೆ ಅಧಿಕಾರಿಗಳ ಸಮ್ಮುಖದಲ್ಲಿ ಕನ್ಯಾನ ಮಸೀದಿಯ ದಫನ ಭೂಮಿಯಿಂದ ಮೇಲಕ್ಕೆತ್ತಿದ ಮೃತದೇಹ ವಿಟ್ಲ : ಮೃತ ವ್ಯಕ್ತಿಯ ಸಾವಿನಲ್ಲಿ ಅನುಮಾನ ವ್ಯಕ್ತಪಡಿಸಿ ಮರು ತನಿಖೆಗೆ ಅಣ್ಣ ದೂರು ನೀಡಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಮಂಜೇಶ್ವರ-ವಿಟ್ಲ ಪೊಲೀಸರು, ಆರೋಗ್ಯಾಧಿಕಾರಿಗಳ ಸಮ್ಮುಖದಲ್ಲಿ ಕನ್ಯಾನ ಮಸೀದಿಯ ದಫನ ಭೂಮಿಯಿಂದ ಮೃತದೇಹ ಮೇಲಕ್ಕೆತ್ತಿದ್ದಾರೆ. ವಿಟ್ಲ ಠಾಣಾ ವ್ಯಾಪ್ತಿಯ ಕನ್ಯಾನ ನಿವಾಸಿ ಅಶ್ರಫ್(44)ಎಂಬವರು ಮಂಜೇಶ್ವರ ಠಾಣಾ ವ್ಯಾಪ್ತಿಯ ಸುಂಕದಕಟ್ಟೆ ಮಜೀರ್ ಪಳ್ಳದಲ್ಲಿ ಪತ್ನಿಯ ಜೊತೆ ವಾಸವಿದ್ದು ಗೂಡಂಗಡಿ ವ್ಯವಹಾರ ನಡೆಸುತ್ತಿದ್ದರು. ಮೇ 5ರಂದು […]

Continue Reading

ಶಾಸಕ ಹರೀಶ್ ಪೂಂಜಾ ವಿರುದ್ದ ಎರಡು ಎಫ್ಐಆರ್ ಆದರೂ ಸ್ಟೇಷನ್ ಬೇಲ್ ಸಿಕ್ಕಿದ್ದು ಹೇಗೆ.?

IPC 353, 504, 143, 147, 341, 504, 506, 149 ಎಫ್ಐಆರ್ ದಾಖಲಾದ ಎಲ್ಲಾ ಸಾರ್ವಜನಿಕರಿಗೂ ದ.ಕ ಪೊಲೀಸ್ ಇಲಾಖೆ ಜಾಮೀನು ಪಡೆಯುವ ವ್ಯವಸ್ಥೆ ಮಾಡಿಕೊಡುತ್ತದೆಯೇ.? ✍️. ನವೀನ್ ಸೂರಿಂಜೆ, ಪತ್ರಕರ್ತರು ರಾಷ್ಟ್ರೀಯ ಭಧ್ರತೆಗೆ ಕಂಟಕವಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ದ ಎರಡು ಎಫ್ಐಆರ್ ಆದರೂ ಸ್ಟೇಷನ್ ಬೇಲ್ ಸಿಕ್ಕಿದ್ದು ಹೇಗೆ ? IPC 353, 504, 143, 147, 341, 504, 506, 149 ಎಫ್ಐಆರ್ ದಾಖಲಾದ ಎಲ್ಲಾ ಸಾರ್ವಜನಿಕರಿಗೂ ದಕ್ಷಿಣ ಕನ್ನಡ […]

Continue Reading

ಹರೀಶ್ ಪೂಂಜಾ ತನ್ನ ವಿವಾದಾತ್ಮಕ ಭಾಷಣದಲ್ಲಿ “ಡಿಜೆ ಹಳ್ಳಿ ಕೆಜೆ ಹಳ್ಳಿ ರೀತಿಯ ಸ್ಥಿತಿ ನಿರ್ಮಿಸುತ್ತೇನೆ, ಎಂದು ಬೆದರಿಕೆ ಹಾಕಿದ್ದಾರೆ. ಇದರ ಅರ್ಥ ಏನು.? ಸರಕಾರ ಮೌನ ಮುರಿಯಬೇಕು: ಮುನೀರ್ ಕಾಟಿಪಳ್ಳ

ಬಿಜೆಪಿ ಶಾಸಕ ಹರೀಶ್ ಪೂಂಜಾ ತನ್ನ ವಿವಾದಾತ್ಮಕ ಭಾಷಣದಲ್ಲಿ ದ.ಕ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿಯನ್ನು ಉದ್ದೇಶಿಸಿ “ಡಿಜೆ ಹಳ್ಳಿ ಕೆಜೆ ಹಳ್ಳಿ ರೀತಿಯ ಸ್ಥಿತಿ ನಿರ್ಮಿಸುತ್ತೇನೆ, ಎಚ್ಚರ ಇರಲಿ” ಎಂದು ಬೆದರಿಕೆಯ ಧ್ವನಿಯಲ್ಲಿ ಹೇಳಿದ್ದಾರೆ. ಇದರ ಅರ್ಥ ಏನು ? ಕೆಜೆ ಹಳ್ಳಿ, ಡಿಜೆ ಹಳ್ಳಿ ಪ್ರಕರಣ ನಡೆದಾಗ (ಪೊಲೀಸ್ ಠಾಣೆಗೆ ಗುಂಪು ಬೆಂಕಿ ಹಾಕಿತ್ತು. ಪೊಲೀಸ್ ವಾಹನಗಳು ಸುಟ್ಟು ಭಸ್ಮ ಆಗಿತ್ತು. ಸ್ಥಳೀಯ ಶಾಸಕನ ಮನೆಯನ್ನೂ ಸುಟ್ಟು ಹಾಕಲಾಗಿತ್ತು) ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿ ಇತ್ತು. […]

Continue Reading

ಜಿಲ್ಲೆಯ ಎಲ್ಲ ವಕ್ಫ್ ಸಂಸ್ಥೆಗಳು ಮಾದರಿ ನಿಯಮಾವಳಿಯ ನಮೂನೆ 4 ನ್ನು ಅಂಗೀಕರಿಸಿಕೊಳ್ಳುವುದು ಕಡ್ಡಾಯ

ರಾಜ್ಯ ವಕ್ಫ್ ಮಂಡಳಿಯಲ್ಲಿ ನೋಂದಣಿಯಾದ ಜಿಲ್ಲೆಯ ಎಲ್ಲಾ ವಕ್ಫ್ ಸಂಸ್ಥೆಗಳು ಕರ್ನಾಟಕ ರಾಜ್ಯ ಹೈಕೋರ್ಟ್ ಆದೇಶದಂತೆ ರಾಜ್ಯ ವಕ್ಫ್ ಮಂಡಳಿಯ ಮಾದರಿ ನಿಯಮಾವಳಿಯ ನಮೂನೆ ನಂ.4 ನ್ನು ಅಂಗೀಕರಿಸಿಕೊಳ್ಳುವುದು ಕಡ್ಡಾಯವಾಗಿದೆ. ಈವರೆಗೆ ಮಾದರಿ ನಿಯಮಾವಳಿಯನ್ನು ಅಂಗೀಕರಿಸಿಕೊಳ್ಳದ ವಕ್ಫ್ ಸಂಸ್ಥೆಗಳು ಸಂಬಂಧಪಟ್ಟ ದಾಖಲೆಗಳೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಕಚೇರಿಯ ಮೂಲಕ ರಾಜ್ಯ ವಕ್ಫ್ ಮಂಡಳಿಯ ಅಂಗೀಕಾರಕ್ಕಾಗಿ ಕೂಡಲೇ ಸಲ್ಲಿಸಬೇಕು ಎಂದು ಜಿಲ್ಲಾ ವಕ್ಫ್ ಅಧಿಕಾರಿಗಳು ತಿಳಿಸಿದ್ದಾರೆ.

Continue Reading

ಮಂಗಳೂರು: ಸಿಸಿಬಿ ಪೊಲೀಸರ ಮಹತ್ವದ ಕಾರ್ಯಾಚರಣೆ: ಅಕ್ರಮ ಪಿಸ್ತೂಲ್ ಹೊಂದಿದ್ದ ಕುಖ್ಯಾತ ಗ್ಯಾಂಗ್ ಸ್ಟಾರ್ ಗಳ ಬಂಧನ

ಅಕ್ರಮವಾಗಿ ಶಸ್ತ್ರಾಸ್ತವನ್ನು ವಶದಲ್ಲಿರಿಸಿಕೊಂಡಿದ್ದ ಇಬ್ಬರು ಗ್ಯಾಂಗ್ ಸ್ಟಾರ್ ಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ತಲಪಾಡಿ ಗ್ರಾಮದ ಪಿಲಿಕೂರು ಪರಿಸರದಲ್ಲಿ ಇಬ್ಬರು ಕಪ್ಪು ಬಣ್ಣದ ಕಾರಿನಲ್ಲಿ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮಾರಕಾಯುಧ ಪಿಸ್ತೂಲ್ ಇಟ್ಟುಕೊಂಡು ಯಾವುದೋ ದುಷ್ಕೃತ್ಯ ನಡೆಸುವುದಕ್ಕಾಗಿ ತಿರುಗಾಡುತ್ತಿದ್ದರೆಂಬ ಬಗ್ಗೆ ಖಚಿತ ಮಾಹಿತಿ ಪಡೆದ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಮಂಜೇಶ್ವರದ ಮೊಹಮ್ಮದ್ ಅಸ್ಗರ್ ಮತ್ತು ಅಬ್ದುಲ್ ನಿಸಾರ್.ಕೆ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಪಿಸ್ತೂಲ್, […]

Continue Reading

ಬೈಕ್ ಡಿಕ್ಕಿ ಹೊಡೆದು ಆಟೋ ಪಲ್ಟಿ.. ಬೈಕ್ ಸವಾರರು ಬಚಾವ್. ಆಟೋ ಪ್ರಯಾಣಿಕ ಸಾವು.

ಬಂಟ್ವಾಳ: ಪಾಣೆಮಂಗಳೂರು ಕೆನರಾ ಬ್ಯಾಂಕ್ ಮುಂಭಾಗ ಮಿತಿಮೀರಿದ ವೇಗದಲ್ಲಿ ಬಂದ ಬೈಕ್ ಡಿಕ್ಕಿ ಹೊಡೆದು ಆಟೋ ಪಲ್ಟಿಯಾಗಿದೆ. ಈ ಸಂದರ್ಭ ಆಟೋದಲ್ಲಿದ್ಜ ಪ್ರಯಾಣಿಕ ಸಜಿಪ ಕಂಚಿನಡ್ಕ ಪದವು ನಿವಾಸಿ ಅಲ್ತಾಫ್ ( 20)ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಕೆಲ ಕ್ಷಣದಲ್ಲೇ ಚಿಕಿತ್ಸೆ ಫಲಕಾರಿಯಾಗದೇ ಅಲ್ತಾಫ್ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಬೈಕ್ ಸವಾರರಿಬ್ಬರು ರಸ್ತೆಗೆಸೆಯಲ್ಪಟ್ಟಿದ್ಜರೂ ಅದೃಷ್ಟವಶಾತ್ ಪಾರಾಗಿದ್ದಾರೆ. ಬೈಕ್ ಸವಾರರ ಪ್ರಾಣ ಉಳಿಸುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಆಟೋ ರಸ್ತೆಯಲ್ಲೇ ಪಲ್ಟಿಹೊಡೆದು ಪ್ರಯಾಣಿಕ ಅಲ್ತಾಫ್ ಮೃತಪಟ್ಟಿದ್ದಾರೆ. […]

Continue Reading

ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಂಚಿ ಗ್ರಾಮದಲ್ಲಿ ಆ್ಯಕ್ಟಿವಾಗೆ ಡಿಕ್ಕಿ‌ ಹೊಡೆದು ಪರಾರಿಯಾದ ಕಾರು..

ಸವಾರ ಇನ್ಫೋಸಿಸ್ ಸೆಕ್ಯೂರಿಟಿ ಉದ್ಯೋಗಿ ಚಿದಾನಂದ ಕಾಮತ್ ಸ್ಥಳದಲ್ಲೇ ಸಾವು. ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕೋಕಳ ಸಮೀಪದ ನೂಜಿ ಬಳಿ ಆಕ್ಟಿವಾಗೆ ಡಿಕ್ಕಿ ಹೊಡೆದು ಕಾರು ಎಸ್ಕೇಪ್. ಪುತ್ತೂರಿನ ನೆಹರೂನಗರದ ಕಲ್ಲೇಗ ರಕ್ತೇಶ್ವರಿ ಗುಡಿಯ ಹಿಂಬದಿ ನಿವಾಸಿ, ನಿವೃತ್ತ ಸೈನಿಕ ಚಿದಾನಂದ್ ಕಾಮತ್ (55) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುಡಿಪು ಇನ್ಫೋಸಿಸ್ ಸಂಸ್ಥೆಯ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಚಿದಾನಂದ ಕಾಮತ್ ಅವಿವಾಹಿತರಾಗಿದ್ದು ತನ್ನ ತಾಯಿ ಜೊತೆ ವಾಸವಾಗಿದ್ದಾರೆ.ಮೃತರು ತಾಯಿ, ವಿವೇಕಾನಂದ ಕಾಲೇಜು ಉಪನ್ಯಾಸಕ ರಮಾನಂದ ಕಾಮತ್, ಶ್ರೀ […]

Continue Reading

ಬೆಳ್ತಂಗಡಿ ಪೊಲೀಸ್ ಠಾಣೆಗೆ ಬೆಂಬಲಿಗರೊಂದಿಗೆ ನುಗ್ಗಿ ಗೂಂಡಾಗಿರಿ ಮೆರೆದ ಶಾಸಕ ಹರೀಶ್ ಪೂಂಜಾ: ಮುನೀರ್ ಕಾಟಿಪಳ್ಳ

ಬೆಳ್ತಂಗಡಿ: ಅಕ್ರಮ ಗಣಿಗಾರಿಕೆ ಕೋರೆಗೆ ದಾಳಿ ನಡೆಸಿ ಸಾಕ್ಷ್ಯ ಸಮೇತ ಕೋರೆಯ ಮಾಲಕನಾದ ಬಿಜೆಪಿ ಮುಖಂಡನನ್ನು ಬಂಧಿಸಿದ ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ತನ್ನ ಬೆಂಬಲಿಗರೊಂದಿಗೆ ನುಗ್ಗಿ ಪ್ರತಿಭಟನೆಯ ಹೆಸರಲ್ಲಿ ಸ್ಥಳೀಯ ಶಾಸಕ ಹರೀಶ್ ಪೂಂಜಾ ಗೂಂಡಾಗಿರಿ ಮೆರೆದಿದ್ದಾರೆ. ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ, ಅಕ್ರಮ ಮರಳುಗಾರಿಕೆ ವ್ಯಾಪಕವಾಗಿ ನಡೆಯುತ್ತಿದೆ. ಈ ಅಕ್ರಮಗಳ ದಂಧೆಗಳ ಹಿಂದಿರುವವರು ಬಹುತೇಕ ಬಿಜೆಪಿ ಪ್ರಮುಖರು ಹಾಗೂ ಸ್ಥಳೀಯ ಶಾಸಕ ಪೂಂಜಾ ಬೆಂಬಲಿಗರು. ಈ ಮೊದಲೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ಗುರುತಿಸಿಕೊಂಡು ರೌಡಿಶೀಟರ್ […]

Continue Reading