ಕೃಷ್ಣಾಪುರ: ಉದ್ಯಮಿ, ಸಮಾಜ ಸೇವಕ ಹಾಜಿ ಬಿ.ಎಂ ಹುಸೈನ್ (ಉತ್ತ ಹಾಜಿ) ವಿಧಿವಶ

ಉದ್ಯಮಿ, ಸಮಾಜ ಸೇವಕ ಹಾಜಿ ಬಿ.ಎಂ ಹುಸೈನ್ (ಉತ್ತ ಹಾಜಿ) ಇಂದು ಬೆಳಿಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ‌ನಿಧನರಾದರು.ಇವರು ಕೃಷ್ಣಾಪುರ ಬದ್ರಿಯಾ ಜುಮಾ ಮಸ್ಜಿದ್ ಇದರ ಮಾಜಿ ಅಧ್ಯಕ್ಷರು,ಅಲ್ ಬದ್ರಿಯಾ ವಿದ್ಯಾ ಸಂಸ್ಥೆಯ ಸ್ಥಾಪಕ ಅಧ್ಯಕ್ಷರು, ಕಾಟಿಪಳ್ಳ ಚೈತನ್ಯ ಪಬ್ಲಿಕ್ ಸ್ಕೂಲ್ ಇದರ ಗೌರವಾಧ್ಯಕ್ಷರು, ಬದ್ರಿಯಾ ಅಸೋಸಿಯೇಷನ್ ಇದರ ಸ್ಥಾಪಕ ಅಧ್ಯಕ್ಷರಾಗಿ,ಸಾಮಾಜಿಕ, ಧಾರ್ಮಿಕ ಶೈಕ್ಷಣಿಕ ರಂಗದ ಸೇವೆಗಳಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಇವರ ಪಾರ್ಥಿವ ಶರೀರವು ಕೃಷ್ಣಾಪುರ ಲಂಡನ್ ಪಾರ್ಕ್ ಬಳಿ ಇರುವ ಅವರ ಮನೆಯಲ್ಲಿ ಸಂದರ್ಶನಕ್ಕೆ […]

Continue Reading

ಕೈಗಾರಿಕೋದ್ಯಮಿ ಉಸ್ಮಾನ್ ಕುಕ್ಕಾಡಿ ಅಲ್ಪಕಾಲದ ಅನಾರೋಗ್ಯದಿಂದ ವಿಧಿವಶ.

ಬೈಕಂಪಾಡಿಯ ಕೈಗಾರಿಕೋದ್ಯಮಿ ಉಸ್ಮಾನ್ ಕುಕ್ಕಾಡಿ ಅಲ್ಪಕಾಲದ ಅನಾರೋಗ್ಯದ ನಂತರ ಸೋಮವಾರ (18-9-2023) ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಯುನೊ ಪ್ಯಾಕ್ ಇಂಡಸ್ಟ್ರೀಸ್ ಮತ್ತು ಪ್ಲಾಮ ಪ್ಲೈವುಡ್ ಸಂಸ್ಥೆಗಳ ಪಾಲುದಾರರಾಗಿದ್ದ ಇವರು ಡೆಪ್ಯುಟಿ ಗವರ್ನರ್ ಆಫ್ ರೋಟರಿ ಇಂಟರ್ನ್ಯಾಷನಲ್ ಆಗಿದ್ದರು. ಜನಪ್ರಿಯ ಸಮಾಜ ಸೇವಕರಾಗಿದ್ದ ಇವರು‌ ಸ್ಥಳೀಯ ಪ್ರಖ್ಯಾತ ಕುಕ್ಕಾಡಿ ಕುಟುಂಬದ ಸದಸ್ಯರು. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸುರತ್ಕಲ್ ವಿದ್ಯಾದಾಯಿನಿ ಬಳಿ ಇರುವ ಇವರ ಸಹೋದರ ಅಬ್ದುಲ್ […]

Continue Reading

ವಾಟ್ಸ್ಯಾಪ್ ನಲ್ಲಿ ತ್ರಿವಳಿ ತಲಾಖ್; ಪತಿ ವಿರುದ್ಧ ಪತ್ನಿ ದೂರು

ಸುಳ್ಯ ಜಯನಗರ ನಿವಾಸಿ ಮಿಸ್ರಿಯಾ ಎಂಬ ಮಹಿಳೆಗೆ ವಿದೇಶದಲ್ಲಿರುವ ಪತಿ ವಾಟ್ಸಾಪ್ ಸಂದೇಶದ ಮೂಲಕ ತ್ರಿವಳಿ ತಲಾಖ್ ನೀಡಿದ ಘಟನೆ ನಡೆದಿದೆ.ಕೇರಳದ ತ್ರಿಶೂರ್ ಮೂಲದ ಅಬ್ದುಲ್ ರಶೀದ್ ಏಳು ವರ್ಷಗಳ ಹಿಂದೆ ಸುಳ್ಯ ಜಯನಗರದ ಮಿಸ್ರಿಯಾ ಎಂಬಾಕೆಯನ್ನು ವಿವಾಹವಾಗಿ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. 2 ವರ್ಷಗಳ ಹಿಂದೆ ಮಿಸ್ರಿಯಾ ಅವರನ್ನು ವಿದೇಶಕ್ಕೆ ಕರೆಸಿಕೊಂಡಿದ್ದ ಅಬ್ದುಲ್ ರಶೀದ್ ಬಳಿಕ ಎರಡನೇ ಮಗುವಿನ ಹೆರಿಗೆಗಾಗಿ ಸುಳ್ಯಕ್ಕೆ ಕರೆತಂದು ಪತ್ನಿಯ ತವರು ಮನೆಯಲ್ಲಿ ಬಿಟ್ಟು ವಿದೇಶಕ್ಕೆ ಉದ್ಯೋಗಕ್ಕೆ ತೆರಳಿದ್ದ. ಆದರೆ ಕಳೆದ […]

Continue Reading

ನಿಫಾ ವೈರಸ್ ಭೀತಿ: ಸುಳ್ಯ, ಪುತ್ತೂರು, ಬಂಟ್ವಾಳ, ತಲಪಾಡಿ ಗಡಿಭಾಗದಲ್ಲಿ ಜನರ ಆರೋಗ್ಯ ತಪಾಸಣೆಗೆ ಮುಂದಾದ ಇಲಾಖೆ

ಕೇರಳದಲ್ಲಿ ಕಾಣಿಸಿಕೊಂಡ ನಿಫಾ ವೈರಸ್ ಭೀತಿಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕೂ ತಾಲ್ಲೂಕಿನ ಗಡಿಭಾಗದಲ್ಲಿ ಜನರ ತಾಪಮಾನ ಪರೀಕ್ಷೆಗೆ ತಂಡಗಳನ್ನು ಆರೋಗ್ಯ ಇಲಾಖೆ ಸಿದ್ಧಪಡಿಸಿದ್ದು, ಸೆಪ್ಟೆಂಬರ್ 17 ರಿಂದ ಈ ಎಲ್ಲಾ ತಂಡಗಳು ಕಾರ್ಯರೂಪಕ್ಕೆ ಇಳಿಸುವ ಕೆಲಸವಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಭಾಗದಲ್ಲಿ ಜಾಲ್ಸೂರು, ಮಂಡೆಕೋಲು, ಬಡ್ಡಡ್ಕ ಸೇರಿದಂತೆ ಇದರ ಆಸುಪಾಸಿನ ಊರುಗಳು, ಪುತ್ತೂರಿನ ಸ್ವರ್ಗ, ಮೇನಾಲ ಹಾಗೂ ಸುಳ್ಯಪದವು, ಬಂಟ್ವಾಳದ ಸಾರಡ್ಕ, ಸಾಲೆತ್ತೂರು, ಕನ್ಯಾನ, ಬೀರಿಪದವು ಹಾಗೂ ಮಂಗಳೂರಿನ ತಲಪಾಡಿ ಭಾಗದಲ್ಲಿ ಆರೋಗ್ಯ ಇಲಾಖೆ […]

Continue Reading

ಮಂಗಳೂರಿನ ಜಿ.ಆರ್. ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆಗೆ ಅವಕಾಶ ಕೋರಿ ಹೈಕೋರ್ಟಿಗೆ

ಕರಾವಳಿ ಗೂಪ್ ಆಫ್ ಕಾಲೇಜ್ ನ್ನು ನಡೆಸುತ್ತಿರುವ ಮಂಗಳೂರಿನ ಶಿಕ್ಷಣೋದ್ಯಮಿ ಗಣೇಶ್ ರಾವ್ ನೇತೃತ್ವದ ಜಿ.ಆರ್. ವೈದ್ಯಕೀಯ ಕಾಲೇಜಿನ 99 ವಿದ್ಯಾರ್ಥಿಗಳು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.ವಿದ್ಯಾರ್ಥಿಗಳ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾ. ಜಿ. ನರೇಂದರ್ ಮತ್ತು ನ್ಯಾ. ವಿಜಯ ಕುಮಾರ್ ಎ. ಪಾಟೀಲ್ ಅವರಿದ್ದ ವಿಭಾಗೀಯ ಪೀಠ, ರಾಜ್ಯ ಸರ್ಕಾರ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಜಿ.ಆರ್. ಕಾಲೇಜಿನ ಆಡಳಿತ ಮಂಡಳಿಗೆ ನೋಟೀಸ್ ಜಾರಿಗೊಳಿಸಿ ಆದೇಶ ಹೊರಡಿಸಿತು. ಕಳೆದ ಸಾಲಿನ […]

Continue Reading

‘ಮಂಜುನಾಥ’ನ ಕೋಮು ಲೀಲೆ..!

ಮಹಾ ಕೋಮುವಾದಿ, ಪರಮಭ್ರಷ್ಟ ಮಂಜುನಾಥ್ ಸರಕಾರೀ ಕೆಲಸದಿಂದ ವಜಾ ಮಾಡಲು ಮುಸ್ಲಿಂ ಸಮುದಾಯದಿಂದ ಹೆಚ್ಚಿದ ಆಗ್ರಹ ಕರಾವಳಿ ಭಾಗದಲ್ಲಿ ಯಾವುದೇ ಸರಕಾರ ಅಸ್ತಿತ್ವಕ್ಕೆ ಬಂದರೂ ಅಲ್ಲಿ ನಡೆಯುವುದು ಆರ್ ಎಸ್ ಎಸ್ ಪ್ರೇರಿತ ಚಟುವಟಿಕೆಗಳೇ. ಇದಕ್ಕೆ ಮುಖ್ಯ ಕಾರಣ ಅಧಿಕಾರಿಗಳ ವೇಷದಲ್ಲಿರುವ ಆರ್ ಎಸ್ ಎಸ್ ಪ್ರೇರಿತ ಚಿಂತನೆಗಳು. ಇದೀಗ ಅಲ್ಪಸಂಖ್ಯಾತ ಇಲಾಖೆಯಲ್ಲಿ ವಕ್ಕರಿಸಿಕೊಂಡಿರುವ ತಾಲೂಕು ವಿಸ್ತರಣಾಧಿಕಾರಿ ಮಂಜುನಾಥ್ ನ ಕೋಮು ಲೀಲೆಗಳು ಜಗಜ್ಜಾಹೀರವಾಗಿದೆ. ಅಧಿಕಾರಿಯ ವೇಷ ತೊಟ್ಟು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಲ್ಲಿ ತನ್ನ ಗೋಮುಖ ವ್ಯಾಘ್ರತನ […]

Continue Reading

ಸರ್ವರ್ ಸಮಸ್ಯೆ ಪಡಿತರ ಚೀಟಿ ತಿದ್ದುಪಡಿ ಅವಕಾಶ ವಿಸ್ತರಣೆಗೆ ಡಿವೈಎಫ್ಐ ಆಗ್ರಹ

ಮಂಗಳೂರು: ಚಾಲ್ತಿಯಲ್ಲಿರುವ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ/ತೆಗೆಯುವುದು, ವಿಳಾಸ ಬದಲಾವಣೆ ಹೆಸರು ತಿದ್ದುಪಡಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೆಪ್ಟೆಂಬರ್ 12 ರಿಂದ 14ರವರೆಗೆ ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಸೇವಾ ಸಿಂಧು ಗ್ರಾಹಕ ಸೇವಾ ಕೇಂದ್ರಗಳಲ್ಲಿ ಅವಕಾಶ ನೀಡಿ ಪ್ರಕಟಣೆ ನೀಡಿತ್ತು ಆದರೆ ಸರ್ವರ್ ಸಮಸ್ಯೆಯಿಂದಾಗಿ ಸಾರ್ವಜನಿಕರು ಸೇವಾಕೇಂದ್ರಗಳ ಮುಂದೆ ಸಾಲುಗಟ್ಟಿ ನಿಂತು ಕಂಗಲಾಗಿದ್ದಾರೆ ಎಂದು ಡಿವೈಎಫ್ಐ ಜಿಲ್ಲಾ ಸಮಿತಿ ಆಪಾದಿಸಿದೆ. ನಗರದ ವಿವಿಧ ಸೇವಾ ಕೇಂದ್ರಗಳಿಗೆ ಡಿವೈಎಫ್ಐ ನಿಯೋಗ ಭೇಟಿ ನೀಡಿದ್ದು […]

Continue Reading

ಹಲ್ಲೆಪ್ರಕರಣ: ಆರೋಪಿಗಳು ದೋಷಮುಕ್ತ; ಆರೋಪಿಗಳ ಪರ ವಾದ ಮಂಡಿಸಿದ ನ್ಯಾಯವಾದಿ ಮಹೇಶ್ ಕಜೆ

ಪುತ್ತೂರು:ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಚಾಲಕ ರಾಮಕೃಷ್ಣ ಜೊತೆ ನಿರ್ವಾಹಕರಾಗಿ ರಿಯಾಜ್ ಮುಲ್ಲಾರ್ ಮಂಗಳೂರು ಸ್ಟೇಟ್ ಬ್ಯಾಂಕ್ ನಿಂದ ಹೊರಟು ಪುತ್ತೂರು ಕಡೆಗೆ ಬರುವ ಹೊತ್ತು,ರಾತ್ರಿ ಕಬಕ ಗ್ರಾಮದ, ನೆಹರೂ ನಗರ ಎಂಬಲ್ಲಿ ಖಾಸಗಿ ಬಸ್ಸನ್ನು ಅದರ ಚಾಲಕ ಆರೋಪಿ ಪಿ.ಎ ಜೋಯ್ ಎಂಬವರು ಒಮ್ಮೆಲೇ ಬ್ರೆಕ್ ಹಾಕಿ ರಾಮಕೃಷ್ಣರವರ ಬಸ್ಸಿಗೆ ಅಡ್ದವಾಗಿ ನಿಲ್ಲಿಸಿ,ರಾಮಕೃಷ್ಣರವರು ಆರೋಪಿ ಬಸ್ಸಿನ ಚಾಲಕರಲ್ಲಿ “ನಮ್ಮ ಬಸ್ಸಿಗೆ ಯಾಕೆ ಈ ರೀತಿ ಅಡ್ಡ ನಿಲ್ಲಿಸಿದ್ದೀರಿ” ಎಂದು ಕೇಳಿದರು, ಆಗ ಆರೋಪಿ ಬಸ್ಸಿನ ಚಾಲಕ ತನ್ನ ಬಸ್ಸನ್ನು […]

Continue Reading

ಒಂದು ಕಡೆ ಚೈತ್ರ ಕುಂದಾಪುರರವರ ಪ್ರೇಮಪಾಶ; ಇನ್ನೊಂದು ಮೋಸದಾಟ.!

ಲವ್ ಜಿಹಾದ್ ಬಗ್ಗೆ ಚೈತ್ರಾ ಕುಂದಾಪುರ ಪ್ರೇಮಪಾಶ ಎಂಬ ಕಾದಂಬರಿ ಬರೆದಿದ್ದಾರೆ. ಕರಾವಳಿಯಲ್ಲಿ ನಡೆದ/ನಡೆಯುತ್ತಿರುವ ನಿಜ ಘಟನೆ ಆಧರಿತ ಕಾದಂಬರಿ ಇದು ಎಂದು ಚೈತ್ರ ಕುಂದಾಪುರ ಹೇಳಿದ್ದಾರೆ. ಬುಕ್ ಬ್ರಹ್ಮದವರು ಚೈತ್ರ ಕುಂದಾಪುರಗೆ ವೇದಿಕೆ ಒದಗಿಸಿದ್ದು ಟೀಕೆಗೆ ಕಾರಣವಾಗಿದೆ. ವಿಷಯ ಅದಲ್ಲ, ಚೈತ್ರ ಕುಂದಾಪುರರವರ ಲವ್ ಜಿಹಾದ್ ಕಾದಂಬರಿಯಲ್ಲಿ ಹೇಳದೇ ಇರುವ ಮತ್ತು ಈ ಕಾದಂಬರಿಗೆ ಕಾರಣವಾಗಿರುವ ಮೊದಲ ಘಟನೆ ಕಾದಂಬರಿಯಲ್ಲಿ ಇಲ್ಲ. ಹಾಗಾಗಿ ಕಾದಂಬರಿಯಲ್ಲಿ ಇಲ್ಲದ ಪ್ರೇಮಪಾಶ ಪಾರ್ಟ್ – 1 ಇಲ್ಲಿದೆ. ಪ್ರೇಮಪಾಶ ಪಾರ್ಟ್ […]

Continue Reading

ಮಂಗಳೂರು: ಮಿನಿ ಆಡಳಿತ ಸೌಧದಲ್ಲಿ ಕಮಾಯಿಗೆ ‘ಪಾಟೀಲ’ ಅಭಯಹಸ್ತ.!

ಬಿಜೆಪಿ ಸಂಬಂಧಿಕೆ ಶೆಟ್ಟಿ ಯದ್ದೇ ಅಂಧಾ ದರ್ಬಾರ್.! ನಂಬ್ತೀರಾ..ಬಿಡ್ತೀರಾ ಗೊತ್ತಿಲ್ಲ. ಮಂಗಳೂರು ಮಿನಿ ಆಡಳಿತ ಸೌಧದ ಕಚೇರಿಯ ಒಂದೊಂದು ಗೋಡೆಗಳು ಸಾಕ್ಷಿ ನುಡಿಯುತ್ತಿದೆ. ಮಂಗಳೂರು ಮಿನಿ ಆಡಳಿತ ಸೌಧದ ಒಂದೊಂದು ಕಚೇರಿಯ ಒಳಗೆ ಹೋದರೆ ಗೊತ್ತಾಗುತ್ತದೆ. ಕಂಬ ಕಂಬಗಳು ಕೈ ಚಾಚುವಂತೆ ತಹಶೀಲ್ದಾರ್ ನಿಂದ ಹಿಡಿದು ಸಣ್ಣ ಮಟ್ಟದ ಗುಮಾಸ್ತ ನವರೆಗೂ ಕೈ ಚಾಚುವುದು ರೂಢಿಯಾಗಿದೆ. ಅಷ್ಟರಮಟ್ಟಿಗೆ ಲಂಚಕ್ಕಾಗಿ ಬಾಯಿ ಬಿಡುತ್ತಿದ್ದಾರೆ ಇಲ್ಲಿನ ಅಧಿಕಾರಿ ವರ್ಗ.ಮಾನ-ಮರ್ಯಾದೆ ಎಲ್ಲವನ್ನು ಬಿಟ್ಟು.! ತಹಶೀಲ್ದಾರ್ ಕಚೇರಿಯಿಂದ ಹಿಡಿದು ಎಡಿಎಲ್ ಆರ್, ಉಪನೋಂದಣಿ […]

Continue Reading