ಈ ಸಾವು ನ್ಯಾಯವೇ.? ಎ.ಜೆ ಆಸ್ಪತ್ರೆಯ ಎಡವಟ್ಟಿಗೆ ಬಲಿಯಾದ ಬಡಪಾಯಿ ಶಿಲ್ಪ ಆಚಾರ್ಯ

ಸರ್ಕಾರ ಬದಲಾದರೂ ಖಾಸಗಿ ಆಸ್ಪತ್ರೆಯ ಆಟಾಟೋಪಕ್ಕೆ ಕಡಿವಾಣವಿಲ್ಲವೇ.? ಇತ್ತೀಚೆಗೆ ವ್ಯಾಪಕ ಚರ್ಚೆಗೊಳಗಾದ ಮಂಗಳೂರಿನ ಎ‌.ಜೆ ಆಸ್ಪತ್ರೆಯಲ್ಲಿ ಗರ್ಭಿಣಿ ಹೆಣ್ಣುಮಗಳೊಬ್ಬಳ ಹೆರಿಗೆಗಾಗಿ ನಡೆದ ಶಸ್ತ್ರಚಿಕಿತ್ಸೆಯಿಂದಾದ ಎಡವಟ್ಟಿಗೆ ಗರ್ಭಕೋಶವನ್ನು ಕಳೆದುಕೊಂಡಿದ್ದಲ್ಲದೆ ಮೆದುಳು ನಿಷ್ಕ್ರಿಯಗೊಂಡು ಕೋಮಕ್ಕೆ ತೆರಳಿದ ಶಿಲ್ಪ ಆಚಾರ್ಯ 25-07-2023ರ ಮಂಗಳವಾರದಂದು ಕೊನೆಯುಸಿರೆಳೆದಿದ್ದಾರೆ. ಮಂಗಳೂರಿನ ಪ್ರತಿಷ್ಠಿತವೆಂದು ಕರೆಸಿಕೊಳ್ಳುವ ಎ‌.ಜೆ ಆಸ್ಪತ್ರೆಗೆ ಹೆರಿಗೆಗೆಂದು ದಾಖಲಾಗಿರುವ ಗರ್ಭಿಣಿ ಹೆಣ್ಣುಮಗಳೊಬ್ಬಳು ಆಸ್ಪತ್ರೆಯ ಬೇಜವಾಬ್ದಾರಿ ಮತ್ತು ವೈದ್ಯರ ನಿರ್ಲಕ್ಷಕ್ಕೆ ಬಲಿಯಾಗಿದ್ದಾರೆ. ಹೆರಿಗೆಗಾಗಿ ನಡೆದ ಶಸ್ತ್ರಚಿಕಿತ್ಸೆಯಿಂದಾದ ಎಡವಟ್ಟಿಗೆ ಗರ್ಭಕೋಶವನ್ನು ಕಳೆದುಕೊಂಡಿದ್ದಲ್ಲದೆ ಮೆದುಳು ನಿಷ್ಕ್ರಿಯಗೊಂಡು ಕೋಮಕ್ಕೆ ಜಾರಿದ್ದಳು. ವೇಣೂರಿನ […]

Continue Reading

ಇಂದು ಶಿಲ್ಪ,ನಾಳೆ ನಮ್ಮ ಮನೆಯ ಹೆಣ್ಣು ಮಗಳು.! ಎ.ಜೆ ಆಸ್ಪತ್ರೆಯ ನಿರ್ಲಕ್ಷ, ಬೇಜಾವಾಬ್ದಾರಿಗೆ ಅಮಾಯಕ ಹೆಣ್ಣು ಮಗಳು ಬಲಿ.!

ಸಂತೋಷ್ ಬಜಾಲ್ ಕಾರ್ಯದರ್ಶಿ,ಡಿವೈಎಫ್ಐ ದ.ಕ ಇತ್ತೀಚೆಗೆ ವ್ಯಾಪಕ ಚರ್ಚೆಗೊಳಗಾದ ಮಂಗಳೂರಿನ ಎ‌.ಜೆ ಆಸ್ಪತ್ರೆಯಲ್ಲಿ ಗರ್ಭಿಣಿ ಹೆಣ್ಣುಮಗಳೊಬ್ಬಳ ಹೆರಿಗೆಗಾಗಿ ನಡೆದ ಶಸ್ತ್ರಚಿಕಿತ್ಸೆಯಿಂದಾದ ಎಡವಟ್ಟಿಗೆ ಗರ್ಭಕೋಶವನ್ನು ಕಳೆದುಕೊಂಡಿದ್ದಲ್ಲದೆ ಮೆದುಳು ನಿಷ್ಕ್ರಿಯಗೊಂಡು ಕೋಮಕ್ಕೆ ತೆರಳಿದ ಶಿಲ್ಪ ಆಚಾರ್ಯ ಇಂದು ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿ 25 ದಿನಗಳು ಕಳೆದಿದೆ. ಮನೆಯಲ್ಲಿ ಶಿಲ್ಪಳಾ 12 ವರುಷದ ಹೆಣ್ಣು ಮಗಳಾದ ನಮೃತ ತನ್ನ ತಾಯಿ ಮತ್ತು ಜನಿಸಿದ ಮುದ್ದು ತಂಗಿಯ ಜೊತೆ ಒಂದೆರಡು ದಿನದಲ್ಲಿ ಮರಳಿ ಮನೆಗೆ ಬರಬಹುದೆಂದು ಕಾಯುತ್ತಾ ಕುಳಿತಿದ್ದಾಳೆ. ಅಮ್ಮ ಯಾವಾಗ […]

Continue Reading

ಬಣ ರಾಜಕೀಯಕ್ಕೆ ಬಿತ್ತು ಬ್ರೇಕ್.! ಬೆಳ್ತಂಗಡಿಯ ಇಬ್ಬರು ಕಾಂಗ್ರೆಸ್ ನಾಯಕರಿಗೆ ಗೇಟ್ ಪಾಸ್

ಬೆಳ್ತಂಗಡಿ:ಕಾಂಗ್ರೆಸ್ ಪಕ್ಷದ ಗೌರವವನ್ನು ಬೀದಿ ಪಾಲು ಮಾಡಿ,ಬಣ ರಾಜಕೀಯದಲ್ಲಿ ತೊಡಗಿ,ಬೆಳ್ತಂಗಡಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಗಲಾಟೆ ವಿಚಾರ ಕೆಪಿಸಿಸಿಗೆ ತಲುಪಿ, ಇದನ್ನು ಗಂಭೀರವಾಗಿ ಪರಿಗಣಿಸಿದ ಕೆಪಿಸಿಸಿ ಅಧ್ಯಕ್ಷರು ಬೆಳ್ತಂಗಡಿಯ ಇಬ್ಬರು ನಾಯಕರಿಗೆ ಗೇಟ್ ಪಾಸ್ ನೀಡುವ ಮೂಲಕ ಬೆಳ್ತಂಗಡಿಯ ಬಣ ರಾಜಕೀಯಕ್ಕೆ ಬಿಸಿ ಮುಟ್ಟಿಸಿದ್ದಾರೆ. ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯ ಇಬ್ಬರಿಗೆ ಗೇಟ್ ಪಾಸ್ ಕೊಟ್ಟು ನೂತನ ಅಧ್ಯಕ್ಷರನ್ನು ನೇಮಕ ಮಾಡುವ ಮೂಲಕ ಬೆಳ್ತಂಗಡಿ ಕಾಂಗ್ರೆಸ್ ಪಕ್ಷದ ಬಣ ರಾಜಕೀಯಕ್ಕೆ ಬ್ರೇಕ್ […]

Continue Reading

BIG EXCLUSIVE ಕಡಲ ನಗರಿಯಲ್ಲಿ ದಂಧಾ ಹೈ ದಂಧಾ

ಕಾಲೇಜು ವಿದ್ಯಾರ್ಥಿಗಳೇ ಟಾರ್ಗೆಟ್.. ಇಂಜೆಕ್ಷನ್ ಚುಚ್ಚಿ ಜೀವ ಕಳೆದುಕೊಳ್ಳುತ್ತಿರುವ ಯುವ ಜನತೆ.! ಅರೆರೆ ಇದು ಮಂಗಳೂರು..ಕಡಲನಗರಿ.. ಇಲ್ಲಿ ಮೀನು ಹೇಗೆ ಸುಲಭದಲ್ಲಿ ಸಿಗುತ್ತದೋ ಅದೇ ರೀತಿ ಮಾದಕ ದ್ರವ್ಯಗಳು, ಹೆರಾಯಿನ್, ಬ್ರೌನ್ ಶುಗರ್ ಗಳೆಲ್ಲವೂ ಅಷ್ಟೇ ಸುಲಭವಾಗಿ ಜನರ ಕೈಗೆ ಸಿಗುತ್ತಿದೆ. ಡ್ರಗ್ಸ್ ದಂಧೆಕೋರರದ್ದು ಚೈನ್ ಸಿಸ್ಟಮ್ ರೀತಿ. ಇದಕ್ಕೊಂದು ಬಾಸ್.. ಅದನ್ನು ಸಪ್ಲೈ ಮಾಡುವ ಮಧ್ಯವರ್ತಿಗಳು.. ಡ್ರಗ್ಸ್ ಅಮಲೇರಿಸುವ ತಂಡ ಮತ್ತೊಂದು. ಪೊಲೀಸ್ ಇಲಾಖೆ ಕೆಲವೊಮ್ಮೆ ಡ್ರಗ್ಸ್ ಅಮಲಿನಲ್ಲಿರುವವರನ್ನು ಹಿಡಿದು ಬೆಂಡೆತ್ತುತ್ತದೆಯೋ ಹೊರತು ಮಧ್ಯವರ್ತಿಗಳು, ಬಾಸ್ […]

Continue Reading

ಹೆದ್ದಾರಿ ದುರಸ್ತಿಗೊಳ್ಳದಿದ್ದರೆ ಸರಣಿ ಹೆದ್ದಾರಿ ತಡೆ: ಬಿ.ಕೆ ಇಮ್ತಿಯಾಜ್

ಬಿ.ಸಿ ರೋಡ್ ನಿಂದ ಸುರತ್ಕಲ್ ವರೆಗಿನ ಹೆದ್ದಾರಿಯಲ್ಲಿ ನಿರ್ಮಾಣಗೊಂಡಿರುವ ಅಪಾಯಕಾರಿ ಹೊಂಡಗುಂಡಿಗಳಿಂದ ವಾಹನ ಸವಾರರಿಗಾಗುವ ಪ್ರಾಣ ಹಾನಿಗಳಿಗೆ ಹೆದ್ದಾರಿ ಪ್ರಾಧಿಕಾರವೇ ನೇರಹೊಣೆ. ಹೆದ್ದಾರಿಯನ್ನು ಆದಷ್ಟು ಬೇಗ ಸರಿಪಡಿಸದಿದ್ದಲ್ಲಿ ಡಿವೈಎಫ್ಐ ಸಂಘಟನೆಯು ಅಲ್ಲಲ್ಲಿ ಹೆದ್ದಾರಿಗಳನ್ನು ತಡೆದು ಸರಣಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಡಿವೈಎಫ್ಐ ನ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಸುರತ್ಕಲ್ ನಿಂದ ಬಿಸಿರೋಡ್ ವರೆಗಿನ ಹೆದ್ದಾರಿಯ ಎಲ್ಲಾ ಗುಂಡಿಗಳನ್ನು ಮುಚ್ಚಲು ಒತ್ತಾಯಿಸಿ, ಕೂಳೂರು ನೂತನ ಸೇತುವೆ ನಿರ್ಮಾಣ ಕಾಮಗಾರಿ ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಆಗ್ರಹಿಸಿ ಹಾಗೂ ರಸ್ತೆ ಗುಂಡಿಗೆ ಬಲಿಯಾದ […]

Continue Reading

ಮಟ್ಕಾ ದಂಧೆಗೆ ಲಗಾಮು ಹಾಕುತ್ತಿರುವ ಪೊಲೀಸ್ ಆಯುಕ್ತರ ಕ್ರಮಕ್ಕೆ ವ್ಯಾಪಕ ಶ್ಲಾಘನೆ

ಇತ್ತ ಕಿಂಗ್ ಪಿನ್ ಗಳನ್ನು ಸೇಫ್ ಜೋನ್ ನಲ್ಲಿಟ್ಟು ಕಮೀಷನರ್ ರಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಲೋಕಲ್ ಪೊಲೀಸರು.! ಮಂಗಳೂರು ಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಜೈನ್ ರವರ ಆದೇಶದ ಮೇರೆಗೆ ನಗರದಲ್ಲಿ ವ್ಯಾಪಕವಾಗಿ, ಎಗ್ಗಿಲ್ಲದೆ ನಡೆಯುತ್ತಿದ್ದ ಅನೈತಿಕ ಚಟುವಟಿಕೆಗಳು, ಧೋ ನಂಬರ್ ದಂಧೆಗೆ ಬ್ರೇಕ್ ಬಿದ್ದಿದೆ. ವೇಶ್ಯಾವಾಟಿಕೆ, ಮಸಾಜ್ ಸೆಂಟರ್, ಸ್ಕಿಲ್ ಗೇಮ್ ಗಳು ಮೂಲೆ ಸೇರಿದೆ. ಯಾವುದೇ ಅಕ್ರಮಗಳನ್ನು ಮುಲಾಜಿಲ್ಲದೆ ಸದೆಬಡಿಯುವ ನಿಷ್ಠಾವಂತ ಪೊಲೀಸ್ ಕಮಿಷನರ್ ರವರ ಕ್ರಮಕ್ಕೆ ನಾಗರಿಕ ಸಮಾಜದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. […]

Continue Reading

ಮಂಗಳೂರು:ಚೂರಿ ಇರಿತ ಪ್ರಕರಣ, ಆರೋಪಿಗೆ ಜಾಮೀನು

ಫ್ರೀ ಫೈರ್ ಗೇಮ್‌ನಲ್ಲಿ ಸೋಲಿಸಿದ ವಿಚಾರದಲ್ಲಿ ವ್ಯಕ್ತಿಯೋರ್ವರಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ್ದ ಆರೋಪಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಪ್ರತ್ಯುಷ್ ಸಾಲಿಯಾನ್ ಎಂಬವರು ಆರೋಪಿ ಸಂಜಯ್ ಪೂಜಾರಿ ಎಂಬವರನ್ನು ಮೊಬೈಲ್‌ನಲ್ಲಿ ಫ್ರೀ ಫೈರ್ ಆನ್‌ಲೈನ್‌ ಗೇಮ್‌ನಲ್ಲಿ ಸೋಲಿಸಿದ ವಿಚಾರವಾಗಿ ಈ ಕೃತ್ಯ ಎಸೆಯಲಾಗಿತ್ತು. ನಂದಿಗುಡ್ಡೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಪ್ರತ್ಯುಷ್ ರವರನ್ನು ಆರೋಪಿ ಸಂಜಯ್ ಪೂಜಾರಿ ತಡೆದು ನಿಲ್ಲಿಸಿ ಚೂರಿಯಿಂದ ತಿವಿದು ಗಾಯಗೊಳಿಸಿದ್ದರೆಂದುದೂರಿನಲ್ಲಿ ತಿಳಿಸಲಾಗಿತ್ತು.ಮೇ.17 ರಂದು ಪ್ರಕರಣ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು […]

Continue Reading

ನಂದಿನಿ ಒಡಲಲ್ಲಿ ಅಕ್ರಮ ಮರಳುಗಾರಿಕೆ; ಪೊಲೀಸರ ದಾಳಿ ವೇಳೆ ಆರೋಪಿಗಳು ಪರಾರಿ,ಸೊತ್ತು ವಶ

ಬಜಪೆ ಠಾಣಾ ವ್ಯಾಪ್ತಿಯ ಕುತುಕೊಳಿ ಎಂಬಲ್ಲಿ ನಂದಿನಿ ನದಿಯಿಂದ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಪ್ರದೇಶಕ್ಕೆ ಬಜಪೆ ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ರವರ ನೇತೃತ್ವದ ತಂಡ ದಾಳಿ ನಡೆಸಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವೇಳೆ ಆರೋಪಿಗಳು ಪರಾರಿಯಾಗಿದ್ದು,ಮರಳುಗಾರಿಕೆಗೆ ಬಳಸುತ್ತಿದ್ದ ಕಬ್ಬಿಣದ ಬೋಟ್ , ಡೀಸೆಲ್ ಪಂಪ್,ಮರಳು ಫಿಲ್ಟರ್ ಮಾಡಲು ಬಳಸುವ ಸಾಧನದೊಂದಿಗೆ ಹಲವಾರು ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡು,ಬೃಹತ್ ಪ್ರಮಾಣದ ಅಕ್ರಮ ಮರಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿರುತ್ತಾರೆ. ನಂದಿನಿ ನದಿಯ ಒಡಲಿನಿಂದ ಅಕ್ರಮವಾಗಿ ಮರಳು ತೆಗೆಯುತ್ತಿರುವ […]

Continue Reading

ಸೌಜನ್ಯ ಅತ್ಯಾಚಾರ ಸಿಬಿಐನಿಂದ ಮರು ತನಿಖೆಗೆ ಸಿಪಿಐಎಂ ಒತ್ತಾಯ: ಕೆ.ಯಾದವ ಶೆಟ್ಟಿ,ಕಾರ್ಯದರ್ಶಿ, ಸಿಪಿಐಎಂ,ದ.ಕ

2012 ರಲ್ಲಿ ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾದ ಅತ್ರಾಪ್ತ ಬಾಲಕಿ ಸೌಜನ್ಯ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ಆರೋಪಕ್ಕೊಳಗಾಗಿದ್ದ ಸಂತೋಷ್ ರಾವ್ ನಿರ್ದೋಷಿ ಎಂದು ತೀರ್ಪು ನೀಡಿರುವುದು, ತೀರ್ಪಿನಲ್ಲಿ ಸಾಕ್ಷ್ಯ ಗಳನ್ನು ರಕ್ಷಿಸದಿರುವುದು, ನಾಶಗೊಳಿಸಿರುವುದನ್ನು ಉಲ್ಲೇಖಿಸಿರುವ ಹಿನ್ನಲೆಯಲ್ಲಿ “ಸೌಜನ್ಯ ಅತ್ಯಾಚಾರ, ಕೊಲೆಯ ನೈಜ ಆರೋಪಿಗಳು ಯಾರು ?” ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಈ ಹಿನ್ನಲೆಯಲ್ಲಿ ಪ್ರಕರಣದ ಆಳವಾದ ತನಿಖೆಯ ಅಗತ್ಯವಿದ್ದು, ಸಿಬಿಐನ ಪರಿಣಿತ, ದಕ್ಷ ಅಧಿಕಾರಿಗಳ ತಂಡದಿಂದ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕು ಎಂದು ಸಿಪಿಐಎಂ ದಕ್ಷಿಣ […]

Continue Reading

ಪುತ್ತೂರು: ಜಾತಿ ನಿಂದನೆ ಪ್ರಕರಣ;ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು

ಆರೋಪಿಗಳ ಪರ ವಾದಿಸಿದ ನ್ಯಾಯವಾದಿ ಮಹೇಶ್ ಕಜೆ ರಸ್ತೆಯಲ್ಲಿ ತೆಗೆಯಲಾಗಿದ್ದ ಹೊಂಡವನ್ನು ಜೆಸಿಬಿ ಸಹಾಯದಿಂದ ಮುಚ್ಚುವ ವೇಳೆ ಟಿಪ್ಪರ್ ಲಾರಿಗಳನ್ನು ಅಡ್ಡವಿಟ್ಟು ಅವಾಚ್ಯ ಶಬ್ದಗಳಿಂದ ಬೈದು,ಜಾತಿ ನಿಂದನೆ ಮಾಡಲಾಗಿದೆ ಎಂಬ ದೂರಿಗೆ ಸಂಬಂಧಿಸಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳಾದ ಜೋಸೆಫ್ ಯಾನೆ ಕಾಟಿ ಬೇಬಿ, ಪ್ರಿನ್ಸ್, ಸಂತೋಷ್ ಹಾಗೂ ಅಜಯ್ ರವರಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ರಸ್ತೆಯಲ್ಲಿ ತೆಗೆಯಲಾಗಿದ್ದ ಹೊಂಡವನ್ನು ಜೆಸಿಬಿ ಸಹಾಯದಿಂದ ಮುಚ್ಚುವ ವೇಳೆ ಟಿಪ್ಪರ್ ಲಾರಿಗಳನ್ನು […]

Continue Reading