ಮಂಗಳೂರು: ಜಾಗದ ನಕಲಿ ಜಿಪಿಎ ಸೃಷ್ಟಿಸಿ ವಂಚನೆ; ಸಹೋದರ, ನ್ಯಾಯವಾದಿ ಸೇರಿ ಐವರ ಮೇಲೆ ಎಫ್ಐಆರ್

ನಕಲಿ ಜಿಪಿಎ (ಪವರ್ ಆಫ್ ಅಟಾರ್ನಿ) ಮಾಡಿ ತನ್ನ ತಮ್ಮನಿಗೆ ಸೇರಿದ್ದ ಜಾಗವನ್ನು ತನ್ನ ಹೆಸರಿಗೆ ಮಾಡಿಕೊಂಡ ಬಗ್ಗೆ ಅಣ್ಣ ಅಹಮ್ಮದ್ ಮೊಹಿದ್ದೀನ್ ಬಾವಾ, ನ್ಯಾಯವಾದಿ ಸೇರಿ ಒಟ್ಟು ಐವರ ಮೇಲೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಅಹಮ್ಮದ್ ಮೊಹಿದ್ದೀನ್ ಬಾವಾ ಅವರ ತಮ್ಮ ಮಂಗಳೂರು ನಿವಾಸಿ ಜುಬೇರ್ ಅಹಮ್ಮದ್ ದೂರು ನೀಡಿದ್ದು, ನವೆಂಬರ್ 24 ರಂದು ದೂರುದಾರರು ಜಿಪಿಎ ಕೊಟ್ಟಿರುವ ರೀತಿ ನಕಲಿ ದಾಖಲೆ ತಯಾರಿಸಿ, 2023 ರ ಸೆಪ್ಟೆಂಬರ್ 21 ರಂದು […]

Continue Reading

ಅಂಬ್ಲಮೊಗರು ಗ್ರಾಮದ ಭೂ ಹಗರಣದ ಬಗ್ಗೆ ಸಮಗ್ರ ತನಿಖೆಯಾಗಲಿ: ಸುನಿಲ್ ಕುಮಾರ್ ಬಜಾಲ್

ಬಡ ರೈತರ ಕೃಷಿಭೂಮಿಯ ಅಕ್ರಮ ಸ್ವಾಧೀನದ ವಿರುದ್ಧ ಉಳ್ಳಾಲ ತಹಶೀಲ್ದಾರ್ ಕಚೇರಿಯೆದುರು ಪ್ರತಿಭಟನೆ ಬಡ ಗೇಣಿದಾರರ ಭೂಮಿಯನ್ನು ಮಾಲೀಕರಿಂದ ನೇರವಾಗಿ ಖರೀದಿ ಮಾಡಿ ಗೇಣಿದಾರರಿಗಾದ ಅನ್ಯಾಯದ ವಿರುದ್ಧ, ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿರುವುದರ ವಿರುದ್ಧ ಹಾಗೂ ಪಂಚಾಯತ್ ನಿಂದ ನಿರ್ಮಿಸಲ್ಪಟ್ಟಿದ್ದ ರಸ್ತೆಯ ಅತಿಕ್ರಮಣದ ವಿರುದ್ಧ ಅಂಬ್ಲಮೊಗರು ಗ್ರಾಮದ ನಾಗರೀಕರು ಕೃಷಿಭೂಮಿ ಸಂರಕ್ಷಣಾ ಹೋರಾಟ ಸಮಿತಿಯ ನೇತ್ರತ್ವದಲ್ಲಿ ಇಂದು ಉಳ್ಳಾಲ ತಹಶೀಲ್ದಾರ್ ಕಚೇರಿಯೆದುರು ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಅಂಬ್ಲಮೊಗರು ಮುನ್ನೂರು ಬೆಳ್ಮ ಗ್ರಾಮದ ನಾಗರಿಕರು […]

Continue Reading

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಜಾನುವಾರು ಸಾಗಾಟ, ಪೊಲೀಸರ ಜೀಪಿಗೆ ಡಿಕ್ಕಿ ಹೊಡೆಸಿ ಕೊಲೆಯತ್ನ, ಆರೋಪಿಯ ಕಾಲಿಗೆ ಗುಂಡು

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರ ಮಂಗಳ ಎಂಬಲ್ಲಿ ಇಂದು ಮುಂಜಾನೆ ಆರೋಪಿ ಅಬ್ದುಲ್ಲಾ ಎಂಬವರು ಇಚರ್ ವಾಹನದಲ್ಲಿ ಹತ್ತು ಜಾನುವಾರಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದು, ಪೊಲೀಸರು ವಾಹನ ನಿಲ್ಲಿಸಲು ಸೂಚಿಸಿದರೂ ಆರೋಪಿಗಳು ವಾಹನವನ್ನು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಸರಿ ಸುಮಾರು 10 ಕಿಮೀ ದೂರ ವಾಹನವನ್ನು ಬೆನ್ನಟ್ಟಿದರು. ಆರೋಪಿಯು ಪೊಲೀಸರ ಜೀಪಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಪೊಲೀಸರನ್ನೇ ಯಮಾರಿಸಲು ಪ್ರಯತ್ನಿಸಿರುತ್ತಾರೆ. ಅ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಪಿಎಸ್ಐ ರವರು ಎರಡು ಸುತ್ತು ಗುಂಡುಗಳನ್ನು ಫೈಯರ್ ಮಾಡಿದ್ದಾರೆ. […]

Continue Reading

ಪದೇ ಪದೇ ಹೊಂದಾಣಿಕೆ ರಾಜಕೀಯ ಮಾಡುವ ಮೂಲಕ, ಮುಸ್ಲಿಮರ ಭಾವನೆಗಳಿಗೆ ದಕ್ಕೆ ತರುವ ಕೆಲಸ ಮಾಡಬೇಡಿ: ಸಿರಾಜ್ ಬಜ್ಪೆ

ಸರಕಾರ ವಿಧಿಸಿದ ಕಾನೂನಿಗೂ, ಮುಸ್ಲಿಮರಿಗೂ ಏನು ಸಂಬಂಧ.? ಡಾ.ಬಿ ಆರ್ ಅಂಬೇಡ್ಕರ್ ರವರು ರಚಿಸಿದ ಸಂವಿಧಾನದ ಅಡಿಯಲ್ಲಿ ಯಾವ ಕಾನೂನು ತಂದರು ಮುಸ್ಲಿಂ ಸಮುದಾಯ ಸ್ವಾಗತಿಸುತ್ತದೆ ಮತ್ತು ಅದನ್ನು ಪಾಲಿಸುತ್ತದೆ. ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗಾಗಿ ಆಡಳಿತ ಸರಕಾರ ಏನಾದರೂ ಕಾನೂನು ತಂದಲ್ಲಿ, ಅದಕ್ಕೆ ಬಡಬಡಾಯಿಸುವ ವಿರೋಧಪಕ್ಷಗಳು ಎಳೆದು ತರುವುದು ಮುಸ್ಲಿಮರನ್ನು. ಹೋಗಲಿ ಬಿಡಿ ವಿರೋಧ ಪಕ್ಷಗಳಿಗೆ ಕೇವಲ ಜಾತಿ ಆಧಾರದಲ್ಲಿ ರಾಜಕೀಯ ಮಾಡಿಕೊಂಡು ದಿನ ದೂಡುವ ವಿಷಯ ಮತದಾರ ಬಾಂಧವರಿಗೆ ಚೆನ್ನಾಗಿ ಅರ್ಥ ಆಗಿಬಿಟ್ಟಿದೆ. ಸರ್ಕಾರ […]

Continue Reading

ಮಂಗಳೂರು: ನಗರದ ಅಪಾರ್ಟ್ ಮೆಂಟ್ ನ ಮೂರು ಪ್ಲಾಟ್ ನಲ್ಲಿ ಕಳ್ಳತನ. 20 ಲಕ್ಷ ಮೌಲ್ಯದ ಚಿನ್ನಾಭರಣ, ನಗದು, ವಿದೇಶಿ ಕರೆನ್ಸಿ ಮತ್ತು ಮೊಬೈಲ್ ಫೋನ್ ಕಳವು

ಪೊಲೀಸರ ಶೀಘ್ರ ಕಾರ್ಯಾಚರಣೆ; ಕಳವುಗೈದ ಆರೋಪಿಗಳನ್ನು 20 ಗಂಟೆಯೊಳಗೆ ಬಂಧನ. ಚಿನ್ನಾಭರಣ, ನಗದು, ವಿದೇಶಿ ಕರನ್ಸಿ ವಶ ಮಂಗಳೂರು ನಗರದ ಲಾಲ್ ಬಾಗ್ ಹ್ಯಾಟ್ ಹಿಲ್ ನ ಅಪಾರ್ಟ್ ಮೆಂಟ್ ನ ಮೂರು ಪ್ಲಾಟ್ ಗಳಲ್ಲಿ ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಹಣ,ವಿದೇಶಿ ಕರೆನ್ಸಿ ಮತ್ತು ಮೊಬೈಲ್ ಫೋನ್ ಕಳವು. ಪೊಲೀಸರ ಶೀಘ್ರ ಕಾರ್ಯಾಚರಣೆಯಿಂದ ಕಳವು ಮಾಡಿದ ಇಬ್ಬರು ಆರೋಪಿಗಳನ್ನು 20 ಗಂಟೆಯ ಒಳಗೆ ಬಂಧನ. ಚಿನ್ನಾಭರಣ, ನಗದು ಹಾಗೂ 3000 ವಿದೇಶಿ ಕರನ್ಸಿ […]

Continue Reading

ಮುಂದಿನ ನವೆಂಬರ್ ತಿಂಗಳಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ 2025 ರ 4ನೇ ಮಿನಿ ಒಲಿಂಪಿಕ್ ಕ್ರೀಡಾಕೂಟ

ದಕ್ಷಿಣ ಕನ್ನಡ ಜಿಲ್ಲೆಯಿಂದ 5 ಮಂದಿ ಟ್ವೆಕಾಂಡೋ ಕ್ರೀಡಾಪಟುಗಳು ಆಯ್ಕೆ ಮಂಗಳೂರು: ಮುಂದಿನ ನವೆಂಬರ್ ತಿಂಗಳಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ 2025 ರ 4ನೇ ಮಿನಿ ಒಲಿಂಪಿಕ್ ಕ್ರೀಡಾಕೂಟಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ 5 ಮಂದಿ ಟ್ವೆಕಾಂಡೋ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. 35 ಕೆಜಿಗಿಂತ ಕೆಳಗಿನ ವಿಭಾಗದಲ್ಲಿ ಸುರತ್ಕಲ್ ಕೋಡಿಕೆರೆ ನಿವಾಸಿ ಆದರ್ಶ್ (ಮಹೇಶ್ ಹನುಮಪ್ಪ-ವಿಜಯಲಕ್ಷ್ಮಿ ದಂಪತಿಯ ಪುತ್ರ), 39 ಕೆಜಿ ವಿಭಾಗದಲ್ಲಿ ಬೈಕಂಪಾಡಿ ನಿವಾಸಿ ಆಶಿಶ್ ಧಾಮಿ (ಲಲಿತ್ ಧಾಮಿ-ಲಕ್ಷ್ಮಿ ಧಾಮಿ ದಂಪತಿಯ ಪುತ್ರ), 38 […]

Continue Reading

ಅಂಡರ್ ವರ್ಲ್ಡ್ -ಪಾಲಿಟಿಕ್ಸ್-ಫಿಲಂ; ಶೆಟ್ಟಿ ಗ್ಯಾಂಗ್ ಧರ್ಬಾರ್.!

ಕರಾವಳಿ ಭಾಗದಲ್ಲಿ ಉದ್ಯಮ, ರಾಜಕಾರಣ ಬಂಟರದ್ದೇ ಪ್ರಾಬಲ್ಯ. ಇದೀಗ ಕನ್ನಡ ಸಿನಿ ರಂಗದಲ್ಲೂ ಶೆಟ್ಟಿ ಗ್ಯಾಂಗ್ ಪ್ರಾಬಲ್ಯ ಹೊಂದಿದ್ದು ಫಿಲಂ ಇಂಡಸ್ಟ್ರೀಯನ್ನು ಬಂಟರು ಆಳುತ್ತಿದ್ದಾರೆ. ಪ್ರಖ್ಯಾತ ಉದ್ಯಮಿಗಳು, ರಾಜಕಾರಣಿಗಳು, ವೈದ್ಯರುಗಳು, ವಕೀಲರು, ಸಿನಿಮಾ ತಾರೆಯರು ಹೀಗೆ ಬಂಟರು ತಮ್ಮದೇ ಆದ ಪ್ರಾಬಲ್ಯ ಹೊಂದಿದ್ದಾರೆ. ಅದೇ ರೀತಿ ಕರಾವಳಿಯ ಪಾತಕ ಜಗತ್ತಿನಲ್ಲಿ ಬಂಟರ ಹುಡುಗರ ಸದ್ದು ಕಮ್ಮಿಯೇನಿಲ್ಲ. ಅಂಡರ್ ವರ್ಲ್ಡ್, ಪಾಲಿಟಿಕ್ಸ್, ಫಿಲಂ ಎಲ್ಲದರಲ್ಲೂ ಬಂಟರದ್ದೇ ಕಾರ್ಬಾರು. ನಿಮಗೆ ತಿಳಿದಿರಲಿ. ಭೂಗತ ಜಗತ್ತಿನಲ್ಲಿ ಮೆರೆದ ಅತ್ಯಂತ ಸ್ಫುರದ್ರೂಪಿ ಬಂಟರ […]

Continue Reading

ಜನಸಾಮಾನ್ಯರನ್ನು ಸತಾಯಿಸುತ್ತಿರುವ ನಗರ ಮತ್ತು ಗ್ರಾಮಾಂತರ ಇಲಾಖೆ ನಾಲಾಯಕ್ ಅಧಿಕಾರಿಗಳು

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಉಳ್ಳಾಲ, ಮೂಡಬಿದ್ರೆ, ಬಂಟ್ವಾಳ, ಪುತ್ತೂರು, ಕಡಬ, ಬೆಳ್ತಂಗಡಿ, ಸುಳ್ಯ ಹೀಗೆ ಇರುವ ಎಲ್ಲಾ ತಾಲೂಕುಗಳ ಗ್ರಾಮಾಂತರ ಏಕೆ ವಿನ್ಯಾಸ, ತಾಂತ್ರಿಕ ಅನುಮೋದನೆ, ಕಟ್ಟಡ ಅನುಮೋದನೆ, ಅಭಿವೃದ್ಧಿ ಇವೆಲ್ಲ ನಗರ ಮತ್ತು ಗ್ರಾಮಾಂತರ ಇಲಾಖೆಗೆ ಬರುತ್ತದೆ. ಇದರ ಹೆಡ್ ಆಫೀಸ್ ಇರುವುದೇ ಪಡೀಲ್ ಜಿಲ್ಲಾಧಿಕಾರಿ ಕಚೇರಿಯಲ್ಲಿ. ಇದರ ಸಹಾಯಕ ನಿರ್ದೇಶಕ ಆಗಿರುವಾಕೆ ಸ್ವಾತಿ. ಈ ಇಲಾಖೆಯಲ್ಲಿ ಮಣ್ಣಾಂಗಟ್ಟಿ ಯಾವ ಕೆಲಸನೂ ಆಗುತ್ತಿಲ್ಲ. ಜನಸಾಮಾನ್ಯರು ಕಚೇರಿಗೆ ಅಲೆದಾಡುವುದೇ ಆಗಿದೆ. ಪಂಚಾಯತ್ ನಿಂದ ಈ ಇಲಾಖೆಗೆ […]

Continue Reading

ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಹಲವಾರು ವಂಚನೆ ಪ್ರಕರಣಗಳಲ್ಲಿ ಭಾಗಿಯಾದ ಮಹಾ ವಂಚಕಿಯನ್ನು ಬಂಧಿಸಿದ ಬರ್ಕೆ ಠಾಣೆ ಪೊಲೀಸರು

ಪ್ರತಿಷ್ಠಿತ ಚಿನ್ನಾಭರಣಗಳ ಹಾಗೂ ಎಲೆಕ್ಟ್ರಾನಿಕ್ ಅಂಗಡಿಗೆ ಮೋಸ, ಬರೋಬ್ಬರಿ 9 ವಂಚನೆ ಪ್ರಕರಣಗಳು ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ದಾಖಲಾದ ಹಲವಾರು ವಂಚನೆ ಪ್ರಕರಣಗಳಲ್ಲಿ ಭಾಗಿಯಾದ ಮಹಾ ವಂಚಕಿಯೊಬ್ಬಳನ್ನು ಬರ್ಕೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈಕೆಯ ವಿರುದ್ದ ಬರೋಬ್ಬರಿ 9 ವಂಚನೆ ಪ್ರಕರಣಗಳು ದಾಖಲಾಗಿವೆ. ಬರ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಖ್ಯೆ: 77-2025 ಪ್ರಕರಣದಲ್ಲಿ ಪಿರ್ಯಾದಿ ಜಯರಾಯ ರವರು ಮಂಗಳೂರು ನಗರದ ಎಂಪಾಯರ್ ಮಾಲ್ ನಲ್ಲಿ ಲ್ಯಾಪ್ ಟಾಪ್ ಬಜಾರ್ ಎಂಬ ಸ್ಟೋರ್ ಇಟ್ಟುಕೊಂಡು ಎಲ್ಲಾ […]

Continue Reading

ಪುತ್ತೂರು ಆಟೋ ಚಾಲಕನ ಮೇಲೆ ಹಲ್ಲೆ ಆರೋಪ, ಇಬ್ಬರು ಸಂಚಾರಿ ಪೊಲೀಸರ ಅಮಾನತು

ಪುತ್ತೂರು: ಆಟೋ ಚಾಲಕನ ಮೇಲೆ ಹಲ್ಲೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಸಂಚಾರ ಪೊಲೀಸರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಅಕ್ಟೋಬರ್ 17ರಂದು ಸಂಜೆ ಆಟೋ ಚಾಲಕ ಬಶೀರ್ ಕುರಿಯ ಎಂಬವರು ಸಮವಸ್ತ್ರ ಧರಿಸದೆ ಆಟೋ ಚಲಾಯಿಸುತ್ತಿದ್ದಾಗ, ಕರ್ತವ್ಯದಲ್ಲಿದ್ದ ಪುತ್ತೂರು ಸಂಚಾರ ಠಾಣೆಯ ಎಎಸ್‌ಐ ಚಿದಾನಂದ ರೈ ಹಾಗೂ ಸಿಪಿಸಿ ಶೈಲ ಎಂ.ಕೆ. ಅವರು ಕೈಸನ್ನೆ ಮೂಲಕ ನಿಲ್ಲಿಸಲು ಸೂಚಿಸಿದ್ದರು. ಆದರೆ ಚಾಲಕ ಆಟೋ ನಿಲ್ಲಿಸದೇ ವೇಗವಾಗಿ ಚಲಾಯಿಸಿದ ಕಾರಣ ಮೋಟಾ‌ರ್ ವಾಹನ ಕಾಯ್ದೆ ಉಲ್ಲಂಘನೆಯಾಗಿದೆ. ಈ ವೇಳೆ […]

Continue Reading