EXCLUSIVE ಮಂಗಳೂರು: ಬ್ಲಡ್ ದಂಧೆ ಮಹಾಮೋಸ

ಮಂತ್ರಿಗಳೇ ‘ರಕ್ತ’ದಲ್ಲೂ ವ್ಯಾಪಾರವೇ.? ರಕ್ತದಾನ ಮಹಾದಾನ ಅನ್ನುತ್ತೇವೆ. ರಕ್ತದಾನಕ್ಕಿಂತ ಇನ್ನೊಂದು ದೊಡ್ಡ ಇಲ್ಲ. ರಕ್ತದಾನ ಅನ್ನುವುದು ಇನ್ನೊಂದು ಜೀವವನ್ನು ಉಳಿಸುವ ಮಹತ್ಕಾರ್ಯ. ಆದರೆ ನಾವು ಕೊಟ್ಟ ರಕ್ತವನ್ನೇ ದಂಧೆಯಾಗಿ ಪರಿವರ್ತಿಸುವ ಜಾಲ ಮಂಗಳೂರಿನಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದೆ ಅನ್ನುವ ಸ್ಪೋಟಕ ವಿಚಾರಗಳು ಹೊರಬರುತ್ತಿದೆ. ಮೆಡಿಕಲ್ ಮಾಫಿಯಾ, ಎಜ್ಯುಕೇಶನ್ ಮಾಫಿಯಾ ರೀತಿ ಬ್ಲಡ್ ಮಾಫಿಯಾ ದಂಧೆ ನಗರದಲ್ಲಿ ಭರ್ಜರಿಯಾಗಿ ಕಾರ್ಯಾಚರಿಸುತ್ತಿದೆ. ಸ್ಪೆಷಲ್ ನ್ಯೂಸ್ ಮೀಡಿಯಾ ಈ ಬಗ್ಗೆ ತನಿಖಾ ವರದಿಗೆ ಇಳಿದಾಗ ಬೆಚ್ಚಿಬೀಳಿಸುವ ಸಂಗತಿ ಒಂದೊಂದಾಗಿ ಹೊರಬರುತ್ತಿದೆ. ಅಷ್ಟಕ್ಕೂ […]

Continue Reading

“ಮಂಗಳೂರಿಗೆ ಹೈಕೋರ್ಟ್ ಪೀಠ ಬರಲಿ, ಜೊತೆಗೆ ಜಿಲ್ಲಾ ಕೋರ್ಟ್ ಗಳಲ್ಲೂ ರಿಟ್ ಅಪೀಲ್ ಅವಕಾಶ ಸಿಗಲಿ”

ಸ್ಥಳೀಯರ ಅವಶ್ಯಕತೆಗಳಿಗೆ ಆದ್ಯತೆ ನೀಡಲು ಪ್ರಧಾನಿ, ಕಾನೂನು ಸಚಿವರಿಗೆ ಕರಾವಳಿ ಜಿಲ್ಲೆಯ ವಕೀಲರ ಮನವಿ.. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಹೊಸ ಸಂಚಲನ ಮಂಗಳೂರು: ಕರಾವಳಿ ಕರ್ನಾಟಕಕ್ಕೆ ಪ್ರತ್ಯೇಕ ಹೈಕೋರ್ಟ್ ಪೀಠ ಬೇಕೆಂಬ ಕೂಗು ಮತ್ತೆ ಕೇಳಿಬಂದಿದೆ. ಇದರ ಜೊತೆಯಲ್ಲೇ, ರಿಟ್ ಅಪೀಲ್ ಸಂಬಂಧದ ಪ್ರಕರಣಗಳನ್ನು ಜಿಲ್ಲಾ ನ್ಯಾಯಾಲಯಗಳಲ್ಲಿ ನಡೆಸಲು ಅನುಕೂಲವಾಗುವಂತೆ ಕಾನೂನಿಗೆ ತಿದ್ದುಪಡಿ ತರುವಂತೆಯೂ ಮಂಗಳೂರಿನ ವಕೀಲರ ಸಮೂಹ ಒತ್ತಾಯಿಸಿದೆ. ವಕೀಲರ ಈ ಆಗ್ರಹ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂಚಲನ ಸೃಷ್ಟಿಸಿದೆ. ಈ ಸಂಬಂಧ ಮಂಗಳೂರಿನಲ್ಲಿ ಮಾಜಿ […]

Continue Reading

ಕಾರು, ಬೈಕು, ಫ್ಲ್ಯಾಟ್, ಸೈಟ .. ಕೋಟಿ ಕೋಟಿ ಉಂಡೆನಾಮ ಹಾಕಿದ ಖದೀಮರು ಅಂದರ್

ಸಾರ್ವಜನಿಕರ ದುಡ್ಡಿನಲ್ಲಿ ನ್ಯೂ ಶೈನ್, ನ್ಯೂ ಇಂಡಿಯಾ ವಂಚಕರ ರಾಯಲ್ ಬದುಕು.. ಪೊಲೀಸರಿಂದ ಆಸ್ತಿ ಜಪ್ತಿ ಕಾರು, ಬೈಕು, ಫ್ಲ್ಯಾಟ್, ಸೈಟ್, ಉಂಗುರ ಹೀಗೆ ಲಕ್ಕಿ ಸ್ಕೀಮ್ ಹೆಸರಿನಲ್ಲಿ ಆಮಿಷ ತೋರಿಸಿ ಪೂರ್ತಿ ಮುಂಡಾಮೋಚಿದ ನಾಲ್ವರು ಲಕ್ಕಿ ಸ್ಕೀಮ್ ವಂಚಕರು ಸುರತ್ಕಲ್ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸಾರ್ವಜನಿಕರ ದುಡ್ಡಿನಲ್ಲಿ ಐಷಾರಾಮಿ ಬದುಕು ಸಾಗಿಸುತ್ತಿದ್ದವರ ಮುಖವಾಡ ಬಯಲಾಗಿದೆ. ಕಾಟಿಪಳ್ಳ 2ನೇ ಬ್ಲಾಕ್ ಸಂಶುದ್ದೀನ್ ಸರ್ಕಲ್ ಬಳಿ ಇರುವ ಬಿ.ಎಂ.ಆರ್ ಕಟ್ಟಡದಲ್ಲಿರುವ ನ್ಯೂ ಇಂಡಿಯಾ ಕಚೇರಿ ತೆರೆದು ಪ್ರತೀ ತಿಂಗಳು […]

Continue Reading

ಕಾಶಿಪಟ್ನ ಸರಕಾರಿ ಪ್ರೌಢಶಾಲೆಗೆ ವಾಟರ್ ಕೂಲರ್ ನೀಡಿ, ಮಕ್ಕಳ ದಾಹ ತೀರಿಸಿದ, ಸಾಮಾಜಿಕ ಕಳಕಳಿಯ ಬಿ ಹ್ಯೂಮನ್ ಟ್ರಸ್ಟ್ ಅಧ್ಯಕ್ಷ ಶರೀಫ್ ಹಾಜಿ ಜೋಕಟ್ಟೆ

ನಮ್ಮ ನಡುವೆ ಅಗರ್ಭ ಶ್ರೀಮಂತರು ನೂರಾರು ಮಂದಿ ಇರಬಹುದು. ಆದರೆ ಹೃದಯವಂತ ಶ್ರೀಮಂತರ ಸಂಖ್ಯೆ ಮಾತ್ರ ಬೆರಳೆಣಿಕೆಯದ್ದು. ಅಂತಹ ಹೃದಯವಂತ ಶ್ರೀಮಂತರಲ್ಲಿ ಶರೀಫ್ ಹಾಜಿ ಜೋಕಟ್ಟೆ ಕೂಡ ಒಬ್ಬರು. ಜನಮಾನಸದಲ್ಲಿ ವೈಟ್ ಸ್ಟೋನ್ ಶರೀಫ್ ಎಂದೇ ಜನಪ್ರಿಯರು. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ರಂಗದಲ್ಲಿ ತನ್ನದೇ ಆದ ಕೊಡುಗೆ ನೀಡಿರುವ ಶರೀಫ್ ಜೋಕಟ್ಟೆ ಸಮುದಾಯದ ಹಿತ ಮತ್ತು ಶಿಕ್ಷಣದ ಪ್ರಗತಿಗಾಗಿ ನಿರಂತರ ಕಾರ್ಯನಿರ್ವಹಿಸುತ್ತಿದ್ದಾರೆ. ಸಮುದಾಯದ ಶೈಕ್ಷಣಿಕ ಏಳಿಗೆಗಾಗಿ ರಚಿಸಲ್ಪಟ್ಟ ಅನೇಕ ಸಂಘ ಸಂಸ್ಥೆಗಳಲ್ಲಿ ಮುಂಚೂಣಿಯ ನಾಯಕತ್ವ ವಹಿಸಿಕೊಂಡಿದ್ದಾರೆ. ಬಿ […]

Continue Reading

ಮಂಗಳೂರು: ದೇರಳಕಟ್ಟೆಯ ಮುತ್ತೂಟ್ ಪೈನಾನ್ಸ್ ಬ್ಯಾಂಕ್ ಕಳ್ಳತನ ಯತ್ನ ಪ್ರಕರಣ; ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯ ಬಂಧನ

ಮಂಗಳೂರು ನಗರ ಸಿಸಿಬಿ ಪೊಲೀಸರ ಕಾರ್ಯಾಚರಣೆ ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯ ದೇರಳಕಟ್ಟೆ ಎಂಬಲ್ಲಿರುವ ಮುತ್ತೂಟ್ ಪೈನಾನ್ಸ್ ನಲ್ಲಿ ಕಳ್ಳತನಕ್ಕೆ ಪ್ರಯತ್ನ ನಡೆಸಿದ ಪ್ರಕರಣದಲ್ಲಿ ಬಂಧನವಾಗದೆ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಮಂಗಳೂರು ನಗರದ ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ. ಈ ಪ್ರಕರಣದಲ್ಲಿ ಕೇರಳ ಇಡುಕ್ಕಿ ಮೂಲದ ಮುರಳಿ ಮತ್ತು ಕಾಂಞಿಗಾಡ್ ಎಂಬಲ್ಲಿಯ ಆರ್ಷದ್ ಎಂಬವರು ಈಗಾಗಲೇ ಬಂಧನವಾಗಿರುತ್ತದೆ. ಪ್ರಕರಣದಲ್ಲಿ ಪತ್ತೆಯಾಗದೇ ತಲೆಮರೆಸಿಕೊಂಡಿದ್ದ ಹಾಗೂ ಈ ಹಿಂದೆ ನಡೆದ ರಾಜಧಾನಿ ಜುವೆಲ್ಲರಿಯಲ್ಲಿ ಕಳ್ಳತನ ಹಾಗೂ ಕೇರಳ […]

Continue Reading

ಮಂಗಳೂರು: ಕಸ್ಟಮ್ಸ್ ಅಧಿಕಾರಿಯ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ ಅಪಹರಿಸಿ 350 ಗ್ರಾಂ ಚಿನ್ನ ದರೋಡೆ

ಕೃತ್ಯ ಭೇದಿಸಿದ ಪೊಲೀಸರು; ಐವರು ಅಂದರ್ ಆಗಸ್ಟ್ 13 ರಂದು ಮಂಗಳೂರಿನಲ್ಲಿ ನಡೆದಿದ್ದ ಆಭರಣ ವ್ಯಾಪಾರಿಯ ಅಪಹರಣ ಮತ್ತು ದರೋಡೆ ಪ್ರಕರಣ ಭೇದಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರ ಪ್ರಕಾರ, ಆಗಸ್ಟ್ 13 ರಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ, ದೂರುದಾರ ಹರಿ ಭಾನುದಾಸ್ ಥೋರಟ್, ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದ ಬಳಿಯ ಕೈರಾಲಿ ಹೋಟೆಲ್ ಬಳಿ ಆಟೋಗಾಗಿ ಕಾಯುತ್ತಿದ್ದರು. ಆ ಸಮಯದಲ್ಲಿ, ಆರು ಅಪರಿಚಿತ ವ್ಯಕ್ತಿಗಳು ಬಿಳಿ ಇನ್ನೋವಾ ಕಾರಿನಲ್ಲಿ ಆಗಮಿಸಿ, ತಮ್ಮನ್ನು ಕಸ್ಟಮ್ಸ್ ಅಧಿಕಾರಿಗಳೆಂದು […]

Continue Reading

ಉಪ್ಪಿನಂಗಡಿ ಪೊಲೀಸರ ಕಾರ್ಯಾಚರಣೆ: ಚಿನ್ನದ ಸರ ಕಸಿದ ಆರೋಪಿಯ ಬಂಧನ, 5,05,000 ರೂ. ಮೌಲ್ಯದ ಸೊತ್ತು ವಶ

ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಯಾಡಿ, ಪಡುಬೆಟ್ಟು ಎಂಬಲ್ಲಿ ದಿನಾಂಕ 04-06-2025 ರಂದು ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು, ಬೈಕಿನಲ್ಲಿ ಬಂದಿದ್ದ ಇಬ್ಬರು ಅಪರಿಚಿತರು ಎಳೆದು ಬಲವಂತವಾಗಿ ಕಸಿದುಕೊಂಡು ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಉಪ್ಪಿನಂಗಡಿ ಠಾಣಾ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ, ಸುಳ್ಯ ಆಲೆಟ್ಟಿ ನಿವಾಸಿ ಅಬ್ದುಲ್ ರೆಹಮಾನ್ ಎಂಬಾತನನ್ನು ಪುತ್ತೂರು, ನೆಕ್ಕಿಲಾಡಿ ಸಮೀಪ ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ಆರೋಪಿತನಿಂದ ಅಂದಾಜು 4,54,000 ರೂ. ಮೌಲ್ಯದ ಚಿನ್ನದ […]

Continue Reading

ಮೂಡಬಿದ್ರೆ: ಕಿಡ್ನಿ ರೋಗಿಯ ನೆರವಿಗೆ ನೀಡಿದ ಚರ್ಚ್ ಪತ್ರದ ದುರುಪಯೋಗ; ಆರೋಪಿ ವಿನೋದ್ ವಾಲ್ಟರ್ ಪಿಂಟೋ ವಿರುದ್ಧ ಪ್ರಕರಣ ದಾಖಲು

ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಹೋಲಿ ಕ್ರಾಸ್ ಚರ್ಚ್ ತಾಕೊಡೆ ಕಿಡ್ನಿ ರೋಗಿಯೊಬ್ಬರಿಗೆ ಆರ್ಥಿಕ ನೆರವು ನೀಡುವಂತೆ ಕೋರಿ ನೀಡಿದ್ದ ಪತ್ರವನ್ನು ದುರುಪಯೋಗ ಪಡಿಸಿಕೊಂಡು ಹಣ ವಸೂಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗಸ್ಟ್ 18 ರಂದು ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೋಲಿ ಕ್ರಾಸ್ ಚರ್ಚ್ ಆರ್ಥಿಕ ಸಮಿತಿ ಸದಸ್ಯರಾದ ಐವಿ ಕ್ರಾಸ್ತಾ ಎಂಬವರು ದೂರು ನೀಡಿದ್ದು ಆರೋಪಿ ವಿನೋದ್ ವಾಲ್ಟರ್ ಪಿಂಟೋ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣದ ಸಾರಾಂಶ ತಾಕೋಡೆ ಚರ್ಚ್ ಗುರುಗಳಾದ ಫಾ/ […]

Continue Reading

ಪುತ್ತೂರು: ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಪ್ರಕರಣ: ಆರೋಪಿ ದಯಾನಂದ ನಾಯ್ಕನ ಬಂಧನ, ಸೊತ್ತುಗಳ ವಶ

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ನಡೆದ, ಸುಮಾರು 31 ಗ್ರಾಂ ಬಂಗಾರ ಮತ್ತು ರೂ.5000 ನಗದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಪ್ರಕರಣದ ಆರೋಪಿಯಾದ ಪುತ್ತೂರು, ನೆಟ್ಟಣಿಗೆ ಮುಡೂರು ಗ್ರಾಮದ ನಿವಾಸಿ ದಯಾನಂದ್ ನಾಯ್ಕ ಎಂ (29)ಎಂಬಾತನನ್ನು ಈಶ್ವರಮಂಗಲ ಎಂಬಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ದಯಾನಂದ ನಾಯ್ಕ್ ಕಳವುಗೈದ 30.120 ಗ್ರಾಂ ಚಿನ್ನ ಮತ್ತು ಪ್ರಕರಣಕ್ಕೆ ಉಪಯೋಗಿಸಿದ ಡಿಸ್ಕವರಿ ಬೈಕ್ ನ್ನು ಆರೋಪಿಯಿಂದ ಪೊಲೀಸರು ವಶಪಡಿಸಿಕೊಂಡಿರುತ್ತಾರೆ. […]

Continue Reading

ಬೆಳ್ಳಾರೆ: ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ಆರೋಪಿ ಉನ್ಮೇಶನ ದಸ್ತಗಿರಿ

ಬೆಳ್ಳಾರೆ ಪೊಲೀಸ್ ಠಾಣಾ ಅ.ಕ್ರ. ಸಂಖ್ಯೆ: 56/2020, ಕಲಂ: 457, 380 r/w 34 ಐ.ಪಿ.ಸಿ (ಕಳವು) ಪ್ರಕರಣದಲ್ಲಿ ಆರೋಪಿಯಾಗಿ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ, ವಾರೆಂಟ್ ಜಾರಿಯಾಗಿದ್ದರೂ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ಆರೋಪಿ ಉನ್ಮೇಶ ಎಂಬಾತನನ್ನು, ಬೆಳ್ಳಾರೆ ಠಾಣಾ ಪೊಲೀಸರು ಕೇರಳ ರಾಜ್ಯದಲ್ಲಿ ದಸ್ತಗಿರಿ ಮಾಡಿ, ದಿನಾಂಕ: 17.08.2025ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ಮಾನ್ಯ ನ್ಯಾಯಾಲಯವು ಆರೋಪಿ ಉನ್ಮೇಶನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

Continue Reading