ಬುದ್ಧಿವಂತರ ಜಿಲ್ಲೆಯಲ್ಲಿ ಲಕ್ಕಿ ಸ್ಕೀಮ್ ಉಂಡೆನಾಮ.!

ಲಕ್ಕಿ ಸ್ಕೀಮ್‌ ಗೋಲ್‌ಮಾಲ್‌ ಬಟಾಬಯಲಾಗಿದೆ.ಪ್ರಸಿದ್ಧ ಸತ್ಯವಂತ ಸಂಸ್ಥೆ ನಮ್ಮದು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಕೆಲ ಲಕ್ಕೀ ಸ್ಕೀಮ್‌ ಕಂಪೆನಿಗಳ ಉಂಡೆನಾಮ ಪುರಾಣ ಹೊರಬಂದಿದೆ. ಅಮಾಯಕರಿಗೆ ಮೋಸ ಮಾಡಿ ಅವರ ಬದುಕು ಬೀದಿಗೆ ತರುವ ಈ ಲಕ್ಕೀ ಸ್ಕೀಮ್‌ಗಳ ಬಗ್ಗೆ ಬುದ್ಧಿವಂತರ ಜಿಲ್ಲೆಯ ಜನ ಇನ್ನಾದರೂ ಎಚ್ಚೆತ್ತುಕೊಳ್ಳಲಿ. ಲಕ್ಕಿ ಸ್ಕೀಮ್ ನಂಬಿದ್ರೆ ಉಂಡೆನಾಮ ಗ್ಯಾರಂಟಿ ಈ ಹಿಂದೆ ಡ್ರೀಮ್ ಹೆಸರಿನ ಲಕ್ಕಿ ಸ್ಕೀಮ್ ವೊಂದು ಲೈವಲ್ಲೇ ತಮಗೆ ಬೇಕಾದವರ ಹೆಸರಿನ ಚೀಟಿಯನ್ನು ಬೆರಳಿನ ಸಂಧಿಯಲ್ಲಿ ಬಚ್ಚಿಟ್ಟು ಅವರಿಗೆ ಲಕ್ಕಿ […]

Continue Reading

ಜಾತಿ-ಧರ್ಮಗಳ ಎಲ್ಲೆ ಮೀರಿ ಬ್ರಿಟಿಷರೊಂದಿಗೆ ಹೋರಾಡಿದ ಭಾರತೀಯರು ಅದೇ ಸೌಹಾರ್ದತೆಯನ್ನು ಮುಂದುವರಿಸಿದಾಗ ಮಾತ್ರ ಸ್ವಾತಂತ್ರ್ಯೋತ್ಸವಕ್ಕೆ ನಿಜಾರ್ಥ ಬರಲಿದೆ!

✍️ – ಪಿ.ಎಂ.ಎ. ಪಾಣೆಮಂಗಳೂರು. ಭಾರತದ ಹೇರಳ ಸಂಪತ್ತನ್ನು ಕಂಡು ವ್ಯಾಪಾರದ ಉದ್ದೇಶವನ್ನಿಟ್ಟುಕೊಂಡು ಭಾರತಕ್ಕೆ ಬಂದ ಬ್ರಿಟಿಷರು ತಮ್ಮ ಜಾಣ್ಮೆ, ದಬ್ಬಾಳಿ-ಕ್ರೌರ್ಯದಿಂದ ಇಡೀ ದೇಶದ ಅಧಿಪತ್ಯವನ್ನು ಸ್ಥಾಪಿಸಿದ ಕತೆ ಪ್ರತೀ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲೂ ಭಾಷಣದ ರೂಪದಲ್ಲಿ ಮೊಳಗುತ್ತಲೇ ಇದೆ. ಈ ರೀತಿಯಾಗಿ ಭಾರತಕ್ಕೆ ಬಂದ ಬ್ರಿಟಿಷರು ಬಳಿಕ ಸಮಸ್ತ ಭಾರತೀಯರನ್ನು ಗುಲಾಮರನ್ನಾಗಿಸಿ ದೇಶವನ್ನಾಳಿದ ಬಿಳಿಯರನ್ನು ಒದ್ದೋಡಿಸಲು ಭಾರತೀಯರು ಸುದೀರ್ಘ ಕಾಲದ ಹೋರಾಟವನ್ನು ನಡೆಸಬೇಕಾಗಿ ಬಂದಿರುವುದೆಲ್ಲವೂ ಇತಿಹಾಸ. ವರ್ಷಾನುಗಟ್ಟಲೆ ಬ್ರಿಟಿಷರ ದಾಸ್ಯದಲ್ಲಿ ಜೀವಿಸಿದ ಭಾರತೀಯರಿಗೆ ಕಾಲಕ್ರಮೇಣ ಇವರ ದಬ್ಬಾಳಿಕೆ, […]

Continue Reading

ಕಂಕನಾಡಿ ನಗರ ಪೊಲೀಸ್ ಠಾಣೆ ಮತ್ತು ಮಂಗಳೂರು ಗ್ರಾಮಾಂತರ (ವಾಮಂಜೂರು) ಠಾಣೆಗಳ ವ್ಯಾಪ್ತಿಯ ಗ್ರಾಮಗಳು ಮರುವಿಂಗಡನೆ

ಯಾವ್ಯಾವ ಗ್ರಾಮಗಳು ಯಾವ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಲಿದೆ; ಇಲ್ಲಿದೆ ಪುಲ್ ಡೀಟೇಲ್ಸ್ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಮಂಗಳೂರು ಗ್ರಾಮಾಂತರ (ವಾಮಂಜೂರು) ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಅಡ್ಯಾರ್ ಮತ್ತು ಅರ್ಕುಳ ಗ್ರಾಮಗಳನ್ನು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಹಾಗೂ ಕಂಕನಾಡಿ ನಗರ ಠಾಣಾ ವ್ಯಾಪ್ತಿಯ ಪದವು ಗ್ರಾಮವನ್ನು ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಗೆ ಮರುವಿಂಗಡಿಸಿ ಸರಕಾರ ಅಧಿಸೂಚನೆಯನ್ನು ಹೊರಡಿಸಿದೆ. ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಸಂಬಂಧಿಸಿದಂತೆ ಪದವು ಗ್ರಾಮಕ್ಕೆ ಒಳಪಡುವ […]

Continue Reading

ಸಾಮಾಜಿಕ ಜಾಲತಾಣದಲ್ಲಿ ಅವಮಾನಕಾರಿ‌ ಸಂದೇಶ ಪ್ರಸಾರ; 5 ಮಂದಿ ವಿರುದ್ದ ಪ್ರಕರಣ ದಾಖಲು

ದ.ಕ: ಹುಬ್ಬಳ್ಳಿ ಚಬ್ಬಿ ಗ್ರಾಮದ ನಿವಾಸಿ ಅಜಿತ್ ನಾಗಪ್ಪ ಬಸಾಪುರ್ (32) ಎಂಬವರ ದೂರಿನಂತೆ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಎಂಬಲ್ಲಿ, ಪ್ರಕರಣದ ಆರೋಪಿತನಾದ ಗಿರೀಶ ಮಟ್ಟೆಣ್ಣ ಎಂಬವರು ಜೈನ ಧರ್ಮಕ್ಕೆ ಮತ್ತು ಜೈನ ಧರ್ಮೀಯರ ಭಾವನೆಗಳಿಗೆ ಅವಮಾನಪಡಿಸುವ ಉದ್ದೇಶದಿಂದ ಕುಡ್ಲ ರಾಂಪೇಜ್ ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ, ಜೈನರು ಹಾಗೂ ಜೈನ ಧರ್ಮದವರ ಬಗ್ಗೆ ತುಚ್ಚವಾಗಿ ಮಾತನಾಡಿರುತ್ತಾರೆ ಹಾಗೂ ಪ್ರಕರಣದ ಮತ್ತೋರ್ವ ಆರೋಪಿ ಕುಡ್ಲ ರಾಂಪೇಜ್ ಚಾನೆಲ್ ಮಾಲೀಕನು ಸದ್ರಿ ಸಂದರ್ಶನದ […]

Continue Reading

ಸಂಬಂಧಿಕ ಯುವಕನಿಂದಲೇ ಲೈಂಗಿಕ ದೌರ್ಜನ್ಯ; ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ: ಮಗು ಸಾವು

ಅಪ್ರಾಪ್ತೆಯೊಬ್ಬಳು ಮಗುವಿಗೆ ಜನ್ಮ ನೀಡಿದ ಹಾಗೂ ಮಗು ಜನನವಾದ ಒಂದು ದಿನದ ಬಳಿಕ ಮೃತಪಟ್ಟ ಘಟನೆ ಸುಬ್ರಹ್ಮಣ್ಯ ಠಾಣೆ ವ್ಯಾಪ್ತಿಯ ಕೊಲ್ಲಮೊಗ್ರುವಿನಲ್ಲಿ ನಡೆದಿದೆ. ಅಪ್ರಾಪ್ತೆಯೊಬ್ಬಳನ್ನು ಸಂಬಂಧಿಕನೇ ಗರ್ಭವತಿ ಮಾಡಿದ್ದ ಪ್ರಕರಣ ಇದಾಗಿತ್ತು. ಅಪ್ರಾಪ್ತೆ ಬಾಲಕಿ ಕಂದ್ರಪ್ಪಾಡಿ ಸಂಬಂಧಿಕರ ಮನೆಗೆ ಬಂದಿದ್ದಾಗ ಸಂಬಂಧಿಕ ಯುವಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಪರಿಣಾಮ ಆಕೆ ಗರ್ಭವತಿಯಾಗಿದ್ದಳು. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿ ಯುವಕನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಅಲ್ಲದೇ ಆರೋಪಿ ಯುವಕನನ್ನು ಬಂಧಿಸಲಾಗಿತ್ತು. ಗರ್ಭವತಿಯಾಗಿದ್ದ ಯುವತಿ ಸೋಮವಾರ […]

Continue Reading

ದಾಖಲೆಗಾಗಿ ಇಪ್ಪತ್ತು ಸಾವಿರ ಲಂಚ.., ಬಂಟ್ವಾಳ ತಾಲೂಕು ಮಿನಿ ವಿಧಾನಸೌಧಕ್ಕೆ ಲೋಕಾಯುಕ್ತ ದಾಳಿ

ಉಪತಹಶೀಲ್ದಾರ್, ಪ್ರಥಮ ದರ್ಜೆ ಸಹಾಯಕ, ಬ್ರೋಕರ್ ಅಂದರ್. ತಹಶೀಲ್ದಾರ್ ಗೆ ಹೆಚ್ಚಿನ ವಿಚಾರಣೆ. ಬಂಟ್ವಾಳ ತಾಲೂಕು ಕಛೇರಿಯ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತೊಮ್ಮೆ ಬಯಲಾಗಿದೆ. ಸಜಿಪ ಮುನ್ನೂರು ನಿವಾಸಿ ಪುಷ್ಪರಾಜ್ ಎಂಬವರಿಂದ ಜಮೀನಿನ ದಾಖಲೆ ಸರಿಪಡಿಸಲು ಬಿ.ಸಿ.ರೋಡ್ ಅನ್ನಪೂರ್ಣೇಶ್ವರಿ ದೇವಸ್ಥಾನ ಸಮೀಪ ಬ್ರೋಕರ್ ವಾಮದಪದವು ನಿವಾಸಿ ಗಣೇಶ್ ಎಂಬಾತನ ಮೂಲಕ ಇಪ್ಪತ್ತು ಸಾವಿರ ಲಂಚ ಪಡೆಯುತ್ತಿದ್ದ ಉಪತಹಶೀಲ್ದಾರ್, ಪ್ರಥಮ ದರ್ಜೆ ಸಹಾಯಕ ಸಂತೋಷ್ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ವಿಚಾರಣೆ ಸಂದರ್ಭ ತಹಶೀಲ್ದಾರ್ ಅರ್ಚನಾ ಭಟ್ ಅವರಿಗೆ ಪಾಲು […]

Continue Reading

ಯುಎಇ ಯಕ್ಷಗಾನ ಕೇಂದ್ರದಿoದ ಯಕ್ಷಗಾನಾರ್ಚಣೆ, ಯಕ್ಷದರ್ಪಣ ಬಿಡುಗಡೆ ಸಾಧಕರಿಗೆ ಯಕ್ಷಶ್ರೀರಕ್ಷಾ ಗೌರವಾರ್ಪಣೆ

ಯಕ್ಷಗಾನವನ್ನು ಇನ್ನಷ್ಟು ಶ್ರೀಮಂತಗೊಳಿಸಿದ ಯುಎಇ ಕನ್ನಡಿಗರು : ಡಾ.ತಲ್ಲೂರು ಉಡುಪಿ : ಕರಾವಳಿಯ ಶ್ರೀಮಂತ ಯಕ್ಷಗಾನ ಕಲೆಯನ್ನು ಯುಎಇಯಲ್ಲಿ ನೆಲೆಸಿರುವ ಕನ್ನಡಿಗರು, ತುಳುವರು ಅಲ್ಲಿಯೇ ಯಕ್ಷಗಾನ ಅಭ್ಯಾಸ ಕೇಂದ್ರವನ್ನು ಪ್ರಾರಂಭಿಸುವ ಮೂಲಕ ಈ ಕಲೆಯನ್ನು ಇನ್ನಷ್ಟು ಶ್ರೀಮಂತಗೊಳಿಸಿದ್ದಾರೆ ಎಂದು ಕರ್ನಾಟಕ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಭಾನುವಾರ ಶ್ರೀಕ್ಷೇತ್ರ ಕಟೀಲಿನ ರಥಬೀದಿಯ ಸರಸ್ವತಿ ಸದನದಲ್ಲಿ ಯುಎಇ -ಮಧ್ಯಪ್ರಾಚ್ಯದ ಏಕೈಕ ಮತ್ತು ಪ್ರಪ್ರಥಮ ಸಮಗ್ರ ಯಕ್ಷಗಾನ ಕಲಿಕಾ ಕೇಂದ್ರ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ […]

Continue Reading

ಅಸ್ಮಿತ ಖೇಲೋ ಇಂಡಿಯಾ ಕ್ರೀಡಾಕೂಟದ ಟ್ವೆಕಾಂಡೋ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಚಿನ್ನದ ಪದಕ

ಬೈಕಂಪಾಡಿ ಬೆಟ್ರಂಡ್ ರೆಸೆಲ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಸ್ವಪ್ನಾ ಐತಿಹಾಸಿಕ ದಾಖಲೆ ಬಂಟ್ವಾಳ: ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಅಸ್ಮಿತ ಖೇಲೋ ಇಂಡಿಯಾ ಕ್ರೀಡಾಕೂಟದ ಟ್ವೆಕಾಂಡೋ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಚಿನ್ನದ ಪದಕದ ಗೌರವ ದೊರೆತಿದೆ. ಬೈಕಂಪಾಡಿ ಬೆಟ್ರಂಡ್ ರೆಸೆಲ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಸ್ವಪ್ನಾ ಅವರು ಈ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಸ್ವಪ್ನಾ ಅವರು ಕೆಡೆಟ್ ಮಹಿಳಾ ಅಂಡರ್-33 ಕೆಜಿ ಟೆಕ್ವಾಂಡೋ […]

Continue Reading

ಧರ್ಮಸ್ಥಳ ಪ್ರಕರಣಕ್ಕೆ ಕೋಮು ಬಣ್ಣ ಬಳಿಯುವ ದುಷ್ಟ ಯತ್ನ: ವಸಂತ್ ಗಿಳಿಯಾರ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎಫ್ಐಆರ್

ಧರ್ಮಸ್ಥಳದಲ್ಲಿ ನಡೆಯುತ್ತಿದ್ದ ಅಸಹಜ ಸಾವಿನ ಪ್ರಕರಣ, ಬೆಚ್ಚಿಬೀಳಿಸುವ ಸರಣಿ ಕುಕೃತ್ಯದ ಬಗ್ಗೆ ಈ ಹಿಂದೆ ಸ್ವಚ್ಛತಾ ಕಾರ್ಮಿಕನಾಗಿ ದುಡಿಯುತ್ತಿದ್ದ ವ್ಯಕ್ತಿ ಪ್ರಾಯಶ್ಚಿತ್ತಗೊಂಡು ದೂರು ನೀಡಲು ಮುಂದೆ ಬಂದಿದ್ದು, ಒಟ್ಟಾರೆ ಘಟನೆಯ ಬಗ್ಗೆ ವಿಶೇಷ ತನಿಖಾ ತಂಡ (ಎಸ್ ಐಟಿ) ತನಿಖೆ ನಡೆಸುತ್ತಿದೆ. ಸರಾಗವಾಗಿ ತನಿಖೆ ನಡೆಯುತ್ತಿರುವ ಹೊತ್ತಿನಲ್ಲಿ ಧಾರ್ಮಿಕ ಭಾವನೆಯನ್ನು ಕೆರಳಿಸಿ ಘಟನೆಯನ್ನು ಹಿಂದೂ -ಮುಸ್ಲಿಂ ರೀತಿ ಚಿತ್ರಿಸಿ ಜಿಲ್ಲೆಯಲ್ಲಿ ಕೋಮುಗಲಭೆ ಎಬ್ಬಿಸಿ ಒಟ್ಟಾರೆ ತನಿಖೆಯ ಹಾದಿಯನ್ನು ದಿಕ್ಕು ತಪ್ಪಿಸುವ ವ್ಯವಸ್ಥಿತ ಷಡ್ಯಂತ್ರ ಕೂಡ ತೆರೆಮರೆಯಲ್ಲಿ ನಡೆಯುತ್ತಿದೆ. […]

Continue Reading

ಈ ಸಾವು ನ್ಯಾಯವೇ..?

ಡೆಡ್ಲಿ ಲೋನ್ ಆಪ್ ಗೆ ಗುರುಪುರದ ಸಲೀಂ ಬಲಿ.! ಪ್ರಾಥಮಿಕ ತನಿಖೆಯಲ್ಲಿ ಶಾಕಿಂಗ್ ವಿಚಾರ ಬಹಿರಂಗ ಸೈಬರ್ ಖದೀಮರ ವಂಚನೆಗೆ ಬಲಿಯಾಗುವ ಮುನ್ನ ಎಚ್ಚರ ವಿವಾಹವಾಗಿ ಬರೀ ಎರಡು ತಿಂಗಳು ಕಳೆದಿದೆ ಅಷ್ಟೇ. ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ತಾಯಿಯೂ ಮೃತಪಟ್ಟಿದ್ದಳು. ಇದು ಗುರುಪುರ ಸಲೀಂ ಕುಟುಂಬದ ದುರಂತ ಕಥೆ. ಡೆಡ್ಲಿ ಲೋನ್ ಆಪ್ ನಂಬಿ ಸಾಲ ಶೋಲ ಮಾಡಿ ಬರೋಬ್ಬರಿ 17 ಲಕ್ಷ ಲಪಟಾಯಿಸಿದ ಸೈಬರ್ ವಂಚಕರ ದರೋಡೆಗೆ ಸಿಲುಕಿ ಕಂಡಕ್ಟರ್ ಸಲೀಂ ಗುರುಪುರ ಸಮೀಪದ ದೋಣಿಂಜೆಗುತ್ತು […]

Continue Reading