ನೀನೇ ಸಾಕಿದ ಗಿಣಿ.. ನಿನ್ನ ಹದ್ದಾಗಿ ಕುಕ್ಕಿತ್ತಲ್ಲೋ..!

ಅಧಿಕಾರದ ಲಾಲಸೆಗೆ ಚಡ್ಡಿ ದೋಸ್ತ್ ಗಳೇ ಖೆಡ್ಡಾ ತೋಡಿಬಿಟ್ರಾ..? ಮುಮ್ತಾಝ್ ಅಲಿ ಸುಸೈಡ್ ಬಗ್ಗೆ ಮೊಹಿದ್ದೀನ್ ಬಾವಾ ಹೀಗಂದಿದ್ದೇಕೆ.? ರಾಜ್ಯದಲ್ಲಿ ಭಾರೀ ಸಂಚಲನಕ್ಕೆ, ಮುಸ್ಲಿಂ ಸಮಾಜದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ಮುಮ್ತಾಜ್ ಅಲಿ ಸುಸೈಡ್ ಮಿಸ್ಟರಿ ಬಗ್ಗೆ ಕುಟುಂಬಸ್ಥರು ಈವರೆಗೂ ಮೌನಕ್ಕೆ ಶರಣಾಗಿದ್ದು, ಇದೀಗ ಖುದ್ದು ಮುಮ್ತಾಜ್ ಅಲಿ ಸಹೋದರ, ಮಾಜಿ ಶಾಸಕ ಮೊಯ್ದಿನ್ ಬಾವಾ ಖಾಸಗಿ ಮಾಧ್ಯಮವೊಂದರಲ್ಲಿ ತನ್ನ ಮನಸ್ಸಿನಾಳವನ್ನು ಪೂರ್ತಿ ಬಿಚ್ಚಿಟ್ಟಿದ್ದಾರೆ. ಈವರೆಗೂ ಈ ಸುಸೈಡ್ ಹಿಂದಿನ ಇಬ್ಬರು ಹೈ ಪ್ರೊಫೈಲ್ ಬ್ಯಾರಿಗಳ ಹೆಸರು […]

Continue Reading

ವಿಎಚ್ ಪಿ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ರೈ ಭಾಗವಹಿಸುವಿಕೆ ಆಘತಕಾರಿ

ಕಾಂಗ್ರೆಸ್ ಪಕ್ಷ ಈ ಕುರಿತು ಸ್ಪಷ್ಟೀಕರಣ ನೀಡಲಿ : ಸಿಪಿಐಎಂ ಮುಖಂಡ ಬಿ ಎಮ್ ಭಟ್ ಆಗ್ರಹ ಪುತ್ತೂರು ಶಾಸಕರಾದ ಅಶೋಕ ರೈ ಅವರು ಬಿಜೆಪಿ, ಸಂಫಪರಿವಾರಕ್ಕೆ ಸೇರಿದ ವಿಶ್ವಹಿಂದು ಪರಿಷತ್ ಕಾರ್ಯಕ್ರಮದಲ್ಲಿ ಭಾಗವಹಿರುವುದು ಖಂಡನೀಯ. ಪುತ್ತೂರು ಶಾಸಕರು ಬಿಜೆಪಿಯಿಂದ ವಲಸೆ ಬಂದವರಾಗಿದ್ದರೂ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ಕಾರಣದಿಂದ ಕ್ಷೇತ್ರದ ಜಾತ್ಯಾತೀತ ಮತದಾರರು, ಅಲ್ಪಸಂಖ್ಯಾತ ಸಮುದಾಯಗಳ ಮತದಾರರು ಕೋಮುವಾದಿಗಳಿಗೆ, ಕೋಮುವಾದಕ್ಕೆ ಹಿನ್ನಡೆ ಉಂಟುಮಾಡಲೆಂದೇ ಅವರಿಗೆ ಒಗ್ಗಟ್ಟಿನಿಂದ ಮತ ನೀಡಿದ್ದರು. ಅವರು ಕಾಂಗ್ರೇಸ್ ಪಕ್ಷದ ಮತಗಳ ಜೊತೆಗೆ […]

Continue Reading

ಸಾಬ್ರ ಮಕ್ಕಳ ಗ್ಯಾಂಗ್ ವಾರ್; ರಿವೇಂಜ್ ಪಕ್ಕಾ.! ಗಳಸ್ಯ ಕಂಠಸ್ಯ ದೋಸ್ತ್ ಗಳೇ ‘ಪಲ್ಟಿ’ ಹೊಡೆದ್ರು.!

ಆ ಒಂದು ವ್ಯವಹಾರವೇ ಜಿಯಾ ಮರ್ಡರ್ ಹಂತಕರನ್ನು ದುಷ್ಮನಿಯನ್ನಾಗಿಸಿತ್ತು.! ಪೊಲೀಸ್ ಇಲಾಖೆ ಇನ್ನಾದರೂ ಎಚ್ಚೆತ್ತುಕೊಳ್ಳಲಿ ಮಾರಿಪಳ್ಳ, ಫರಂಗಿಪೇಟೆ, ಅಡ್ಯಾರ್ ಕಣ್ಣೂರು ಸುತ್ತಮುತ್ತ ಸಾಬ್ರ ಗ್ಯಾಂಗ್ ವಾರ್ ಅಟ್ಟಹಾಸಕ್ಕೆ ಕುಖ್ಯಾತಿ. ಗಾಂಜಾ ಮಾಫಿಯಾ ಗ್ಯಾಂಗ್ ವಾರ್ ಗೆ ಇಲ್ಲಿ ಹಲವು ನೆತ್ತರು ಚೆಲ್ಲಿದೆ. ಇಲ್ಲಿನ ಗ್ಯಾಂಗ್ ವಾರ್ ಗೆ ರೋಸಿಹೋಗಿ ಈ ಊರೇ ಬಿಟ್ಟು ಹೋದ ಸಂಖ್ಯೆಗೇನೂ ಕಮ್ಮಿಯಿಲ್ಲ. ಇಲ್ಲಿನ ಕೆಲವು ಮುಸ್ಲಿಂ ಮುಖಂಡರು ಈ ಗ್ಯಾಂಗ್ ವಾರ್ ಗಳ ಮಧ್ಯೆ ರಾಜಿ ನಡೆಸಿ ಇವರ ಅಟ್ಟಹಾಸವನ್ನು ತಕ್ಕ […]

Continue Reading

ಅಣಬೆಗಳಂತೆ ಅಲ್ಲಲ್ಲಿ ಕುಂತಿದ್ದಾರೆ ನಕಲಿ ಡಾಕ್ಟ್ರುಗಳು.! ಆರೋಗ್ಯ ಇಲಾಖೆ ಕಾರ್ಯಾಚರಣೆ 623 ನಕಲಿ ಡಾಕ್ಟರ್ ಗಳು ಪತ್ತೆ

ದಕ್ಷಿಣ ಕನ್ನಡದಲ್ಲಿ 17, ಉಡುಪಿಯಲ್ಲಿ 3 ನಕಲಿ ವೈದ್ಯರನ್ನು ಪತ್ತೆ ಮಾಡಲಾಗಿದೆ ಆರೋಗ್ಯ ಇಲಾಖೆ ಈ ವರ್ಷದಲ್ಲಿ 623 ನಕಲಿ ವೈದ್ಯರನ್ನು ಇಲಾಖೆ ಪತ್ತೆ ಹಚ್ಚಿದ್ದು ಇವರ ಮೇಲೆ ಕ್ರಮಕ್ಕೆ ಮುಂದಾಗಿದೆ. ಕೋಲಾರ, ವಿಜಯಪುರ, ತುಮಕೂರು ಭಾಗದಲ್ಲೇ ಹೆಚ್ಚು ಫೇಕ್ ವೈದ್ಯರಿದ್ದಾರೆ ಎನ್ನುವುದು ಬಹಿರಂಗವಾಗಿದೆ. ರಾಜ್ಯದಲ್ಲಿ ಆಗಾಗ ಸಂಚಲನ ಸೃಷ್ಟಿಸುವ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಬೆಳಕಿಗೆ ಬರುತ್ತಿರುವಾಗ ಆರೋಗ್ಯ ಇಲಾಖೆ ಕೂಡ ತನ್ನ ಅಧಿಕಾರಿಗಳ ಜತೆಗೆ ದಾಳಿ ನಡೆಸುತ್ತಿದೆ. ಈ ದಾಳಿಯಲ್ಲಿ ನಕಲಿ ವೈದ್ಯರ ಪತ್ತೆ […]

Continue Reading

ಫರಂಗಿಪೇಟೆ ಬಳಿ ರೌಡಿಗಳ ಅಟ್ಟಹಾಸ. ತಲವಾರು ಧಾಳಿ, ಯದ್ವಾತದ್ವಾ ಕಡಿದ ಹತ್ತಕ್ಕೂ ಹೆಚ್ಚು ಜನ ದುಷ್ಕರ್ಮಿಗಳ ತಂಡ.

ಪೂರ್ವದ್ಚೇಷದ ಹಿನ್ನೆಲೆಯಲ್ಲಿ ಹತ್ತಕ್ಕೂ ಹೆಚ್ಚು ಯುವಕರ ತಂಡ ಇಬ್ಬರ ಮೇಲೆ ದಾಳಿ ನಡೆಸಿ ಪರಾರಿಯಾದ ಘಟನೆ ಫರಂಗಿಪೇಟೆ ಸಮೀಪದ ಅಮ್ಮೆಮಾರ್ ಎಂಬಲ್ಲಿ ನಡೆದಿದೆ. ತಲವಾರು ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವತಸ್ಲೀಮ್ ಹಾಗೂ ಮಹಮ್ಮದ್ ಶಾಕೀರ್ ಎಂಬಿಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದಾರೆ. ಅಮ್ಮೆಮಾರ್ ನಿವಾಸಿ ತಸ್ಲೀಮ್, ಮಹಮ್ಮದ್ ಶಾಕೀರ್, ನಾಸೀರ್, ಸಿಯಾಬು, ಸೈಫುದ್ದೀನ್ ಅವರು ಮಾತನಾಡುತ್ತಿದ್ದ ವೇಳೆ ತಸ್ಲೀಮ್ ಗೆ ಕರೆಯೊಂದು ಬಂದಿದ್ದು, ಈ ವೇಳೆ ಆರೋಪಿಯು ಅವಾಚ್ಯ ಶಬ್ದಗಳಿಂದ ಬೈದು ನಾಲ್ಕು ಮಾರ್ಗಕ್ಕೆ […]

Continue Reading

ಮಂಗಳೂರು: ಬಡಾ ದೋಸ್ತ್ ವಾಹನದಲ್ಲಿ ನಿರಂತರ ತಾಂತ್ರಿಕ ದೋಷ; ವಾಹನದ ವೆಚ್ಚ, ಬಡ್ಡಿ ಸಮೇತ ಹಿಂತಿರುಗಿಸುವಂತೆ ಕೋರ್ಟ್ ಆದೇಶ

ಕಂಪೆನಿಯೊಂದರ ಬಡಾ ದೋಸ್ತ್ ವಾಹನ ಖರೀದಿಸಿದ ನಂತರ ವಾಹನದಲ್ಲಿ ನಿರಂತರವಾಗಿ ಸಮಸ್ಯೆಗಳು ಉಂಟಾದ ಕಾರಣ ದ.ಕ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಕೆಯಾದ ಪ್ರಕರಣದಲ್ಲಿ ನ್ಯಾಯಾಲಯವು ದೂರುದಾರರ ದೂರನ್ನು ಮಾನ್ಯ ಮಾಡಿ ವಾಹನದಲ್ಲಿ ತಯಾರಿಕಾ ದೋಷ ಇದೆ ಎಂಬುದನ್ನು ಎತ್ತಿ ಹಿಡಿದಿದೆ. ಪುತ್ತೂರಿನ ಪದ್ಮನಾಭ ಪ್ರಭು ಎಂಬವರು 2021 ರಲ್ಲಿ ಖರೀದಿಸಿದ ಬಡಾ ದೋಸ್ತ್ ವಾಹನ ನಿರಂತರವಾಗಿ ಸೆನ್ಸಾರ್ ಹಾಳಾಗುವಿಕೆ, ಲೋ ಪಿಕ್ ಆಪ್, ಹಾಳಾಗುವಿಕೆ ಉಂಟಾದ ಸಮಸ್ಯೆ ಎದುರಿಸಿದ್ದರು. ಈ ಬಗ್ಗೆ ಅವರು 2022 ರಲ್ಲಿ […]

Continue Reading

ಬೈಕಂಪಾಡಿ ಬೀದಿ ವ್ಯಾಪಾರಿಗಳ ತೆರವು, ಪಟಾಕಿ ಅಂಗಡಿಗಳಿಗೆ ಅನುಮತಿ, ಪಾಲಿಕೆ ವಿರುದ್ಧ ಬೀದಿಬದಿ ವ್ಯಾಪಾರಿಗಳ ಪ್ರತಿಭಟನೆ

ಸುರತ್ಕಲ್: ನಗರಪಾಲಿಕೆಗೆ ಸೇರದ ರಾಷ್ಟ್ರೀಯ ಹೆದ್ದಾರಿ ಜಾಗವನ್ನು ಕಾನೂನು ಬಾಹಿರವಾಗಿ ಏಲಮ್ ಮಾಡಿ ಬಡ ಬೀದಿಬದಿ ವ್ಯಾಪಾರಿಗಳನ್ನು ಅಮಾನುಷವಾಗಿ ಬುಲ್ಡೋಜರ್ ಬಳಸಿ ಎಬ್ಬಿಸಿದ ಪಾಲಿಕೆಯ ಕ್ರಮ ಖಂಡಿಸಿ ಇಂದು ದಕ್ಷಿಣಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಬೈಕಂಪಾಡಿ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಸಂಘದ ಗೌರವಾಧ್ಯಕ್ಷ ಬಿಕೆ ಇಮ್ತಿಯಾಜ್ ಮಾತನಾಡುತ್ತಾ ನಗರಪಾಲಿಕೆ ಅಧಿಕಾರಿಗಳು ಕಾನೂನು ಬಾಹಿರವಾಗಿ ಧಾಳಿ ನಡೆಸಿ ಬಡ ಬೀದಿ ವ್ಯಾಪಾರಿಗಳಿಗೆ ಅನ್ಯಾಯ ಮಾಡಿದೆ. ಮತ್ತೊಂದೆಡೆ ಪಾಲಿಕೆಗೆ ಸೇರದ ಜಾಗವನ್ನು, ಪಟಾಕಿ ಮಾರಾಟ […]

Continue Reading

ಪ್ಯಾಲೆಸ್ತೀನ್ ನಲ್ಲಿ ನಡೆಯುತ್ತಿರುವುದು ಯದ್ಧವಲ್ಲ, ಸಾಮ್ರಾಜ್ಯಶಾಹಿ ಕ್ರೌರ್ಯ, ಭಾರತದ ನಾಗರಿಕರು ಈ ಅಮಾನವೀಯತೆಯ ವಿರುದ್ಧ ನಿಲ್ಲಬೇಕಿದೆ : ಮುನೀರ್ ಕಾಟಿಪಳ್ಳ

ತಾಯ್ನೆಲದ ವಿಮೋಚನೆಗಾಗಿ ಹೋರಾಡುತ್ತಿರುವ ಪ್ಯಾಲೆಸ್ತೀನ್ ಜನತೆಯ ಮೇಲೆ ಇಸ್ರೇಲ್ ಬರ್ಬರ ಧಾಳಿ ನಡೆಸುತ್ತಿದೆ. ಯುದ್ಧ ವಿರಾಮಕ್ಕೆ ಆಗ್ರಹಿಸಿ, ನಾಗರಿಕರ ಮೇಲಿನ ಧಾಳಿಯ ವಿರುದ್ಧವಾಗಿ ವಿಶ್ವಸಂಸ್ಥೆ ತೆಗೆದುಕೊಂಡಿರುವ ನಿರ್ಣಯಗಳನ್ನೂ ಇಸ್ರೇಲ್ ತಿರಸ್ಕರಿಸಿದೆ. ಅಮೆರಿಕಾ ನೇತೃತ್ವದ ಸಾಮ್ರಾಜ್ಯಶಾಹಿ ಕೂಟದ ಬೆಂಬಲದಿಂದ ಇಸ್ರೇಲ್ ಮಹಿಳೆಯರು, ಮಕ್ಕಳು ಎಂದು ಪರಿಗಣಿಸದೆ ಪ್ಯಾಲೆಸ್ತೀನ್ ನಾಗರಿಕರ ನರಮೇಧ ನಡೆಸುತ್ತಿದೆ. ಪ್ಯಾಲೆಸ್ತೀನ್ ಬೆಂಬಲಕ್ಕೆ ನಿಂತ ಇರಾನ್, ಲೆಬನಾನ್, ಯೆಮನ್ ದೇಶಗಳ ಮೇಲೆಯೂ ಅಂತರಾಷ್ಟ್ರೀಯ ರಾಜತಾಂತ್ರಿಕ ನಿಯಮಗಳನ್ನು ಉಲ್ಲಂಘಿಸಿ ಧಾಳಿಗಳನ್ನು ಸಂಯೋಜಿಸುತ್ತಿದೆ. ಇಸ್ರೇಲ್ ನ ಈ ರಕ್ತದಾಹ ಮೂರನೆ […]

Continue Reading

ನಂತೂರು ಸರ್ಕಲ್ ನಲ್ಲಿ ಅಪಘಾತ; ಕಂಕನಾಡಿ ಆಸ್ಪತ್ರೆಯ ಉದ್ಯೋಗಿ ಕ್ರಿಸ್ಟಿ ಕ್ರಾಸ್ತಾ ಸ್ಥಳದಲ್ಲೇ ಸಾವು.

ಮತ್ತೆ ಯುವತಿಯ ಬಲಿ ಪಡೆದ ಮಂಗಳೂರು ನಂತೂರ್ ನ ಮರಣ ಸರ್ಕಲ್. ಕಂಕನಾಡಿ ಆಸ್ಪತ್ರೆಯ ಉದ್ಯೋಗಿ ಕೋಡಿಕಲ್ ನಿವಾಸಿ ಕ್ರಿಸ್ಟಿ ಕ್ರಾಸ್ತಾ(27) ತನ್ನ ದ್ವಿಚಕ್ರ ವಾಹನದಲ್ಲಿ ಮನೆ ಕಡೆ ಹೋಗುತ್ತಿದ್ದ ಸಂದರ್ಭ ನಂತೂರು ಸರ್ಕಲಲ್ಲಿ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದಾರೆ. ಅದೇ ಸಂದರ್ಭ ಕೇರಳ ಕಡೆಗೆ ತೆರಳುತ್ತಿದ್ದ ಮೀನು ತುಂಬಿದ ಲಾರಿ ರಸ್ತೆಗೆ ಬಿದ್ದ ಕ್ರಿಸ್ಟಿ ಕ್ರಾಸ್ತಾರ ತಲೆ ಮೇಲೆಯೇ ಹರಿದ ಪರಿಣಾಮ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈವರೆಗೆ ಮೂವತ್ತಕ್ಕೂ ಹೆಚ್ಚು ವಾಹನ ಸವಾರರ ಬಲಿ ಪಡೆದು […]

Continue Reading

ಬ್ಯಾಂಕ್ ಹರಾಜಿನಲ್ಲಿ ಆಸ್ತಿ ಖರೀದಿಸಿದವರು ಬಾಕಿ ಪಾವತಿಸದಿದ್ದರೆ ಠೇವಣಿ ಮುಟ್ಟುಗೋಲು ಹಾಕಿಕೊಳ್ಳಬಹುದು: ಹೈಕೋರ್ಟ್ ಆದೇಶ

ಬ್ಯಾಂಕ್ ಹರಾಜಿನಲ್ಲಿ ಆಸ್ತಿ ಖರೀದಿಸಿದವರು ನಿಗದಿತ ಅವಧಿಯಲ್ಲಿ ಬಾಕಿ ಪಾವತಿಸದಿದ್ದರೆ, ಮುಂಗಡವಾಗಿಟ್ಟಿದ್ದ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದು ಹೈಕೋರ್ಟ್ ಆದೇಶಿಸಿದೆ. ಉಡುಪಿ ಜಿಲ್ಲೆಯ ಕಾರ್ಕಳದ ಕೆ.ಸುಬ್ರಹ್ಮಣ್ಯರಾವ್ ಮತ್ತು ಅವರ ಪತ್ನಿ ಎಚ್.ಎಂ ನಾಗರತ್ನಗೆ 3.25 ಕೋಟಿ ರೂಪಾಯಿಗಳನ್ನು ಮರು ಪಾವತಿಸುವಂತೆ ನಿರ್ದೇಶನ ನೀಡಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಕೆನರಾ ಬ್ಯಾಂಕ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ ಆಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ ಅರವಿಂದ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, […]

Continue Reading