ಡ್ರೈವಿಂಗ್ ಲೈಸೆನ್ಸ್ ಹೊಂದಿಲ್ಲವೆಂಬ ಮಾತ್ರಕ್ಕೆ ಘಟನೆಗೆ ಆತನ ನಿರ್ಲಕ್ಷ್ಯವೇ ಸಂಪೂರ್ಣ ಕಾರಣ ಎನ್ನಲಾಗದು: ಕರ್ನಾಟಕ ಹೈಕೋರ್ಟ್

ರಸ್ತೆ ಅಪಘಾತಕ್ಕೊಳಗಾದ ಸವಾರ ಡ್ರೈವಿಂಗ್ ಲೈಸೆನ್ಸ್ ಹೊಂದಿಲ್ಲವೆಂಬ ಮಾತ್ರಕ್ಕೆ ಘಟನೆಗೆ ಆತನ ನಿರ್ಲಕ್ಷ್ಯವೇ ಸಂಪೂರ್ಣ ಕಾರಣ ಎನ್ನಲಾಗದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದ ಶಿವೇಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ.ಚಿಲಕೂರು ಸುಮಲತಾ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಅಪಘಾತಕ್ಕೆ ಇನ್ನೊಂದು ವಾಹನ ಸವಾರ ನೇರ ಕಾರಣ ಎಂಬುದನ್ನು ಒಪ್ಪಿಕೊಳ್ಳಲು ಅರ್ಜಿದಾರರು ಸಾಕಷ್ಟು ಪುರಾವೆಗಳನ್ನೂ ನ್ಯಾಯಪೀಠದ ಮುಂದೆ ಪ್ರಸ್ತುತಪಡಿಸಿದರು. ಹೀಗಿರುವಾಗ, ಅವರು ಚಾಲನಾ ಪರವಾನಗಿ ಹೊಂದಿಲ್ಲವೆಂಬ ಕಾರಣಕ್ಕೆ […]

Continue Reading

ಧರ್ಮಸ್ಥಳ ಪ್ರಕರಣದ ತಡೆಯಾಜ್ಞೆ ತೆರವು ಸಂಬಂಧ ಸಿಟಿ ಸಿವಿಲ್ ಕೋರ್ಟ್ ನಲ್ಲಿ ವಾದ ಮಂಡನೆ

ಪತ್ರಕರ್ತ, ಹೋರಾಟಗಾರರ ಪರವಾಗಿ ಹಿರಿಯ ವಕೀಲ ಎಸ್ ಬಾಲನ್ ವಾದ ತಡೆಯಾಜ್ಞೆ ಪ್ರಶ್ನಿಸಿದ ನವೀನ್ ಸೂರಿಂಜೆ, ಮುನೀರ್ ಕಾಟಿಪಳ್ಳ, ಬೈರಪ್ಪ ಹರೀಶ್ ಕುಮಾರ್ ಬೆಂಗಳೂರು : ಧರ್ಮಸ್ಥಳದ ಬಗೆಗಿನ ಮಾನಹಾನಿ ಸುದ್ದಿ ಪ್ರಸಾರ ಮಾಡದಂತೆ ಬೆಂಗಳೂರಿನ 26 ನೇ ಸಿಟಿ ಸಿವಿಲ್ ಕೋರ್ಟ್ ನೀಡಿದ್ದ ತಡೆಯಾಜ್ಞೆಗೆ ಆಕ್ಷೇಪಣೆ ಸಲ್ಲಿಸಿ, ತಡೆಯಾಜ್ಞೆ ತೆರವುಗೊಳಿಸುವಂತೆ ಹಿರಿಯ ವಕೀಲ ಎಸ್ ಬಾಲನ್ ಅರ್ಜಿ ಸಲ್ಲಿಸಿದ್ದಾರೆ. 338 ಪತ್ರಕರ್ತರು, ಹೋರಾಟಗಾರರು, ಸಂಸ್ಥೆಗಳು ಮತ್ತು ಅಧೃಶ್ಯ ವ್ಯಕ್ತಿ ಸೇರಿದಂತೆ ಒಟ್ಟು 339 ಪ್ರತಿವಾದಿಗಳ ವಿರುದ್ಧ […]

Continue Reading

ಅನ್ನದಾತರ ಬದುಕಿಗೆ ‘ಗ್ಯಾರಂಟಿ’ ಯೇ ಇಲ್ಲ.! ವರ್ಷದಲ್ಲಿ ರಾಜ್ಯದಲ್ಲಿ ಬರೋಬ್ಬರಿ 981 ರೈತರ ಆತ್ಮಹತ್ಯೆ

ಹಾವೇರಿಯಲ್ಲಿ ಅತೀ ಹೆಚ್ಚು 128 ಪ್ರಕರಣ, ಉಡುಪಿಯಲ್ಲಿ ಶೂನ್ಯ. ಕಳೆದ ಐದು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅತೀ ಹೆಚ್ಚು ಆತ್ಮಹತ್ಯೆ ಪ್ರಕರಣ..ಪಂಚ ಗ್ಯಾರಂಟಿ ರೈತರ ಬದುಕಿನಲ್ಲಿ ಬದಲಾವಣೆ ತಂದಿಲ್ಲ ರಾಜ್ಯದಲ್ಲಿ ಒಂದು ವರ್ಷದಲ್ಲಿ ಬರೋಬ್ಬರಿ 981 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿದ್ಯುತ್, ಶಕ್ತಿ, ಶೂನ್ಯ ಬಡ್ಡಿದರದಲ್ಲಿ ಸಾಲ, ಸರಕಾರದ ಗ್ಯಾರಂಟಿಗಳೂ ಸಹ ರೈತರ ಆತ್ಮಹತ್ಯೆಗೆ ತಡೆಯಲು ಆಗದಂತೆ ಆಗಿದೆ. ಕಳೆದ 2024 ರ ಏಪ್ರಿಲ್ ಒಂದರಿಂದ 2025 ಮೇ 25 ರವರೆಗೆ ರಾಜ್ಯದಲ್ಲಿ 981ರೈತರು ಆತ್ಮಹತ್ಯೆ […]

Continue Reading

ಆಸ್ತಿ ವರ್ಗಾವಣೆಗೆ GPA ನೋಂದಣಿ ಮಾಡಬೇಕು. GPA ಕೊಡುವವರು ಬದುಕಿರುವ ಪುರಾವೆ ಹಾಜರುಪಡಿಸಬೇಕು.

ಕರ್ನಾಟಕ ಅಧಿನಿಯಮ 2025 ಕ್ಕೆ ರಾಷ್ಟ್ರಪತಿಗಳು ಅಂಕಿತ ಆಸ್ತಿ ನೋಂದಣಿಗೆ ಜನರಲ್ ಪವರ್ ಆಟಾರ್ನಿಕಡ್ಡಾಯಗೊಳಿಸುವ ನೋಂದಣಿ ಕರ್ನಾಟಕ ಅಧಿನಿಯಮ 2025 ಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರ ಸೋಮವಾರ ಅಧಿಕೃತ ರಾಜ್ಯ ಪತ್ರ ಹೊರಡಿಸಿದ್ದು, ರಾಜ್ಯ ಪತ್ರ ಹೊರಡಿಸಿದ ದಿನದಿಂದಲೇ ಈ ಮಸೂದೆ ಜಾರಿಗೆ ಬರಲಿದೆ. ನೋಂದಣಿ ಅಧಿನಿಯಮ 19008(1908ರ ಕೇಂದ್ರ ಅಧಿನಿಯಮ 16) ಅನ್ನು ಮತ್ತಷ್ಟು ತಿದ್ದುಪಡಿ ಮಾಡಿ ಕೆಲವು ಬದಲಾವಣೆ ಒಳಗೊಂಡ ಮಸೂದೆ ಇದಾಗಿದೆ. ಆಸ್ತಿ ನೋಂದಣಿಯನ್ನು ಸಂಪೂರ್ಣ ಡಿಜಿಟಲೀಕರಿಸುವ, […]

Continue Reading

ಸಿದ್ದು ಗುಡುಗಿದ್ರೂ ಸುರ್ಜೇವಾಲ ಉಳಿದಿದ್ದು ಹೇಗೆ.?, ಪ್ರಾಮಿಸ್ಸು ಮಾಡಿದ್ದು ಯಾರು.? ಎಮ್ಮೆಲ್ಸಿ ಪಟ್ಟಿಗೆ ರೋಚಕ ಟ್ವಿಸ್ಟ್

✍️. ಆರ್.ಟಿ.ವಿಠ್ಠಲಮೂರ್ತಿ ಕೆಲ ದಿನಗಳಿಂದ ಪಕ್ಷದ ಉಸ್ತುವಾರಿ ಸುರ್ಜೇವಾಲಾ ಅವರ ಬಗ್ಗೆ ಬರುತ್ತಿರುವ ಮಾಹಿತಿ ಸಿಎಂ ಸಿದ್ಧರಾಮಯ್ಯ ಅವರನ್ನು ಕೆರಳಿಸಿದೆ. ಹೀಗಾಗಿ ಮುಂದಿನ ಸಲ ದಿಲ್ಲಿಗೆ ಹೋದಾಗ ಸುರ್ಜೇವಾಲ ಬಗ್ಗೆ ರಾಹುಲ್ ಗಾಂಧಿಯವರ ಬಳಿ ಮಾತನಾಡಲು ಅವರು ನಿರ್ಧರಿಸಿದ್ದಾರೆ.ಅಂದ ಹಾಗೆ ಇತ್ತೀಚೆಗೆ ಪಕ್ಷದ ಸಚಿವರು, ಶಾಸಕರ ಜತೆ ಒನ್ ಟು ಒನ್ ಸಭೆ ನಡೆಸಿದ ಸುರ್ಜೇವಾಲಾ ಅವರ ಬಗ್ಗೆ ಸಿದ್ದು ಆಪ್ತರ ಪಡೆ ಸಿಟ್ಟಿಗೆದ್ದಿರುವುದು ರಹಸ್ಯವೇನಲ್ಲ.ಆದರೆ‌ ಇಂತಹ ಸಭೆ, ಅಧಿಕಾರಿಗಳ ಮಟ್ಟದಲ್ಲಿ ಶುರುವಾಗಿರುವುದರಿಂದ ಸಿದ್ದು ಆಪ್ತರು ನೇರವಾಗಿಯೇ […]

Continue Reading

ದೆಹಲಿಯ ಕರ್ನಾಟಕ ಭವನದಲ್ಲಿ ಅಚ್ಚರಿಯ ಘಟನೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿಗಳ ನಡುವೆ ಜಟಾಪಟಿ

ದೆಹಲಿಯ ಕರ್ನಾಟಕ ಭವನದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾ‌ರ್ ಅವರ ವಿಶೇಷ ಕರ್ತವ್ಯ ಅಧಿಕಾರಿಗಳ ನಡುವೆ ನಡೆದ ಜಟಾಪಟಿ ತಾರಕಕ್ಕೇರಿದ್ದು, ಈ ಸಂಬಂಧ ಡಿಕೆಶಿ ಅವರ ವಿಶೇಷ ಕರ್ತವ್ಯ ಅಧಿಕಾರಿ ಆಂಜನೇಯ ದೂರು ನೀಡಿದ್ದಾರೆ. ವಿಶೇಷ ಕರ್ತವ್ಯ ಅಧಿಕಾರಿ ಆಂಜನೇಯವರು ಮುಖ್ಯಮಂತ್ರಿಯವರ ಅಧಿಕಾರಿ ಮೋಹನ್ ಕುಮಾರ್ ವಿರುದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ನಿವಾಸಿ ಆಯುಕ್ತರಿಗೆ ದೂರು ನೀಡಿದ್ದಾರೆ. ತಮ್ಮ ದೂರಿನಲ್ಲಿ ಆಂಜನೇಯ ಅವರು, ಮೋಹನ್ ಕುಮಾರ್ ಬಂದಾಗಿನಿಂದ ನನ್ನ […]

Continue Reading

ವಿದ್ಯಾರ್ಥಿಗಳ ಕಲಿಕೆಗೆ ಬೆಸ್ಟ್ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ದಕ್ಕಿದ ಸ್ಥಾನ; ಜಾಗತಿಕ 130 ನಗರಗಳ ಪೈಕಿ ಬೆಂಗಳೂರಿಗೆ 108 ನೇ ಸ್ಥಾನ

ಲಂಡನ್ ಕ್ಯುಎಸ್ ಸಂಸ್ಥೆ ಪಟ್ಟಿ ಬಿಡುಗಡೆ ವಿದ್ಯಾರ್ಥಿಗಳಿಗೆ ಅತ್ಯುತ್ತಮ 130 ಜಾಗತಿಕ ನಗರಗಳ ಪಟ್ಟಿಯಲ್ಲಿ ಭಾರತದ ನಾಲ್ಕು ನಗರಗಳು ಸ್ಥಾನಗಿಟ್ಟಿಸಿದ್ದು, ಬೆಂಗಳೂರಿಗೂ ಪಟ್ಟಿಯಲ್ಲಿ ಸ್ಥಾನ ದೊರೆತಿದೆ. ಲಂಡನ್ ನ ಕ್ಯುಎಸ್ ಸಂಸ್ಥೆ ನಡೆಸಿದ ಜಾಗತಿಕ 130 ನಗರಗಳಲ್ಲಿ ಬೆಂಗಳೂರು ಜೊತೆ ದೆಹಲಿ, ಮುಂಬೈ, ಚೆನ್ನೈ ಸೇರಿದೆ. ಮೊದಲ ನೂರು ನಗರಗಳ ಪಟ್ಟಿಯಲ್ಲಿ ದೆಹಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಮುಂಬೈ ಕಳೆದ ಬಾರಿಗಿಂತ 15 ಸ್ಥಾನ ಮೇಲಕ್ಕೇರಿದ್ದು, 98 ಸ್ಥಾನ ಪಡೆದಿದೆ. ದೆಹಲಿ ಏಳು ಸ್ಥಾನ ಮೇಲೆ ಬಂದಿದ್ದು 104 […]

Continue Reading

ಕುಮಾರಣ್ಣಂಗೂ ಈಗ ವಿಜಯೇಂದ್ರ ಬೇಕಿಲ್ಲ

ವಿಜಯೇಂದ್ರ ರಾಷ್ಟ್ರ ಮಟ್ಟಕ್ಕೆ, ರಾಘವೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಂದರೆ ಹೇಗೆ.? ಅಮಿತ್ ಶಾ ಪ್ರಪೊಸಲ್ಲು ✍️. ಆರ್.ಟಿ.ವಿಠ್ಠಲಮೂರ್ತಿ ಕಳೆದ ವಾರ ದಿಲ್ಲಿಯಿಂದ ಬಂದ ವರ್ತಮಾನ ಯಡಿಯೂರಪ್ಪ ಅವರಿಗೆ‌ ಕಸಿವಿಸಿ ಉಂಟು ಮಾಡಿದೆಯಂತೆ.ಅದರ ಪ್ರಕಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒಂದು ಪ್ರಪೋಸಲ್ಲನ್ನು ಯಡಿಯೂರಪ್ಪ ಮುಂದಿಡಲಿದ್ದಾರೆ.ಕರ್ನಾಟಕದಲ್ಲಿ ವಿಜಯೇಂದ್ರ ಅಧ್ಯಕ್ಷರಾಗಿರುವುದನ್ನು ಬಹುತೇಕ ಹಿರಿಯ ನಾಯಕರು ಇಷ್ಟಪಡುತ್ತಿಲ್ಲ. ಹೀಗಾಗಿ ವಿಜಯೇಂದ್ರ ಅವರನ್ನು ರಾಷ್ಟ್ರ ಮಟ್ಟದಲ್ಲಿ ಪಕ್ಷಕ್ಕೆ ನಿಯೋಜನೆ ಮಾಡಿ,ನಿಮ್ಮ ಹಿರಿಯ ಮಗ ರಾಘವೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ […]

Continue Reading

ಇನ್ಮುಂದೆ ಹೋಬಳಿ ಮಟ್ಟದ ನಾಡಕಚೇರಿಗಳೂ ಡಿಜಿಟಲೀಕರಣ..ಕೈ ಬರಹದ ಭೂ ದಾಖಲೆಗೆ ತಿಲಾಂಜಲಿ

ಗ್ರಾ.ಪಂ.ಗೂ ವಿಸ್ತರಣೆಗೆ ಚಿಂತನೆ; ರಾಜ್ಯ ಕಂದಾಯ ಇಲಾಖೆಯ ಭೂ ಸುರಕ್ಷಾ ಯೋಜನೆ ಹೊಸ ಮೈಲಿಗಲ್ಲು ಇನ್ನು ಮುಂದೆ ಭೂ ದಾಖಲೆಗಳ ದೃಢೀಕೃತ ನಕಲು ನಿಮಗೆ ಸಿಗುವುದಿಲ್ಲ. ಕೈ ಬರಹದ ಭೂ ದಾಖಲೆಗಳಿಗೆ ವಿದಾಯ ಹೇಳಲಾಗಿದೆ. ಇನ್ನು ಮುಂದೆ ಎಲ್ಲವೂ ಡಿಜಿಟಲ್ ಮಯ. ಕಂದಾಯ ಇಲಾಖೆ ಕೈಬರಹದ ಭೂ ದಾಖಲೆ ನೀಡುವ ವ್ಯವಸ್ಥೆಗೆ ತೀಲಾಂಜಲಿ ನೀಡಿದ್ದು, ಡಿಜಿಟಲ್ ರೂಪದಲ್ಲೇ ದಾಖಲೆಗಳ ವಿತರಣೆಯನ್ನು ಕಡ್ಡಾಯಗೊಳಿಸಿದೆ. ಇನ್ನು ಮುಂದೆ ಎ ಮತ್ತು ಬಿ ವರ್ಗದ ಭೂ ದಾಖಲೆಗಳನ್ನು ಸಾಂಪ್ರದಾಯಿಕ ದೃಢೀಕೃತ ನಕಲು […]

Continue Reading

ಸಾಧನಾ ಸಮಾವೇಶದಿಂದ ಗಡಿಬಿಡಿಯಲ್ಲಿ ನಿರ್ಗಮಿಸಿದ ಡಿಕೆಶಿ ದೆಹಲಿ ದೌಡು.!

ವಾರದಲ್ಲಿ ಎರಡು ಬಾರಿ ದೆಹಲಿ ಯಾತ್ರೆ.. ಕುತೂಹಲ ಮೂಡಿಸುತ್ತಿದೆ ಹೈಕಮಾಂಡ್ ನಡೆ ಮೈಸೂರಿನಲ್ಲಿ ನಡೆದ ಸರ್ಕಾರದ ಸಾಧನಾ ಸಮಾವೇಶ ಕಾರ್ಯಕ್ರಮದಿಂದ ಅರ್ಧಕ್ಕೇ ನಿರ್ಗಮಿಸಿದ್ದ ಉಪ ಮುಖ್ಯಮಂತ್ರಿ ಡಿಕೆಶಿ ದಿಢೀರ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ವೈಯಕ್ತಿಕ ಕೆಲಸಕ್ಕಾಗಿ ದೆಹಲಿಗೆ ಪ್ರಯಾಣ ಎಂಬ ಮಾಹಿತಿ ಲಭ್ಯವಾಗಿದ್ದರೂ, ಮೈಸೂರಿನಲ್ಲಿ ನಡೆದ ಸರ್ಕಾರದ ಕಾರ್ಯಕ್ರಮದಿಂದ ಅರ್ಧಕ್ಕೆ ನಿರ್ಗಮಿಸಿ ತರಾತುರಿಯಲ್ಲಿ ದೆಹಲಿಗೆ ಹೊರಟಿದ್ದು ಕುತೂಹಲ ಮೂಡಿಸಿದೆ. ಇತ್ತೀಚೆಗೆ ಶಿರಡಿಗೆ ತೆರಳಿದ್ದ ಡಿಕೆಶಿ ದಿಢೀರ್ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದರು. ಇದಾದ 8 […]

Continue Reading