ಗೂಂಡಾ ಕಾಯಿದೆಯಡಿ ಬಂಧನ ಆದೇಶವು ಸಂಪೂರ್ಣವಾಗಿ ಮುಂಜಾಗ್ರತಾ ಕ್ರಮವಾಗಿದ್ದು, ಸಮಾಜಕ್ಕೆ ರಕ್ಷಣೆ ಒದಗಿಸುವ ಉದ್ದೇಶದಿಂದ ಮಾಡಲಾಗಿದೆ

ಸರ್ಕಾರದ ಕ್ರಮವನ್ನು ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್‌ ರೌಡಿ ಶೀಟರ್‌ ರಾಜೇಶ್‌ ಯಾನೆ ಮೊಟ್ಟೆ ಎಂಬಾತನನ್ನು ಗೂಂಡಾ ಕಾಯಿದೆ ಅಡಿ ಬಂಧಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ಎತ್ತಿಹಿಡಿದಿದೆ. ರಾಜೇಶ್‌ ಬಂಧನ ಆಕ್ಷೇಪಿಸಿ ಆತನ ಪತ್ನಿ ಪ್ರಿಯದರ್ಶಿನಿ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೆ ಕಾಮೇಶ್ವರ ರಾವ್‌ ಮತ್ತು ಟಿ ಎಂ ನದಾಫ್‌ ಅವರ ನೇತೃತ್ವದ ವಿಭಾಗೀಯ ಪೀಠ ವಜಾಗೊಳಿಸಿದೆ. ಬಂಧನ ಆದೇಶವು ಸಂಪೂರ್ಣವಾಗಿ ಮುಂಜಾಗ್ರತಾ ಕ್ರಮವಾಗಿದ್ದು, ಸಮಾಜಕ್ಕೆ ರಕ್ಷಣೆ ಒದಗಿಸುವ ಉದ್ದೇಶದಿಂದ […]

Continue Reading

ಯೋಗಿಯ ಯೋಗ ನೀರಿನಿಂದ ನೀರಾ ತನಕ; ಯೋಗಿ ಮಂತ್ರಿ ಆಗದಿದ್ದರೆ ಆಪತ್ತು

ದೇಶದಲ್ಲೇ ವಿಶಿಷ್ಟವಾದ ನೀರಾ ಫ್ಯಾಕ್ಟರಿಯನ್ನು ಸ್ಥಾಪಿಸುವುದು ಯೋಗೇಶ್ವರ್ ಅವರ ಲೇಟೆಸ್ಟು ಪ್ಲಾನ್. ಇತ್ತೀಚೆಗೆ ನಡೆದ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಬಂಪರ್ ಗೆಲುವು ಸಾಧಿಸಿದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಈಗ ಉದ್ಯಮಿಯ ಗೆಟಪ್ಪು ಧರಿಸುತ್ತಿದ್ದಾರೆ.ಅಂದ ಹಾಗೆ ಬಿಜೆಪಿಯಿಂದ ಹೊರಬಂದು ಕಾಂಗ್ರೆಸ್ ಹಡಗು ಹತ್ತಿದ ಯೋಗೇಶ್ವರ್, ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರನ್ನು ಮಣಿಸಿದ್ದರು.ಅವರ ಈ ಗೆಲುವಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ.ಸುರೇಶ್ ಅವರ ಪಾತ್ರ ಇತ್ತಾದರೂ, ಸ್ವತ: […]

Continue Reading

ಕೋಮು ಶಕ್ತಿಗಳ ನಿಗ್ರಹದ ಕುರಿತು ಗೃಹ ಸಚಿವರ ಹೇಳಿಕೆಯಲ್ಲಿ ವಿಶ್ವಾಸಾರ್ಹತೆಯ ಕೊರತೆ: ಸಿಪಿಐಎಂ

ಕೋಮುವಾದಿ ಶಕ್ತಿಗಳ ಎದುರು ಸಣ್ಣ ಪುಟ್ಟ ಪ್ರತಿರೋಧಗಳಿಗೂ ಸಿದ್ದರಿಲ್ಲದ ಕಾಂಗ್ರೆಸ್ ಸರಕಾರ ಕೋಮುವಾದಿ ನಿಗ್ರಹ ಕಾರ್ಯಪಡೆ ಹೇಳಿಕೆ ನಂಬಲು ಕಷ್ಟ ಕೋಮು ಹಿಂಸಾಚಾರದ ಘಟನೆಗಳ ಹಿನ್ನಲೆಯಲ್ಲಿ ಜಿಲ್ಲೆಗೆ ಭೇಟಿ ನೀಡಿ, ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ತರುವಾಯ ಉಸ್ತುವಾರಿ ಸಚಿವರ ಸಮ್ಮುಖ ಗೃಹ ಸಚಿವ ಜಿ. ಪರಮೇಶ್ವರ್ ಕರಾವಳಿ ಜಿಲ್ಲೆಯಲ್ಲಿ ಕೋಮುಶಕ್ತಿಗಳ ನಿಗ್ರಹಕ್ಕೆ ಸರಕಾರ ಕೈಗೊಳ್ಳುವ ಕ್ರಮಗಳ ಕುರಿತು ನೀಡಿರುವ ಹೇಳಿಕೆ ವಿಶ್ವಾಸಾರ್ಹತೆಯ ಕೊರತೆಯನ್ನು ಹೊಂದಿದೆ ಎಂದು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಹೇಳಿದೆ. ನಕ್ಸಲ್ ನಿಗ್ರಹ […]

Continue Reading

ಮೈಸೂರಿನ ಉದ್ಯಮಿಯೊಬ್ಬರು ತನ್ನ ಪತ್ನಿ ಮತ್ತು ಪುತ್ರನಿಗೆ ಗುಂಡಿಕ್ಕಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮೇರಿಕಾದಲ್ಲಿ ನಡೆದಿದೆ.

ಅಮೇರಿಕದಲ್ಲಿ ಮೈಸೂರಿನ ಉದ್ಯಮಿಯೊಬ್ಬರು ತನ್ನ ಪತ್ನಿ, ಪುತ್ರನಿಗೆ ಗುಂಡಿಕ್ಕಿ ಹತ್ಯೆ ಮಾಡಿ ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪತ್ನಿ ಶ್ವೇತಾ ಹಾಗೂ ಹಿರಿಯ ಪುತ್ರನನ್ನು ಕೊಲೆ ಮಾಡಿದ ಬಳಿಕ ಹರ್ಷ ಕಿಕ್ಕೇರಿ ಹರ್ಷವರ್ಧನ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹರ್ಷ ತಮ್ಮ ಪತ್ನಿ ಶ್ವೇತಾ, ಇಬ್ಬರು ಪುತ್ರರೊಂದಿಗೆ ಅಮೆರಿಕದ ನ್ಯೂ ಕ್ಯಾಸಲ್‌ನಲ್ಲಿ ವಾಸವಿದ್ದರು. ಗುರುವಾರ ರಾತ್ರಿ ಹರ್ಷ, ಪತ್ನಿ ಹಾಗೂ ಹಿರಿಯ ಪುತ್ರನಿಗೆ ಗುಂಡಿಕ್ಕಿ, ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ವೇಳೆ ಏಳು ವರ್ಷದ […]

Continue Reading

ಹನುಮಂತ ಹಗ್ಗ ತಿನ್ನುವಾಗ ಪೂಜಾರಿಗೆಲ್ಲಿ ಶಾವಿಗೆ.?ಬಿಜೆಪಿಯಲ್ಲಿ ಈಗ ಲೆಟರ್ ವಾರ್

ಸಿದ್ದು ಸಂಪುಟಕ್ಕೆ ಮೈನರ್ ಸರ್ಜರಿ; ರಾಹುಲ್ ಗೇಕೆ ಗಣತಿ ಬೇಕು.? ✍️. ಆರ್.ಟಿ.ವಿಠ್ಠಲಮೂರ್ತಿ ರಾಜ್ಯ ಬಿಜೆಪಿಯಲ್ಲಿರುವ ವಿಜಯೇಂದ್ರ ವಿರೋಧಿ ಪಡೆ ಮೌನಕ್ಕೆ ಜಾರಿದೆ.ಪಕ್ಷ ವಿರೋಧಿ ಚಟುವಟಿಕೆಯ ಹೆಸರಿನಲ್ಲಿ ಯತ್ನಾಳ್ ಅವರನ್ನು ವರಿಷ್ಟರು ಉಚ್ಚಾಟಿಸಿದ ನಂತರ ಅದು ಕುದಿಯುತ್ತಿದೆಯಾದರೂ ಮುಂದೇನು ಮಾಡಬೇಕು ಅಂತ ಅದಕ್ಕೆ ತೋಚುತ್ತಿಲ್ಲ. ಹಾಗಂತ ವಿಜಯೇಂದ್ರ ಅವರ ವಿರುದ್ದ ಹೋರಾಡುವ ವಿಷಯದಲ್ಲಿ ಅದಕ್ಕೆ ಪ್ಲಾನುಗಳು ಇಲ್ಲವೆಂತಲ್ಲ.ವಸ್ತುಸ್ಥಿತಿ ಎಂದರೆ ರಾಜ್ಯ ಬಿಜೆಪಿಯ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವ ಶಿವರಾಜ್ ಸಿಂಗ್ ಚೌಹಾಣ್ ಕರ್ನಾಟಕಕ್ಕೆ ಬಂದರೆ ವಿಜಯೇಂದ್ರ ವಿರುದ್ಧ ಹಲವು […]

Continue Reading

ರಾಜ್ಯದ ನೂತನ ಪೊಲೀಸ್‌ ಮಹಾ ನಿರ್ದೇಶಕರಾಗಿ ಸಿಐಡಿ. ಡಿಜಿಪಿ ಎಂ.ಎ.ಸಲೀಂ ನೇಮಕಗೊಳ್ಳುವ ಸಾಧ್ಯತೆ

ರಾಜ್ಯದ ನೂತನ ಪೊಲೀಸ್‌ ಮಹಾ ನಿರ್ದೇಶಕರಾಗಿ ಸಿಐಡಿ ಡಿಜಿಪಿ ಎಂ.ಎ.ಸಲೀಂ ನೇಮಕಗೊಳ್ಳುವ ಸಾಧ್ಯತೆ ಇದೆ. ದಶಕಗಳ ಬಳಿಕ ಕನ್ನಡಿಗ ಐಪಿಎಸ್‌ ಅಧಿಕಾರಿಯೊಬ್ಬರು ಈ ಮಹತ್ವದ ಹುದ್ದೆಗೆ ಏರಿದಂತಾಗುತ್ತದೆ. ಹಾಲಿ ಪೊಲೀಸ್‌ ಮಹಾನಿರ್ದೇಶಕರಾದ ಅಲೋಕ್‌ ಮೋಹನ್‌ ರವರ ಸೇವಾವಧಿ ಎಪ್ರಿಲ್ 30ಕ್ಕೆ ಕೊನೆಗೊಳ್ಳಲಿದೆ. ಸಿಎಂ ಸಿದ್ದರಾಮಯ್ಯ ರವರು ಸಲೀಂ ಪರ ಒಲವು ತೋರಿದ್ದಾರೆ ಎನ್ನಲಾಗಿದೆ. ಸೇವಾ ಜ್ಯೇಷ್ಠತೆಯಲ್ಲಿ ಅಗ್ನಿಶಾಮಕ ದಳ, ಪೌರ ರಕ್ಷಣೆ ಡಿಜಿಪಿಯಾಗಿರುವ ಪ್ರಶಾಂತ್‌ ಕುಮಾರ್‌ ಠಾಕೂರ್‌ ಹಾಗೂ ಎಂ.ಎ.ಸಲೀಂ ಈ ಹುದ್ದೆಯ ರೇಸ್‌ನಲ್ಲಿದ್ದಾರೆ. ನಿಯಮ ಪ್ರಕಾರ […]

Continue Reading

ರಾಜ್ಯದ ಒಟ್ಟು 88 ಜನ ಪಾಕ್‌ ಪ್ರಜೆಗಳು. ಭಟ್ಕಳದಲ್ಲಿ 10 ಮಂದಿ ಮಹಿಳೆಯರು, ಮಂಗಳೂರುನಲ್ಲಿ ಮೂರು ಮಂದಿ ಮಹಿಳೆಯರು

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 88 ಜನ ಪಾಕ್‌ ಪ್ರಜೆಗಳಿದ್ದಾರೆ. ಈ ಪೈಕಿ ಅಲ್ಪಾವಧಿಯ ವೀಸಾ ಮೇಲೆ ಬಂದವರು ಇನ್ನೆರಡು ದಿನಗಳಲ್ಲಿ ದೇಶ ತೊರೆಯಬೇಕಾಗಿದೆ. ಪಹಲ್ಗಾಮ್‌ ಘಟನೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ನಿರ್ದೇಶನದಂತೆ ವಿದೇಶಾಂಗ ಸಚಿವಾಲಯ ನೀಡಿದ ಸೂಚನೆ ಪ್ರಕಾರ ಕ್ರಮ ಜರಗಿಸಲಾಗುವುದು. ಆದರೆ ದೀರ್ಘಾಕಾಲೀನ ವೀಸಾ ಹೊಂದಿದವರಿಗೆ ಇದು ಅನ್ವಯಿಸದು ಎಂದು ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. 88 ಮಂದಿಯಲ್ಲಿ ನಾಲ್ವರು ವೈದ್ಯಕೀಯ ಕಾರಣಗಳಿಗಾಗಿ ಭಾರತಕ್ಕೆ ಬಂದಿದ್ದಾರೆ. ಅವರು 4 ದಿನಗಳಲ್ಲಿ ದೇಶ […]

Continue Reading

ಗಣಿಗಾರಿಕೆಗೆ ನಡೆಸಲು ರಸ್ತೆ ನಿರ್ಮಾಣಕ್ಕೆ ವಿರೋಧ, ಗಣಿ ಧನಿಯಿಂದ ಜಾಗದ ಮಾಲಿಕನಿಗೆ ಪೈರಿಂಗ್; ಆಸ್ಪತ್ರೆಗೆ ದಾಖಲು

ಚಿಕ್ಕಬಳ್ಳಾಪುರದ ಮಂಚೇನಹಳ್ಳಿ ಕನಗಾನಕೊಪ್ಪ ಎಂಬಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬರ ಕಾಲಿಗೆ ಗುಂಡು ಹಾರಿಸಲಾಗಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ರಸ್ತೆ ನಿರ್ಮಿಸಲು ವಿರೋಧ ವ್ಯಕ್ತಪಡಿಸಿದ್ದರಿಂದ ರೈತ ಚಿಕನ್‌ ರವಿ ಎಂಬುವವರ ಮೇಲೆ ಸಕಲೇಶ ಕುಮಾರ್‌ ಎಂಬಾತ ಫೈರಿಂಗ್‌ ಮಾಡಿದ್ದಾನೆ. ಗುಂಡಿನ ದಾಳಿ ನಡೆಸಿರುವ ಸಕಲೇಶಕುಮಾರ್, ಬಿಜೆಪಿ ಮಾಜಿ ಎಂಎಲ್‌ಸಿ ವೈ.ಎ. ನಾರಾಯಣಸ್ವಾಮಿ ಅವರ ಸಂಬಂಧಿ ಎನ್ನಲಾಗಿದೆ. ರಸ್ತೆ ನಿರ್ಮಾಣ ವಿರೋಧಿಸಿ ಪ್ರತಿಭಟನೆ ನಡೆಸುವ ವೇಳೆ ಚಿಕನ್ ರವಿ ಕಾಲಿಗೆ ಸಕಲೇಶಕುಮಾರ್ ಗುಂಡು ಹಾರಿಸಿದ್ದಾನೆ. ಚಿಕ್ಕಬಳ್ಳಾಪುರದ ಕನಗಾನಕೊಪ್ಪದ […]

Continue Reading

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಗಡಿಬಿಡಿ.! ಶಾಸಕ ಸ್ಥಾನವನ್ನೇ ಕಳೆದುಕೊಳ್ಳುವ ಸಾಧ್ಯತೆ

ಇತ್ತೀಚೆಗೆ ಬಿಜೆಪಿಯ ಹದಿನೆಂಟು ಮಂದಿ ಶಾಸಕರ ಅಮಾನತಿನೊಂದಿಗೆ ಇದೀಗ ಮತ್ತೊಬ್ಬ ಶಾಸಕ ತನ್ನ ಸ್ಥಾನವನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ. ಮಾರ್ಚ್ ತಿಂಗಳಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಸ್ಪೀಕರ್ ಯು.ಟಿ ಖಾದರ್ ರವರು 18 ಬಿಜೆಪಿ ಶಾಸಕರನ್ನು ಅಮಾನತು ಮಾಡಿದ್ದರು. ಆದರೆ ತಮ್ಮ ಪಕ್ಷದ ಶಾಸಕರ ಅಮಾನತು ಆದೇಶ ವಾಪಸ್ ಪಡೆಯಬೇಕು ಎಂಬ ಹೋರಾಟವನ್ನು ಬಿಜೆಪಿ ಮುಂದುವರೆಸಿದ್ದು, ಈ ಅಮಾನತು ಆದೇಶದ ಮಧ್ಯೆ ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ ಕೂಡಾ ಶಾಸಕ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಬೆಳ್ತಂಗಡಿ […]

Continue Reading

ಮಾಲೀಕತ್ವ ಮರುಸ್ಥಾಪನೆ ಕಾನೂನು ಬಾಹಿರ: ಪರಿಶಿಷ್ಟರು ಜಮೀನು ಮಾರಿ ಮತ್ತೆ ಕೇಳಲಾಗದು; ಹೈಕೋರ್ಟ್ ಆದೇಶ

ಒಮ್ಮೆ ಮಾರಿದ್ದ ಜಮೀನನ್ನು ಹಿಂಪಡೆದು ಮತ್ತೆ ಎರಡನೇ ಬಾರಿಗೆ ಮಾರಾಟ ಮಾಡುವುದು ಅಪರಾಧ ಪ್ರಕ್ರಿಯೆಯಾಗಲಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸರಕಾರವು ಮಂಜೂರು ಮಾಡಿದ್ದ ಜಮೀನನ್ನು ಕರ್ನಾಟಕ ಎಸ್ ಸಿ-ಎಸ್ ಟಿ ( ಕೆಲವು ಜಮೀನುಗಳ ಪರಭಾರೆ ನಿಷೇಧ- ಪಿಟಿಸಿಎಲ್) ಕಾಯ್ದೆಯಡಿ ಹಿಂಪಡೆದು, ಮತ್ತೆ ಮಾರಾಟ ಮಾಡಿ ಪುನಃ ತಮಗೆ ಹಿಂದಿರಿಗಿಸುವಂತೆ ನಿರ್ದೇಶನ ಕೋರಿ ಪಿಟಿಸಿಎಲ್ ಕಾಯ್ದೆಯಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕಾನೂನು ಬಾಹಿರ ನಡೆ ಎಂದು ಹೈಕೋರ್ಟ್ ಹೇಳಿದೆ. ಸರ್ಕಾರದಿಂದ ಮಂಜೂರಾಗಿದ್ದ ಜಮೀನನ್ನು ಎರಡನೇ ಬಾರಿ […]

Continue Reading