ಪೊಲೀಸ್ ಮುಖ್ಯಸ್ಥರಾದ ಎಂ.ಎ.ಸಲೀಂ ರವರ ಸೇವಾವಧಿ ವಿಸ್ತರಿಸಿ ರಾಜ್ಯ ಸರಕಾರ ಆದೇಶ

ರಾಜ್ಯ ಪೊಲೀಸ್ ಮುಖ್ಯಸ್ಥರಾದ ಎಂ.ಎ.ಸಲೀಂ ರವರ ಸೇವಾವಧಿಯನ್ನು ವಿಸ್ತರಣೆ ಮಾಡಲಾಗಿದೆ. 2025ರ ಮೇನಲ್ಲಿ ಪ್ರಭಾರ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಎಂ.ಎ. ಸಲೀಂ ರವರ ಸೇವಾವಧಿಯನ್ನು 2027ರ ಆ. 29ರವರೆಗೆ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 1993ರ ಬ್ಯಾಚ್ IPS ಅಧಿಕಾರಿಯಾಗಿರುವ ಎಂ.ಎ.ಸಲೀಂ ಅವರು 2025ರ ಮೇನಲ್ಲಿ ಪ್ರಭಾರ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕರಾಗಿದ್ದರು. ಬಳಿಕ 2025ರ ಆಗಸ್ಟ್ ನಲ್ಲಿ ಪೂರ್ಣಾವಧಿಗೆ ನೇಮಕ ಮಾಡಲಾಗಿದ್ದು, ಈ ವರ್ಷದ ಜೂನ್​ನಲ್ಲಿ ನಿವೃತ್ತಿಯಾಗಬೇಕಿತ್ತು. ಸುಪ್ರೀಂಕೋರ್ಟ್​ ತೀರ್ಪಿನ ಅನುಸಾರ ಎಂ.ಎ.ಸಲೀಂ […]

Continue Reading

ರಾಜ್ಯದಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆ: ಇವಿಎಂ ಯಂತ್ರ ಪೇಲು; ಬ್ಯಾಲೆಟ್ ಪೇಪರ್ ಪಾಸು: ರಾಜ್ಯಪಾಲರ ಅಸ್ತು

ರಾಜ್ಯ ಸರ್ಕಾರವು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬಳಕೆಯನ್ನು ಕೈಬಿಟ್ಟು, ಬ್ಯಾಲೆಟ್‌ ಪೇಪರ್ ವ್ಯವಸ್ಥೆಯನ್ನು ಮರುಪರಿಚಯಿಸುವ ಮಹತ್ವದ ನಿರ್ಧಾರವನ್ನು ಅಧಿಕೃತಗೊಂಡಿದೆ. ವಿಧೇಯಕಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಅಸ್ತು ಎಂದಿದ್ದಾರೆ. ಇವಿಎಂಗಳ ಕಾರ್ಯನಿರ್ವಹಣೆ ಬಗ್ಗೆ ಕಳವಳ ವ್ಯಕ್ತವಾಗುತ್ತಿದ್ದು, ವಿಶ್ವಾಸಾರ್ಹತೆ ಮತ್ತು ಮತದಾರರ ಗೌಪ್ಯತೆ ಬಗ್ಗೆ ಅನುಮಾನಗಳು ಸೃಷ್ಟಿಯಾಗಿವೆ. ಹಾಗಾಗಿ ಗೌಪ್ಯತೆ ಮತ್ತು ಪಾರದರ್ಶಕತೆಗೆ ಒತ್ತು ನೀಡಲು ಕಾಗದದ ಮತಪತ್ರಗಳಿಗೆ ಮರಳಲು ಕಾಯಿದೆ ತಿದ್ದುಪಡಿಗೆ ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿತ್ತು. ಅಂತೆಯೇ ಪೂರಕ ಕಾನೂನು ತಿದ್ದುಪಡಿಗಾಗಿ […]

Continue Reading

ಶಾಮನೂರು ಕೋಟೆಯಲ್ಲಿ ‘ಸಂಪತ್ತಿಗೆ ಸವಾಲ್’; ವಿಜಯೇಂದ್ರ ಪಾಳಯದ ಲೆಕ್ಜಾಚಾರ; ಸಲೀಂ-ಹ್ಯಾರೀಸ್ ಹೊಸ ಜೋಡೆತ್ತುಗಳು.?

✍️. ಆರ್.ಟಿ.ವಿಠ್ಠಲಮೂರ್ತಿ ಅವತ್ತು ರಾಜ್ಯದಲ್ಲಿ ಜೆ.ಹೆಚ್.ಪಟೇಲ್ ನೇತೃತ್ವದ ಜನತಾದಳ ಸರ್ಕಾರ ಅಸ್ತಿತ್ವದಲ್ಲಿತ್ತು. ಜನತಾದಳದ ಸುಪ್ತಿಮೋ ದೇವೇಗೌಡರು ಪ್ರಧಾನಿ ಗದ್ದುಗೆ ಏರಿ ವಾಪಸ್ಸು ಬಂದಿದ್ದರು. ಈ ಸಂದರ್ಭದಲ್ಲೇ ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಎದುರಾಯಿತು.ಹೀಗೆ ಉಪಚುನಾವಣೆ ನಡೆದ ಎರಡು ಕ್ಷೇತ್ರಗಳ ಪೈಕಿ ಒಂದು ರಾಮನಗರ. ಮತ್ತೊಂದು ಮೊಳಕಾಲ್ಮೂರು.ಅವತ್ತು ರಾಜಕೀಯ ಬಲಾಬಲದ ದೃಷ್ಟಿಯಿಂದ ಜನತಾದಳ ಭರ್ಜರಿ ಗೆಲುವು ಸಾಧಿಸವೇಕಿತ್ತು. ಆದರೆ ಉಪಚುನಾವಣೆಯಲ್ಲಿ ಜನತಾದಳದ ಲೆಕ್ಕಾಚಾರ ಉಲ್ಟಾ ಆಗಿ ಪ್ರತಿಪಕ್ಷ ಕಾಂಗ್ರೆಸ್ಸಿನ ಅಭ್ಯರ್ಥಿಗಳು ಗೆಲುವು ಸಾಧಿಸಿದರು. ಅವತ್ತು ರಾಮನಗರ ಕ್ಷೇತ್ರದಲ್ಲಿ […]

Continue Reading

ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು; KIADB ಭೂಸ್ವಾಧೀನ ರದ್ದು, ದಯಾನಂದ್ ಪೈಗೆ ಭಾರೀ ದಂಡ, ಸಿಬಿಐ ತನಿಖೆಗೆ ನಿರ್ದೇಶನ

ಬೆಂಗಳೂರು: ಕೈಗಾರಿಕೆ ಹೆಸರಲ್ಲಿ ಭೂಸ್ವಾಧೀನ ಮಾಡಿಸಿ ವೈಯಕ್ತಿಕ ಬ್ಯುಸಿನೆಸ್ ನಡೆಸುವ ರಿಯಲ್ ಎಸ್ಟೇಟ್ ಉದ್ಯಮಿ ದಯಾನಂದ್ ಪೈ ಪ್ರಯತ್ನಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಮಹತ್ವದ ಆದೇಶವೊಂದರಲ್ಲಿ ಬೆಂಗಳೂರಿನ ಹೆಬ್ಬಾಳ ಬಳಿ ಲೇಕ್ ವ್ಯೂ ಪ್ರವಾಸೋದ್ಯಮ ನಿಗಮಕ್ಕೆ ನೂರಾರು ಕೋಟಿ ಬೆಲೆಬಾಳುವ ಜಾಮೀನು ಸ್ವಾಧೀನ ಅಧಿಸೂಚನೆಯನ್ನೇ ಹೈಕೋರ್ಟ್ ರದ್ದುಪಡಿಸಿದೆ. ಅಷ್ಟೇ ಅಲ್ಲ ಉದ್ಯಮಿ ದಯಾನಂದ್ ಪೈ ಅವರಿಗೆ ಬರೋಬ್ಬರಿ 10 ಲಕ್ಷ ರೂಪಾಯಿ ದಂಡ ವಿಧಿಸಿದ್ದಲ್ಲದೆ, ಸಿಬಿಐ ತನಿಖೆಗೂ ಆದೇಶಿಸಿ ಶುಕ್ರವಾರ ತೀರ್ಪು ಪ್ರಕಟಿಸಿದೆ. ಹೆಬ್ಬಾಳದಲ್ಲಿ ಸ್ಥಳೀಯರ ಆಕ್ಷೇಪದ […]

Continue Reading

ನಕಲಿ ದಾಖಲೆ ಸೃಷ್ಟಿಸಿ ಪೊಲೀಸ್ ಕ್ವಾಟ್ರಸ್ಸನ್ನೇ ಲಪಟಾಯಿಸಲು ಸ್ಕೆಚ್; ಸಂಘಿ ಮುಖಂಡರು ಅಂಧರ್.!

ಮಾಸ್ಟರ್ ಮೈಂಡ್ ಶ್ರೀನಾಥ್ ನಗರಗದ್ದೆ ಮಾಜಿ ಸಚಿವರೊಬ್ಬರ ಕಚೇರಿ ಮಾಜಿ ಸಹಾಯಕ ನಕಲಿ ದಾಖಲೆ ಸೃಷ್ಟಿಸಿ ಪೊಲೀಸ್ ವಸತಿಗೃಹದ ಜಾಗವನ್ನು ಕಬಳಿಸಲು ಯತ್ನಿಸಿದ್ದ ಪ್ರಕರಣದಲ್ಲಿ ಶಿವಮೊಗ್ಗದ ಸಂಘ ಪರಿವಾರದ ಬಿಜೆಪಿ ಮುಖಂಡ ಸೇರಿದಂತೆ ಮೂವರನ್ನು ಮಲ್ಲೇಶ್ವರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ಮುಖಂಡ ಶ್ರೀನಾಥ್ ನಗರಗದ್ದೆ, ತುಮಕೂರಿನ ಕೃಷ್ಣಮೂರ್ತಿ ಹಾಗೂ ಮೈಸೂರಿನ ಕಿಶನ್‌ ಬಂಧಿತರು. ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಎಂ.ಕುಮಾರ್ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು. ರಾಜ್ಯದ ವಿವಿಧೆಡೆ ಕಾರ್ಯಾಚರಣೆ ನಡೆಸಿ, ವಂಚಕ ಆರೋಪಿಗಳನ್ನು […]

Continue Reading

ಸುರ್ಜೇವಾಲಾ ವಿರುದ್ಧ ಶುರುವಾಗಲಿದೆ ದಂಗೆ.?; ಸಂಪುಟಕ್ಜೆ ಖಾದರ್, ಸ್ಪೀಕರ್ ಸ್ಥಾನಕ್ಕೆ ದಿನೇಶ್.?

ಕಡಲ ತೀರಕ್ಕೆ ಅರೆಸ್ಸೆಸ್ ಲಗ್ಗೆ; ಆಪರೇಷನ್ 2028 ಗೆ ಸಿದ್ದತೆ ✍️. ಅರ್.ಟಿ. ವಿಠ್ಠಲಮೂರ್ತಿ ಮೊನ್ನೆ ದಾವಣಗೆರೆ ಮತ್ತು ಬಾಗಲಕೋಟೆಯ ಉಪಚುನಾವಣೆಗೆ ಅಂತ ಹೋಗಿದ್ದ ಕಾಂಗ್ರೆಸ್ ಪಕ್ಷದ ಕೆಲ ನಾಯಕರು ಹೊಸ ಹೋರಾಟವೊಂದಕ್ಕೆ ಸ್ಕೆಚ್ ಹಾಕಿದ್ದಾರೆ. ರಾಜ್ಯ ಕಾಂಗ್ರೆಸ್ ನ ಉಸ್ತುವಾರಿ ವಹಿಸಿಕೊಂಡಿರುವ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಎತ್ತಂಗಡಿ ಮಾಡಿಸುವುದು ಈ ಹೋರಾಟದ ಮೂಲ ಉದ್ದೇಶ.ಅಂದ ಹಾಗೆ ಸುರ್ಜೇವಾಲಾ ಅವರು ಕರ್ನಾಟಕದಲ್ಲಿ ಪಕ್ಷದ ಉಸ್ತುವಾರಿ ವಹಿಸಿಕೊಂಡ ನಂತರ ರಾಜ್ಯದಲ್ಲಿ ಕೈ ಪಾಳಯ ಗುಂಪುಗಾರಿಕೆಯಿಂದ ತತ್ತರಿಸುತ್ತಿದೆ. ಎಲ್ಲಕ್ಕಿಂತ […]

Continue Reading

ಅಕ್ರಮ ಜಾನುವಾರು ಸಾಗಾಟ ಪತ್ತೆ: 20 ಜಾನುವಾರುಗಳ ರಕ್ಷಣೆ ಹಾಗೂ ಮೂವರ ವಿರುದ್ಧ ಪ್ರಕರಣ ದಾಖಲು.

ದಿನಾಂಕ:03.04.2026 ರಂದು ಮುಂಜಾನೆ, ಪೆರಿಯಶಾಂತಿ ಕಡೆಯಿಂದ ಮರ್ಧಾಳ ಕಡೆಗೆ ಒಂದು ಕಂಟೈನರ್ ಲಾರಿಯಲ್ಲಿ ಅಕ್ರಮವಾಗಿ ಜಾನುವಾರು ತುಂಬಿಸಿಕೊಂಡು ಸಾಗಾಟ ಮಾಡುತ್ತಿರುವುದಾಗಿ ಜಂಬುರಾಜ್ ಮಹಾಜನ್ ಪೊಲೀಸ್ ಉಪನಿರೀಕ್ಷಕರು ಕಡಬ ಪೊಲೀಸ್ ಠಾಣೆರವರಿಗೆ ಮಾಹಿತಿ ಬಂದ ಮೇರೆಗೆ, ಸಿಬ್ಬಂದಿಗಳೊಂದಿಗೆ ನೂಜಿಬಾಳ್ತಿಲ ಗ್ರಾಮದ ಕನ್ವರೆ ಎಂಬಲ್ಲಿ KA-11 B-9413 ನೇ ನೋಂದಣಿಯ ಕಂಟೇನರ್ ಲಾರಿಯನ್ನು ಪರಿಶೀಲಿಸಿದಾಗ ಲಾರಿಯಲ್ಲಿ 20 ಜಾನುವಾರುಗಳನ್ನು ಹಿಂಸಾತ್ಮಕವಾಗಿ ತುಂಬಿಸಿರುವುದು ಕಂಡುಬಂದಿರುತ್ತದೆ. ಲಾರಿಯಲ್ಲಿದ್ದಾತನಲ್ಲಿ ವಿಚಾರಿಸಲಾಗಿ ಹಾಸನ ಬೇಲೂರು ನಿವಾಸಿ ಇರ್ಫಾನ್ (26) ಎಂಬುದಾಗಿ ತಿಳಿಸಿರುತ್ತಾನೆ . ಸದ್ರಿ ಜಾನುವಾರುಗಳನ್ನು […]

Continue Reading

‘ಸಿಟಿ ಹೈಲೈಟ್ಸ್’ ಪತ್ರಿಕೆಯ ಮುಖ್ಯಸ್ಥ ಎಂ.ಪಿ ಅರುಣ್ ಕುಮಾರ್ ರವರಿಗೆ KUJW 2024 ನೇ ಸಾಲಿನ ಗಣೇಶ್ ಜಿ. ದತ್ತಿ ಪ್ರಶಸ್ತಿ

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(KUJW) ದ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಬೀದರ್ ನಲ್ಲಿ ಏಪ್ರಿಲ್ 11 ಮತ್ತು 12 ರಂದು ನಡೆಯಲಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಿಟಿ ಹೈಲೈಟ್ಸ್ ಇಂಗ್ಲಿಷ್ ಪತ್ರಿಕೆಯ ಶಿವಮೊಗ್ಗ ಮುಖ್ಯಸ್ಥ (ಬ್ಯೂರೋ ಛೀಪ್), ಪತ್ರಿಕೋದ್ಯಮದಲ್ಲಿ ವೃತ್ತಿ ನೈಫುಣ್ಯತೆ ಮತ್ತು ವೃತ್ತಿಪರತೆಯನ್ನು ಕಾಯ್ದುಕೊಂಡಿರುವ ಅರುಣ್ ಕುಮಾರ್ […]

Continue Reading

ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಡಾಕ್ಟ್ರು ಬರುತ್ತಾರೆ; ಒಂಭತ್ತಕ್ಕೆ ಡಿಕೆಶಿ ದಿಲ್ಲಿಗೆ.?, ಶಾಮನೂರು ಕೋಟೆ ಸೇಫ್ ಆಗಲಿದೆ.?

ಕುಮಾರಸ್ವಾಮಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಟಿಫಿಕೇಟು ✍️. ಅರ್.ಟಿ.ವಿಠ್ಟಲಮೂರ್ತಿ ಇತ್ತೀಚೆಗೆ ಹಿರಿಯ ಲಿಂಗಾಯತ ನಾಯಕ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರ ಜತೆ ಸಿಎಂ ಸಿದ್ದರಾಮಯ್ಯ ಚರ್ಚಿಸಿದ್ದಾರೆ. ಈ ಚರ್ಚೆಯ ಸಂದರ್ಭದಲ್ಲಿ: ‘ಡಾಕ್ಟ್ರೇ, ನೀವು ಕೆಪಿಸಿಸಿ ಅಧ್ಯಕ್ಷರಾಗಲು ರೆಡಿಯಾಗಿ’ ಎಂದಿದ್ದಾರೆ. ಸಿದ್ದರಾಮಯ್ಯ ಅವರು ಈ ಮಾತು ಹೇಳಿದಾಗ ಪ್ರತಿಕ್ರಿಯಿಸಿದ ಶರಣ ಪ್ರಕಾಶ್ ಪಾಟೀಲ್ ಅವರು: ‘ಸಾರ್ ನಾನು ಮಂತ್ರಿಯಾಗಿದ್ದುಕೊಂಡೇ ಕೆಪಿಸಿಸಿ ಅಧ್ಯಕ್ಷನಾಗಲು ತಯಾರಿದ್ದೇನೆ’ ಎಂದಾಗ: ಹಾಗೇ ಆಗಲಿ ಡಾಕ್ಟ್ರೇ ಅದಕ್ಕೇನು? ‘ಅಂತ […]

Continue Reading

ಆಪರೇಷನ್ ಟ್ವೆಂಟಿಗೆ ಸಿದ್ದು ರೆಡಿ; ಕೆ.ಸಿ. ವೇಣುಗೋಪಾಲ್ ಅವರ 3:2 ಸೂತ್ರ. ಜಮೀರಣ್ಣಾಕೀ ಪೊಲಿಟಿಕ್ಸ್

✍️. ಅರ್.ಟಿ.ವಿಠ್ಠಲಮೂರ್ತಿ ಕಳೆದ ಬುಧವಾರ ವಿಧಾನಸಭೆಯ‌ ಮೊಗಸಾಲೆಯಲ್ಲಿ ಕುಳಿತಿದ್ದ ಡಿಸಿಎಂ ಡಿಕೆಶಿ ಕ್ಯಾಂಪಿನ ಹಿರಿಯ ನಾಯಕರೊಬ್ಬರು ತಮ್ಮ ಆಪ್ತರ ಬಳಿ ಮೆಲ್ಲಗೆ ಮಾತನಾಡುತ್ತಿದ್ದರು. ಅವರ ಪ್ರಕಾರ: ‘ಏಪ್ರಿಲ್ ಮೊದಲ ವಾರ ದಿಲ್ಲಿಯಲ್ಲಿ ನಿರ್ಣಾಯಕ ಸಭೆ ನಡೆಯಲಿದೆ.’ ಅರ್ಥಾತ್, ಬಜೆಟ್ ಅಧಿವೇಶನದ ನಂತರ ದಿಲ್ಲಿಗೆ ಧಾವಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮಹತ್ವದ ವಿಷಯವೊಂದನ್ನು ಪ್ರಸ್ತಾಪಿಸಲಿದ್ದಾರೆ. ಅಂದ ಹಾಗೆ ಕೆ.ಸಿ. ವೇಣುಗೋಪಾಲ್ ಅವರು ಸಿದ್ದರಾಮಯ್ಯ ಅವರ ಪರವಾಗಿಯೇ ನಿಂತವರು ಮತ್ತು […]

Continue Reading