ಸಮಾಜ ಕಲ್ಯಾಣ ಇಲಾಖೆ ಅಧೀನದ ವಸತಿ ಶಾಲೆಗಳಲ್ಲಿ 3 ವರ್ಷಗಳಲ್ಲಿ 23 ವಿದ್ಯಾರ್ಥಿಗಳ ಅಸಹಜ ಸಾವು; ಪೋಷಕರಲ್ಲಿ ಆತಂಕ

ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿ ನಡೆಯುತ್ತಿರುವ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿ ಕಳೆದ 3 ವರ್ಷಗಳಲ್ಲಿ 23 ವಿದ್ಯಾರ್ಥಿಗಳು ವಿವಿಧ ಕಾರಣಗಳಿಗಾಗಿ ಮೃತಪಟ್ಟಿದ್ದಾರೆ. ಇದಲ್ಲದೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಸಂಘದ (ಕ್ರೈಸ್) ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಸತಿ ಶಾಲೆಗಳಲ್ಲಿ 21 ವಿದ್ಯಾರ್ಥಿಗಳು ಮೃತರಾಗಿದ್ದಾರೆ. ಇದು ವಿದ್ಯಾರ್ಥಿಗಳ ಪೋಷಕರಲ್ಲಿ ಸಹಜವಾಗಿಯೇ ಆತಂಕ ಮೂಡಿಸಿದೆ. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿನ ಹಲವಾರು ವಸತಿ ಶಾಲೆ -ಕಾಲೇಜುಗಳಲ್ಲಿ […]

Continue Reading

ಸತ್ಯಾಂಶಕ್ಕೆ ದೂರವಿರುವ ವಿಷಯಗಳನ್ನು ಹರಡುತ್ತಿರುವುದು ಆರೋಗ್ಯ ಸಚಿವರೇ ಹೊರತು ಸಂಘಟನೆಗಳಲ್ಲ; ಡಿವೈಎಫ್ಐ ತಿರುಗೇಟು

ಜನರ ಧಿಕ್ಕು ತಪ್ಪಿಸುತ್ತಿರುವುದು ಯಾರು.? ಸುಳ್ಳು ಹೇಳಿಕೆಗಳನ್ನು ನೀಡಿ ಜನರ ಬೇಡಿಕೆಗಳನ್ನು ಕಡೆಗಣಿಸುತ್ತಿರುವುದು ಯಾರು.? ಬೆಳ್ತಂಗಡಿ, ಬಂಟ್ವಾಳದ ತಾಲೂಕು ಆಸ್ಪತ್ರೆ, ಮೂಡಬಿದ್ರೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ವಿಟ್ಲ ಸಮುದಾಯ ಆಸ್ಪತ್ರೆಯನ್ನು ಖಾಸಗೀ ಸಂಸ್ಥೆಗಳೊಂದಿಗೆ ಕರಾರು ಒಪ್ಪಂದ ಮಾಡಿರುವ ಆರೋಗ್ಯ ಇಲಾಖೆಯ ನಡೆಯನ್ನು ಡಿವೈಎಫ್ಐ ವಿರೋಧಿಸಿದ್ದು ಮತ್ತು ಈ ಒಪ್ಪಂದ ರದ್ದುಗೊಳಿಸಲು ಜನ ಚಳುವಳಿಗಳನ್ನು ಕೈಗೆತ್ತಿಕೊಂಡಿರುವ ವೇಳೆ ಸರಕಾರ ಜಿಲ್ಲಾ ಆರೋಗ್ಯಾಧಿಕಾರಿಗಳ ಮೂಲಕ ” ಕೆಲವು ಸಂಘಟನೆಗಳು ಈ ಕುರಿತು ನಕರಾತ್ಮಕ ವಿಷಯಗಳನ್ನು ಹರಡುತ್ತಿದ್ದು ಇದು ಸತ್ಯಾಂಶಕ್ಕೆ […]

Continue Reading

ರಾಜ್ಯ ಚುನಾವಣಾ ಆಯೋಗದ ಮಹತ್ವದ ಆದೇಶ; ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗವು ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಅಭ್ಯರ್ಥಿಗಳು ನಾಮಪತ್ರದೊಂದಿಗೆ ಸಲ್ಲಿಸಬೇಕಾದ ಪ್ರಮಾಣಪತ್ರದ ನಮೂನೆಯಲ್ಲಿ ಕೆಲವು ಪ್ರಮುಖ ಅಂಶಗಳನ್ನು ಸೇರ್ಪಡೆಗೊಳಿಸಿ ಆಯೋಗವು ಈ ಹೊಸ ತಿದ್ದುಪಡಿ ಆದೇಶವನ್ನು ನೀಡಿದೆ. ಆಯೋಗದ ಆದೇಶ ಸಂಖ್ಯೆ: SECK/ULB/OTHR/1/2026-ULB ರನ್ವಯ, ನಾಮಪತ್ರದ ಪ್ರಮಾಣಪತ್ರದ ಭಾಗ-ಎ ಮತ್ತು ಭಾಗ-ಬಿ ನಲ್ಲಿ ಹೊಸ ಅಂಶಗಳನ್ನು ಅಳವಡಿಸಲಾಗಿದೆ. ಯಾವುದೇ ಶಾಸನಬದ್ಧ ಪ್ರಾಧಿಕಾರ ಅಥವಾ ಸ್ಥಳೀಯ ಪ್ರಾಧಿಕಾರವು ಅಭ್ಯರ್ಥಿಯನ್ನು ಈ ಹಿಂದೆ ಅನರ್ಹಗೊಳಿಸಿದ್ದರೆ, ಆ ಬಗ್ಗೆ ಸಂಪೂರ್ಣ ವಿವರಗಳನ್ನು […]

Continue Reading

ರಾಜ್ಯದಲ್ಲಿ ಇನ್ನು ಭೂ ಪರಿವರ್ತನೆಗೆ ಕಾಯಬೇಕಾಗಿಲ್ಲ; 30 ದಿನಗಳೊಳಗೆ ‘ಪರಿಭಾವಿತ ಭೂ ಪರಿವರ್ತನೆ’ ಎಂದು ಪರಿಗಣಿಸಿ ಸ್ವಯಂಚಾಲಿತವಾಗಿ ಅನುಮೋದನೆ: ಕಂದಾಯ ಇಲಾಖೆ

ರಾಜ್ಯದಲ್ಲಿ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಗಳಿಗಾಗಿ ಬಳಸಲು ಸಲ್ಲಿಸುವ ‘ಅಫಿಡವಿಟ್ ಆಧಾರಿತ ಭೂ ಪರಿವರ್ತನೆ’ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಮತ್ತಷ್ಟು ಸರಳಗೊಳಿಸಿದೆ. ನಿಗದಿತ 30 ದಿನಗಳೊಳಗೆ ಜಿಲ್ಲಾಧಿಕಾರಿಗಳು ಯಾವುದೇ ತೀರ್ಮಾನ ಕೈಗೊಳ್ಳದಿದ್ದಲ್ಲಿ, ಅದನ್ನು ‘ಪರಿಭಾವಿತ ಭೂ ಪರಿವರ್ತನೆ’ ಎಂದು ಪರಿಗಣಿಸಿ ಸ್ವಯಂಚಾಲಿತವಾಗಿ ಅನುಮೋದನೆ ನೀಡಲು ಕಂದಾಯ ಇಲಾಖೆ ಆದೇಶಿಸಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 95ರ ಅಡಿಯಲ್ಲಿ ಭೂ ಪರಿವರ್ತನೆ ಪ್ರಕ್ರಿಯೆಯನ್ನು ಸುಲಭಗೊಳಿಸಲು ಸರ್ಕಾರ ಈ ಮಹತ್ವದ ಕ್ರಮ ಕೈಗೊಂಡಿದೆ. ಮಾಸ್ಟರ್ ಪ್ಲಾನ್ ವ್ಯಾಪ್ತಿಯ […]

Continue Reading

ಭಾರತವು ಈಗ ‘ವಿಶ್ವಗುರು’ ಆಗಿ ಉಳಿದಿಲ್ಲ; ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ

ಭಾರತವು ಈಗ ‘ವಿಶ್ವಗುರು’ ಆಗಿ ಉಳಿದಿಲ್ಲ. ಆ ಪದವನ್ನು ಬಳಸಬಾರದು ಎಂದು ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಸೋಮವಾರ ಹೇಳಿದ್ದಾರೆ. ಸಂಸ್ಕೃತದ ಹೆಚ್ಚಿನ ಪ್ರಚಾರ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿಯೂ ಸಂಸ್ಕೃತ ಬಳಕೆಯ ಕುರಿತು ಪ್ರತಿಪಾದಿಸಿ ಅವರು ಈ ಮಾತನ್ನು ಹೇಳಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸ್ಕೃತವನ್ನು ಭಾರತದ ಅಧಿಕೃತ ಭಾಷೆಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಅನೇಕರು ಈ ಹಿಂದೆ ಇದಕ್ಕಾಗಿ ಪ್ರಯತ್ನಿಸಿದ್ದರು, ಆದರೆ ಆ ಪ್ರಸ್ತಾವನೆಗಳು ಅಂಗೀಕಾರವಾಗಲಿಲ್ಲ […]

Continue Reading

ಜಮೀರ್ ಕೋಟೆಗೆ ‘ನಾಹು’ ಸಾಬ್ ವಿಫಲ ಲಗ್ಗೆ; ಜಮೀರ್ ಅಹ್ಮದ್ ಹೇಳಿದ್ದೇನು?

ಜಮೀರ್ ಹೋದ್ರೆ ಹಂಗ್ ಅಸೆಂಬ್ಲಿ; ಯಡಿಯೂರೋತ್ಸವ ಮುಂದಕ್ಕೆ? ✍️. ಆರ್.ಟಿ.ವಿಠ್ಠಲಮೂರ್ತಿ ಮೊನ್ನೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರxನ್ನು ಸಂಪರ್ಕಿಸಿದ ವಸತಿ ಸಚಿವ ಜಮೀರ್ ಅಹ್ಮದ್ ಅವರು ಹಲವು ಧರ್ಮಸೂಕ್ಷ್ಮಗಳನ್ನು ವಿವರಿಸಿದ್ದಾರಂತೆ. ಅಂದ ಹಾಗೆ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಜಮೀರ್ ಅಹ್ಮದ್ ಈ ರೀತಿ ತಗಲಿಕೊಳ್ಳಲು ಅಷ್ಟೊತ್ತಿಗಾಗಲೇ ಹಬ್ಬಿದ್ದ ಪುಕಾರುಗಳು ಕಾರಣ.ಇಂತಹ ಪುಕಾರುಗಳ ಪ್ರಕಾರ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸಮರ್ಥ್ ಶಾಮನೂರು ಅವರನ್ನು ಸೋಲಿಸಲು ಜಮೀರ್ ಅಹ್ಮದ್ […]

Continue Reading

ಜಿಲ್ಲೆಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಅಗತ್ಯ ಸಿಬ್ಬಂದಿ ಸೇಮಿಸುವಂತೆ ಉಸ್ತುವಾರಿ ಸಚಿವರಿಗೆ ಮನವಿ

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ಪ್ರಕರಣಗಳ ಪೊಲೀಸ್ ಠಾಣೆಯಾಗಿರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ದ.ಕ ಇಲ್ಲಿಗೆ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ಜಿಲ್ಲಾ ಕೆಡಿಪಿ ಸದಸ್ಯ, ನ್ಯಾಯವಾದಿ ಸಂತೋಷ್ ಕುಮಾರ್ ಮಂಗಳೂರಿನಲ್ಲಿ ದಿನಾಂಕ 18-04-26 ರಂದು ಭೇಟಿಯಾಗಿ ಮನವಿ ಸಲ್ಲಿಸಿದರು. ದ.ಕ ಜಿಲ್ಲೆಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಮಂಗಳೂರು ಇದರ ವ್ಯಾಪ್ತಿಗೆ ಜಿಲ್ಲೆಯ 42 ಪೊಲೀಸ್ ಠಾಣೆಗಳು ಒಳಪಡುತ್ತಿದ್ದು , ಘೋಷಣೆಯಾಗಿರುವ ಇನ್ನೂ […]

Continue Reading

ದಾವಣಗೆರೆ ಗೆದ್ದರೆ ಸಮರ್ಥ್‌ಗಿಂತ ಸಲೀಂ, ರಿಜ್ವಾನ್ʼಗೆ ಲಾಭ; ಸೋತರೆ, ಸಮುದಾಯದ ಮೇಲೆ ಜಮೀರ್ ಹಿಡಿತ ಯಶಸ್ವಿ

ದಾವಣಗೆರೆಯಲ್ಲಿ ಮುಕ್ತಾಯಗೊಂಡ ಉಪಚುನಾವಣೆಯಲ್ಲಿ ಸೀಟು ಹಂಚಿಕೆಯ ವಿಷಯದಲ್ಲಿ ಜಾತಿ-ಧರ್ಮದ ಬಗ್ಗೆ ಶುರುವಾದ ಗದ್ದಲ, ಗಲಾಟೆ ಇದೀಗ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಜ್ವಾಲೆಯಾಗಿ ಉರಿಯುತ್ತಿದೆ. ಆರಂಭದಲ್ಲಿ ಮುಸ್ಲಿಂ ನಾಯಕರೆಲ್ಲ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಸಿಗಬೇಕೆಂದು ಹಠಕ್ಕೆ ಬಿದ್ದರೂ, ಸಮರ್ಥ್‌ಗೆ ಟಿಕೆಟ್ ನೀಡುತ್ತಿದ್ದಂತೆ ಜಮೀರ್ ಅಹ್ಮದ್, ನಾಸೀರ್ ಅಹ್ಮದ್ ಹಾಗೂ ಅಬ್ದುಲ್ ಜಬ್ಬರ್ ಹೊರತುಪಡಿಸಿ ಬಹುತೇಕ ಮುಸ್ಲಿಂ ನಾಯಕರು ಸಮರ್ಥ್ ಪರ ಪ್ರಚಾರಕ್ಕೆ ಇಳಿದಿದ್ದರು. ಕಾಂಗ್ರೆಸ್ ಮುಸ್ಲಿಂ ನಾಯಕರಲ್ಲಿ ‘ಅಸಮಾಧಾನ’ ಬಹುದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾಗಿತ್ತು ಎನ್ನುವುದು ಸತ್ಯ. ದಾವಣಗೆರೆ ದಕ್ಷಿಣ ಕ್ಷೇತ್ರದ […]

Continue Reading

ರಾಜ್ಯ ಕಾಂಗ್ರೆಸ್ ನಲ್ಲಿ ಡಿಕೆಶಿ ಯದ್ದೇ ಪ್ರಾಬಲ್ಯ.! ಸಿದ್ದು ಆಪ್ತ ಮುಸ್ಲಿಂ ನಾಯಕರ ಖೇಲ್ ಖತಂ..!

ಸ್ಪೀಕರ್ ಖಾದರ್ ಸೈಡ್ ಲೈನಿಗೆ ನಡೆಯುತ್ತಿದೆ ಭರ್ಜರಿ ತಯಾರಿ.! ಏನಿದು ಹೊಸ ಬೆಳವಣಿಗೆ.? ಇಲ್ಲಿದೆ ಡೀಟೈಲ್ಸ್ ದಾವಣಗೆರೆ ಉಪಚುನಾವಣೆ ರಾಜ್ಯ ಹಾಗೂ ದೇಶದಾದ್ಯಂತ ಭಾರೀ ಸುದ್ದಿ ಮಾಡಿದೆ. ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಮುಸ್ಲಿಮರನ್ನು ಕಡೆಗಣಿಸಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿರುವುದು ಒಂದು ಕಡೆಯಾದರೆ, ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಕುಟುಂಬದ ಕುಡಿಯನ್ನು ಮಣ್ಣು ಮುಕ್ಕಿಸಲು ಕಾಂಗ್ರೆಸ್ ಪಕ್ಷದಲ್ಲಿರುವ ಮುಸ್ಲಿಂ ನಾಯಕರ ಗುಂಪೊಂದು ಪ್ರಯತ್ನಿಸಿದ್ದು, ಅದಕ್ಕೆ ಪ್ರತಿಯಾಗಿ ಪಕ್ಷ ವಿರೋಧಿ ಚಟುವಟಿಕೆಯ ಕಾರಣವೊಡ್ಡಿ ಅಬ್ದುಲ್ ಜಬ್ಬಾರ್ ಹಾಗೂ ನಸೀರ್ ಅಹಮ್ಮದ್ […]

Continue Reading

ಸಚಿವ ಜಮೀರ್ ಅಹ್ಮದ್ ಅವರ ಹೆಸರನ್ನು ಹಾಳು ಮಾಡಲು ಸಂಚು, ಮುಸ್ಲಿಮರನ್ನು ಕೆಣಕಿದರೆ ಕಾಂಗ್ರೆಸಿಗೆ ತಕ್ಕ ಪಾಠ

2028ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 20 ಸೀಟು ಬರುವುದು ಕೂಡ ಕಷ್ಟ: ವಿಶ್ವ ಮುಸ್ಲಿಂ ಪರಿಷತ್ ದಾವಣಗೆರೆ ಉಪ ಚುನಾವಣೆಯ ಕುರಿತಾಗಿ ಕಾಂಗ್ರೆಸ್ ಹೈಕಮಾಂಡ್‌ಗೆ ಸಲ್ಲಿಕೆಯಾದ ವರದಿಯಲ್ಲಿ ಸಚಿವ ಜಮೀರ್ ಅಹ್ಮದ್ ಅವರ ಹೆಸರನ್ನು ಹಾಳು ಮಾಡಲು ಸಂಚು ನಡೆಯುತ್ತಿದೆ. ಒಂದು ವೇಳೆ ಜಮೀರ್ ಅಹ್ಮದ್ ಅವರ ತಲೆದಂಡ ಮಾಡಿದರೆ ಅಥವಾ ಅವರನ್ನು ಕೆಣಕಿದರೆ, 2028ರ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 20 ಸೀಟು ಬರುವುದು ಕೂಡ ಕಷ್ಟವಾಗಲಿದೆ’ ವಿಶ್ವ ಮುಸ್ಲಿಂ ಪರಿಷತ್ ಎಚ್ಚರಿಕೆ ರವಾನಿಸಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗೋಷ್ಠಿ […]

Continue Reading