ಕಾರ್ಪೊರೇಟ್ ಹಿಂದುತ್ವದ ದುಷ್ಟಕೂಟವನ್ನು ಸೋಲಿಸದಿದ್ದರೆ ಭಾರತಕ್ಕೆ ಭವಿಷ್ಯವಿಲ್ಲ: ಸುನಿಲ್ ಕುಮಾರ್ ಬಜಾಲ್

ಕಳೆದ ಹತ್ತು ವರ್ಷಗಳಲ್ಲಿ ದೇಶದ ಜನರಿಗೆ ಮಂಕುಬೂದಿ ಎರಚಿ,ಹತ್ತು ಹಲವು ಸುಳ್ಳು ಆಶ್ವಾಸನೆಗಳನ್ನು ನೀಡಿ ಅಧಿಕಾರ ನಡೆಸಿದ ನರೇಂದ್ರ ಮೋದಿ ನೇತೃತ್ವದ ಸರಕಾರ ಎಲ್ಲಾ ವಿಭಾಗದ ಜನತೆಗೆ ಮೋಸ ಮಾಡಿ ಲಕ್ಷಾಂತರ ಕೋಟಿ ರೂಪಾಯಿ ಹಣವನ್ನು ಚುನಾವಣಾ ಬಾಂಡ್ ಹೆಸರಿನಲ್ಲಿ ಲಪಟಾಯಿಸಿ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದೆ.ಇಂತಹ ಕಾರ್ಪೊರೇಟ್ ಹಿಂದುತ್ವದ ದುಷ್ಟಕೂಟವನ್ನು ದೇಶದ ಜನತೆ ಒಂದಾಗಿ ಸೋಲಿಸದಿದ್ದರೆ ಬಾರತಕ್ಕೆ ಭವಿಷ್ಯವಿಲ್ಲ ಎಂದು CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ರವರು ಆತಂಕ ವ್ಯಕ್ತಪಡಿಸಿದರು. ಉಳ್ಳಾಲ […]

Continue Reading

ಚೈತ್ರಾ ಕುಂದಾಪುರ ಮತ್ತು ಆಕೆಯ ಗ್ಯಾಂಗ್ ಸದಸ್ಯರಿಂದ ಸೆಲೂನ್ ಮಾಲಿಕ ಧನರಾಜ್ ಗೆ ಸಾಕ್ಷಿ ಹೇಳದಂತೆ ಬೆದರಿಸಿ ಹಲ್ಲೆ

ಕಳೆದ ವಿಧಾನ ಸಭೆ ಚುನಾವಣೆ ವೇಳೆ ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೇಟ್ ಕೊಡಿಸುವುದಾಗಿ ಗೋವಿಂದಬಾಬು ಅವರ ಬಳಿಯಿಂದ ಚೈತ್ರಾ ಕುಂದಾಪುರ ಒಟ್ಟು 4 ಕೋಟಿ ರೂಪಾಯಿ ಹಣ ಪಡೆದಿದ್ದರು. ಆದರೆ ಗೋವಿಂದಬಾಬು ಪೂಜಾರಿ ಅವರಿಗೆ ಟಿಕೆಟ್​ ಸಿಗಲಿಲ್ಲ. ಬಳಿಕ ಗೋವಿಂದಬಾಬು ಕೊಟ್ಟ ಹಣವನ್ನು ವಾಪಸ್ಸು ಕೇಳಿದ್ದಾರೆ. ಆದರೆ ಚೈತ್ರಾ ಕುಂದಾಪುರ ಹಣ ನೀಡದೇ ವಂಚಿಸಿದ್ದಾರೆ ಎಂದು ಗೋವಿಂದಬಾಬು ಪೂಜಾರಿ ಅವರು ದೂರು ನೀಡಿದ ಹಿನ್ನಲೆಯಲ್ಲಿ ಚೈತ್ರ ಕುಂದಾಪುರ ಎಂಬ ಹಿಂದೂ ಕಾರ್ಯಕರ್ತೆಯನ್ನು ಪೊಲೀಸರು ಬಂಧಿಸಿದ್ದರು. ಕೋಟ್ಯಾಂತರ ರೂಪಾಯಿ […]

Continue Reading

ಮೂಡಾ ಕಮೀಷನರ್ ಮನ್ಸೂರ್ ಆಲಿ ಲೋಕಾಯುಕ್ತ ರೈಡ್.. ಸೆಟ್ಟಿಂಗ್.. ಫಿಕ್ಸಿಂಗ್?

ಟಿ.ಡಿ.ಆರ್ ಫೈಲ್ ನನ್ನ ಆಸಕ್ತಿಗೆ ಸಂಬಂಧಿಸಿದ್ದು, ತಕ್ಷಣವೇ ಕ್ಲಿಯರ್ ಮಾಡಬೇಕು ಎಂದು ಶಾಸಕರು ಒತ್ತಡ ಹಾಕಿದ್ದಾದರೂ ಯಾತಕ್ಕೆ.? ಮೂಡಾ ಕಮೀಷನರ್ ಮನ್ಸೂರ್ ಆಲಿ ಮೇಲೆ ನಡೆದಿಡೆ ಎನ್ನಲಾಗಿರುವ ಲೋಕಾಯುಕ್ತ ರೈಡ್ ಪ್ರಕರಣ ಇದೀಗ ದೊಡ್ಡ ದೊಡ್ಡ ಗುಸುಗುಸಿಗೆ ಕಾರಣವಾಗಿದ್ದು, 25 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆಯಲ್ಲಿ ಲೋಕಾಯುಕ್ತರು ಅರೆಸ್ಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ಷಡ್ಯಂತ್ರ ನಡೆದಿದೆ ಅನ್ನುವ ಮಾತುಗಳು ಇದೀಗ ಕೇಳಿ ಬರುತ್ತಿದೆ. ಕೆಲವು ತಿಂಗಳ ಹಿಂದೆ ಮೂಡಾದ ಮಹಿಳಾ ಸಿಬ್ಬಂದಿಯೊಬ್ಬರು ಆಯುಕ್ತರ […]

Continue Reading

ಬಿಲ್ಲವರು ಕೊಲ್ಲುವವರೂ, ಕೊಲ್ಲಲ್ಪಡುವವರೂ ಅಲ್ಲ. ಈ ನೆಲವನ್ನು ಆಳುವವರು”

✍️. ನವೀನ್ ಸೂರಿಂಜೆ, ಪತ್ರಕರ್ತರು ಬಿಲ್ಲವರು 2024 ರ ಲೋಕಸಭಾ ಚುನಾವಣೆಯಲ್ಲಿ ಸಿಕ್ಕಿರುವ ರಾಜಕೀಯ ಪ್ರಾತಿನಿಧ್ಯವನ್ನು ಬಳಸಿಕೊಳ್ಳಬೇಕು. ಇಲ್ಲದೇ ಇದ್ದರೆ ಬಿಲ್ಲವ ಸಮುದಾಯ ಮತ್ತೆ ಗತ ಕಾಲಕ್ಕೆ ಹಿಂದಿರುಗುವ ಅಪಾಯವಿದೆ. “ನಾವು ಕೊಲ್ಲುವವರೂ ಅಲ್ಲ, ಕೊಲ್ಲಲ್ಪಡುವವರೂ ಅಲ್ಲ. ಈ ನೆಲವನ್ನು ಆಳುವವರು” ಎಂಬುದನ್ನು ಈ ಚುನಾವಣೆಯ ಮೂಲಕ ಬಿಲ್ಲವರು ಸಾರಿ ಸಾರಿ ಹೇಳಬೇಕಿದೆ – ನವೀನ್‌ ಸೂರಿಂಜೆ, ಪತ್ರಕರ್ತರು ಹಿಂದುತ್ವ ಮತ್ತು ಬಿಲ್ಲವರ ಸಂಬಂಧದ ಬಗೆಗಿನ ಸಣ್ಣ ಘಟನೆ ನೆನಪು ಮಾಡಿಕೊಳ್ಳಿ. 2006 ಡಿಸೆಂಬರ್ 1 ರಂದು […]

Continue Reading

ಶಿಳ್ಳೆಕ್ಯಾತ ಸಮುದಾಯಗಳಿಗೆ ಉಚಿತ ಮನೆ, ನಿವೇಶನ ಸಹಿತ ಮೂಲಭೂತ ಸೌಕರ್ಯಗಳ ಒದಗಿಸಲು ಒತ್ತಾಯ: ಸಂತೋಷ್ ಬಜಾಲ್

ಕುಂದಾಪುರ: ಉಡುಪಿ, ಕುಂದಾಪುರದ ಹಾಲಾಡಿ, ಬ್ರಹ್ಮಾವರ, ಮಲ್ಪೆ, ಕಟ್ ಬೆಳ್ತೂರು, ಕಟಪಾಡಿ, ಪಾಂಗಾಳ ಭಾಗದ ನದಿ ತೀರಗಳಲ್ಲಿ ಅಲೆಮಾರಿ ಬುಡಕಟ್ಟು ಸಮುದಾಯವೆಂದು ಘೋಷಿಸಲಾಗಿರುವ ಶಿಳ್ಳೆಕ್ಯಾತ ಸಮುದಾಯದ ಸುಮಾರು 25 ಕುಟುಂಬಗಳು ಕಳೆದ ಹಲವು ವರುಷಗಳಿಂದ ತೆಪ್ಪಗಳ ಮೂಲಕ ನದಿಯಲ್ಲಿ ಬಲೆ ಬೀಸಿ ಮೀನು ಹಿಡಿದು ಮಾರಾಟ ಮಾಡುವ ಕಷ್ಟದಾಯಕ ಮತ್ತು ಅಪಾಯಕಾರಿ ವೃತ್ತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈ ಸಮುದಾಯಗಳು ಯಾವುದೇ ಕನಿಷ್ಟ ಮೂಲಭೂತ ಸೌಕರ್ಯಗಳಿಲ್ಲದ ಗುಡಿಸಲುಗಳಲ್ಲಿ ವಾಸಿಸುತ್ತಿರುವುದು ಮಾತ್ರವಲ್ಲದೆ ಸ್ಥಳೀಯರಿಂದ ಶೋಷಣೆಗೂ ಒಳಗಾಗುತ್ತಿದ್ದಾರೆ. ಸೂಕ್ಷ್ಮ ಮತ್ತು ಅತೀ […]

Continue Reading

ಮಂಗಳೂರು’ಭೂ’ಮಾಫಿಯಾ ನಗರವಾಗಿ ಪರಿವರ್ತನೆ ಹೊಂದುತ್ತಿದೆ

ಗಿರಿಧರ್ ಶೆಟ್ಟಿ ಅತ್ಯಾಪ್ತರಾಗಿರುವ ಶಾಸಕ ವೇದವ್ಯಾಸ ಕಾಮತ್ ಸಹಕಾರ, ಕೃಪಾಕಟಾಕ್ಷ ಇಲ್ಲದಿರಲು ಸಾಧ್ಯವಿಲ್ಲ.! RTI ಕಾರ್ಯಕರ್ತ ಬಾಳಿಗಾ ಕೊಲೆಯ ಸಂಚು ನಡೆದಿರುವುದು ಗಿರಿಧರ್ ಶೆಟ್ಟಿಯ ಗೆಸ್ಟ್ ಹೌಸ್ ನಲ್ಲಿ ಪೊಲೀಸರು ತನಿಖಾ ವರದಿಯಲ್ಲಿ ತೋರಿಸಿದ್ದು ನಿಜ ತಾನೆ: ಮುನೀರ್ ಕಾಟಿಪಳ್ಳ ಮಂಗಳೂರು ಮೂಡಾ ಕಮೀಷನರ್ ಮನ್ಸೂರ್ ಅಲಿ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೆ ಒಳಗಾದ ನಂತರ ಮಂಗಳೂರು ನಗರದ ಭೂದಂಧೆ ಲಾಬಿಯ ಕರಾಳ ಮುಖಗಳು ಒಂದೊಂದಾಗಿ ಹೊರಬರುತ್ತಿವೆ. ಟಿ.ಡಿ.ಆರ್ ನೀಡಿ ನಾಗರಿಕರಿಂದ ನಗರ ಪಾಲಿಕೆಯ ರಸ್ತೆ, ಚರಂಡಿ, ಫುಟ್ […]

Continue Reading

ಮೋದಿ ಸರಕಾರ ಮರಳಿ ಗೆದ್ದರೆ ದುಡಿಯವ ವರ್ಗದ ಹಕ್ಕುಗಳು ಪೂರ್ತಿ ನಾಶವಾಗಲಿದೆ : ಮುನೀರ್ ಕಾಟಿಪಳ್ಳ

ಕೈಕಂಬ: ಹತ್ತು ವರ್ಷಗಳ ನರೇಂದ್ರ ಮೋದಿ ಆಡಳಿತದಲ್ಲಿ ಕಾರ್ಮಿಕ ಹಕ್ಕುಗಳನ್ನು ಬಹುತೇಕ ಕಿತ್ತುಕೊಳ್ಳಲಾಗಿದೆ. ಈಗಾಗಲೆ ಕಾರ್ಮಿಕರು, ನೌಕರರ ಹೋರಾಟದ ಶಕ್ತಿ ಕ್ಷೀಣಿಸಿ ದುರ್ಬಲಗೊಂಡಿದೆ. ಬಿಜೆಪಿ ಗೆದ್ದು ಮೋದಿ ಸರಕಾರ ಅಧಿಕಾರದಲ್ಲಿ ಮುಂದುವರಿದರೆ ದುಡಿಯುವ ವರ್ಗದ ಹಕ್ಕುಗಳು ಪೂರ್ತಿ ನಾಶವಾಗಲಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೋದಿ ಸರಕಾರದ ಸೋಲಿಗೆ ಹಗಲು ರಾತ್ರಿ ಕೆಲಸ ಮಾಡದೆ ಕಾರ್ಮಿಕ ವರ್ಗಕ್ಕೆ ಬೇರೆ ದಾರಿ ಇಲ್ಲ ಎಂದು ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಹೇಳಿದರು. ಅವರು ಕೈಕಂಬದ ಖಾಸಗಿ ಸಭಾಂಗಣದಲ್ಲಿ […]

Continue Reading

MRPL ನಿಂದ ಫಲ್ಗುಣಿ ನದಿಗೆ ನೇರವಾಗಿ ಮಾರಕ ಕೈಗಾರಿಕಾ ತ್ಯಾಜ್ಯ‌. ಮತ್ತಷ್ಟು ಕಳ್ಳ ಕಾಲುವೆಗಳು ಪತ್ತೆ

ಪಲ್ಗುಣಿ ನದಿಗೆ ತೋಕೂರು ಹಳ್ಳಕ್ಕೆ ಮಾರಕ ಕೈಗಾರಿಕಾ ತ್ಯಾಜ್ಯ ಹರಿಸುವ mrpl, hpcl ನ ಕಾರ್ಯ ಜಿಲ್ಲಾಡಳಿತದ ಮೌನ ಬೆಂಬಲದೊಂದಿಗೆ ನಾಲ್ಕನೇ ವಾರವೂ ಸತತವಾಗಿ ಮುಂದುವರಿದಿದೆ. ಇಂದು ಬೆಳಗ್ಗಿನ ಜಾವದಿಂದಲೇ ನಾಗರಿಕ ಹೋರಾಟ ಸಮಿತಿಯ ತಂಡ ತೋಕೋರು ಗ್ರಾಮದ ದುರ್ಗಮ ಪ್ರದೇಶದಲ್ಲಿ ಕೈಗಾರಿಕಾ ತ್ಯಾಜ್ಯ ಹರಿದು ಬಂದು ತೋಕೂರು ಹಳ್ಳಸೇರುವ ಕಳ್ಳ ಕಾಲುವೆಗಳ ಹುಡುಕಾಟ ನಡೆಸುತ್ತಿರುವಾಗ mrpl, HPCL ಕಂಪೌಂಡ್ ಒಳಭಾಗದಿಂದ ಕಾಂಕ್ರೀಟ್ ಕಾಲುವೆಯ ಮೂಲಕ ಅಪಾಯಕಾರಿ ತ್ಯಾಜ್ಯ ನೀರು ಹರಿದು ಬರುವ ಮೂಲಗಳು ಪತ್ತೆಯಾದವು. Mrpl, […]

Continue Reading

ಟಿ ಡಿ ಆರ್ ಫೈಲ್ ಕ್ಲಿಯರೆನ್ಸ್ ಗಾಗಿ ಲಂಚದ ಬೇಡಿಕೆ, ಮೂಡಾ ಕಮೀಷನರ್ ಮನ್ಸೂರ್ ಅಲಿ ಬಂಧನ

ಇತ್ತೀಚೆಗೆ ವಿವಾದಕ್ಕೀಡಾದ ನಗರದ ಸ್ಟ್ರೀಟ್ ಫುಡ್ ಫೆಸ್ಟಿವಲ್ ನ ರೂವಾರಿ ‘ಭೂ’ ದಂಧೆಯ ಕಿಂಗ್ ಪಿನ್ ಟಿ.ಡಿ.ಆರ್ ಹೆಸರಿನಲ್ಲಿ ನಡೆಯುವ ಭೂದಂಧೆ, ಸಾರ್ವಜನಿಕ ಸಂಪತ್ತಿನ ಲೂಟಿ, ದುರುಪಯೋಗಕ್ಕೆ ಕಡಿವಾಣ ಹಾಕಬೇಕು: ಮುನೀರ್ ಕಾಟಿಪಳ್ಳ ಮೂಡಾ ಆಯುಕ್ತ ಮನ್ಸೂರ್ ಅಲಿ ಯವರನ್ನು ಭೂ ಖರೀದಿ, TDR ಫೈಲ್ ಕ್ಲಿಯರೆನ್ಸ್ ಗಾಗಿ ಲಂಚದ ಹಣದ ಬೇಡಿಕೆಯ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಬಂಧಿಸಿರುವುದು ಮಂಗಳೂರಿನಲ್ಲಿ ಭೂದಂಧೆಯ ಆಗಾಧತೆ ಹಾಗೂ ಕರಾಳ ಮುಖವನ್ನು ಬಯಲುಗೊಳಿಸಿದೆ. ಪಚ್ಚನಾಡಿ ಡಂಪಿಂಗ್ ಯಾರ್ಡ್ ಪಕ್ಕದಲ್ಲಿ ಯಾವುದೇ […]

Continue Reading

ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನರ ಬಂಧನ; ಚಿನ್ನದ ಆಸೆಗೆ ಬಲಿ.!

ತುಮಕೂರಿನ ಕುಚ್ಚಂಗಿ ಕೆರೆಯ ಬಳಿ ಸುಟ್ಟ ಸ್ಥಿತಿಯಲ್ಲಿ ಮೂರು ಶವಗಳು ಪತ್ತೆಯಾಗಿದ್ದು, ಕಾರಿನಲ್ಲಿದ್ದ ಮೂರು ಶವಗಳ ಪೈಕಿ ಒಂದು ಕಾರ್ಕಳದ ಶಿರ್ಲಾಲು ಮೂಲದ ಯುವಕನಾಗಿದ್ದು, ಇನ್ನಿಬ್ಬರು ಬೆಳ್ತಂಗಡಿ ನಿವಾಸಿಗಳು. ಇವರ ಶವ ಕಾರಿನೊಳಗೆ ಸುಟ್ಟುಕರಕಲಾದ ಸ್ಥಿತಿಯಲ್ಲಿ ತುಮಕೂರಿನ ಕೋರ ಹೋಬಳಿಯ ಕುಚ್ಚಂಗಿ ಕೆರೆ ಬಳಿ ಪತ್ತೆಯಾಗಿತ್ತು. ಕಾರಿನ ಮಾಹಿತಿ ದೊರೆತು ತನಿಖೆ ನಡೆಸಿದಾಗ ಬೆಳ್ತಂಗಡಿಯ ರಫೀಕ್‌ ಎಂಬವರಿಗೆ ಸೇರಿದ್ದಾಗಿದ್ದು, ಕಾರಿನ ಢಿಕ್ಕಿಯಲ್ಲಿ ಎರಡು ಮೃತದೇಹಗಳು ಹಾಗೂ ಹಿಂಬದಿಯ ಸೀಟಿನಲ್ಲಿ ಒಂದು ಮೃತದೇಹ ಪತ್ತೆಯಾಗಿದ್ದು, ಮೂವರನ್ನು ಕೊಲೆಗೈದು ಕಾರಿನೊಳಗೆ […]

Continue Reading