ಹಿಂಸೆಗೆ ಪ್ರಚೋದಿಸುವ, ಗೂಂಡಾಗಿರಿ ಮೆರೆದಿರುವ ಶಾಸಕ ವೇದವ್ಯಾಸ ಕಾಮತರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು: ಡಿವೈಎಫ್ಐ ರಾಜ್ಯ ಸಮಿತಿ

ಮಂಗಳೂರಿನ ಸೈಂಟ್ ಜರೋಜಾ ಶಾಲೆಯ ಸಿಸ್ಟರ್ ಹಿಂದು ಧರ್ಮ ನಿಂದನೆ ಮಾಡಿದ್ದರೆ ಅದರ ಮೇಲೆ ಕ್ರಮ ಆಗಲಿ, ಶಿಕ್ಷೆಯೂ ಆಗಲಿ. ಅದಕ್ಕೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದರದ್ದೇ ಕ್ರಮ, ನಿಯಮಗಳಿವೆ. ಆ ಪ್ರಕಾರ ತನಿಖೆ ನಡೆದು ಅಪರಾಧ ಸಾಬೀತಾದರೆ ಶಿಕ್ಷೆ ವಿಧಿಸುವುದು ಸರಿಯಾದ ವಿಧಾನ. “ಬೀದಿ ನ್ಯಾಯ” ವಿಧಿಸಲು ಇದು ಅರಾಜಕ ದೇಶ ಅಲ್ಲ, ಸರ್ವಾಧಿಕಾರಿಗಳ ನಾಡೂ ಅಲ್ಲ. ಶಾಸಕರಾದವರಿಗೆ ಈ ಜ್ಞಾನ ಇರಬೇಕು. ಶಾಸಕ ವೇದವ್ಯಾಸ ಕಾಮತ್ ಇದನ್ನೆಲ್ಲ ಧಿಕ್ಕರಿಸಿ ಶಾಲೆಗೆ ಮುತ್ತಿಗೆ ಹಾಕಿ ಗೂಂಡಾಗಿರಿ […]

Continue Reading

ಕೋಟಿ ಚೆನ್ನಯ್ಯ, ನಾರಾಯಣ ಗುರುಗಳಂತಹ ವಿಚಾರಧಾರೆ, ಆಶಯಗಳನ್ನು ಮುನ್ನಡೆಸುತ್ತಿದೆ ಡಿವೈಎಫ್ಐ – ಮುನೀರ್ ಕಾಟಿಪಳ್ಳ

ದೇಶದ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳಿಗೆದುರಾಗಿ ಜಾತ್ಯಾತೀತ ಯುವ ಮನಸ್ಸುಗಳನ್ನು ಸಂಘಟಿಸಿ ನಿರಂತರ ಹೋರಾಡುತ್ತಿರುವ ದೇಶಪ್ರೇಮಿ ಯುವಜನ ಸಂಘಟನೆ ಡಿವೈಎಫ್ಐ‌ ನಮ್ಮನ್ನಾಳುವ ಸರಕಾರಗಳ ತಪ್ಪಾದ ನೀತಿಗಳು, ಮತೀಯ ರಾಜಕಾರಣಕ್ಕೆ ಬಲಿಯಾಗುತ್ತಿರುವ ಹಿಂದುಳಿದ ವರ್ಗದ, ಅಲ್ಪಸಂಖ್ಯಾತರ, ದಲಿತರ ಮತ್ತು ಜನಸಮಾನ್ಯರ ಮೇಲಾಗುವ ಅನ್ಯಾಯಕ್ಕೆದುರಾಗಿ ಈ ಹಿಂದೆ ತುಳುನಾಡಿನ ಮಣ್ಣಿನಲ್ಲಿ ಗರಡಿಗಳ ಮೂಲಕ ಜನರನ್ನು ಸಂಘಟಿಸಿ ಭೂಮಿ ಹೋರಾಟ ನಡೆಸಿದ ಅವಳಿ ವೀರರಾದ ಕೋಟಿಚೆನ್ನಯ್ಯರಂತಹ, ಒಂದೇ ಜಾತಿ ಒಂದೇ ಮತ ಸಾರಿದ ನಾರಾಯಣಗುರುಗಳಂತಹ ವಿಚಾರಧಾರೆಯಡಿಯಲ್ಲಿ ಬಲಿಷ್ಠ ಚಳುವಳಿಯನ್ನು ಕಟ್ಟಲು ಡಿವೈಎಫ್ಐ ಸಂಘಟನೆ […]

Continue Reading

ಹದಿನಾರು ಕೆಜಿ ತಿಮಿಂಗಿಲ ವಾಂತಿ (ಅಂಬರ್ ಗ್ರೀಸ್) ಸಾಗಣೆ ಮಾಡುತ್ತಿದ್ದ ಮಂಗಳೂರು, ಉಡುಪಿಯ ನಾಲ್ವರ ಬಂಧನ

ಹದಿನಾರು ಕೆಜಿಗಳಷ್ಟು ತಿಮಿಂಗಿಲ ವಾಂತಿಯನ್ನು ಸಾಗಣೆ ಮಾಡುತ್ತಿದ್ದ ನಾಲ್ವರನ್ನು ಕೊಳ್ಳೆಗಾಲ ನಗರದ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಉಡುಪಿ ಮೂಲದ ಇಮ್ತಿಯಾಜ್ ಅಬ್ದುಲ್ ರೆಹಮಾನ್, ಮಂಗಳೂರು ನಗರದ ನಿವಾಸಿ ಚೇತನ್ ಕುಮಾರ್, ಉಳ್ಳಾಲ ಗ್ರಾಮದ ಶೇಷಪ್ಪ, ಸುರತ್ಕಲ್ ನಿವಾಸಿ ವೆಂಕಟೇಶ್ ಎಂದು ಗುರುತಿಸಲಾಗಿದೆ. ತಮಿಳುನಾಡಿನ ಸೇಲಂ ಕಾಳಸಂತೆಯಲ್ಲಿ ಮಾರಾಟ ಮಾಡಲು ಅಂಬರ್ ಗ್ರೀಸನ್ನು ಸಾಗಿಸುವ ವೇಳೆ ಟೀ ಕುಡಿಯಲು ಕೊಳ್ಳೆಗಾಲ ತಾಲ್ಲೂಕಿನ ಸತ್ತೇಗಾಲ ಗ್ರಾಮದ ಹ್ಯಾಂಡ್ ಪೋಸ್ಟ್ ಬಳಿ ನಿಂತಿದ್ದರು. ಖಚಿತ ಮಾಹಿತಿ ಮೇರೆಗೆ […]

Continue Reading

ಠಾಣೆಗೆ ಬಂದ ಮಹಿಳೆಗೆ ಕಿರುಕುಳ: ಕಾವೂರು ಪೊಲೀಸ್ ಠಾಣೆಯ ಮುಖ್ಯ ಪೇದೆ ಸಂತೋಷ್ ಅಮಾನತು

ಪ್ರಕರಣವೊಂದರ ದೂರು ನೀಡಲು ಪೊಲೀಸ್ ಠಾಣೆಗೆ ಬಂದ ಮಹಿಳೆಗೆ ಅಸಹ್ಯ ಸಂದೇಶ ಕಳುಹಿಸಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಹೆಡ್ ಕಾನ್ ಸ್ಟೇಬಲ್ ನ್ನು ಅಮಾನತುಗೊಳಿಸಿ ಪೊಲೀಸ್ ಕಮೀಷನರ್ ಆದೇಶಿಸಿದ್ದಾರೆ. ಕಾವೂರು ಪೊಲೀಸ್ ಠಾಣೆ ಹೆಡ್ ಕಾನ್ ಸ್ಟೇಬಲ್ ಸಂತೋಷ್ ಅಮಾನತುಗೊಂಡ ಸಿಬ್ಬಂದಿ. ಮಹಿಳೆ ಪ್ರಕರಣವೊಂದಕ್ಕೆ ಸಂಬಂಧಿಸಿ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದು, ಈ ವೇಳೆ ಮಹಿಳೆಯ ಮೊಬೈಲ್ ನಂಬರ್ ಪಡೆದ ಹೆಡ್ ಕಾನ್ ಸ್ಟೇಬಲ್ ಸಂತೋಷ್ ಆಕೆಗೆ ಅಸಭ್ಯ ರೀತಿಯಲ್ಲಿ ಸಂದೇಶ ಕಳುಹಿಸಿ ಮಾನಸಿಕ […]

Continue Reading

ಹಟ್ಟಿಗೆ ನುಗ್ಗಿ ದನ ಕಳವು ಪ್ರಕರಣ: ಮೂಡುಬಿದಿರೆಯ ಇಬ್ಬರ ಬಂಧನ

ನಗರ ಪೊಲೀಸ್ ಕಮಿಷನರ್ ವ್ಯಾಪ್ತಿಯ ಹಲವು ಕಡೆ ದನ ಕಳವು ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರನ್ನು ಬಜಪೆ ಮತ್ತು ಮೂಡುಬಿದಿರೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ಓರ್ವ ಪರಾರಿಯಾಗಿದ್ದಾನೆ. ಮೂಡುಬಿದಿರೆ ಕೊಡಂಗಲ್ ನಿವಾಸಿ ಮೊಹಮ್ಮದ್ ಶರೀಫ್ ಮತ್ತು ಮೂಡುಬಿದಿರೆ ಹಿದಾಯತ್ ನಗರ ನಿವಾಸಿ ಹಸೈನಾರ್ ಬಂಧಿತ ಆರೋಪಿಗಳು. ಹಂಝಾ ಪರಾರಿಯಾದ ಆರೋಪಿ. ಬಡಗ ಎಡಪದವು ಗ್ರಾಮದ ತಿಪ್ಪೆಬೆಟ್ಟು ನಿವಾಸಿ ಸುಜಾತ ಎಂಬವರ ಮನೆಯ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ದನಗಳ ಪೈಕಿ 2 ಹಸುಗಳು ಮತ್ತು 1 ಕರುವನ್ನು […]

Continue Reading

ಕೋಳಿ ಅಂಕ ಜೂಜಾಟಕ್ಕೆ ಇನ್ಮುಂದೆ ನಿಷೇಧ.. ಡಿಜಿಪಿ ಖಡಕ್ ಆದೇಶ

ಸಂಪ್ರದಾಯದ ಹೆಸರಿನಲ್ಲಿ ಜಾತ್ರೋತ್ಸವ, ಕಂಬಳದಲ್ಲಿ ಕೋಳಿ ಅಂಕ ಜೂಜಾಟಕ್ಕೆ ನೋ ಪರ್ಮೀಶನ್.! ನಿರಂತರವಾಗಿ ನಡೆಯುತ್ತಿರುವ ಕೋಳಿ ಅಂಕ, ಜೂಜಿಗೆ ಕೊನೆಗೂ ಅಂಕುಶ ಬಿದ್ದಿದೆ. ಈ ಬಗ್ಗೆ ರಾಜ್ಯ ಪೊಲೀಸ್ ನಿರ್ದೇಶಕರು (ಡಿಜಿಪಿ) ಕೋಳಿ ಅಂಕ ಜೂಜಿಗೆ ನಿಷೇಧ ಹೇರಿ ಆದೇಶ ಹೊರಡಿಸಿದ್ದಾರೆ. ರಾಷ್ಟ್ರೀಯ ಪರಿಸರ ಒಕ್ಕೂಟ ಕೋಳಿ ಅಂಕದಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಡಿಜಿಪಿ ಅವರು, ಕೋಳಿ ಅಂಕವು ಪ್ರಾಣಿ ಹಿಂಸೆ ತಡೆ ಕಾಯ್ದೆ-1960 […]

Continue Reading

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳು ಮಾಫಿಯಾ ಅಟ್ಟಹಾಸ; ಪ್ರಶ್ನಿಸಬೇಕಾದವರು ಮೌನಕ್ಕೆ ಶರಣು.!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಅಕ್ರಮ ಮರಳು ಮಾಫಿಯಾ ಅಟ್ಟಹಾಸ ಮಿತಿಮೀರುತ್ತಿದೆ. ಜಿಲ್ಲೆಯ ಪ್ರಮುಖ ನದಿ ತಟಗಳಲ್ಲಿ ಪಕ್ಷ ಭೇದ ಮರೆತು ಅಕ್ರಮ ಮರಳುಗಾರಿಕೆಯಲ್ಲಿ ಪುಡಿ ರಾಜಕಾರಣಿಗಳು ತೊಡಗಿದ್ದು, ತಮ್ಮ ಪ್ರಭಾವ ಬಳಸಿ ಕಾನೂನನ್ನು ತಮಗೆ ಬೇಕಾದಂತೆ ಬದಲಾಯಿಸಿಕೊಂಡಿದ್ದಾರೆ. ಬಳ್ಳಾರಿಯಲ್ಲಿ ಧೂಳೆಬ್ಬಿಸಿದ ಗಣಿಗಾರಿಕೆಯಂತೆ ಜಿಲ್ಲೆಯಲ್ಲಿ ಮರಳು ಮಾಫಿಯಾ ಬೃಹತ್ ದಂಧೆಯಾಗಿ ಬೆಳೆಯುತ್ತಿದ್ದು ಕಾನೂನು ಪಾಲಕರು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಮೂಲರಪಟ್ನ ಸೇತುವೆ ಕುಸಿಯಲು ಮುಖ್ಯ ಕಾರಣ ಆಗಿದ್ದು ಇದೇ ಅಕ್ರಮ ಮರಳುಗಾರಿಕೆ. […]

Continue Reading

ಸೆಂಟರಿನಲ್ಲಿ ಸಿ.ಎ ಮಾಡುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವೆ: ಸಿ.ಎ ಅಬ್ದುಲ್ ಖಾದರ್ ತಮೀಮ್

✍️. ಹನೀಫ್ ಪುತ್ತೂರು ದೃಡಚಿತ್ತ, ನಿರಂತರ ಪ್ರಯತ್ನ ಹಾಗೂ ಸಂಕಲ್ಪವಿದ್ದರೆ ಎಲ್ಲವನ್ನೂ ಸಾಧಿಸಲು ಸಾಧ್ಯವಿದೆ ಎನ್ನುವುದಕ್ಕೆ ಇತ್ತೀಚೆಗೆ ನಮ್ಮ ಸಮುದಾಯದ ಯುವಕ-ಯುವತಿಯರ ಸಾಧನೆಗಳನ್ನು ನೋಡಿದಾಗ ಅನಿಸುತ್ತದೆ. ಸಮುದಾಯದಲ್ಲಿ ಶೈಕ್ಷಣಿಕ ಶಿಸ್ತು, ಪೂರಕ ವಾತಾವರಣ, ಪ್ರೋತ್ಸಾಹದ ಕೊರತೆ ಇದ್ದರೂ ಅಲ್ಲಲ್ಲಿ ಕೆಲವರು ಸ್ವ ಪ್ರಯತ್ನ ಮತ್ತು ಛಲದಿಂದ ಸಾಧನೆ ಮಾಡುವುದನ್ನು ಕಾಣುತ್ತೇವೆ. ಅವರ ಸಾಧನೆಗಳನ್ನು ಅಭಿಮಾನದಿಂದ ಕೊಂಡಾಡುವ, ಸನ್ಮಾನಿಸುವ ಮತ್ತು ಪ್ರಚಾರ ಮಾಡುವ ನಾವು ಇದರಿಂದ ಇನ್ನಷ್ಟೂ ಯುವಕರು ಸ್ಪೂರ್ತಿ ಪಡೆಯಲಿ ಎಂದು ಸಮರ್ಥಿಸುತ್ತೇವೆ. ಕಳೆದ ವರ್ಷ ನೀಟ್ […]

Continue Reading

ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ, ಅಹಿಂದ ನಾಯಕ, ಜಿಲ್ಲಾ ಕಾಂಗ್ರೆಸ್ ಮುಖಂಡ ಪದ್ಮನಾಭ ನರಿಂಗಾನ ನಿಧನ

ಅಹಿಂದ ನಾಯಕರಾಗಿ ಜಿಲ್ಲೆಯಲ್ಲಿ ಗುರುತಿಸಿಕೊಂಡಿದ್ದ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಪದ್ಮನಾಭ ನರಿಂಗಾನ ಇಂದು ಹೃದಯಾಘಾತ ದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು. ಅಹಿಂದ ಜಿಲ್ಲಾಧ್ಯಕ್ಷರಾಗಿದ್ದ ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಮುಂಚೂಣಿ ನಾಯಕತ್ವ ವಹಿಸಿಕೊಂಡಿದ್ದರು. ಸಾಮಾಜಿಕ ಸೇವೆ ರಂಗದಲ್ಲೂ ಗುರುತಿಸಿಕೊಂಡಿದ್ದರು. ದಲಿತ ನಾಯಕರಾಗಿ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯರಾಗಿದ್ದರು. ಕಳೆದ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದರು. ನರಿಂಗಾನ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ, ನರಿಂಗಾನ ಕಂಬಳ ಸಮಿತಿ ಗೌರವ ಸಲಹೆಗಾರರಾಗಿಯೂ ಸೇವೆ […]

Continue Reading

ಅಡ್ಯನಡ್ಕದಲ್ಲಿ ಲವ್, ದೋಖಾ.. ಪ್ರಿಯಕರನಿಗಾಗಿ ಧರಣಿ ಕುಳಿತ ಯುವತಿ

ಪ್ರೀತಿಯ ನಾಟಕವಾಡಿ ಹಣ ಪಡೆದು ಮದುವೆಯೂ ಆಗದೇ ಹಣ ಕೂಡ ವಾಪಾಸ್ ನೀಡದೇ ಯುವಕ ವಂಚಿಸಿದ್ದಾನೆ ಎಂದು ಆರೋಪಿಸಿ ಯುವಕನ ಮನೆ ಎದುರು ಯುವತಿಯೊಬ್ಬಳು ಧರಣಿ ಕುಳಿತ ಘಟನೆ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಅಡ್ಯನಡ್ಕದ ದಲ್ಲಿ ನಡೆದಿದೆ. ಯುವತಿಯ ಮನವೂಲಿಸಲು ವಿಫಲರಾದ ವಿಟ್ಲ ಪೊಲೀಸರು ಆಕೆಯನ್ನು ಠಾಣೆಗೆ ಕರೆದೊಯಿದ್ದಾರೆ. ಉತ್ತರ ಭಾರತದ ಜಲಂಧರ್‌ ಮೂಲದ ಯುವತಿ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಈ ಸಂದರ್ಭ ಅಡ್ಯನಡ್ಕದ ಯುವಕನ ಪರಿಚಯವಾಗಿ ಪ್ರೇಮ ಬೆಳೆದು, ಹಣಕಾಸಿನ ವ್ಯವಹಾರಗಳೂ ನಡೆದಿವೆ […]

Continue Reading