ಬಂಟ್ವಾಳ ವಗ್ಗ ಸಮೀಪ ದರೋಡೆ ಪ್ರಕರಣ: ಚಿನ್ನಾಭರಣದೊಂದಿಗೆ ಆರೋಪಿಗಳನ್ನು ಬಂಧಿಸಿದ ದ.ಕ.ಜಿಲ್ಲಾ ಪೊಲೀಸರ ತಂಡ

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಗ್ಗ ಸಮೀಪದ ಮೇನಾಡು ಎಂಬಲ್ಲಿ ಜ.11ರಂದು ಮುಂಜಾನೆ ತಾಯಿ, ಮಗಳಿಗೆ ಚಾಕು ತೋರಿಸಿ ಚಿನ್ನಾಭರಣಗಳನ್ನು ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿ, ಆರೋಪಿಗಳ ಪತ್ತೆಗಾಗಿ ರಚಿಸಲಾಗಿದ್ದ ವಿಶೇಷ ತನಿಖಾ ತಂಡವು, ಕಾರ್ಕಳ ತಾಲೂಕಿನ ಮಾಳ ಗ್ರಾಮದ ಗಣೇಶ ನಾಯ್ಕ, ದಿನೇಶ್‌ ನಾಯ್ಕ, ಸಾಗರ ಶೆಟ್ಟಿ ಮಂಗಳೂರು, ಐಕಳ ಗ್ರಾಮದ ರಾಕೇಶ್‌ ಎಲ್.‌ ಪಿಂಟೋ,ಕಡಬದ ಎಂ.ಸೀತಾರಾಮ ಯಾನೆ ಪ್ರವೀಣ್‌, ಸುಧೀರ್‌ ಹಾಗೂ […]

Continue Reading

ಮೂಲ್ಕಿ: ಇಸ್ಪೀಟ್ ಅಡ್ಡೆಗೆ ಸಿಸಿಬಿ ಪೊಲೀಸರ ದಾಳಿ; ಲಕ್ಷಾಂತರ ರೂ. ವಶ

ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯು ಧೋ ನಂಬರ್ ದಂಧೆಯ ಪರಮ ಅಡ್ಡೆಯಾಗಿ ಮಾರ್ಪಟ್ಟಿದ್ದು, ಇಲ್ಲಿ ಮರಳು, ಇಸ್ಪೀಟ್ ಇನ್ನಿತರ ಧೋ ನಂಬರ್ ದಂಧೆಯು ನಿರಾಂತಕವಾಗಿ ನಡೆಯುತ್ತಿರುತ್ತದೆ. ಇದನ್ನು ಸಂಬಂಧಪಟ್ಟ ಇಲಾಖೆಗೆ ತಿಳಿಸಿ ಮಟ್ಟ ಹಾಕಬೇಕಾದ ಪೊಲೀಸಪ್ಪನೊಬ್ಬ ದಂಧೆಯ ಬೆಂಬಲಕ್ಕೆ ನಿಂತಿರುವುದು ಮೂಲ್ಕಿಯ ಪೊಲೀಸ್ ಠಾಣೆಗೆ ಶೋಭೆ ತರುವಂತದಲ್ಲ. ಇದೀಗ ಮಂಗಳೂರಿನ ಸಿಸಿಬಿ ಪೊಲೀಸರು ಕಿಲ್ಪಾಡಿ ಭಂಡಸಾಲೆ ಎಂಬಲ್ಲಿ ಮನೆಯೊಂದರಲ್ಲಿ ಮಧ್ಯರಾತ್ರಿ ನಡೆಯುತ್ತಿದ್ದ ಹೈಟೆಕ್ ಇಸ್ಪೀಟ್ ಅಡ್ಡೆಗೆ ದಾಳಿ ನಡೆಸಿ 29 ಮಂದಿಯನ್ನು ವಶಕ್ಕೆ ಪಡೆದು ದಂಧೆಗೆ ಪಣವಾಗಿರಿಸಿದ್ದ […]

Continue Reading

ಕರಾವಳಿಯಲ್ಲಿ ಮತ್ತೆ,ಮತ್ತೆ ಅನೈತಿಕ ಪೊಲೀಸ್ ಗಿರಿ: ಆಂಟಿ ಕಮ್ಯೂನಲ್ ವಿಂಗ್ ನಾಮಕಾವಸ್ಥೆ

ರಾಜ್ಯದಲ್ಲಿ ಬಿಜೆಪಿ ಸರಕಾರದ ಆಡಳಿತ ಅಂತ್ಯಗೊಂಡು ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೇರಿ, ಅಧಿಕಾರದ ಚುಕ್ಕಾಣಿ ಹಿಡಿದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಖಡಕ್ ಸಂದೇಶವೊಂದನ್ನು ರವಾನಿಸಿದ್ದರು. “ಇನ್ಮುಂದೆ ರಾಜ್ಯದಲ್ಲಿ ಅನೈತಿಕ ಪೊಲೀಸ್ ಗಿರಿ ಇರಲ್ಲ ಅದಕ್ಕೆ ನಾವು ಅಂತ್ಯ ಹಾಡುತ್ತೇವೆ” ಎಂದರು.ಗೃಹ ಸಚಿವರಾಗಿ ಮಂಗಳೂರಿಗೆ ಪ್ರಥಮ ಭೇಟಿ ಇತ್ತ ಡಾ.ಜಿ. ಪರಮೇಶ್ವರ್ ಜೂನ್ 6 ರಂದು ಪಶ್ಚಿಮ ವಲಯ ಪೊಲೀಸ್ ಮತ್ತು ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ನ ಪ್ರಗತಿ ಪರಿಶೀಲನೆ ಸಭೆ ನಡೆಸಿ ಪ್ರಚೋದನಕಾರಿ ಭಾಷಣ, […]

Continue Reading

ಬಜ್ಪೆ: ಖೋಟಾ ನೋಟು ಪ್ರಮುಖ ಆರೋಪಿ ಫಾರೂಕ್ ಅಹಮ್ಮದ್ ಬಂಧನ

ಬಜ್ಪೆ: ನ್ಯಾಯಾಲಯದಲ್ಲಿ ಶಿಕ್ಷೆಗೊಳಗಾಗಿ ತಲೆಮರಿಸಿಕೊಂಡಿದ್ದ ಖೋಟಾ ನೋಟು ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಬಜಪೆ ಪೊಲೀಸ್ ನಿರೀಕ್ಷಕರಾದ ಸಂದೀಪ್ ಜಿ.ಎಸ್ ನೇತೃತ್ವದ ತಂಡ ಯಶಸ್ವಿಯಾಗಿದೆ. ವಿಟ್ಲದ ಕರೋಪಾಡಿ ಗ್ರಾಮದ ಮುಗೋಳಿ ನಿವಾಸಿ ಅಹಮ್ಮದ್ ಎಂಬವರ ಪುತ್ರ 36 ವರ್ಷದ ಫಾರೂಕ್ ಯಾನೆ ಫಾರೂಕ್ ಅಹಮ್ಮದ್ ಎಂಬಾತ ಬಂಧಿತ ಆರೋಪಿ. ಈತನಿಗೆ ಮಾನ್ಯ ನ್ಯಾಯಾಲಯವು ಖೋಟಾ ನೋಟು ಆರೋಪದಲ್ಲಿ ಐದು ವರ್ಷಗಳ ಸಜೆಯನ್ನು ವಿಧಿಸಿತ್ತು. ಆರೋಪಿ ಫಾರೂಕ್ ಆಹಮ್ಮದ್ ನ್ಯಾಯಾಲಯದ ಕಣ್ಣು ತಪ್ಪಿಸಿ,ಪೊಲೀಸರಿಗೂ ಸಿಗದೆ ತಲೆಮರೆಸಿಕೊಂಡಿದ್ದ. ಇಂದು ಬಜಪೆ ಪೊಲೀಸರು ಕಾಸರಗೋಡು […]

Continue Reading

ಕುಪ್ಪೆಪದವು ಬದ್ರಿಯಾ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾದ ಎಲ್. ಉಮರಬ್ಬರವರು ವಿಧಿವಶ.

ಕುಪ್ಪೆಪದವು: ಬದ್ರಿಯಾ ಜುಮಾ ಮಸೀದಿ ಮತ್ತು ಮದೀನತುಲ್ ಉಲೂಂ ಮದರಸ ಕುಪ್ಪೆಪದವು ಇದರ ಅಧ್ಯಕ್ಷರಾಗಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿದ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿದ್ದ ಎಲ್. ಉಮರಬ್ಬರವರು ಇಂದು ಬೆಳಿಗ್ಗೆ ತಮ್ಮ ಸ್ವಗೃಹದಲ್ಲಿ ದೈವಾಧೀನರಾದರು. ಸರಳ,ಸಜ್ಜನಿಕೆ ಸ್ವಭಾವದವರಾದ ಎಲ್. ಉಮರಬ್ಬರವರು ಸರ್ವ ಧರ್ಮಿಯರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಕುಪ್ಪೆಪದವು ಜಮಾಅತ್ ನಲ್ಲಿ ನಡೆಯುವ ಎಲ್ಲಾ ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಕುಪ್ಪೆಪದವು ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ, ಕುಪ್ಪೆಪದವು ಮದರಸ ಮೆನೇಜ್ ಮೆಂಟ್ […]

Continue Reading

ಮರಳು ಮಾಫಿಯಾ ಜೊತೆ ಶಾಮೀಲು; ಕಂಕನಾಡಿ ನಗರ ಠಾಣೆ ಇನ್ಸ್ ಪೆಕ್ಟರ್ ಭಜಂತ್ರಿ ತಲೆದಂಡ

ಅಕ್ರಮ ಮರಳು ಮಾಫಿಯಾಗಳೊಂದಿಗೆ ಶಾಮೀಲಾಗಿದ್ದಾರೆ ಮತ್ತು ಮೇಲಾಧಿಕಾರಿಗಳ ಜೊತೆಗೆ ಉಡಾಫೆಯಿಂದ ವರ್ತಿಸಿದ್ದಾರೆಂದು ಕಂಕನಾಡಿ ನಗರ ಠಾಣೆಯ ಇನ್ಸ್ ಪೆಕ್ಟರ್ ಎಸ್.ಎಚ್. ಭಜಂತ್ರಿ ಅವರನ್ನು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಕರ್ತವ್ಯದಿಂದ ಅಮಾನತು ಮಾಡಿರುವ ಘಟನೆ ವರದಿಯಾಗಿದೆ. ಇತ್ತೀಚೆಗಷ್ಟೇ ಜಪ್ಪಿನಮೊಗರು ಕಡೆಕಾರಿನಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾಗ ಎಸಿಪಿ ಧನ್ಯಾ ನಾಯಕ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ತಲಪಾಡಿ ಗ್ರಾಪಂ ಸದಸ್ಯ, ಕಾಂಗ್ರೆಸ್ ಪುಢಾರಿಗೆ ಸೇರಿದ್ದೆನ್ನಲಾದ ಎಂಟು ಟಿಪ್ಪರ್ ಗಳನ್ನು ಪೊಲೀಸರು ವಶಕ್ಕೆ ಪಡೆದು ಕೇಸು ದಾಖಲಿಸಿದ್ದರು. ಮರಳು ಮತ್ತು […]

Continue Reading

ಪೋಕ್ಸೊ ಪ್ರಕರಣ: ಟ್ಯೂಶನ್‌ ಸೆಂಟರ್‌ ಮಾಲಕ ಬಾಬುರಾಜ್‌ ಪತ್ತೆಗಾಗಿ ಪೊಲೀಸರು ಮಂಗಳೂರಿನಲ್ಲಿ ಹುಡುಕಾಟ

ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಞಂಗಾಡ್‌ ಬಸ್‌ ನಿಲ್ದಾಣ ಪರಿಸರದ ಇಂಪ್ಯಾಕ್ಟ್ ಟ್ಯೂಶನ್‌ ಸೆಂಟರ್‌ ಮಾಲಕ ಡಿಫಿ ಮುಖಂಡನಾಗಿದ್ದ ಅತಿಯಾಂಬೂರಿನ ಬಾಬುರಾಜ್‌ ಪತ್ತೆಗಾಗಿ ಪೊಲೀಸರು ಮಂಗಳೂರಿನಲ್ಲಿ ಹುಡುಕಾಟ ನಡೆಸಿದರು. ಆದರೆ ಪತ್ತೆ ಸಾಧ್ಯವಾಗಿಲ್ಲ. ಈತನ ಟ್ಯೂಶನ್‌ ಸೆಂಟರ್‌ನ್ನು ಮುಚ್ಚಿ ಪೊಲೀಸರು ಮೊಹರು ಹಾಕಿದರು. ಕಳೆದ ಮಂಗಳವಾರ ರಾತ್ರಿ ಟ್ಯೂಶನ್‌ ತರಗತಿಗೆಂದು ತಲುಪಿದ ವಿದ್ಯಾರ್ಥಿನಿಗೆ ಬಾಬುರಾಜ್‌ ಲೈಂಗಿಕ ದೌರ್ಜನ್ಯವೆಸಗಿದ್ದಾಗಿ ಆರೋಪಿಸಲಾಗಿದೆ. ಈ ಮೊದಲು ಕೂಡ ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿದ್ದ ಬಾಬುರಾಜ್‌ ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿದ್ದ. ಬಾಬುರಾಜ್‌ನ ಪತ್ನಿಯ ಮನೆ […]

Continue Reading

ದ.ಕ ಜಿಲ್ಲೆ ಅಕ್ರಮ ಮರಳುಗಾರಿಕೆಯ ಪರಮ ಅಡ್ಡೆ; ಅಕ್ರಮದಲ್ಲಿ ಕಾಂಗ್ರೆಸ್-ಬಿಜೆಪಿ ಭಾಯಿ ಭಾಯಿ.!

ಜಿಲ್ಲಾಢಳಿತದ ಮೌನದ ಹಿಂದಿನ ಮರ್ಮ.? ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣ, ಕೋಮು ದ್ವೇಷದಲ್ಲಿ ಯಾವ ರೀತಿ ಹೆಸರುವಾಸಿಯೋ ಅದೇ ರೀತಿ ಅಕ್ರಮ ಪಾಲುಗಾರಿಕೆಯಲ್ಲೂ ತನ್ನದೇ ಆದ ಕಬಂಧ ಬಾಹುಗಳನ್ನು ವಿಸ್ತರಿಸಿಕೊಂಡಿದೆ. ಚುನಾವಣಾ ಸಮಯದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು ರಣರಂಗದಲ್ಲಿ ಹೋರಾಡಿದವರಂತೆ ಕಾಣಸಿಗುತ್ತಾರೆ. ನಾಯಕರ ಮಾತು ಕೇಳಿ ಕೇಸ್, ಜೈಲು ಪಾಲಾದ ಘಟನೆಗಳೂ ಇದೆ. ಆದರೆ ಚುನಾವಣಾ ಮುಗಿದ ನಂತರ ಕಾರ್ಯಕರ್ತರನ್ನು ಮೂಸಿ ನೋಡುವವರಿಲ್ಲ. ಆದರೆ ನಾಯಕರು, ಅವರ ಚೇಲಾಗಳು ಧೋ ನಂಬರ್ ದಂಧೆಯಲ್ಲಿ ಸದಾ ಬ್ಯುಸಿಯಾಗಿರುತ್ತಾರೆ. ವಿಶೇಷತೆ ಎಂದರೆ […]

Continue Reading

ಅಗಲಿಕೆಗೆ ಎರಡು ವರ್ಷ..ಜಾತಿ-ಧರ್ಮ ಮೀರಿ ಬೆಳೆದ ಝಾಕೀರ್ ಸೂರಲ್ಪಾಡಿ ನೆನಪು ಮಾತ್ರ.

ಗಂಜಿಮಠ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಆರ್.ಎಸ್.ಝಾಕೀರ್ ಸೂರಲ್ಪಾಡಿ ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತ. ಹಗಲು-ರಾತ್ರಿಯೆನ್ನದೆ ಜನರ ಕಷ್ಟ ಕಾರ್ಪಣ್ಯಗಳಿಗೆ,ಸಾರ್ವಜನಿಕ ಕರೆಗೆ ಸ್ಪಂದಿಸುತ್ತಿದ್ದ ವ್ಯಕ್ತಿ. 15 ವರ್ಷಗಳಿಂದ ಗ್ರಾಮ ಪಂಚಾಯತ್ ಸದಸ್ಯರಾಗಿ, ಸೋಲಿಲ್ಲದ ಸರದಾರನಾಗಿ, ಬಡವರ ಪಾಲಿನ ಬಂಧುವಾಗಿ ಕ್ಷೇತ್ರದಾದ್ಯಂತ ಜನ ಮನ್ನಣೆ ಗಳಿಸಿದ್ದ ಗಂಜಿಮಠ ಗ್ರಾಮ ಪಂಚಾಯತ್ತಿನ ಅಭಿವೃದ್ಧಿಯ ಹರಿಕಾರ. ಪಂಚಾಯತ್ ವ್ಯಾಪ್ತಿಯ ನಂಬರ್ ಒನ್ ಸದಸ್ಯ. ಗ್ರಾ.ಪಂ ಚುನಾವಣೆಯಲ್ಲಿ ಜಿಲ್ಲೆಯಲ್ಲೆ ದಾಖಲೆ ಮಟ್ಟದ ಮತ (1020)ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದವರು. ಚಾಲೆಂಜರ್ಸ್ ಫ್ರೆಂಡ್ಸ್ ಕ್ಲಬ್ ಸೂರಲ್ಪಾಡಿ ಇದರ ಮೂಲಕ […]

Continue Reading

ಬುದ್ಧಿವಂತರ ಜಿಲ್ಲೆಯ ಸರಕಾರಿ ಶಾಲೆಯ ದಾರುಣ ಸ್ಥಿತಿ.!

ಶಿಕ್ಷಣ ಸಚಿವರು, ಶಾಸಕ ವೇದವ್ಯಾಸ ಕಾಮತ್ ಇನ್ನಾದರೂ ಕಣ್ಣು ತೆರೆಯಲಿ.! ಮಂಗಳೂರಿಗೆ ಬುದ್ಧಿವಂತರ ಜಿಲ್ಲೆ ಅನ್ನುವ ಟ್ರೇಡ್ ಮಾರ್ಕ್ ಏನೋ ಇದೆ. ದುಬಾರಿ ಡೊನೇಶನ್ ಪಡೆದು ಅಲ್ಲಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿ ನಿಂತಿರುವ ಆಂಗ್ಲ ಮಾಧ್ಯಮ ಶಾಲೆಗಳ ಕಟ್ಟಡಗಳು ಕಣ್ಣು ಕೋರೈಸುವ ರೀತಿಯಲ್ಲಿ ಇರುವುದೇನೂ ನಿಜ. ಇಲ್ಲಿ ಹೈ-ಫೈ ಕುಟುಂಬದ ಮಕ್ಕಳಿಗೆ ಮಾತ್ರ ಫೀಸು ಕಟ್ಟಲು ಸಾಧ್ಯ. ಆದರೆ ಮಂಗಳೂರಿನಲ್ಲಿ ಬಹುಪಾಲು ಜನತೆ ಈಗಲೂ ಶಿಕ್ಷಣಕ್ಕಾಗಿ ಆಶ್ರಯಿಸಿಕೊಂಡಿರುವುದು ಸರಕಾರಿ ಶಾಲೆ ಅನ್ನುವುದು ನೂರಕ್ಕೆ ನೂರು ಸತ್ಯ. ಇಲ್ಲಿನ […]

Continue Reading