ಸಕ್ಕರೆ ನಾಡಿನ ಬಂಧುಗಳೇ ಕರಾವಳಿಯ ಈ ವಿವೇಕದ ಕಿವಿಮಾತು ಕೇಳಿ. ಸಕ್ಕರೆ ನಾಡಿನ ಮಂಡ್ಯದ ಸ್ನೇಹಿತರಿಗೊಂದು ಪತ್ರ

ನೀವು ನಾಡಿಗೆ ಸಕ್ಕರೆ ಹಂಚುವವರು. ನೀವು ಸದಾ ಸಕ್ಜರೆಯನ್ನೇ ಹಂಚಬೇಕು. ನಿಮ್ಮ ಬದುಕೂ ಸಿಹಿಯಾಗಿರಬೇಕು: ಎಂ.ಜಿ ಹೆಗಡೆ ಮಂಗಳೂರಿನಿಂದ ಶ್ರೀ ಎಂ. ಜಿ. ಹೆಗಡೆಯವರು ಮಂಡ್ಯ ಜಿಲ್ಲೆಯ ಜನತೆಗೆ ತಮ್ಮ ಅನುಭವದ ಹಿನ್ನೆಲೆಯಲ್ಲಿ ಬರೆದ ಪತ್ರ. ದಯಮಾಡಿ ಶಾಂತಚಿತ್ತರಾಗಿ ಓದಿ. ಸಕ್ಕರೆ ನಾಡು ಎಂದು ಪ್ರಸಿದ್ಧಿಯಾದ ಮಂಡ್ಯದ ಸ್ನೇಹಿತರೇ ನಮಸ್ಕಾರ. ನಾನು ಕರಾವಳಿಯ ಮಂಗಳೂರಿನವ. ಸರ್ವ ಜಾತಿ ಮತದ ಜನರು ಸೌಹಾರ್ದತೆಯಿಂದ ಬದುಕುತ್ತಿದ್ದ ನಾಡು ಒಮ್ಮೆ ಮತೀಯ ಮತ್ತು ಭಾವನಾತ್ಮಕ ಸಂಗತಿಗಳಿಗೆ ಬಲಿಯಾದರೆ ಎನಾಗುತ್ತದೆ ಎಂಬುವುದಕ್ಕೆ ಸಾಕ್ಷಿ […]

Continue Reading

ಆಹಾರ ಪಥೋತ್ಸವದಲ್ಲಿ ಬೀದಿ ವ್ಯಾಪಾರ ನಿಯಮಾವಳಿ ಉಲ್ಲಂಘನೆ ಬೀದಿ ವ್ಯಾಪಾರಸ್ಥರ ಸಂಘ ಆರೋಪ

ಮಂಗಳೂರು : ನಗರದ ಮಂಗಳಾ ಕ್ರೀಡಾಂಗಣದ ಬಳಿ ಏರ್ಪಡಿಸಿದ್ದ ಆಹಾರ ಉತ್ಸವದಲ್ಲಿ ಬೀದಿ ಬದಿ ವ್ಯಾಪಾರ ನಿಯಮಾವಳಿಯನ್ನು ಸಂಪೂರ್ಣ ಉಲ್ಲಂಘಿಸಿ ನಡೆಸಲಾಗಿದೆ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘ ಆರೋಪಿಸಿದೆ. ಆಹಾರ ಉತ್ಸವದ ಪರಿಸರದಲ್ಲಿ ದಿನನಿತ್ಯ ಬೀದಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳನ್ನು ಬಲವಂತವಾಗಿ ಸ್ಟಾಲ್ ಗಳನ್ನು ಹಾಕಿಸಿ 20% ಕಮಿಷನ್ ಪಡೆಯಲು ದುಪ್ಪಟ್ಟು ದರಗಳಿಗೆ ಆಹಾರ ಮಾರಾಟ ಮಾಡಿಸಿರುತ್ತಾರೆ ಅಲ್ಲದೆ ಬೀದಿ ಬದಿಯಲ್ಲಿ ಆಹಾರ ಮಾರಾಟದ ದರಗಳು ಪಂಚಾತಾರ ಹೋಟೆಲುಗಳ ದರಗಳನ್ನು ವಿಧಿಸಿ ಸಾರ್ವಜನಿಕರ […]

Continue Reading

ನ್ಯೂ ಇಂಡಿಯಾ ಚಾರಿಟೇಬಲ್ ಟ್ರಸ್ಟ್ ನಿಂದ ಸರಳ ಸಾಮೂಹಿಕ ವಿವಾಹ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೂರು ನವಜೋಡಿಗಳು

ಬಜ್ಪೆ: ನ್ಯೂ ಇಂಡಿಯಾ ಚಾರಿಟೇಬಲ್ ಟ್ರಸ್ಟ್ (ರಿ) ಬಜ್ಪೆ ಕಾಟಿಪಳ್ಳ ಇದರ ವತಿಯಿಂದ 3 ಜೋಡಗಳ ಸಾಮೂಹಿಕ ವಿವಾಹ ಕಾರ್ಯಕ್ರಮವು ಬಜ್ಪೆ ಎಂಜೆಎಂ ಜುಮಾ ಮಸೀದಿಯ ವಠಾರದಲ್ಲಿ ರವಿವಾರ ನಡೆಯಿತು. ನಿಖಾಹ್‌ಗೆ ನೇತೃತ್ವ ನೀಡಿ ಮಾತನಾಡಿದ ಬಜ್ಪೆ ಎಂಜೆಎಂ ಜುಮಾ ಮಸೀದಿಯ ಖತೀಬ್‌ ಇಸ್ಮಾಯೀಲ್ ಮನ್ಸೂರ್ ಸಅದಿ ಅಲ್ ಕಾಮಿಲ್, ಸಮಾಜದ ಬಡವರ್ಗದ ಜನರು, ಶೋಷಿತರು, ನೊಂದವರನ್ನು ಹುಡುಕಿ ತನು ಮನ ಧನದಿಂದ ಸಹಾಯ ಮಾಡುವವರು ದೇವರಿಗೆ ಪ್ರೀಯರಾದವರು. ಒಬ್ಬ ಬಡವನಿಗೆ ಯಾವುದೇ ರೂಪದಲ್ಲಿ ಸಹಾಯ ಮಾಡಿದರೆ […]

Continue Reading

ಕಮ್ಯುನಿಸ್ಟ್ ಚಳುವಳಿಯ ಹಿರಿಯ ನೇತಾರ ಗಂಗಯ್ಯ ಅಮೀನ್ ಇನ್ನಿಲ್ಲ

ಕಮ್ಯುನಿಸ್ಟ್ ಚಳುವಳಿಯ ಹಿರಿಯ ನೇತಾರರೂ, ದುಡಿಯುವ ವರ್ಗದ ಕಣ್ಮಣಿ, CPIM ಗುರುಪುರ ವಲಯ ಸಮಿತಿ ಸದಸ್ಯರಾದ ಕಾಂ.ಗಂಗಯ್ಯ ಅಮೀನ್(73ವರ್ಷ) ರವರು ದೀರ್ಘಕಾಲದ ಅಸೌಖ್ಯದಿಂದ ಇಂದು ನಿಧನ ಹೊಂದಿದರು. ಎಳೆಯ ಪ್ರಾಯದಲ್ಲೇ ದುಡಿಯುವ ವರ್ಗದ ಚಳುವಳಿಯ ಸಂಪರ್ಕಕ್ಕೆ ಬಂದ ಗಂಗಯ್ಯ ಅಮೀನ್ ರವರು, ಸ್ವತಃ ಹೆಂಚು ಕಾರ್ಖಾನೆಯ ಕಾರ್ಮಿಕನಾಗಿ,ಹೆಂಚು ಕಾರ್ಮಿಕರ ಚಳುವಳಿಯ ನಾಯಕರಾಗಿ ಹಲವಾರು ವರ್ಷಗಳ ಕಾಲ ದುಡಿದರು. ಉಳುವವನೇ ಹೊಲದೊಡೆಯ ಕಾನೂನಿನ ಜಾರಿಯ ಹೋರಾಟದಲ್ಲಿ ಸಕ್ರಿಯವಾಗಿ ತನ್ನನ್ನು ತಾನು ತೊಡಗಿಸಿಕೊಂಡ ಗಂಗಯ್ಯರವರು, ವಾಮಂಜೂರು ಆಸುಪಾಸಿನ ಗ್ರಾಮಗಳಲ್ಲಿ ರೈತರಿಗೆ […]

Continue Reading

ಮಂಗಳೂರು ಸಿಸಿಬಿ ಎಸಿಪಿ ಹುದ್ದೆಗೆ ಪೊಲೀಸ್ ಅಧಿಕಾರಿಗಳ ಬಿಗ್ ಫೈಟ್.. ಪ್ರಭಾವಿ ರಾಜಕಾರಣಿಗಳ ಭಗೀರಥ ಪ್ರಯತ್ನ

ರಾಜ್ಯದಲ್ಲಿ ಸರಕಾರ ಬದಲಾವಣೆಯಾಗಿ ಆರು ತಿಂಗಳೇನೂ ಕಳೆದಿವೆ. ಆದರೆ ಪೊಲೀಸ್ ಇಲಾಖೆಯ ಮೇಜರ್ ಹುದ್ದೆಗೆ ಅಂದುಕೊಂಡಂತೆ ಭರ್ಜರಿ ಸರ್ಜರಿ ಏನೂ ನಡೆದಿರಲಿಲ್ಲ. ಕೆಲವೊಂದು ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಹುದ್ದೆಯಲ್ಲಿ ಹೊಸಬರನ್ನು ನೇಮಿಸಲಾಗಿದೆ. ತಳಮಟ್ಟದ ಪೊಲೀಸರ ಹುದ್ದೆಗಳಲ್ಲಿ ನಿರೀಕ್ಷಿಸಿದಷ್ಟು ದೊಡ್ಡ ಬದಲಾವಣೆಯೇನೂ ಆಗಿಲ್ಲ. ಇನ್ನು ಮಂಗಳೂರಿನ ಪೊಲೀಸ್ ಇಲಾಖೆಯ ಅತ್ಯಂತ ಮಹತ್ವದ ಹುದ್ದೆ ಎಂದು ಬಿಂಬಿಸಲಾಗಿರುವ ಸಿಸಿಬಿಯ ಎಸಿಪಿ ಹುದ್ದೆಯ ಮೇಲೆ ಇದೀಗ ಹಲವಾರು ಮಂದಿ ಕಣ್ಣಿತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ಹಿಂದೆ ಎಸಿಪಿಯಾಗಿದ್ದ ಪಿ.ಎ […]

Continue Reading

ಯುವಜನರ ಉದ್ಯೋಗ, ಘನತೆಯ ಬದುಕಿಗಾಗಿ ನಡೆಯಲಿದೆ ಡಿವೈಎಫ್ಐ ರಾಜ್ಯ ಸಮ್ಮೇಳನ: ಮುನೀರ್ ಕಾಟಿಪಳ್ಳ

ದೇಶದಲ್ಲಿಂದು ಯಾವತ್ತೂ ಕಂಡು ಕೇಳರಿಯದಷ್ಟು ನಿರುದ್ಯೋಗದ ಪ್ರಮಾಣ ಏರಿಕೆಯಾಗಿದೆ. ಈ ಬಗ್ಗೆ ಚರ್ಚಿಸಬೇಕಾಗಿದ್ದ ಯುವಜನತೆ ಬಿಜೆಪಿಯು ರಾಮ ಮಂದಿರದ ನಿರ್ಮಾಣದ ಹೆಸರಲ್ಲಿ ನಡೆಸುವ ಧರ್ಮರಾಜಕಾರಣದ ಚುನಾವಣೆ ಸಿದ್ದತೆಗೆ ಬಲಿಯಾಗುತ್ತಿದ್ದಾರೆ. ಕೇಂದ್ರ ಸರಕಾರದ ಯುವಜನ ವಿರೋಧಿ ನೀತಿಗಳ ವಿರುದ್ಧ ಡಿವೈಎಫ್ಐ ದೇಶವ್ಯಾಪಿಯಲ್ಲಿ ನಿರುದ್ಯೋಗದ ವಿರುದ್ಧ ಹೋರಾಟ ಸಂಘಟಿಸುತ್ತಿದ್ದು ಕರ್ನಾಟಕ ರಾಜ್ಯದಲ್ಲೂ ಯುವಜನರ ಉದ್ಯೋಗ, ಘನತೆಯ ಬದುಕಿಗಾಗಿ 12 ನೇ ಕರ್ನಾಟಕ ರಾಜ್ಯ ಸಮ್ಮೇಳನವು ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ […]

Continue Reading

ದ.ಕ ಜಿಲ್ಲೆಯಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ್ದ ಪಂಕಜ್ ಕುಮಾರ್ ಠಾಕೂರ್, ಕೌಶಲೇಂದ್ರ ಕುಮಾರ್ ರವರಿಗೆ ವಿಶಿಷ್ಟ ಸೇವಾ ಪದಕ ಗೌರವ

ಭಾರತ ದೇಶವು ಗಣರಾಜ್ಯೋತ್ಸವದ ಶುಭಗಳಿಗೆಯಲ್ಲಿ ಇರುವ ಹೊತ್ತಿಗೆ ಪ್ರತಿ ವರ್ಷ ನೀಡಲ್ಪಡುವ ಉತ್ತಮ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿಗಳಿಗೆ ನೀಡುವ ವಿಶಿಷ್ಟ ಸೇವಾ ಪದಕ, ಶ್ಲಾಘನೀಯ ಸೇವಾ ಪದಕ ಸೇರಿ ರಾಷ್ಟ್ರಪತಿ ಪದಕಕ್ಕೆ ಕರ್ನಾಟಕ ರಾಜ್ಯದ 23 ಮಂದಿ ಪೊಲೀಸ್ ಅಧಿಕಾರಿಗಳು ಆಯ್ಕೆಯಾಗಿದ್ದಾರೆ. ಈ ಪೈಕಿ 19 ಮಂದಿ ರಾಜ್ಯದಲ್ಲೇ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಯಾಗಿದ್ದು, ಇಬ್ಬರು ಪ್ರಸ್ತುತ ನವದೆಹಲಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕರ್ನಾಟಕ ಕೇಡರ್ ನ ಐಪಿಎಸ್ ಅಧಿಕಾರಿಗಳಾಗಿದ್ದಾರೆ. ಕೇಂದ್ರ ಗೃಹ ಇಲಾಖೆಯ ಜಂಟಿ ನಿರ್ದೇಶಕರಾದ ಪಂಕಜ್ […]

Continue Reading

ಬಜ್ಪೆ ಎಎಸ್ಐ ರಾಮ ಪೂಜಾರಿಗೆ ರಾಷ್ಟ್ರಪತಿ ಪದಕ

ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ನೀಡುವ ರಾಷ್ಟ್ರಪತಿ ಸೇವಾ ಪದಕಕ್ಕೆ ಬಜ್ಪೆ ಪೊಲೀಸ್ ಉಪ-ನಿರೀಕ್ಷಕರಾದ ರಾಮ ಪೂಜಾರಿ ಆಯ್ಕೆಯಾಗಿದ್ದಾರೆ. 1993ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದ ಇವರು ಬ್ರಹ್ಮಾವರ, ಸುಳ್ಯ, ಎಸ್‌ಪಿ ವಿಶೇಷ ಪತ್ತೆ ದಳ, ಮೂಡುಬಿದಿರೆ, ಮುಲ್ಕಿ, ಮಂಗಳೂರು ಸಿಸಿಬಿಯಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಬಜ್ಪೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 30 ವರ್ಷದ ತನ್ನ ಸೇವಾವಧಿಯಲ್ಲಿ 35 ಕ್ಕೂ ಮಿಕ್ಕ ಕೊಲೆ ಪ್ರಕರಣಗಳನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸುವಲ್ಲಿ ಮಹತ್ತರದ ಪಾತ್ರ ವಹಿಸಿರುತ್ತಾರೆ. ಭೂಗತ ಪಾತಕಿಗಳು, ಭಯೋತ್ಪಾದಕ ಸಂಘಟನೆಯ […]

Continue Reading

ರಾಷ್ಟ ಧ್ವಜಕ್ಕೆ ಅಪಮಾನ ಮಾಡಿದ ಶ್ರೀನಿವಾಸ್ ಕಾಲೇಜ್ ವಿರುದ್ಧ ಕ್ರಮಕ್ಕೆ ಡಿವೈಎಫ್ಐ ಒತ್ತಾಯ

ಮಂಗಳೂರು :ದಿನಾಂಕ 22-01-2024ರಂದು ಮಂಗಳೂರು ನಗರ ವ್ಯಾಪ್ತಿಯ ವಲಚ್ಚಿಲ್‌ನಲ್ಲಿರುವ ಶ್ರೀನಿವಾಸ್ ಕಾಲೇಜಿನಲ್ಲಿ ಅಯೋದ್ಯೆಯ ರಾಮ ಮಂದಿರ ಉದ್ಘಾಟನಾ ಸಮಾರಂಭದ ಸಂಧರ್ಭವನ್ನು ಉಪಯೋಗಿಸಿಕೊಂಡು ಕೆಲ ದೇಶ ವಿರೋಧಿ ಕಿಡಿಗೇಡಿಗಳು ಕಾಲೇಜಿನ ಆವರಣದಲ್ಲಿರುವ ದೇಶದ ರಾಷ್ಟ್ರ ಧ್ವಜವನ್ನು ಹಾರಿಸಲು ಮೀಸಲಿಟ್ಟ ರಾಷ್ಟ್ರ ಲಾಂಛನವರುವ ಧ್ವಜಸ್ತಂಭದಲ್ಲಿ ಒಂದು ಮತಕ್ಕೆ ಸೀಮಿತವಾಗಿರುವ ಕೇಸರಿ ಬಾವುಟವನ್ನು ಹಾರಿಸಿರುತ್ತಾರೆ. ರಾಷ್ಟ್ರ ಲಾಂಛನ ಮತ್ತು ರಾಷ್ಟ್ರ ಧ್ವಜಕ್ಕೆ ಗೌರವ ನೀಡುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ ಆದರೆ ಅದೇ ರಾಷ್ಟ್ರ ಲಾಂಛನವಿರುವ ಧ್ವಜ ಸ್ಥಂಭದಲ್ಲಿ ಕೇಸರಿ ಬಾವುಟ ಹಾರಿಸಿರುವುದು […]

Continue Reading

ಮೂಡಬಿದ್ರೆ ಪೊಲೀಸರ ಯಶಸ್ವಿ ಕಾರ್ಯಾಚರಣೆ; ಕುಖ್ಯಾತ ಕಳ್ಳನ ಬಂಧನ

ಮೂಡಬಿದ್ರೆ ಸ್ವರಾಜ್ ಮೈದಾನ ಬಳಿ ಗಣೇಶ್ ಭಂಡಾರಿ ಎಂಬವರಿಗೆ ಸೇರಿದ ಹೇರ್ ಕಟಿಂಗ್ ಸೆಲೋನಿಗೆ ಮದ್ಯರಾತ್ರಿ ಹೊತ್ತಲ್ಲಿ ಯಾರೋ ಕಳ್ಳರು ಅಂಗಡಿಯ ಹಿಂಬದಿಯ ಗೋಡೆಯನ್ನು ಕೊರೆದು, ಅಂಗಡಿಯ ಒಳಗೆ ಪ್ರವೇಶಿಸಿ, ಅಂಗಡಿಯಲ್ಲಿದ್ದ Sony ಕಂಪನಿಯ LED- T.V ಹಾಗೂ ನಗದು ಹಣವನ್ನು ದೋಚಿಕೊಂಡು ಹೋಗಿರುವ ಬಗ್ಗೆ ಇತ್ತೀಚೆಗೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ ಮೂಡಬಿದ್ರೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ, ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಪೊಲೀಸ್ […]

Continue Reading