ಸುಮಾರು 9 ವರ್ಷ ಹಿಂದೆ ನಡೆದಿದೆ ಎನ್ನಲಾದ ಅಕ್ರಮ ಮದ್ಯ ಮಾರಾಟ ಪ್ರಕರಣ: ಆರೋಪಿ ಖುಲಾಸೆ

ಪುತ್ತೂರು: ಅಕ್ರಮ ಮಧ್ಯ ಮಾರಾಟ ಮಾಡಿದ್ದಾರ ಎನ್ನಲಾದ ಪ್ರಕರಣದ ಆರೋಪಿ ಆಶೋಕ್ ಸುವರ್ಣ ಎಂಬವರನ್ನು ಮಾನ್ಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಪ್ರಕರಣದಿಂದ ಖುಲಾಸೆಗೊಳಿಸಿರುತ್ತದೆ. ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ನ್ಯೂ ಜನತಾ ಕಾಲೋನಿಯಲ್ಲಿರುವ ಆಶೋಕ್ ಸುವರ್ಣ ಎಂಬವರಿಗೆ ಸೇರಿದ ಮನೆಯ ಒಳಗಡೆ ಅಡಿಗೆ ಕೋಣೆಯಲ್ಲಿ 2 ಗುಂಡಿಗಳನ್ನು ತೆಗೆದು ಅದರ ಒಳಗೆ ಅಕ್ರಮವಾಗಿ ಮಧ್ಯದ ಬಾಟಲಿಗಳನ್ನು ಇಟ್ಟು ಟೈಲ್ಸ್ ಮುಚ್ಚಿರುವುದನ್ನು ಹಾಗೂ ನೈಲಾನ್ ಚೀಲದಲ್ಲಿ ಮಧ್ಯದ ಬಾಟಲಿಗಳನ್ನು ಇಟ್ಟಿರುವುದನ್ನು ಪತ್ತೆ ಹಚ್ಚಿ, ಸೊತ್ತುಗಳನ್ನು […]

Continue Reading

ಬೆಂಗ್ರೆ ಗ್ರಾಮದ ಜನರ ಹಕ್ಕು ಪತ್ರ ಗೊಂದಲ ನಿವಾರಿಸಿ, ಹಕ್ಕುಪತ್ರ ವಿತರಿಸಲು ಆಗ್ರಹಿಸಿ DYFI ಬೆಂಗ್ರೆ ಗ್ರಾಮ ಸಮಿತಿ ವತಿಯಿಂದ ತಹಶೀಲ್ದಾರರಿಗೆ ಮನವಿ, ಹೋರಾಟದ ಎಚ್ಚರಿಕೆ

ಮಂಗಳೂರು: ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಗೊಳಪಡುವ ವಾರ್ಡ್ ಸಂಖ್ಯೆ 60 ಬೆಂಗರೆ, ವಾರ್ಡ್ ಸಂಖ್ಯೆ 11ಪಣಂಬೂರು ಬೆಂಗ್ರೆ ಪ್ರದೇಶಗಳಲ್ಲಿ ಕಳೆದ ಹಲವು ವರ್ಷಗಳಿಂದ ಸರಕಾರಿ ಭೂಮಿಯಲ್ಲಿ ವಾಸವಿರುವ ಕುಟುಂಬಗಳು ಹಕ್ಕುಪತ್ರ ಪಡೆಯಲು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಕ್ಕುಪತ್ರ ವಿಚಾರವಾಗಿ 2018 ರಲ್ಲಿ ಕಾಂಗ್ರೆಸ್ ಮತ್ತು 2023ರಲ್ಲಿ ಬಿಜೆಪಿ ಕೊನೆಯ ಅವಧಿಗಳಲ್ಲಿ ನಡೆದ ಚುನಾವಣೆಯ ಹೊಸ್ತಿಲಲ್ಲಿ ರಾಜಕೀಯ ಲಾಭಕ್ಕೋಸ್ಕರ ಜನಪ್ರತಿನಿದಿಗಳ ಒತ್ತಡಗಳಲ್ಲಿ ತರಾತುರಿಯಲ್ಲಿ ಅಪೂರ್ಣ ಪ್ರಕ್ರಿಯೆಯ ಹಕ್ಕುಪತ್ರಗಳನ್ನು ವಿತರಿಸಿ ಜನರನ್ನು ಪರದಾಡುವಂತೆ ಮಾಡಿದೆ. 1993-94ರಲ್ಲಿ ಸುಮಾರು […]

Continue Reading

ಪೊಲೀಸರ ಮೇಲೆಯೇ ಕಾರು ಹಾಯಿಸಿ ಹತ್ಯೆಗೆ ಸಂಚು ನಡೆಸಿದ ನಟೋರಿಯಸ್ ಕ್ರಿಮಿನಲ್ ಆಕಾಶ್ ಭವನ್ ಶರಣ್

ಮಂಗಳೂರು ನಗರ ಅಪರಾಧ ಪತ್ತೆದಳ CCB ಪೊಲೀಸರ ಮೇಲೆ ರೌಡಿಶೀಟರ್ ಆಕಾಶ ಭವನ ಶರಣ್ ಕಾರು ಹಾಯಿಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲವು ಪ್ರಕರಣಗಳಲ್ಲಿ ಅರೆಸ್ಟ್ ವಾರೆಂಟ್ ಎದುರಿಸುತ್ತಿರುವ ಆಕಾಶಭವನ ಶರಣ್ ಜ.2ರಂದು ರಾತ್ರಿ ನಗರದ ಮೇರಿಹಿಲ್ ಬಳಿ ಕಾರಿನಲ್ಲಿ ತೆರಳುತ್ತಿರುವ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸ್ ಪೊಲೀಸರು ಅಡ್ಡಗಟ್ಟಿ ನಿಲ್ಲಿಸಲು ಪ್ರಯತ್ನಿಸಿದ್ದರು. ಆದರೆ ಆರೋಪಿ ಪೊಲೀಸರ ಮೇಲೆಯೇ ಕಾರು ಹಾಯಿಸಿ ಕೊಲ್ಲಲು […]

Continue Reading

ಪ್ರೋ ಅಮೃತ ಸೋಮೇಶ್ವರ ಅಗಲಿಕೆಗೆ ಸಿಪಿಐಎಂ ಶೋಕ

ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ಶ್ರದ್ದಾಂಜಲಿಯನ್ನು ಸಲ್ಲಿಸುತ್ತದೆ: ಮುನೀರ್ ಕಾಟಿಪಳ್ಳ ಹಿರಿಯ ವಿದ್ವಾಂಸ, ಜನಪದ ತಜ್ಞ, ಸಾಹಿತಿ, ಬರಹಗಾರ ಪ್ರೊ. ಅಮೃತ ಸೋಮೇಶ್ವರ ಅಗಲಿಕೆಗೆ ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀವ್ರ ಶೋಕ ವ್ಯಕ್ತಪಡಿಸಿದೆ. ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸಭೆಯಲ್ಲಿ ಶ್ರದ್ದಾಂಜಲಿಯನ್ನು ಸಲ್ಲಿಸಿದೆ. ಪ್ರೊ. ಅಮೃತ ಸೋಮೇಶ್ವರರು ಕರಾವಳಿ ಜಿಲ್ಲೆಯ ಅಗ್ರಗಣ್ಯ ವಿದ್ವಾಂಸರು. ತುಳುನಾಡಿನ ಜನಪದ, ಯಕ್ಷಗಾನ ಮೊದಲಾದ ರಂಗದಲ್ಲಿ ಅವರು ಮಾಡಿದ ಕೆಲಸ, ಸಂಶೋಧನೆಗಳು ನಾಡಿನ ಇತಿಹಾಸ ಪುಟಗಳಲ್ಲಿ ಅಚ್ಚಳಿಯದೆ ಉಳಿಯಲಿದೆ. […]

Continue Reading

ಬೀದಿಬದಿ ವ್ಯಾಪಾರಸ್ಥರ ರಾಜ್ಯದಲ್ಲೇ ಪ್ರಥಮ ಸಹಕಾರ ಸಂಘ ಅಸ್ತಿತ್ವಕ್ಕೆ; ಅಧ್ಯಕ್ಷರಾಗಿ ಬಿ.ಕೆ ಇಮ್ತಿಯಾಝ್, ಉಪಾಧ್ಯಕ್ಷರಾಗಿ ಹರೀಶ್ ಪೂಜಾರಿ ಆಯ್ಕೆ

ಮಂಗಳೂರು : ಬೀದಿಬದಿ ವ್ಯಾಪಾರಿಗಳ ಆರ್ಥಿಕ ಹಿತರಕ್ಷಣೆ ಮತ್ತು ಸ್ವಾಭಿಮಾನದ ಬದುಕಿಗಾಗಿ ರಾಜ್ಯದಲ್ಲೇ ಪ್ರಥಮ ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘ ಮಂಗಳೂರಿನಲ್ಲಿ ರಚನೆಯಾಗಿದೆ. ದಕ್ಷಿಣ ಕನ್ನಡ ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘ (ನಿ)ದ ನಿರ್ದೇಶಕ ಮಂಡಳಿ ಚುನಾವಣೆ ಇತ್ತೀಚೆಗೆ ನಡೆಯಿತು. 17 ಮಂದಿಯ ನಿರ್ದೇಶಕ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದ್ದು ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿ.ಕೆ ಇಮ್ತಿಯಾಝ್, ಉಪಾಧ್ಯಕ್ಷ ಸ್ಥಾನಕ್ಕೆ ಹರೀಶ್ ಪೂಜಾರಿ ಅವಿರೋಧ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಮೊಹಮ್ಮದ್ ಮುಸ್ತಫಾ, ದಯಾನಂದ ಶೆಟ್ಟಿ, ಮೊಹಮ್ಮದ್ ಆಸೀಫ್, […]

Continue Reading

ಮುಹಿದ್ದೀನ್ ಜುಮ್ಮಾ ಮಸೀದಿ ಜಲಾಲಿಯ ನಗರ, ಚಾರ್ಮಾಡಿ ಅಧ್ಯಕ್ಷರಾಗಿ ಸಿದ್ದೀಕ್ ಹಲಸಿನಡಿ ಆಯ್ಕೆ

ಚಾರ್ಮಾಡಿ: ಮುಹಿದ್ದೀನ್ ಜುಮ್ಮಾ ಮಸೀದಿ ಜಲಾಲಿಯನಗರ, ಚಾರ್ಮಾಡಿ ಇದರ ವಾರ್ಷಿಕ ಮಹಾಸಭೆಯು ದಿನಾಂಕ 05-01-2024 ರಂದು ಹಮ್ಮಬ್ಬ ಬಿ.ಎಚ್ ರವರ ಸಭಾಧ್ಯಕ್ಷತೆಯಲ್ಲಿ ಜರುಗಿತು. ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಸಿದ್ದೀಕ್ ಹಲಸಿನಡಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಪಕೀರಬ್ಬ (ಕುಂಞಿ) ಕಲ್ಕರ್, ಪ್ರಧಾನ ಕಾರ್ಯದರ್ಶಿಯಾಗಿ ಹೈದರ್ ಬೊವುಕಾಡು, ಜೊತೆ ಕಾರ್ಯದರ್ಶಿಯಾಗಿಅಬ್ದುಲ್ ರಶೀದ್ ಮೊನಡ್ಕ,ಬಶೀರ್ ಕಲ್ಲಡ್ಕ, ಖಜಾಂಜಿಯಾಗಿ ಅಬೂಬಕ್ಕರ್ ಬಂಗ್ಲಗುಡ್ಡೆ, ಲೆಕ್ಕ ಪರಿಶೋಧಕರಾಗಿ ಮಜೀದ್ S. A, ಅಬ್ಬಾಸ್ ಹೊಸಂಗಡಿ ಆಯ್ಕೆಯಾಗಿರುತ್ತಾರೆ.

Continue Reading

ಬೆಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ಮಂಗಳೂರಿನ ವ್ಯಕ್ತಿ ಮೃತ್ಯು

ಮಂಗಳೂರಿನ ಉಳಾಯಿಬೆಟ್ಟು ನಿವಾಸಿ ನಝೀರ್ ಎಂಬವರು ಮೀನು ಸಾಗಾಟದ ಲಾರಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಸಂಧರ್ಭದಲ್ಲಿ ಬೆಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ನಡೆದಿದೆ. ಸ್ನೇಹ ಸ್ವಭಾವದ, ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ ರಾಗಿದ್ದರು. ಇಂದು ಸಂಜೆ ಮೃತದೇಹ ಮಂಗಳೂರಿಗೆ ತಲುಪಲಿದೆಯೆಂದು ಕುಟುಂಬ ಮೂಲಗಳು ತಿಳಿಸಿವೆ.

Continue Reading

ಮಂಗಳೂರು: ಬುದ್ಧಿಯೇ ಇಲ್ಲದ ‘ಸ್ಮಾರ್ಟ್’ ಅಧಿಕಾರಿಗಳು.. ಅವ್ಯವಸ್ಥೆಯ ಆಗರ ಸ್ಮಾರ್ಟ್ ಸಿಟಿ

ಕೇಂದ್ರ ಸರ್ಕಾರ ಪ್ರಮುಖ ನಗರಗಳ ಅಭಿವೃದ್ಧಿಗೆ ಸ್ಮಾರ್ಟ್ ಸಿಟಿ ಯೋಜನೆಯನ್ನೇನೂ ಜಾರಿಗೊಳಿಸಿದೆ. ಆದರೆ ಅದು ಎಷ್ಟು ಸಮರ್ಪಕವಾಗಿ ಕಾರ್ಯ ನಿರ್ವಹಿಸಿದೆ ಅನ್ನುವುದೇ ಈಗಿರುವ ಪ್ರಶ್ನೆ. ಸರ್ಕಾರಗಳು ಬಣ್ಣ ಬಣ್ಣದ ಯೋಜನೆಗಳನ್ನೇನೂ ಜಾರಿಗೊಳಿಸುತ್ತದೆ. ಅದನ್ನು ಕಾರ್ಯರೂಪಕ್ಕೆ ತರಲು ಅಷ್ಟೇ ಸಮರ್ಥ, ಬುದ್ಧಿವಂತ, ದೂರದೃಷ್ಟಿಯುಳ್ಳ ಅಧಿಕಾರಿಗಳನ್ನು ಆಯ್ಕೆ ಮಾಡದೆ ಆಯಕಟ್ಟಿನ ಜಾಗಕ್ಕೆ ಅಸಮರ್ಥ ಅಧಿಕಾರಿಗಳನ್ನು ತಂದ ಪರಿಣಾಮ ಯೋಜನೆಗಳೆಲ್ಲ ಠುಸ್ ಪುಸ್ ಆಗುತ್ತಿರುವುದು ಮಾತ್ರ ಸುಳ್ಳಲ್ಲ. ಮಂಗಳೂರು ಸ್ಮಾರ್ಟ್ ಸಿಟಿಯನ್ನೇ ಉದಾಹರಣೆಯಾಗಿ ತೆಗೆದಿಟ್ಟುಕೊಳ್ಳಿ. ದಾಖಲೆಗಳಲ್ಲಿ ಸಾವಿರಾರು ಕೋಟಿ ಅನುದಾನ ಜಾರಿಯಾದ […]

Continue Reading

ಗಂಜಿಮಠ: ಮಳಲಿ, ಸಾದೂರು ಅನಧಿಕೃತ ಮರಳು ಅಡ್ಡೆಗೆ ದಾಳಿ; ಎರಡು ಟಿಪ್ಪರ್, ಮೂರು ದೋಣಿ ವಶ.!

ಮಂಗಳೂರು ತಾಲೂಕಿನ ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಳಲಿ ಸಾದೂರು ಬಳಿ ಫಲ್ಗುಣಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಅಡ್ಡೆಗೆ ಇಂದು ಮಧ್ಯಾಹ್ನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ವರದಿಯಾಗಿದೆ. ಗಂಜಿಮಠ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಆತನ ಪಟಾಲಂಗಳು ಸೇರಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದು, ಪ್ರತಿನಿತ್ಯ ಅಂದಾಜು 50 ಕ್ಕೂ ಅಧಿಕ ಲೋಡ್ ಮರಳು ಅಕ್ರಮವಾಗಿ ಸಾಗಿಸುತ್ತಿದ್ದರು. ಈ ಬಗ್ಗೆ ಖಚಿತ ವರ್ತಮಾನ ಪಡೆದ ಭೂ ಮತ್ತು ಗಣಿ […]

Continue Reading

ಗುರುಪುರ ಕೈಕಂಬ ಪೊಳಲಿ ದ್ವಾರದ ಬಳಿ ಬಸ್ ಪಲ್ಟಿ: ಹಲವಾರು ಪ್ರಯಾಣಿಕರಿಗೆ ಗಾಯ

ಗುರುಪುರ ಕೈಕಂಬ ಪೊಳಲಿ ದ್ವಾರದ ಬಳಿ ಬಿಸಿರೋಡಿಗೆ ತೆರಳುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದು, ಬಸ್ಸಿನಲ್ಲಿದ್ದ ಹಲವಾರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ವರದಿಯಾಗಿದೆ. ಪೊಳಲಿ ದ್ವಾರದ ಕೂಗಳತೆ ದೂರದಲ್ಲಿ ಈ ಘಟನೆ ನಡೆದಿದ್ದು, ಬಳಿಯಲ್ಲೇ ಆಳವಾದ ಕಂದಕ ಇತ್ತು. ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದರೂ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಸಂಜೆ ಸಮಯವಾಗಿದ್ದರಿಂದ ಕೆಲಸ ಬಿಟ್ಟು ಮನೆಗೆ ಹೋಗುವವರು ಸೇರಿದಂತೆ 50 ರಿಂದ 60 ಪ್ರಯಾಣಿಕರಿದ್ದರು. […]

Continue Reading