ಅಧಿಕ ಲಾಭಾಂಶ ನೀಡುವುದಾಗಿ ನಂಬಿಸಿ,ಹಣ ಪಡೆದ ಎನ್ ಐಟಿಕೆ ವಿದ್ಯಾರ್ಥಿಯಿಂದ ಲಕ್ಷಾಂತರ ರೂಪಾಯಿ ವಂಚನೆ

ಅಧಿಕ ಲಾಭ ನೀಡುವುದಾಗಿ ಹಣ ಪಡೆದು ವಂಚಿಸಿರುವ ಬಗ್ಗೆೆ ಸುರತ್ಕಲ್ ಎನ್‌ಐಟಿಕೆ ವಿದ್ಯಾರ್ಥಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಯಶ್‌ವರ್ಧನ್ ಜೈನ್ ಆಲಿಯಾಸ್ ವೈವಿಜೆ 2022ರ ಮಾರ್ಚ್‌ನಿಂದ ವಾಟ್ಸಪ್ ಗ್ರೂಪ್‌ನಲ್ಲಿ ಎನ್‌ಐಟಿಕೆ ವಿದ್ಯಾರ್ಥಿಗಳಿಗೆ ಒಂದು ವಾರದಲ್ಲಿ ಶೇ.10ರಷ್ಟು ಅಧಿಕ ಲಾಭ ನೀಡುವುದಾಗಿ ಭರವಸೆ ನೀಡಿ ಹಣ ಪಡೆದಿದ್ದ. ಅಕ್ಟೋಬರ್ ತಿಂಗಳಿನಲ್ಲಿ ದೇಶದಾದ್ಯಂತ ಜನರನ್ನು ವಂಚಿಸುವುದಕ್ಕಾಗಿ ‘ವೈವಿಜೆ ಇನ್‌ವೆಸ್‌ಟ್‌‌ಮೆಂಟ್ ಎಂಟರ್‌ಪ್ರೈಸಸ್’ ಎಂಬ ಹೆಸರಿನ ಟೆಲಿಗ್ರಾಂ ಗ್ರೂಪ್ ಮಾಡಿದ್ದ. ಆ ಗ್ರೂಪ್ ಪ್ರಸ್ತುತ 981 ಮಂದಿ ಸದಸ್ಯರನ್ನು ಹೊಂದಿದೆ. ಅದರಲ್ಲಿ ಹೆಚ್ಚಾಗಿ […]

Continue Reading

ಅಕ್ರಮ ಮರಳುಗಾರಿಕೆಗೆ ಬಿತ್ತು ಬ್ರೇಕ್.ಹಸಿರು ಪೀಠದಿಂದ ಬರೋಬ್ಬರಿ 50 ಕೋಟಿ ದಂಡ.!

ನೇತ್ರಾವತಿ,ಪಲ್ಗುಣಿ ನದಿಯ ಒಡಲಲ್ಲಿ ನಡೆದದ್ದೇ ಅಕ್ರಮ ಮರಳು ಗಣಿಗಾರಿಕೆ.ದ.ಕ ಜಿಲ್ಲಾಧಿಕಾರಿಗಳು ನೀಡಿದ್ದ ಆದೇಶ ರದ್ದು . ಡ್ಯಾಂಗಳ ಪಕ್ಕದಲ್ಲೆ ನಡೆಯುತ್ತಿತ್ತು ಭರ್ಜರಿ ಮರಳು ಗಣಿಗಾರಿಕೆ. ದಕ್ಷಿಣ ಕನ್ನಡ ಡಿಸಿ ನೀಡಿದ ಅನುಮತಿ ಪ್ರಶ್ನಿಸಿ PIL ಅರ್ಜಿ ಸಲ್ಲಿಸಿದ್ದ ವಿಜಯಪುರ ಜಿಲ್ಲೆಯ ಇಂಡಿಯ ಮಾಜಿ ಶಾಸಕ ಸೌರಭೌಮ ಬಗಲಿ ನೀರಾವರಿ ಇಲಾಖೆಗೆ ಬರೊಬ್ಬರಿ 50 ಕೋಟಿ ರೂಪಾಯಿ ದಂಡ ವಿಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕರವಾಳಿಯ ಜೀವನಾಡಿಯಾಗಿರುವ ನೇತ್ರಾವತಿ ಪಾಲ್ಗುಣಿ ನದಿಗಳಲ್ಲಿ ಅಕ್ರಮ ಮರಳುಗಣಿಗಾರಿಕೆ ನಡೆಸಿ ಜೈಲು ಸೇರಿದವರು ಹಲವರು ಮಂದಿ. […]

Continue Reading

ಸೌದಿ ಅರೇಬಿಯಾ: ರಸ್ತೆ ಅಪಘಾತದಲ್ಲಿ ಮಲ್ಲೂರಿನ ಯುವಕ ಮೃತ್ಯು

ಸೌದಿ ಅರೇಬಿಯಾದ ಜುಬೈಲ್ ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಂಗಳೂರು ತಾಲೂಕಿನ ಮಲ್ಲೂರು ನಿವಾಸಿ ಸುಲೈಮಾನ್ (35 ಪ್ರಾಯ) ಮೃತಪಟ್ಟಿರುವುದಾಗಿ ವರದಿಯಾಗಿದೆ. ಜುಬೈಲಿನ ಲುಮಿನಾಸ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಸುಲೈಮಾನ್ ಕಳೆದ ಐದು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿರುವ ಸುದ್ದಿ ಹರಿದಾಡಿತ್ತು. ಆದರೆ ಇಂದು ಮೃತಪಟ್ಟಿರುವ ವಿವರ ಲಭ್ಯವಾಗಿದೆ. ರಸ್ತೆ ದಾಟುತ್ತಿದ್ದಾಗ ಸೌದಿಯ ವಾಹನ ಡಿಕ್ಕಿಯಾಗಿ ಮೃತಪಟ್ಟಿರುವುದಾಗಿ ಪ್ರಥಮ ಮಾಹಿತಿ ಲಭ್ಯವಾಗಿದೆ. ಸಂಪೂರ್ಣ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ. ಮಲ್ಲೂರು ಪಲ್ಲಿಬೆಟ್ಟು ಅಬೂಬಕ್ಕರ್ ರವರ ಏಕೈಕ ಪುತ್ರನಾಗಿದ್ದ ಸುಲೈಮಾನ್ […]

Continue Reading

20 ಕೆ.ಜಿ ದನದ ಮಾಂಸ ಮತ್ತು ಸ್ಕೂಟರ್ ನ್ನು ವಶಪಡಿಸಿ, ಆರೋಪಿಯನ್ನು ಬಂಧಿಸಿದ ಎ.ಎಸ್.ಐ ರಾಮಣ್ಣಪೂಜಾರಿ

ಬಜಪೆ ಪೊಲೀಸ್ ಠಾಣೆಯ ಎ.ಎಸ್.ಐ ರಾಮಣ್ಣಪೂಜಾರಿ ರವರು ಸಿಬ್ಬಂದಿಗಳೊಂದಿಗೆ ಮಂಗಳೂರು ತಾಲೂಕು ಬಡಗ ಎಡಪದವು ಗ್ರಾಮದ ದಡ್ಡಿ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಮೂಡುಬಿದ್ರೆಯ ಪುಚ್ಚೆಮೊಗರು ನಿವಾಸಿ ಮೊಹಮ್ಮದ್ ಕಮಲುದ್ದೀನ್ ಎಂಬಾತನು KA 19 HJ 1709 ನಂಬರಿನ ದ್ವಿಚಕ್ರ ವಾಹನದಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಸಾಗಾಟ ಮಾಡುತ್ತಿದ್ದ ಸುಮಾರು 4000 ರೂಪಾಯಿ ಬೆಲೆಯ 20 ಕೆ.ಜಿ ದನದ ಮಾಂಸವನ್ನು ಮತ್ತು ಸ್ಕೂಟರ್ ನ್ನು ಸ್ವಾದೀನಪಡಿಸಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು […]

Continue Reading

ತಲಪಾಡಿ ಗಡಿಭಾಗದ ಆಸುಪಾಸಿನಲ್ಲಿ ಮತ್ತೆ ಚಿಗಿತುಕೊಂಡ ಹೊಸ ಟಾರ್ಗೆಟ್ ಗ್ರೂಪ್.!

ವಧು,ಅಪ್ಪ,ಅಮ್ಮ,ಅಣ್ಣ,ತಂಗಿ ಎಲ್ಲವೂ ರೆಡಿಮೇಡ್.! ರೆಡಿಮೇಡ್ ಮೂಲಕವೇ ನಡೆಯುತ್ತಿದೆ ಖತರ್ನಾಕ್ ಕಸುಬು.! ಇಡೀ ಕರ್ನಾಟಕವನ್ನು ಬೆಚ್ಚಿ ಬೀಳಿಸಿದ ದಂಡುಪಾಳ್ಯ ಗ್ಯಾಂಗ್ ಗಿಂತಲೂ ಖತರ್ನಾಕ್ ಆಗಿದ್ದ ಗ್ಯಾಂಗ್ ಆಗಿತ್ತು ಉಳ್ಳಾಲದ ಅಸುಪಾಸಿನ ಒಂದು ಗ್ಯಾಂಗ್. ಭಾರೀ ಜೋರು ಸದ್ದು ಮಾಡುತ್ತಿದ್ದ ಈ ಖತರ್ನಾಕ್ ಗ್ಯಾಂಗ್ ಗೆ ರಾಜಕಾರಣಿಗಳು, ಉದ್ಯಮಿಗಳು ಗಡಗಡ ನಡುಗುತ್ತಿದ್ದರು.ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ ಕಚೇರಿ ತೆರೆದು ಮಾಡುತ್ತಿದ್ದುದು ಮಾತ್ರ ಅನಾಹುತಕಾರಿ ಕೆಲಸ. ಇವರ ನೆಟ್ ವರ್ಕ್ ಎಷ್ಟು ಜೋರಾಗಿತ್ತೆಂದರೆ ನೂರಕ್ಕೂ ಅಧಿಕ ಯುವಕರು ಮಾತ್ರವಲ್ಲ ಮಹಿಳೆಯರು, ಮಕ್ಕಳು ಇವರ ಗ್ಯಾಂಗಲ್ಲಿ […]

Continue Reading

ದಕ್ಷಿಣ ಕನ್ನಡದಲ್ಲಿ ಯುವಕರನ್ನು ಕಣಕ್ಕಿಳಿಸಿದ ಕಾಂಗ್ರೆಸ್.!ಇನಾಯತ್ ಅಲಿ,ಪದ್ಮರಾಜ್, ಅಶೋಕ್ ರೈಗೆ ಟಿಕೇಟ್ ಬಹುತೇಕ ಖಚಿತ.

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ದಕ್ಷಿಣ ಕನ್ನಡದಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಹಿರಿಯ ನಾಯಕರ ಬದಲಿಗೆ ಯುವಕರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಕಾಂಗ್ರೆಸ್‌ ಪಕ್ಷವು ಶನಿವಾರ ಬಿಡುಗಡೆ ಮಾಡಿದೆ.ಮೊದಲ ಪಟ್ಟಿಯಲ್ಲಿ ಮಂಗಳೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಯು.ಟಿ.ಖಾದರ್‌,ಬಂಟ್ವಾಳ ಕ್ಷೇತ್ರದಲ್ಲಿ ಹಿರಿಯ ನಾಯಕ ಬಿ.ರಮಾನಾಥ ರೈ,ಮೂಲ್ಕಿ–ಮೂಡುಬಿದಿರೆ ಕ್ಷೇತ್ರಕ್ಕೆ ಮಿಥುನ್ ರೈಗೆ ಟಿಕೆಟ್‌ ಹಂಚಿಕೆ ಮಾಡಲಾಗಿದೆ.ಮೀಸಲು ಕ್ಷೇತ್ರವಾದ ಸುಳ್ಯದಲ್ಲಿ ಕೃಷ್ಣಪ್ಪ ಬಿ. ಹಾಗೂ ತೀವ್ರ ಕುತೂಹಲ ಕೆರಳಿಸಿದ್ದ ಬೆಳ್ತಂಗಡಿ ಕ್ಷೇತ್ರದಲ್ಲಿ […]

Continue Reading

ವಿಳಾಸ ಬದಲಿಸಿ ತಪ್ಪಿಸಿಕೊಳ್ಳುತ್ತಿದ್ದ ಆರೋಪಿಗೆ ಖೆಡ್ಡ ತೋಡಿದ ಬಜಪೆ ಪೊಲೀಸರು

ಬಜಪೆ ಠಾಣೆಯಲ್ಲಿ ದಾಖಲಾದ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ಹಲವಾರು ಬಾರಿ ವಿಳಾಸ ಬದಲಿಸಿ ತಲೆಮರೆಸಿಕೊಂಡಿದ್ದ ಆರೋಪಿ ಅಬ್ದುಲ್ ಜಬ್ಬಾರ್ @ಪೈರೋಜ್ ನನ್ನು ಬಜಪೆ ಠಾಣಾ ಪೊಲೀಸರು ವಿಶೇಷ ಕಾರ್ಯಚರಣೆ ನಡೆಸಿ ಬಂಟ್ವಾಳದಲ್ಲಿ, ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಆರೋಪಿತನ ಮೇಲೆ ಮಂಗಳೂರು ನಗರದ ವಿವಿಧ ಠಾಣೆಗಳಾದ ಪಾಂಡೇಶ್ವರ, ಉಳ್ಳಾಲ, ಮಂಗಳೂರು ನಗರ, ಎಸ್‌.ಸಿ.ಪಿ.ಎಸ್, ಬರ್ಕೆ ಠಾಣೆಗಳಲ್ಲಿ ಕೊಲೆಯತ್ನ, ಕಳವು, ಗಾಂಜಾ ಪ್ರಕರಣಗಳು ಈ ಹಿಂದೆ ದಾಖಲಾಗಿರುತ್ತವೆ.ಆರೋಪಿಯು ಹಲವಾರು ಕಡೆಗಳಲ್ಲಿ ವಿಳಾಸ ಬದಲಿಸಿ ವಾಸ ಮಾಡುತ್ತಿದ್ದು ಈತನ ಬಂದನಕ್ಕಾಗಿ […]

Continue Reading