ಮಂಗಳೂರು: ಡ್ರಗ್ಸ್ ಜಾಲದ ಐದು ಮಂದಿ ಪೆಡ್ಲರ್ ಗಳಿಗೆ 14 ವರ್ಷ ಕಠಿಣ ಸಜೆ ಹಾಗೂ ದಂಡ ವಿಧಿಸಿದ ನ್ಯಾಯಾಲಯ

ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಜಾಲದ ಐದು ಮಂದಿ ಆರೋಪಿಗಳಿಗೆ ಮಂಗಳೂರಿನ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಕಠಿಣ ಸಜೆ ಹಾಗೂ ದಂಡ ವಿಧಿಸಿ ಆದೇಶ ನೀಡಿರುತ್ತದೆ. 2022ರಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ನಡೆಸಿ, ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಪೆಡ್ಲರ್ ಗಳನ್ನು ಬಂಧಿಸಿ, ಅವರಿಂದ 125 ಗ್ರಾಂ ಎಂಡಿಎಂಎ ವಶಕ್ಕೆ ಪಡೆದು, ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲಾಗಿತ್ತು. ಆರೋಪಿಗಳಾದ ಕಾಸರಗೋಡು ಜಿಲ್ಲೆಯ ಉಪ್ಪಳದ ಮಹಮ್ಮದ್‌ […]

Continue Reading

ಮಂಗಳೂರು: ಸಿಸಿಬಿ ಪೊಲೀಸರ ಕಾರ್ಯಾಚರಣೆ; ಮಾದಕ ವಸ್ತು ಪೂರೈಕೆದಾರರ ಬಂಧನ, 50 ಲಕ್ಷ ರೂ. ಮೌಲ್ಯದ 517.76 ಗ್ರಾಂ ಎಂಡಿಎಂಎ ವಶ

ಮಂಗಳೂರು ನಗರದ್ಯಾಂತ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ 50 ಲಕ್ಷ ರೂ. ಮೌಲ್ಯದ ಸುಮಾರು 517.76 ಗ್ರಾಂ ಎಂ.ಡಿ.ಎಂ.ಎ. ಮಾದಕ ದ್ರವ್ಯವನ್ನು ಮಂಗಳೂರು ನಗರ ಪೊಲೀಸರು ವಶಪಡಿಸಿಕೊಂಡಿರುತ್ತಾರೆ. ಮಂಗಳೂರು ನಗರ ಸಿ.ಸಿ.ಬಿ. ಘಟಕದ ಎ.ಸಿ.ಪಿ. ಮನೋಜ್ ಕುಮಾರ್ ನಾಯ್ಕ್ ರವರ ನೇತೃತ್ವದಲ್ಲಿ ಸಿಸಿಬಿ ಪೊಲೀಸರ ತಂಡವು ಖಚಿತ ಮಾಹಿತಿ ಮೇರೆಗೆ ಇಂದು ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಂದರಾಮ್ ಶೆಟ್ಟಿ […]

Continue Reading

ಮಂಗಳೂರು ನಗರ ಪೊಲೀಸರ ವಿಶೇಷ ಕಾರ್ಯಾಚರಣೆ, ಕುಖ್ಯಾತ ಅಂತರ್ ರಾಜ್ಯ ವಾಹನ ಚೋರ, ಸರಗಳ್ಳತನ ಆರೋಪಿಯ ಬಂಧನ.

ನಾಲ್ಕು ದ್ವಿಚಕ್ರ ವಾಹನ, ಎರಡು ಚಿನ್ನದ ಸರ, ಒಟ್ಟು 5 ಲಕ್ಷ ಮೌಲ್ಯದ ಸೊತ್ತುಗಳ ವಶ. ಇತ್ತೀಚೆಗೆ ಕದ್ರಿ ಬಟ್ಟಗುಡ್ಡೆ ಬಳಿ 83 ವರ್ಷ ಪ್ರಾಯದ ವಯೋವೃದ್ದ ಮಹಿಳೆಯು ತನ್ನ ಮನೆಯ ಬಳಿ ಓಣಿಯಲ್ಲಿದ್ದಾಗ ಅಪರಿತ ವ್ಯಕ್ತಿಯು ದ್ವಿಚಕ್ರ ವಾಹನದಲ್ಲಿ ಬಂದು ಚಿನ್ನದ ಸರವನ್ನು ಕಸಿದುಕೊಂಡು ಹೋದ ಬಗ್ಗೆ ಮಂಗಳೂರು ಪೂರ್ವ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿ ತನಿಖೆ ಹಂತದಲ್ಲಿತ್ತು. ಪ್ರಕರಣದ ಆರೋಪಿಯ ಪತ್ತೆ ಬಗ್ಗೆ ವಿಶೇಷ ತಂಡವನ್ನು ರಚಿಸಿ, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಮಂಗಳೂರು […]

Continue Reading

ಪುತ್ತೂರು: ನಿಷೇದಿತ ಮಾದಕವಸ್ತು ಮಾರಾಟ; ಕುಖ್ಯಾತ ಆರೋಪಿಯ ಬಂಧನ.

ಪುತ್ತೂರು ತಾಲೂಕಿನ ಕಬಕ, ಮುರ ಎಂಬಲ್ಲಿರುವ ರೈಲ್ವೇ ಬ್ರಿಡ್ಜ್ ಬಳಿ, ವ್ಯಕ್ತಿಯೋರ್ವ ಮಾದಕವಸ್ತುವನ್ನಿಟ್ಟುಕೊಂಡು ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಪುತ್ತೂರು ನಗರ ಠಾಣೆಯ ಪೊಲೀಸ್‌ ಉಪ-ನಿರೀಕ್ಷಕರಾದ ಅಂಜನೇಯ ರೆಡ್ಡಿಯವರು ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ತೆರಳಿ ಆರೋಪಿತನನ್ನು ಹಿಡಿದು ವಿಚಾರಣೆ ನಡೆಸಿದಾಗ, ಆತನು ಪುತ್ತೂರು ಕಬಕ ನಿವಾಸಿ ಉಮ್ಮರ್ ಫಾರೂಕ್ ಎಂಬುದಾಗಿ ತಿಳಿದುಬಂದಿದ್ದು, ಆತನನ್ನು ವಿಚಾರಣೆ ನಡೆಸಿ, ತಪಾಸಣೆಗೊಳಪಡಿಸಿದಾಗ ಆರೋಪಿಯು ಮಾರಾಟ ‌ಮಾಡಲು ಅಕ್ರಮವಾಗಿ ಇಟ್ಟುಕೊಂಡಿದ್ದ 10 ಗ್ರಾಂ MDMA ಎಂಬ ನಿಷೇಧಿತ ಮಾದಕವಸ್ತು ಪತ್ತೆಯಾಗಿರುತ್ತದೆ. […]

Continue Reading

ಕರಾವಳಿ ಕಾಂಗ್ರೆಸ್ ನಲ್ಲಿ ಮೊಯ್ಲಿ, ಪೂಜಾರಿ, ರೈ ಬಣ ಯುಗ ಮುಗಿಯಿತು.. ಈಗೇನಿದ್ದರೂ ಡಿ.ಕೆ, ಸಿದ್ದು ಬಣ.!

ಕೆಟ್ಟ ಮೇಲೂ ಬುದ್ಧಿ ಬರದ ಕಾಂಗೈ ನಾಯಕರು! ಕೆಟ್ಟ ಮೇಲೆ ಬುದ್ಧಿ ಬರುತ್ತದೆ ಅನ್ನುವ ಮಾತಿದೆ. ಆದರೆ ಕರಾವಳಿಯ ಕಾಂಗೈ ನಾಯಕರಿಗೆ ಅದೂ ಬಂದಿಲ್ಲ ಅನ್ನುವುದೇ ದುರ್ದೈವದ ಸಂಗತಿ. ಎಂಭತ್ತು, ತೊಂಬತ್ತರ ದಶಕದಲ್ಲಿ ಕರಾವಳಿ ಕಾಂಗ್ರೆಸ್ ಅನ್ನು ಆಳುತ್ತಿದ್ದುದು ಆಸ್ಕರ್, ಮೊಯ್ಲಿ, ಪೂಜಾರಿ ಅನ್ನುವ ತ್ರಿಮೂರ್ತಿಗಳು. ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷದ್ದೇ ಹವಾ.. ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವ ಪರಿಸ್ಥಿತಿ. ಗತವೈಭವದಲ್ಲಿ ಮೆರೆಯುತ್ತಿದ್ದ ಪಕ್ಷ ಹರಿದು ಹಂಚಿ ಹೋಗಲು ಮುಖ್ಯ ಕಾರಣವಾಗಿದ್ದೇ ಬಣ ಬಡಿದಾಟ. ಮೊಯ್ಲಿ, ಪೂಜಾರಿ ಬಣ […]

Continue Reading

“ಜನಸಾಮಾನ್ಯರ ನಡಿಗೆ ಉತ್ತಮ ಬದುಕಿನ ಕಡೆಗೆ” ಎಂಬ ಘೋಷಣೆಯ ಅಡಿಯಲ್ಲಿ ಡಿಸೆಂಬರ್ 8 ರಂದು ದ.ಕ. ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಆಗ್ರಹಿಸಿ ಸಿಪಿಐಎಂ ನಿಂದ ಬೃಹತ್ ರಾಲಿ ಮತ್ತು ಬಹಿರಂಗ ಸಭೆ

ಅಸಮಾನ ಅಭಿವೃದ್ಧಿಗೆ ಸಾಕ್ಷಿಯಾಗುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಸಾಮಾನ್ಯರನ್ನು ಭಾದಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಪರಿಹರಿಸಬೇಕು, ಜನಸಾಮಾನ್ಯರ ಬೇಡಿಕೆಗಳನ್ನು ಗಮನದಲ್ಲಿಟ್ಟು ಅಭಿವೃದ್ದಿಯೋಜನೆಗಳನ್ನು‌ ರೂಪಿಸಬೇಕು ಎಂಬ ಆಗ್ರಹದೊಂದಿಗೆ “ಜನಸಾಮಾನ್ಯರ ನಡಿಗೆ ಉತ್ತಮ ಬದುಕಿನ ಕಡೆಗೆ” ಎಂಬ ಘೋಷಣೆಯ ಅಡಿಯಲ್ಲಿ ಡಿಸೆಂಬರ್ 8 ರಂದು ಸಿಪಿಐಎಂ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಮಂಗಳೂರು ನಗರದ ಅಂಬೆಡ್ಕರ್ ವೃತ್ತದಿಂದ ಕ್ಲಾಕ್ ಟವರ್ ವರಗೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10.00 ಕ್ಕೆ ಮೆರವಣಿಗೆ ಹೊರಡಲಿದ್ದು, 11.00 ಗಂಟೆಗೆ ಸರಿಯಾಗಿ ಕ್ಲಾಕ್ ಟವರ್ ಬಳಿ […]

Continue Reading

ಹೆಚ್ಚಿನವರಿಗೆ ತಿಳಿಯದ ಸತ್ಯ: ಸಂತ ಶ್ರೀ ನಾರಾಯಣ ಗುರುಗಳನ್ನು ಮಂಗಳೂರಿಗೆ ಕರೆ ತಂದಿದ್ದು ಅಧ್ಯಕ್ಷ ಕೊರಗಪ್ಪ

ಅಂದು ಕೊರಗಪ್ಪನವರೊಂದಿಗೆ ಕೈ ಜೋಡಿಸಿದ ಸಿ.ಅಬ್ದುಲ್ ರಹಿಮಾನ್ ಹಾಗೂ ಬ್ಯಾರಿ ಸಮುದಾಯ,ಈ ಜಿಲ್ಲೆಯ ಸಾಮರಸ್ಯವನ್ನು, ಸೌಹಾರ್ಧತೆಯನ್ನು ಎತ್ತಿ ಹಿಡಿದಿದೆ. 19ನೆಯ ಶತಮಾನದ ಆರಂಭ ಕಾಲದಲ್ಲಿ ಮಾನವತಾ ವಾದಿ ಸಂತ ಶ್ರೀ ನಾರಾಯಣ ಗುರುಗಳು ತುಳುನಾಡಿಗೆ ಬರಲು ಕಾರಣಕರ್ತರಾದ ಪ್ರಮುಖರು ಹೊಯಿಗೆ ಬಜಾರ್ ಕೊರಗಪ್ಪನವರು ಮತ್ತು ಸಿ.ಅಬ್ದುಲ್ ರೆಹಮಾನ್. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಸ್ಥಾಪನೆಯಲ್ಲಿ ಶ್ರೀ ನಾರಾಯಣ ಗುರುಗಳಿಗೆ ಬೆಂಬಲವಾಗಿ ನಿಂತು, ಅದರ ಸ್ಥಾಪಕ ಅಧ್ಯಕ್ಷರೂ. ಆದುದರಿಂದ ಮುಂದೆ ಅವರು ಅಧ್ಯಕ್ಷ ಕೊರಗಪ್ಪ ಎಂಬುದಾಗಿಯೇ ಹೆಸರಾದರು. ಮಂಗಳೂರಿನ […]

Continue Reading

ಕೂಳೂರು ಘಾಲ್ಗುಣಿ ನದಿಯ ಬಳಿ ಗಾಂಜಾ ಹಾಗೂ ಎಂ.ಡಿ.ಎಂ ಮಾರಾಟ ಯತ್ನ ಪ್ರಕರಣ; ಆರೋಪಿಗಳ ಬಂಧನ

ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಂಗ್ರ-ಕೂಳೂರು ಎಂಬಲ್ಲಿಯ ಘಾಲ್ಗುಣಿ ನದಿ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿಯಂತೆ ದಾಳಿ ನಡೆಸಿ, ಆರೋಪಿಗಳಾದ ಶಾಫಿ ಅಹ್ಮದ್ (40) ತಂದೆ: ದಿ. ಅಜೀಜ್ ಖಾನ್, 13 ನೇ ಕ್ರಾಸ್, ಪಿ.ಹೆಚ್. ಕಾಲೋನಿ, ತುಮಕೂರು ಮತ್ತು ಮೊಹಮ್ಮದ್ ಸಮೀರ್ (20) ತಂದೆ: ಮೊಹಮ್ಮದ್ ರಫೀ, ಅಪೋಲೋ ಮೆಡಿಕಲ್ ರಸ್ತೆ, ಕೋತಿಪುರ, ತುಮಕೂರು ಎಂಬವರನ್ನು ಬಂಧಿಸಿ, ಅವರ ಬಳಿಯಿದ್ದ ಸುಮಾರು 12 ಗ್ರಾಂ ಎಂ.ಡಿ.ಎಂ, ಹಾಗೂ 275 ಗ್ರಾಂ ಗಾಂಜಾ (ಮಾದಕ […]

Continue Reading

ದೇವಸ್ಥಾನದ ಬಳಿ ಪಾರ್ಕ್ ಮಾಡಿದ್ದ ವಾಹನ ಕಳವು ಪ್ರಕರಣ: ಕೇರಳ ಮೂಲದ ಇಬ್ಬರು ಅಂತ‌ರಾಜ್ಯ ಕದೀಮರನ್ನು ಬಂಧಿಸಿದ ಮಂಗಳೂರು ಪೊಲೀಸರು

ಮಂಗಳೂರಿನ ನಾಗುರಿ, ಜಪ್ಪಿನಮೊಗರು ದೇವಸ್ಥಾನದ ಬಳಿ ಪಾರ್ಕ್ ಮಾಡಿದ್ದ ದ್ವಿಚಕ್ರ ವಾಹನವನ್ನು ಕಳವು ಮಾಡಿದ ಪ್ರಕರಣದಲ್ಲಿ ಇಬ್ಬರು ಅಂತ‌ರಾಜ್ಯ ಕದೀಮರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಕೇರಳದ ವೆಲ್ಲಾಡ್‌ ಅಲೆಕ್ಸ್‌ ಡೊಮಿನಿಕ್‌, ಕೋಯಿಕೋಡ್ ಕುರಚೂರು ನಿವಾಸಿ ಅಮಲ್‌ ಕೃಷ್ಣ ಬಂಧಿತ ಆರೋಪಿಗಳು. ನವಂಬರ್ 14ರಂದು ಆರೋಪಿಗಳು ಸ್ನೇಹಿತರನ್ನು ಭೇಟಿ ಮಾಡಲು ಮಂಗಳೂರಿಗೆ ಬಂದು ನಗರದ ಮಂಗಳೂರು ಜಂಕ್ಷನ್‌ ರೈಲ್ವೇ ನಿಲ್ದಾಣ ಪ್ರದೇಶದಲ್ಲಿ ಸುತ್ತಾಡಿದ್ದಾರೆ. ಬಳಿಕ ನಾಗುರಿಯ ಬಸ್‌ ತಂಗುದಾಣ ಬಳಿ ಪಾರ್ಕ್ ಮಾಡಿದ್ದ ಸ್ಕೂಟರ್‌ ಹಾಗೂ ಜೆಪ್ಪಿನಮೊಗರು ಆದಿಮಾಯೆ […]

Continue Reading

ಕೋಟೇಶ್ವರ ದೇವಳ ಕೊಡಿ ಹಬ್ಬ : ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ; ಭಗವಂತನ ಆರಾಧನೆಯಿಂದ ಬದುಕಿನಲ್ಲಿ ಉನ್ನತಿ: ಡಾ. ತಲ್ಲೂರು

ಉಡುಪಿ: ಕಲಾರಾಧಾನೆ ಭಗವಂತನ ಸಾಕ್ಷಾತ್ಕಾರಕ್ಕೆ ದಾರಿ. ಭಗವಂತನಿಗೆ ಅತೀ ಪ್ರಿಯವಾದದ್ದು ಕಲಾ ಸೇವೆ. ಅದು ನೃತ್ಯ, ಯಕ್ಷಗಾನ ಅಥವಾ ಇನ್ನಾವುದೇ ರೂಪದಲ್ಲಿ ಇರಬಹುದು. ಕಲಾ ಸೇವೆಯಿಂದ ಮನುಷ್ಯ ಅತೀ ಉನ್ನತ ಸ್ಥಾನವನ್ನು ಏರ ಬಲ್ಲ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಭಾನುವಾರ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ರಥೋತ್ಸವ ( ಕೊಡಿ ಹಬ್ಬ) ಪ್ರಯುಕ್ತ ದೇವಸ್ಥಾನದ ಶಾಂತಾರಾಮ ರಂಗಮಂಟಪದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಭಗವಂತ ಶ್ರೀಕೃಷ್ಣನಿಗೆ […]

Continue Reading