ಶಾಲಾ ಮಕ್ಕಳ ಸಾಗಿಸುತ್ತಿದ್ದ ಟವೆರಾ ಪಲ್ಟಿ. ವಿಟ್ಲ ಸಮೀಪದ ಪೆರುವಾಯಿ ಸಮೀಪ ಅಪಘಾತ. ಹಲವರಿಗೆ ಗಾಯ.

ಪೆರುವಾಯಿ ಕಡೆಯಿಂದ ವಿಟ್ಲದ ಶಾಲೆಗಳಿಗೆ ಮಕ್ಕಳ ಸಾಗಿಸುತ್ತಿದ್ದ ಟವೆರಾ ಮುಚ್ಚಿರಪದವು ಎಂಬಲ್ಲಿ ಪಲ್ಟಿ ಹೊಡೆದಿದೆ. ಹಲವು ಮಕ್ಕಳು ಹಾಗೂ ಚಾಲಕ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಟವೆರಾ ಅಪ್ಪಚ್ಚಿಯಾಗಿದ್ದರೂ ಪುಟಾಣಿಗಳು ಬದುಕಿರುವುದೇ ಪವಾಡವಾಗಿದೆ.ವಿಟ್ಲ ಪರಿಸರದ ಏಳು ಶಾಲೆಗಳಿಗೆ ಸುಮಾರು ಇನ್ನೂರಕ್ಕೂ ಹೆಚ್ಚು ವಾಹನಗಳು ಮಕ್ಕಳ ಸಾಗಿಸುತ್ತಿದ್ದಾರೆ. ಕೇಳೋರೇ ಇಲ್ಲ.. ಆಟೋಗಳಲ್ಲಿ ಹದಿನೈದು, ಮಾರುತಿ ವ್ಯಾನಲ್ಲಿ ಇಪ್ಪತ್ತು, ಟೆಂಪೋ, ಮಿನಿ ಬಸ್ಸುಗಳಲ್ಲಿ ನಲುವತ್ತಕ್ಕೂ ಹೆಚ್ಚು ಮಕ್ಕಳನ್ನು ತುಂಬಿಸಿ ಬೇಕಾಬಿಟ್ಟಿಯಾಗಿ ಚಾಲಕರು ಸಾಗಾಟ ಮಾಡುತ್ತಿದ್ದರೂ ಕೇಳೋರೇ ಇಲ್ಲವಾಗಿದೆ. ಡಿ.ಎಲ್ಲೂ ಇಲ್ಲ..ಇನ್ಸೂರೆನ್ಸ್ ಇಲ್ಲಾ.. ಸಾರಿಗೆ […]

Continue Reading

ಬೈಕ್ ಸವಾರನ ಪ್ರಾಣ ಉಳಿಸಲು ಹೋಗಿ ಮರವೇರಿದ ಕಾರು. ವಿಟ್ಲ ಸಮೀಪದ ಕಂಬಳೆಬೆಟ್ಟು ವಿನಲ್ಲಿ ಘಟನೆ

ವಿಟ್ಲ-ಪುತ್ತೂರು ರಸ್ತೆಯ ಕಂಬಳೆಬೆಟ್ಟುನಲ್ಲಿ ಒಳರಸ್ತೆಯಿಂದ ಅಚಾನಕ್ ಆಗಿ ಬಂದ ಬೈಕ್ ಸವಾರನ ಪ್ರಾಣ ಉಳಿಸಲು ಕಾರು ಚಾಲಕ ಮುಂದಾಗಿದ್ದ. ಆ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಬದಿಯ ಮಣ್ಣಿನ ದಿಬ್ಬಕ್ಕೆ ಹತ್ತಿ ಪಲ್ಟಿಹೊಡೆದು ಸಿನಿಮೀಯ ಸ್ಟಂಟ್ ರೀತಿಯಲ್ಲಿ ಮರವೇರಲು ಮುಂದಾಗಿದೆ. ಬೈಕ್ ಸವಾರ ಅರ್ಕೆಜಾಲು ನಿವಾಸಿ ಯತೀಶ್ ಗಾಯಗೊಂಡಿದ್ದಾರೆ. ಕಾರು ಜಖಂಗೊಂಡಿದ್ದರೂ ಚಾಲಕ ಬೊಳಂತಿಮುಗೇರು ನಿವಾಸಿ ಸನಾನ್ ಅಪಾಯದಿಂದ ಪಾರಾಗಿದ್ದಾರೆ.

Continue Reading

ಬಿಜೆಪಿ ಮುಖಂಡ ಹಾಗೂ ಬೆಂಬಲಿಗರಿಂದ ವಿಟ್ಲ ಆರ್.ಐ.ಕಛೇರಿಯಲ್ಲಿ ದಾಂಧಲೆ. ಮೇಜು-ಗಾಜು ಧ್ವಂಸ, ಅಧಿಕಾರಿ ಮೇಲೆ ಹಲ್ಲೆಗೆ ಯತ್ನ..

ಬಿಜೆಪಿ ಗೂಂಡಾ ಸಂಸ್ಕೃತಿಗೆ ವಿಟ್ಲ ಬ್ಲಾಕ್ ಕಾಂಗ್ರೆಸ್ ಖಂಡನೆ. ವಿಟ್ಲ: ಮನೆ ಅಡಿಸ್ಥಳದ ಹಕ್ಕು ಪತ್ರ 94ಸಿ ವಿಚಾರದಲ್ಲಿ ಕಂದಾಯ ನಿರೀಕ್ಷಕರ ಕಛೇರಿಯಲ್ಲಿ ಬಿಜೆಪಿ ಮುಖಂಡನ ಜೊತೆಯಲ್ಲಿ ಬಂದ ಬೆಂಬಲಿಗರಿಂದ ದಾಂಧಲೆ ನಡೆದಿದ್ದು, ಮೇಜಿನ ಗಾಜು ಪುಡಿಪುಡಿಯಾಗಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿ ಬಂದೋಬಸ್ತು ಏರ್ಪಡಿಸಿದ್ದಾರೆ. ವೀರಕಂಬ ಗ್ರಾಮದ ನಿವಾಸಿ ಶೇಖ್ ಶಿಬಾನ್ ಎಂಬವರು ಇತ್ತೀಚೆಗೆ ಸರ್ಕಾರಿ ಜಾಗದಲ್ಲಿ ನೂತನ ಮನೆ ನಿರ್ಮಾಣ ಮಾಡಿದ್ದರು. ಅಡಿಸ್ಥಳವನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವುದಕ್ಕಾಗಿ 94ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. […]

Continue Reading

ಮೂಡಬಿದ್ರೆ ಹಂಡೇಲು ಬಳಿ ‘ಮಾಸ್ಟರ್’ ಬಸ್ ಶರವೇಗದ ಚಾಲನೆ ; ಇಬ್ಬರಿಗೆ ಗಂಭೀರ ಗಾಯ; ಸಿಡಿದೆದ್ದ ವಿಧ್ಯಾರ್ಥಿಗಳಿಂದ ಬಸ್ಸಿನ ಗಾಜು ಪುಡಿಪುಡಿ

ಮೂಡಬಿದ್ರೆ ಹಂಡೇಲು ಬಳಿ ಮಾಸ್ಟರ್ ಬಸ್ ಓವರ್ ಟೇಕ್ ಮಾಡುವ ಭರದಲ್ಲಿ ಭೀಕರ ಅಪಘಾತ ನಡೆದಿದ್ದು, ದ್ವಿಚಕ್ರ ವಾಹನದ ಮೇಲೆ ಹರಿದು ಇಬ್ಬರು ಗಂಭೀರ ಗಾಯಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ. ತೋಡಾರ್ ಮೈಟ್ ಕಾಲೇಜು ಬಳಿ ಕಾಲೇಜಿನ ಬಸ್ಸನ್ನು ಓವರ್ ಟೇಕ್ ಮಾಡುವ ಸಂದರ್ಭ ಈ ಘಟನೆ ನಡೆದಿದ್ದು, ಬಸ್ಸಿನ ಅಜಾಗರೂಕತೆ ಚಾಲನೆ ವಿರುದ್ಧ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಬಸ್ಸಿನ ಗಾಜು ಪುಡಿ ಪುಡಿ ಮಾಡಿದ್ದಾರೆ. ವಿದ್ಯಾರ್ಥಿಗಳ ಆಕ್ರೋಶಕ್ಕೆ ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಮಂಗಳೂರು -ಮೂಡಬಿದ್ರೆ […]

Continue Reading

ಮಗುವಿನ ಜೊತೆ ನದಿಗೆ ಹಾರಿ ಆತ್ಮಹತ್ಯೆಗೆ ಮುಂದಾದ ಯುವಕ. ಎರಡು ಜೀವಗಳ ರಕ್ಷಿಸಿದ ಗುರುಪುರದ ಹೃದಯವಂತ ಮುಸ್ಲಿಮರು.

ಪತ್ನಿಯ ಅನೈತಿಕ ಸಂಬಂಧ,ಪ್ರತಿನಿತ್ಯ ಗಲಾಟೆ, ಮಾನಸಿಕ ಹಿಂಸೆ ತಾಳಲಾರದೇ ಪುಟ್ಟ ಮಗುವಿನ ಜೊತೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಗುರುಪುರಕ್ಕೆ ಯುವಕನೊಬ್ಬ ಬಂದಿದ್ದಾನೆ. ಜನ ಸಂಚಾರ ಇಲ್ಲದ ಸಂದರ್ಭ ಪುಟ್ಟ ಮಗುವನ್ನು ಎತ್ತಿಕೊಂಡು ಸೇತುವೆಯ ಮೇಲೇರಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಆತನನ್ನು ಪ್ರಶ್ನಿಸುತ್ತಾ ಬೇರೆಡೆ ಗಮನ ಹೋಗುವಂತೆ ಮಾಡಿದ್ಜಾರೆ. ಸ್ಥಳೀಯರ ಪ್ರಶ್ನೆಗಳಿಗೆ ಪುಟಾಣಿಯ ಹಿಡಿದುಕೊಂಡು ಸೇತುವೆ ಮೇಲಿದ್ದ ಯುವಕ ಉತ್ತರಿಸುತ್ತಲೇ ನದಿಗೆ ಹಾರಲು ಮುಂದಾಗಿದ್ದಾನೆ. ತಕ್ಷಣವೇ ಸ್ಥಳದಲ್ಲಿದ್ದ ಮುಸ್ಲಿಂ ಬಾಂಧವರು ಮಗು ಮತ್ತು ಆತನನ್ನು ಹಿಡಿದು ಎರಡು […]

Continue Reading

ವಿಟ್ಲ-ಉಕ್ಕುಡ-ಬೈರಿಕಟ್ಟೆ ರಸ್ತೆಯುದ್ದಕ್ಕೂ ನೂರಾರು ಮರಣ ಗುಂಡಿಗಳು.! ಮಾನ್ಯ ಶಾಸಕರೇ ಸೀರೆ ಬೇಡ, ಸಾಧ್ಯವಾದರೆ ದಯವಿಟ್ಟು ಸಂಚರಿಸಲು ಯೋಗ್ಯವಾದ ರಸ್ತೆ ಕೊಡಿ..

ರಸ್ತೆ ನಿರ್ಬಂಧವಿದ್ದರೂ ಕನ್ಯಾನ ಕಡೆಯಿಂದ ಟನ್ ಗಟ್ಟಲೆ ಮಣ್ಣು ತುಂಬಿಕೊಂಡು ಬರುವ ಭಾರಿ ಘನ ವಾಹನಗಳು. ಲಂಚ ತಿಂದು ಕಣ್ಮುಚ್ಚಿ ಕುಳಿತರೇ ಸಂಬಂಧಪಟ್ಟ ಅಧಿಕಾರಿಗಳು.? ದಯವಿಟ್ಟು ವಿಟ್ಲ-ಉಕ್ಕುಡ-ಬೈರಿಕಟ್ಟೆ ರಸ್ತೆಯಲ್ಲೊಮ್ಮೆ ಸಂಚರಿಸಿ ನೋಡಿ. ಒಂದಲ್ಲ ಎರಡಲ್ಲ ನೂರಾರು ಯಮ ಮರಣ ಗುಂಡಿಗಳು ನಿಮ್ಮನ್ನು ಸ್ವಾಗತಿಸಲು ಕಾದು ಕುಳಿತಿವೆ.!! ರಸ್ತೆಯಲ್ಲಿ ದಿನಾ ಸಂಚರಿಸುವ ಪ್ರಯಾಣಿಕರು, ಚಾಲಕರು ಹಿಡಿ ಶಾಪ ಹಾಕುತ್ತಿದ್ದಾರೆ. ಮಳೆಗಾಲದಲ್ಲಿ ಚಿಕ್ಕ ಪುಟ್ಟ ಗುಂಡಿಗಳು ಸೃಷ್ಟಿಯಾಗುವುದು ಸಾಮಾನ್ಯ, ಆದರೆ ಈ ರಸ್ತೆಯಲ್ಲಿ ಕಾಣಸಿಗುವುದು ಕೇವಲ ಗುಂಡಿಯಲ್ಲ, ಚಾಲಕನ ಕೈಯಿಂದ […]

Continue Reading

ಸ್ಪೀಕರ್ ಕ್ಷೇತ್ರದಲ್ಲಿ ಹೆದ್ದಾರಿ ಮರಣ ಗುಂಡಿಗೆ ಮಹಿಳೆ ಬಲಿ.!

ಹೆದ್ದಾರಿ ಮರಣಗುಂಡಿಯ ಬಗ್ಗೆ ಈ ಹಿಂದೆಯೇ ಪ್ರತಿಭಟಿಸಿದ್ದ ನಾಗರಿಕ ಸಂಘಟನೆಗಳು; ಎಚ್ಚೆತ್ತುಕೊಳ್ಳದ ಜಿಲ್ಲಾಡಳಿತ, ಶಾಸಕರು.! ಸರಕಾರಿ ವ್ಯವಸ್ಥೆಯ ನಿರ್ಲಕ್ಷ್ಯದಿಂದಾಗಿ ಜೀವಹಾನಿಯಾಗುತ್ತದೆ ಎಂಬುದಕ್ಕೆ ಮತ್ತೊಂದು ಘಟನೆಯು ಸಾಕ್ಷಿಯಾಗಿದೆ. ಉಳ್ಳಾಲದ ತೊಕ್ಕೊಟ್ಟು ಚೆಂಬುಗುಡ್ಡೆ ಹೆದ್ದಾರಿಯ ಮರಣ ಗುಂಡಿಯ ಬಗ್ಗೆ ಈ ಹಿಂದೆಯೇ DYFI ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟಿಸಿದರೂ ಜಿಲ್ಲಾಡಳಿತವಾಗಲಿ, ಶಾಸಕರಾಗಲಿ ಸ್ಪಂದಿಸಲೇ ಇಲ್ಲ. ಈ ರಸ್ತೆಯಲ್ಲಿ ಹಲವು ಬಾರಿ ಸಣ್ಣ ಪುಟ್ಟ ಅಪಘಾತ ನಡೆದರೂ ಸಂಬಂಧಪಟ್ಟ ಇಲಾಖೆ ಇತ್ತ ಗಮನ ಹರಿಸಲೇ ಇಲ್ಲ. ಇದೀಗ ಹೆದ್ದಾರಿ ಮರಣ ಗುಂಡಿಗೆ […]

Continue Reading

ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಬೆದರಿಕೆ ಪ್ರಕರಣ: ವಿವಿದ ಠಾಣೆಗಳಲ್ಲಿ ಕಾಂಗ್ರೆಸ್ ಮುಖಂಡರಿಂದ ದೂರು ದಾಖಲು.

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಹೇಳನಕಾರಿ ಮತ್ತು ಪ್ರಚೋದನಕಾರಿ ವೀಡಿಯೋವನ್ನು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸುತ್ತಿರುವ ಮೋಹಿತ್ ಎನ್.ಎಮ್. @ಮೋಹಿತ್ ನರಸಿಂಹಮೂರ್ತಿ ಎಂಬ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ಆಗ್ರಹಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನಿರ್ದೇಶನ ಮೇರೆಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸುರತ್ಕಲ್, ಪಣಂಬೂರು, ಕಾವೂರು, ವಾಮಂಜೂರು, ಬಜಪೆ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ […]

Continue Reading

ಮೂಡಬಿದ್ರೆ: ಪರಿಚಿತನಂತೆ ನಂಬಿಸಿ ಮಕ್ಮಲ್ ಟೋಪಿ ಇಡುವ ಖತರ್ನಾಕ್ ಚಿನ್ನ ಕಳ್ಳನ ಬಂಧನ

ಅಂದಾಜು 2.50 ಲಕ್ಷ ಮೌಲ್ಯದ 36 ಗ್ರಾಂ ತೂಕದ ಚಿನ್ನದ ಸರ ಪತ್ತೆ ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಗಸ್ಟ್ 5, 2024 ರಂದು ಸುಂದರಿ ಪೂಜಾರಿ (73 ವರ್ಷ) ರವರು ತನ್ನ ಮಗಳ ಮನೆಯಾದ ಅಶ್ವಥಪುರಕ್ಕೆ ಹೋಗಲು ನಾರಾವಿಯಿಂದ ಬಸ್ಸಿನಲ್ಲಿ ಹೊರಟು ಮದ್ಯಾಹ್ನ ಸುಮಾರು 2.30 ಗಂಟೆಗೆ ಮೂಡಬಿದ್ರೆಯ ಬಸ್ ಸ್ಯಾಂಡ್ ಗೆ ಬಂದು ಇಳಿದು ಹಣ್ಣು ತರಲೆಂದು ಅಂಗಡಿಗೆ ಹೋಗಿದ್ದು, ಅಲ್ಲಿ ಯಾರೋ ಅಪರಿಚಿತ ವ್ಯಕ್ತಿಯೊಬ್ಬ ಸುಂದರಿ ಪೂಜಾರಿ ರವರ ಬಳಿಗೆ ಬಂದು ಅವರ […]

Continue Reading

ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅವ್ಯವಸ್ಥೆ: ಸಾರ್ವಜನಿಕರು ಗರಂ

ಅದ್ಯಪಾಡಿ ನಿವಾಸಿಗಳ ರೋಧನೆ ಕೇಳುವವರ್ಯಾರು..? ಮಂಗಳೂರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಘೋಷಣೆಯಾದಾಗ ಮೊದಲು ಖುಷಿ ಪಟ್ಟಿದ್ದು ಅದ್ಯಪಾಡಿ ಗ್ರಾಮದ ನಿವಾಸಿಗಳು. ನಮ್ಮೆಲ್ಲ ಸಂಕಷ್ಟ ಮುಗಿಯಿತು; ನಮ್ಮ ಊರು ಇನ್ನು ಅಭಿವೃದ್ಧಿ ಪಥದಲ್ಲಿ ದಾಪುಗಾಲಿಡುತ್ತದೆ ಅಂದುಕೊಂಡಿದ್ದರು . ಇವರು ಅಂದುಕೊಂಡಿದ್ದೇ ಬೇರೆ ಆದದ್ದೇ ಬೇರೆ. ಇಲ್ಲಿನ ನಿವಾಸಿಗಳ ರೋಧನೆ ಕೇಳುವವರೇ ಇಲ್ಲದಂತಾಗಿದೆ. ಅದ್ಯಪಾಡಿ ಗ್ರಾಮದ ಸನಿಹದಲ್ಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲೆ ಎತ್ತಿ ನಿಂತಿದೆ. ಅಂದಿನಿಂದ ಇಲ್ಲಿನ ಗ್ರಾಮಸ್ಥರಿಗೆ ಶನಿಕಾಟ ಆರಂಭವಾಗಿದೆ. ಮೊದಲು ಬಜಪೆ ಪೇಟೆಗೆ ತೆರಳಲು ಎರಡು […]

Continue Reading