ಪಾವೂರು ಉಳಿಯ ದ್ವೀಪ ಪ್ರದೇಶದಲ್ಲಿ ಮತ್ತೆ ಅಕ್ರಮ ಮರಳುಗಾರಿಕೆ

ಸೆಪ್ಟಂಬರ್ 27 ರಂದು ಪಾದಯಾತ್ರೆ ನಡೆಸಿ, ಮಿನಿ ವಿಧಾನ ಸೌಧದ ಎದುರು ಸಾರ್ವಜನಿಕ ಸಭೆ: ಕೆಥೋಲಿಕ್ ಸಭಾ ಹರೇಕಳ ಸಮೀಪದ ಪಾವೂರು ಉಳಿಯ ದ್ವೀಪ ಪ್ರದೇಶದಲ್ಲಿ ಮತ್ತೆ ಅಕ್ರಮ ಮರಳುಗಾರಿಕೆ ನಡೆಸಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ. ಅಕ್ರಮ ಗಣಿಗಾರಿಕೆ ಮತ್ತೆ ಆರಂಭವಾಗಿರುವುದನ್ನು ವಿರೋಧಿಸಿ ಇತ್ತೀಚೆಗೆ ನೀರಿನಲ್ಲಿ ಮುಳುಗಿ ಅ ಪ್ರದೇಶದ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ಹಿಂದೆ ಮರಳು ದಂಧೆಯಿಂದಾಗಿ ಇಡೀ ದ್ವೀಪವೇ ನಾಶವಾಗುವ ರೀತಿ ಆಗಿತ್ತು. ಎರಡು ತಿಂಗಳ ಹಿಂದೆ ನಡೆದ ಕೆಡಿಪಿ ಸಭೆಯಲ್ಲಿ ದಕ್ಷಿಣ […]

Continue Reading

ಬೀದಿ ಬದಿ ವ್ಯಾಪಾರಿಗಳ ಹಕ್ಕು ನಿರಾಕರಿಸಿದರೆ ತೀವ್ರ ಹೋರಾಟ: ಬಿ.ಕೆ ಇಮ್ತಿಯಾಜ್

ಬೀದಿಬದಿ ವ್ಯಾಪಾರಿಗಳಿಗೆ ನೀಡುವ ಐಡಿ ಕಾರ್ಡ್, ಪ್ರಮಾಣ ಪತ್ರ ಅಧಿಕಾರಸ್ಥರ ಭಿಕ್ಷೆ ಅಲ್ಲ ಅದು ಅವರ ಹಕ್ಕಾಗಿದೆ ಬೀದಿ ವ್ಯಾಪಾರದ ಕಾನೂನುಬದ್ಧ ಹಕ್ಕನ್ನು ನಿರಾಕರಿಸಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು CITU ಸಂಯೋಜಿತ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ ಇಮ್ತಿಯಾಜ್ ಹೇಳಿದರು ಅವರು ಇಂದು ನಗರದ ಮಿನಿ ವಿಧಾನಸೌಧದ ಎದುರು ದಕ್ಷಿಣ ಹಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ(ಸಿಐಟಿಯು) ನೇತೃತ್ವದಲ್ಲಿ ಬೀದಿಬದಿ ವ್ಯಾಪಾರಸ್ಥರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ನಡೆದ ಪ್ರತಿಭಟನಾ ಸಭೆಯನ್ನು […]

Continue Reading

ಸೋಶಿಯಲ್ ಮೀಡಿಯಾದಲ್ಲಿ ಹೀರೋ ಆಗಿರದ ಪಿ. ಬಿ ಡೇಸಾ ಹಲವರ ಎವರ್ ಗ್ರೀನ್ ಹೀರೋ: ನವೀನ್ ಸೂರಿಂಜೆ

ಕರಾವಳಿಯಲ್ಲಿ ಒಂದು ಕಾಲವಿತ್ತು. ಆರ್ ಎಸ್ ಎಸ್ ನ ಹಿಂದುತ್ವ, ಪೊಲೀಸರ ಕ್ರೌರ್ಯಗಳು ಮಿತಿಮೀರಿದ ಸಮಯವದು. ಈಗಿನಂತೆ ಸೋಶಿಯಲ್ ಮೀಡಿಯಾದ ಕಾಲ ಅದಲ್ಲ. ಅಂತಹ ಸಂದರ್ಭದಲ್ಲಿ ಕರಾವಳಿಯ ಸ್ವಾಸ್ಥ್ಯ ಕಾಪಾಡಿದ್ದು ಪಿ ಬಿ ಡೇಸಾ ನೇತೃತ್ವದ ಪಿಯುಸಿಎಲ್. ಕೋಮುವಾದ, ಮಾನವ ಹಕ್ಕು ಉಲ್ಲಂಘನೆಯನ್ನು ವಿರೋಧಿಸಿ ಇವರು ಒಬ್ಬರಾದರೆ ಒಬ್ಬರು, ನಾಲ್ವರಾದರೆ ನಾಲ್ವರು, ಹತ್ತು ಜನವಾದರೆ ಹತ್ತೇ ಜನ ಡಿಸಿ ಆಫೀಸ್ ಎದುರು ಪ್ರತಿಭಟಿಸಿದ್ದೂ ಇದೆ. ಸಾವಿರಾರು ಜನ ಸೇರಿಸಿ ನೂರಾರು ಪ್ರತಿಭಟನೆಗಳನ್ನು ಮುನ್ನಡೆಸಿದ್ದೂ ಇದೆ. ಇಡೀ ಜನಸಮುದಾಯವೇ […]

Continue Reading

ಮಂಗಳೂರು: ವೈದ್ಯರು ನೀಡಿದ ‘ಅನಶೇಷಿಯಾ’ ಎಡವಟ್ಟು; ಪ್ಲಾಂಟ್ ಕ್ಲಿನಿಕ್ ವಿರುದ್ಧ ಕುಟುಂಬಸ್ಥರ ಗಂಭೀರ ಆರೋಪ

ಶನಿವಾರದಂದು ಉಳ್ಳಾಲದ ಆಕ್ಕರೆಕೆರೆ ನಿವಾಸಿ ಮುಹಮ್ಮದ್ ಮಾಝಿನ್ ಮೃತಪಟ್ಟ ಪ್ರಕರಣ ಇದೀಗ ಹಲವು ತಿರುವುಗಳನ್ನು ಪಡೆಯುತ್ತಿದ್ದು ವೈದ್ಯರ ಎಡವಟ್ಟಿನಿಂದಾಗಿ ಮೃತಪಟ್ಟಿರುವುದಾಗಿ ಗಂಭೀರ ಆರೋಪ ಕೇಳಿ ಬರುತ್ತಿದೆ. ಕಂಕನಾಡಿ ಬೆಂದೂರ್ ವೆಲ್ ನಲ್ಲಿರುವ ಪ್ಲಾಂಟ್ ಕ್ಲಿನಿಕ್ ಗೆ ಕಾಸ್ಮೆಟಿಕ್ ಸರ್ಜರಿ ಗೆ ಬಂದಿದ್ದ ಮುಹಮ್ಮದ್ ಮಾಝಿನ್ ಗೆ ವೈದ್ಯರು ನೀಡಿದ ಅನಶೇಷಿಯಾ ಜೀವ ತೆಗೆದುಬಿಟ್ಟಿದೆ ಅನ್ನಲಾಗುತ್ತಿದೆ. ತನ್ನ ತಾಯಿ, ಪತ್ನಿ ಯೊಂದಿಗೆ ಕ್ಲಿನಿಕ್ ಗೆ ಬಂದಿದ್ದ ಮುಹಮ್ಮದ್ ಮಾಝಿನ್ ತನ್ನ ಎದೆಯ ಭಾಗದ ಸಣ್ಣ ಗುಳ್ಳೆಯನ್ನು ತೆಗೆಯಲು ವೈದ್ಯರ […]

Continue Reading

ಅನ್ಯಾಯಕ್ಕೊಳಗಾದವರ ಪಾಲಿನ ಧ್ವನಿ, ಮಾನವ ಹಕ್ಕುಗಳ ಹೋರಾಟಗಾರ, PUCL ಸಂಘಟನೆಯ ಹಿರಿಯ ಮುಖಂಡ ಪಿ.ಬಿ ಡೇಸಾ ಇನ್ನಿಲ್ಲ

ಜನಪರವಾದ ಹಿರಿಯ ಕೊಂಡಿಯೊಂದು ನಮ್ಮಿಂದ ಅಗಲಿದೆ. ಪಿ.ಯು.ಸಿ.ಎಲ್ ( ಮಾನವ ಹಕ್ಕುಗಳಿಗಾಗಿ ಜನಪರ ಒಕ್ಕೂಟ) ಇದರ ಹಿರಿಯಾ ಮುಖಂಡ, ನ್ಯಾಯಪರ ಹೋರಾಟಗಾರ ಪಿ.ಬಿ ಡೇಸಾ ಇಂದು ಮುಂಜಾನೆ ನಿಧನರಾಗಿದ್ದಾರೆ. ಕರಾವಳಿ ಭಾಗದಲ್ಲಿ ನಡೆಯುತ್ತಿದ್ದ ಅನೈತಿಕ ಪೊಲೀಸ್ ಗಿರಿ, ಕೋಮು ಗಲಭೆ ಹೆಸರಿನಲ್ಲಿ ನಡೆಯುತ್ತಿದ್ದ ಅಲ್ಪಸಂಖ್ಯಾತರ ಮೇಲಿನ ಪೊಲೀಸ್ ದೌರ್ಜನ್ಯ, ಶೋಷಿತರಿಗೆ ಆಗುವ ಅನ್ಯಾಯದ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುತ್ತಿದ್ದ ಪಿ.ಬಿ ಡೇಸಾ ರವರ ಹೋರಾಟ ಮೈಲಿಗಲ್ಲನ್ನು ಸೃಷ್ಟಿಸುತ್ತಿತ್ತು. ಸತ್ಯಶೋಧನಾ ವರದಿ, ಮಾನವ ಹಕ್ಕುಗಳ ಹೋರಾಟದ ಮೂಲಕ ಹಲವು […]

Continue Reading

ಕಾರ್ಮಿಕ ಕಾನೂನುಗಳನ್ನು ಸಂಹಿತೆಯನ್ನಾಗಿ ರೂಪಿಸಿದ ಕೇಂದ್ರ ಸರಕಾರದ ವಿರುದ್ಧ ದೇಶಾದ್ಯಂತ ಪ್ರತಿಭಟನೆ

ಬಿಜೆಪಿ ನೇತ್ರತ್ವದ NDA ಸರಕಾರ ಜಾರಿಗೆ ತಂದಿರುವ 4 ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಕೂಡಲೇ ಹಿಂಪಡೆಯುವಂತೆ ಕೇಂದ್ರ ಕಾರ್ಮಿಕ ಸಂಘಟನೆಗಳು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಇಂದು ಮಂಗಳೂರಿನ ಕ್ಲಾಕ್ ಟವರ್ ಬಳಿಯಲ್ಲಿ JCTU ನೇತ್ರತ್ವದಲ್ಲಿ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು. ಕಾರ್ಪೊರೇಟ್ ಕಂಪೆನಿಗಳ ಹಿತ ಕಾಯುವ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶಭರಿತವಾಗಿ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ AITUC ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೇರಿಂಜರವರು ಮಾತನಾಡಿ, ಕೈಗಾರಿಕಾ ಸಂಬಂಧ ಕಾಯ್ದೆಯು ಕಾರ್ಮಿಕ ಸಂಘಗಳ […]

Continue Reading

ಸುಳ್ಯ: ವಸತಿ ನಿಲಯದಲ್ಲಿ ಬಾಲಕನೋರ್ವನ ಮರ್ಮಾಂಗ ಹಿಡಿದೆಳೆದ ಪ್ರಕರಣ; ಮರ್ಮಾಂಗ ಊದಿಕೊಂಡು ಬಾಲಕ ಸರಕಾರಿ ಆಸ್ಪತ್ರೆಗೆ ದಾಖಲು

ಸುಳ್ಯ: ವಸತಿ ನಿಲಯದಿಂದ ಶಾಲೆಗೆ ಹೋಗುತ್ತಿದ್ದ ಬಾಲಕನೋರ್ವನ ಮರ್ಮಾಂಗವನ್ನು ಇಬ್ಬರು ವಿದ್ಯಾರ್ಥಿಗಳು ಹಿಡಿದೆಳೆದ ಪರಿಣಾಮವಾಗಿ ಮರ್ಮಾಂಗ ಊದಿಕೊಂಡು ಬಾಲಕ ಮಂಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ. ಸೆ. 14ರಂದು ರಾತ್ರಿ ವಸತಿ ನಿಲಯದಲ್ಲಿ ಇಬ್ಬರು ಸಹಪಾಠಿ ವಿದ್ಯಾರ್ಥಿಗಳು ಬಾಲಕನ ಮರ್ಮಾಂಗವನ್ನು ಹಿಡಿದೆಳೆದಿದ್ದರು. ಆ ಬಳಿಕ ಬಾಲಕ ಮೂತ್ರ ವಿಸರ್ಜನೆ ಮಾಡುವ ವೇಳೆ ನೋವಾಗುತ್ತಿದ್ದ ಪರಿಣಾಮ ಮನೆಗೆ ಬಂದಿದ್ ದಎನ್ನಲಾಗಿದೆ. ಆಬಳಿಕ ತಾಯಿಗೆ ವಿಷಯ ತಿಳಿಸಿದ ಬಳಿಕ ಬಾಲಕನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಈಗ ಮಂಗಳೂರಿನ […]

Continue Reading

ಮೂಡಬಿದ್ರೆ ಸರಣಿ ಕಳ್ಳತನ ಪ್ರಕರಣ: ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಸಿಂಗಂ ಸಂದೇಶ್ ಟೀಮ್ ಯಶಸ್ವಿ; ನಟೋರಿಯಸ್ ಹಬ್ಬಿ ಅಂದರ್!

ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಸರಣಿ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಸಿಂಗಂ ಸಂದೇಶ್ ನೇತೃತ್ವದ ತಂಡ ಯಶಸ್ವಿಯಾಗಿದೆ. ದಿನಾಂಕ 15-08-2024 ರಂದು ಮಾರ್ಪಾಡಿ ಗ್ರಾಮದ ವಿವೇಕಾನಂದ ನಗರದಲ್ಲಿ ಬಳಿ 70 ವರ್ಷ ಪ್ರಾಯದ ನಿರ್ಮಾಲ ಪಂಡಿತ್ ಎಂಬವರ ಕುತ್ತಿಗೆಯಿಂದ ಸುಮಾರು 24 ಗ್ರಾಂ ಮೌಲ್ಯದ ಚಿನ್ನದ ಸರವನ್ನು ಕಸಿದಿದ್ದರು . ಅದೇ ರೀತಿ ದಿನಾಂಕ 02-09-2024 ರಂದು ಮೂಡು ಮಾರ್ನಾಡು ಗ್ರಾಮದ ಬಸದಿ ಬಳಿಯ 82 ವರ್ಷ ಪ್ರಾಯದ ಪ್ರೇಮಾ ಎಂಬವರ ಕುತ್ತಿಗೆಯಿಂದ ಸುಮಾರು 3 […]

Continue Reading

ಕ್ಷುಲ್ಲಕ ಕಾರಣಕ್ಕೆ ಒಡಹುಟ್ಟಿದ ತಮ್ಮನನ್ನೇ ಹತ್ಯೆಗೈದ ಅಣ್ಣನಿಗೆ ಜೀವಾವಧಿ ಸಜೆ

ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣ ದಿನಾಂಕ 10.05.2022 ರಂದು ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ನಂದರ ಬೆಟ್ಟು ಎಂಬಲ್ಲಿ ಬಾಳಪ್ಪ ನಾಯ್ಕ ಮತ್ತು ಐತ್ತಪ್ಪ ನಾಯ್ಕ ರವರಿಗೆ ಕ್ಷುಲ್ಲಕ ಕಾರಣಕ್ಕಾಗಿ ಮಾತಿಗೆ ಮಾತು ಬೆಳೆದು ಐತ್ತಪ್ಪ ನಾಯ್ಕನು ತನ್ನ ತಮ್ಮನಾದ ಬಾಳಪ್ಪ ನಾಯ್ಕನ ತಲೆಗೆ ಹಾಗೂ ಇತರ ಭಾಗಗಳಿಗೆ ಮರದ ದೊಣ್ಣೆಯಿಂದ ಹೊಡೆದು ಕೊಲೆಗೈದು ಪರಾರಿಯಾಗಿದ್ದ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ 73/2022 ಕಲಾಂ 302ರಂತೆ ಪ್ರಕರಣ ದಾಖಲಾಗಿತ್ತು. ವಿಟ್ಲ ಠಾಣೆಯ ಇನ್ಸ್ಪೆಕ್ಟರ್ ನಾಗರಾಜ್ […]

Continue Reading

ಬ್ಯಾರಿ ಭಾಷೆಗ್ ‘ಮಲಾಮೆ’ ಮಲಾಮತ್ತವಾ.?

ಕೊಡಗನ ಕೋಳಿ ನುಂಗಿತ್ತಾ.. ಬ್ಯಾರಿ ಭಾಷೆಯ ಮಲಾಮೆ ನುಂಗುತ್ತಾ.!! ಕೊಡಗನ ಕೋಳಿ ನುಂಗಿತ್ತಾ ಅನ್ನುವ ಗಾದೆ ಮಾತಿನಂತೆ ಬ್ಯಾರಿ ಭಾಷೆಯನ್ನು ಮಲಾಮೆ ನುಂಗಬಹುದಾ ಅನ್ನುವ ಆತಂಕ ಇದೀಗ ಬ್ಯಾರಿ ಸಮುದಾಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಬ್ಯಾರಿಗಳು ತುಳುನಾಡು ಎಂದು ಹಿಂದೆ ಕರೆಯಲಾಗುತ್ತಿದ್ದ ಕರ್ನಾಟಕದ ಈಗಿನ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ವಾಸವಾಗಿರುವ ಒಂದು ಮುಸ್ಲಿಮ್ ಜನಾಂಗ. ಅವರು ತಮ್ಮದೇ ಆದ ವಿಶಿಷ್ಟ ಸಂಪ್ರದಾಯ ಮತ್ತು ಸಾಂಸ್ಕೃತಿಕ ಅನನ್ಯತೆಯನ್ನು ಹೊಂದಿರುವ ಒಂದು ಸಾಮಾಜಿಕ ಪಂಗಡ. ಬ್ಯಾರಿಗಳಿಗೆ ಕೊಂಕಣ […]

Continue Reading