16ನೇ ವಿಧಾನಸಭೆಯ ಅಧಿವೇಶನದ ಮುಂದುವರಿದ ಉಪ-ಅಧಿವೇಶನ ಜುಲೈ ಮೂರರಿಂದ ಆರಂಭ; ಮೂರು ದಿನಗಳ ಕಾಲ ಶಾಸಕರಿಗೆ ತರಬೇತಿ ಶಿಬಿರ
16ನೇ ವಿಧಾನಸಭೆಯ ಅಧಿವೇಶನದ ಮುಂದುವರಿದ ಉಪ ಅಧಿವೇಶನ ಇದೇ ಜುಲೈ ಮೂರರಿಂದ ಆರಂಭವಾಗಲಿದ್ದು, ಜುಲೈ 14ರ ವರೆಗೆ 10 ದಿನಗಳ ಕಾಲ ನಡೆಯಲಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜುಲೈ ಮೂರರಂದು ಮಧ್ಯಾಹ್ನ 12 ಗಂಟೆಗೆ ರಾಜ್ಯಪಾಲರು ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಅಧಿವೇಶನದಲ್ಲಿ ಮುಖ್ಯವಾಗಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆ ನಡೆದು ತದನಂತರ ನಿರ್ಣಯ ಅಂಗೀಕಾರ ವಾಗಲಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ […]
Continue Reading