ಇರಾನ್ – ಅಮೇರಿಕ ಸಂಘರ್ಷ ಮತ್ತಷ್ಟು ಉಲ್ಬಣಗೊಳಿಸುವ ಸಾಧ್ಯತೆ. ಸೌದಿ ಕಳವಳ; ಟ್ರಂಪ್ ಜೊತೆ ಸೌದಿ ಯುವರಾಜ ಮಾತುಕತೆ

ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಕರೆ ನಡೆಸಿದ್ದು, ಇರಾನ್ ಜೊತೆಗಿನ ಸಂಘರ್ಷವನ್ನು ಅಮೆರಿಕ ಮತ್ತಷ್ಟು ಉಲ್ಬಣಗೊಳಿಸುವ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಮೆರಿಕವು ಇರಾನ್‌ನ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡರೆ ಅಥವಾ ಇತರ ಪ್ರಮುಖ ಮೂಲಸೌಕರ್ಯಗಳ ಮೇಲೆ ಭಾರಿ ದಾಳಿ ನಡೆಸಿದರೆ, ಅದಕ್ಕೆ ಪ್ರತಿಯಾಗಿ ಇರಾನ್, ಸೌದಿ ಅರೇಬಿಯಾ ಹಾಗೂ ಇತರ ಕೊಲ್ಲಿ ದೇಶಗಳ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಬಹುದು ಎಂದು ಸೌದಿ ಅರೇಬಿಯಾ ಆತಂಕಗೊಂಡಿದೆ ಎಂದು […]

Continue Reading

ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿಗೆ ಯಾವುದೇ ಬೆಲೆ ಇಲ್ಲ; ದಾಳಿಯನ್ನು ಮುಂದುವರಿಸಿದರೆ, ತಕ್ಕಪಾಠ: ಖಮೇನಿ ಎಚ್ಚರಿಕೆ

ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿಗೆ ಯಾವುದೇ ಬೆಲೆ ಇಲ್ಲ, ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ಉಭಯ ದೇಶಗಳು 14 ಅಂಶಗಳ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದವು. ಒಂದು ವೇಳೆ ಅಮೆರಿಕ ದಾಳಿಯನ್ನು ಮುಂದುವರಿಸಿದರೆ, ಎಂದಿಗೂ ಮರೆಯಲಾಗದ ಪಾಠ ಕಲಿಸುವುದಾಗಿ ಖಮೇನಿ ಎಚ್ಚರಿಕೆ ನೀಡಿದ್ದಾರೆ. ಇರಾನ್ ದೇಶವನ್ನು ಉದ್ದೇಶಿಸಿ ಸಂದೇಶ ರವಾನಿಸಿರುವ ಖಮೇನಿ, ಅಮೆರಿಕ ಪದೇ ಪದೇ ಒಪ್ಪಂದಗಳ ನಿಯಮವನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದರು. ಇದರಿಂದ ಅಮೆರಿಕದ ನೈಜ ಬಣ್ಣ ಬಯಲಾಗಿದೆ. ಒಪ್ಪಂದವನ್ನು ಉಲ್ಲಂಘಿಸುವ ಹಳೇ ಚಾಳಿಯನ್ನು ಅಮೆರಿಕ […]

Continue Reading

ಸೌದಿ ಅರೇಬಿಯಾ: ಅನಿವಾಸಿ ಕನ್ನಡಿಗರ ಬೇಡಿಕೆ ಈಡೇರಿಸುವಂತೆ ಕರ್ನಾಟಕ ಸರಕಾರಕ್ಕೆ ಒತ್ತಾಯ

ರಿಯಾದ್: ಕರ್ನಾಟಕ ​ಅನಿವಾಸಿ ಒಕ್ಕೂಟದ ಪ್ರಥಮ‌ ಸಭೆಯು ಇತ್ತೀಚೆಗೆ ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ಬತಫನ ರೆಸ್ಟೋರೆಂಟ್‌ನಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದ ರಿಯಾಝ್ ಇನೋಳಿ ಕರ್ನಾಟಕದ ಅನಿವಾಸಿಗಳನ್ನು ಒಟ್ಟುಗೂಡಿಸುತ್ತಿರುವ ಉದ್ದೇಶ, ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಸಾಮಾನ್ಯ ಉದ್ಯೋಗಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು. ಕರ್ನಾಟಕ ಸರಕಾರವು ಅನಿವಾಸಿಗಳ ಬೇಡಿಕೆಗಳನ್ನು ಈಡೇರಿಸುವಂತೆ ಅವರು ಆಗ್ರಹಿಸಿದರು. ಕರ್ನಾಟಕ ಸರಕಾರದ ಆರ್ಥಿಕ ಬೆನ್ನೆಲುಬಾಗಿರುವ ಅನಿವಾಸಿಗಳ ಬಗ್ಗೆ ಕರ್ನಾಟಕ ಸರಕಾರ ಗಮನ ಹರಿಸುತ್ತಿಲ್ಲ. ನಮ್ಮ ಸಮಸ್ಯೆಗಳಿಗೆ ಸರಕಾರ ಕಿವಿಯಾಗುತ್ತಿಲ್ಲ. ಗಲ್ಪ್ ಜೀವನದಿಂದ […]

Continue Reading

ಪೊನ್ನಂ ಪೇಟೆ ಕುಟ್ಟಂ ಸಮೀಪದ ದೇವಿ ವಿಲ್ಲಾ ಹೋಂಸ್ಟೇ ನಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ದೌರ್ಜನ್ಯ

ಅಮೆರಿಕಾ ಮೂಲದ ಮಹಿಳೆಯೊಬ್ಬರ ಮೇಲೆ ಹೋಮ್‌ಸ್ಟೇ ಕೆಲಸಗಾರ ಅತ್ಯಾಚಾರ ಎಸಗಿದ್ದು, ಬಳಿಕ ಮಾಲೀಕ ಸೇರಿ ಆಕೆಯನ್ನು ಮೂರು ದಿನಗಳ ಕಾಲ ಕೂಡಿಹಾಕಿ ಚಿತ್ರಹಿಂಸೆ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಮೆರಿಕಾದಿಂದ ಕೊಡಗಿಗೆ ಪ್ರವಾಸಕ್ಕೆ ಬಂದಿದ್ದ ಮಹಿಳೆ ಇಲ್ಲಿನ ‘ದೇವಿ ವಿಲ್ಲಾ’ ಎಂಬ ಹೋಮ್‌ಸ್ಟೇನಲ್ಲಿ ಉಳಿದುಕೊಂಡಿದ್ದರು. ಅಲ್ಲಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತ, ಮಹಿಳೆಗೆ ಡ್ರಿಂಕ್ಸ್ ನೀಡಿ ಅಮಲೇರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ವಿಷಯ ತಿಳಿದ ಕೂಡಲೇ ಮಹಿಳೆಯ ಸಹಾಯಕ್ಕೆ […]

Continue Reading

ಮಾಲ್ಡೀವ್ಸ್: ಸ್ಪೀಡ್ ಬೋಟ್ ಅಪಘಾತ; ರೇಮಂಡ್‌ ಗ್ರೂಪ್‌ ಮಾಲೀಕ ಗೌತಮ್‌ ಸಿಂಘಾನಿಯಾ ಪಾರು, ಇಬ್ಬರು ಭಾರತೀಯರು ನಾಪತ್ತೆ

ಮಾಲ್ಡೀವ್ಸ್ ಸಮೀಪ ನಡೆದ ಸ್ಪೀಡ್ ಬೋಟ್ ಅಪಘಾತದಲ್ಲಿ ರೇಮಂಡ್‌ ಗ್ರೂಪ್‌ ಮಾಲೀಕ ಗೌತಮ್‌ ಸಿಂಘಾನಿಯಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರು ಭಾರತೀಯರು ನಾಪತ್ತೆಯಾಗಿರುವ ಘಟನೆ ನಡೆದಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ. ಶುಕ್ರವಾರ ಮುಂಜಾನೆ ಮಾಲ್ಡೀವ್ಸ್‌ನ ವಿ ಫೆಲಿಧೂ ಪ್ರದೇಶದ ಸಮೀಪ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಸ್ಪೀಡ್ ಬೋಟ್ ಏಕಾಏಕಿ ಮಗುಚಿ ಬಿದ್ದಿದೆ. ಈ ದುರಂತದಲ್ಲಿ ಒಟ್ಟು ಏಳು ಮಂದಿ ಪ್ರಯಾಣಿಕರು ಇದ್ದರು. ಅವರಲ್ಲಿ ರೇಮಂಡ್ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಗೌತಮ್ ಸಿಂಘಾನಿಯಾ ಕೂಡ […]

Continue Reading

ಮೂಲಸೌಕರ್ಯದ ಮೇಲಿನ ದಾಳಿಗೆ ಇರಾನ್ ಆಕ್ರೋಶ; ಇಂತಹ ದಾಳಿ ನಡೆದರೆ ನಿಮ್ಮ ಮಿತ್ರ ರಾಷ್ಟ್ರಗಳನ್ನು ಸಂಪೂರ್ಣ ನಾಶ ಮಾಡದೆ ಬಿಡುವುದಿಲ್ಲ: ಇರಾನ್ ಎಚ್ಚರಿಕೆ

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಇಂಧನ ಮೂಲಸೌಕರ್ಯದ ಮೇಲೆ ನಡೆದ ದಾಳಿಗೆ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮತ್ತೊಮ್ಮೆ ಇಂತಹ ದಾಳಿ ನಡೆದರೆ ಯಾವುದೇ ಒತ್ತಡಕ್ಕೂ ಮಣಿಯದೆ “ಅನಿಯಂತ್ರಿತ ಪ್ರತಿದಾಳಿ” ನಡೆಸುವುದಾಗಿ ಇರಾನ್ ಸ್ಪಷ್ಟ ಎಚ್ಚರಿಕೆ ನೀಡಿದೆ. ಇಂಧನ ಮೂಲಸೌಕರ್ಯದ ಮೇಲೆ ದಾಳಿ ಮಾಡಿ ದೊಡ್ಡ ತಪ್ಪು ಮಾಡಿದ್ದೀರಿ, ಮತ್ತೆ ದಾಳಿ ನಡೆಸಿದರೆ ಗಲ್ಫ್ ಪ್ರದೇಶದ ತೈಲ ಹಾಗೂ ಅನಿಲ ವಲಯವನ್ನು ಸಂಪೂರ್ಣವಾಗಿ ನಾಶಪಡಿಸುವುದಾಗಿ ಇಸ್ರೇಲ್’ಗೆ ಇರಾನ್ ಕಠಿಣ ಎಚ್ಚರಿಕೆ ನೀಡಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ […]

Continue Reading

ಯುದ್ಧದ ಅಮಾನವೀಯ ಮುಖ. ಇರಾನ್ ಯುದ್ಧ, ಗಾಝಾ ಯುದ್ಧ, ಮುಗ್ಧ ಜನರ ಹತ್ಯೆ, ಮತ್ತು ಅಣುಯುದ್ಧದ ಭೀತಿ

ಅಮೆರಿಕಾದ ಮೂರ್ಖತನ, ಇಸ್ರೇಲಿನ ರಕ್ತದಾಹ, ಮತ್ತು ಮುಗ್ಧ ಜನರ ಹತ್ಯಾಕಾಂಡ ಲೇಖಕರು: ಇಸ್ಮಾಯಿಲ್ ಎಸ್., ವಕೀಲರು, ಮಂಗಳೂರು ಇತಿಹಾಸದ ಪುಟಗಳಲ್ಲಿ ಸಾವಿರಾರು ಯುದ್ಧಗಳು ದಾಖಲೆಗಳಾಗಿವೆ. ಈ ಯುದ್ಧಗಳ ಪಟ್ಟಿಗೆ ಹೊಸದಾಗಿ ಸೇರಿರುವುದೇ 2023ರ ಅಕ್ಟೋಬರ್ 7ರಿಂದ ಪ್ರಾರಂಭವಾದ ಗಾಝಾ ಯುದ್ಧ ಮತ್ತು 2026ರ ಫೆಬ್ರವರಿ 28ರಿಂದ ಆರಂಭವಾದ ಅಮೇರಿಕ – ಇಸ್ರೇಲ್ – ಇರಾನ್ ಯುದ್ಧ – ಈ ಎರಡು ಯುದ್ಧಗಳು ಮತ್ತೊಮ್ಮೆ ಅಮಾಯಕ ಜನರನ್ನು ವಿಶೇಷತಃ ಮುಗ್ಧ ಮಕ್ಕಳನ್ನು ಮತ್ತು ಮಹಿಳೆಯರನ್ನು ರಕ್ತದ ಮಡುವಿನಲ್ಲಿ ಮುಳುಗಿಸಿವೆ, […]

Continue Reading

ದುಬೈ: ಸಂಕಷ್ಟದಲ್ಲಿರುವ ಪ್ರವಾಸಿಗರಿಗೆ ಕನ್ನಡಿಗಾಸ್ ಹೆಲ್ಪ್ ಲೈನ್ ನೆರವು, ತುರ್ತು ಸಹಕಾರಕ್ಕಾಗಿ ಸರ್ಕಾರಕ್ಕೆ ಮನವಿ.

ಅನಿವಾಸಿ ಕನ್ನಡಿಗರ ಪೋಷಕರಾದ ರೊನಾಲ್ಡ್ ಕೊಲಸೋ ಅವರ ನೇತೃತ್ವದಲ್ಲಿ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡವು, ಯುಎಇಯಲ್ಲಿ ಪ್ರಸ್ತುತ ಪರಿಸ್ಥಿತಿಯ ಕುರಿತು ಚರ್ಚಿಸಲು ಹಾಗೂ ಇಲ್ಲಿ ಸಿಲುಕಿರುವ ಪ್ರವಾಸಿ ಕನ್ನಡಿಗರ ಮಾಹಿತಿ ಸಂಗ್ರಹಿಸಲು ಮತ್ತು ಕರ್ನಾಟಕ ಸರ್ಕಾರದೊಂದಿಗೆ ಹಂಚಿಕೊಳ್ಳಲು ಝೂಮ್ ಸಭೆಯನ್ನು ಆಯೋಜಿಸಿತು. ಯುಎಇಯಲ್ಲಿರುವ ಎಲ್ಲಾ ಅನಿವಾಸಿ ಕನ್ನಡಿಗರು ಸುರಕ್ಷಿತವಾಗಿದ್ದು, ಇಲ್ಲಿನ ಸರ್ಕಾರ ಎಲ್ಲ ಅನಿವಾಸಿಗಳ ಸುರಕ್ಷತೆಯನ್ನು ಸಮರ್ಪಕವಾಗಿ ಕಾಪಾಡುತ್ತಿದೆ, ಯಾವುದೇ ಆತಂಕಕ್ಕೆ ಒಳಗಾಗದೆ, ಅನಧಿಕೃತ ಅಥವಾ ಅಪಪ್ರಚಾರದ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳು ಮತ್ತು ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಳ್ಳಬಾರದು […]

Continue Reading

ಪವಿತ್ರ ರಂಜಾನ್ ತಿಂಗಳಲ್ಲಿ ಕರುಣೆ ತೋರಿದ ಆಡಳಿತಗಾರರು: ಶಾರ್ಜಾ, ಅಜ್ಮಾನ್ ಜೈಲಿನ 872 ಕೈದಿಗಳಿಗೆ ಬಿಡುಗಡೆ ಭಾಗ್ಯ

ರಂಝಾನ್ ತಿಂಗಳು ಅನ್ನುವುದು ಕ್ಷಮೆಯ ತಿಂಗಳು. ದೇವನ ಸಂಪ್ರೀತಿ ಪಡೆಯಲು ಹಪಹಪಿಸುವ ಪಾವನ ಮಾಸವಾಗಿದೆ ರಂಝಾನ್ ತಿಂಗಳು. ಇಂತಹ ಪವಿತ್ರ ಮಾಸದಲ್ಲಿ ಶಾರ್ಜಾ ಮತ್ತು ಅಜ್ಮಾನ್ ಜೈಲಿನಲ್ಲಿರುವ ಖೈದಿಗಳಿಗೆ ಬಿಡುಗಡೆ ಭಾಗ್ಯ ದೊರೆತಿದೆ. ಉತ್ತಮ ಸನ್ನಡತೆ, ಸ್ವಭಾವ ಹೊಂದಿರುವ ವಿವಿಧ ಅಪರಾಧಗಳಿಗೆ ಜೈಲು ಶಿಕ್ಷೆ ಅನುಭವಿಸುತ್ತಿರುವ 872 ಖೈದಿಗಳಿಗೆ ಕ್ಷಮಾದಾನ ದೊರೆತಿದೆ. ಸುಪ್ರೀಂ ಕೌನ್ಸಿಲ್ ಸದಸ್ಯ ಮತ್ತು ಶಾರ್ಜಾ ಆಡಳಿತಗಾರ ಶೇಖ್ ಡಾ. ಸುಲ್ತಾನ್ ಬಿನ್ ಮೊಹಮ್ಮದ್ ಅಲ್ ಖಾಸಿಮಿ ಅವರು ಶಾರ್ಜಾದಲ್ಲಿ 738 ಕೈದಿಗಳನ್ನು ಬಿಡುಗಡೆ […]

Continue Reading

UAE ಬಿಸಿಸಿಐ ಅಧ್ಯಕ್ಷರಾಗಿ ಹಿದಾಯತ್‌ ಅಡ್ಡೂರು ಪುನರಾಯ್ಕೆ; ಪ್ರಧಾನ ಕಾರ್ಯದರ್ಶಿಯಾಗಿ ಮುಷ್ತಾಕ್ ಕದ್ರಿ ಆಯ್ಕೆ

ತುಂಬೆ ಗ್ರೂಪ್ ಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯಿದೀನ್ ಮುಖ್ಯ ಪೋಷಕರಾಗಿರುವ BCCIಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ದುಬೈಯ ಜುಮೈರಾದ ಕ್ರೌನ್ ಪ್ಲಾಝಾ ಹೊಟೇಲಿನಲ್ಲಿ ನಡೆಯಿತು. ಈ ವಾರ್ಷಿಕ ಮಹಾಸಭೆಯಲ್ಲಿ 2026–2028ರ ಅವಧಿಗೆ ಹಿದಾಯತ್‌ ಅಡ್ಡೂರು ಅವರನ್ನು ಎರಡನೇ ಬಾರಿಗೆ ಅಧ್ಯಕ್ಷರಾಗಿ ಪುನರಾಯ್ಕೆ ಮಾಡಲಾಯಿತು. ಅವರ ನೇತೃತ್ವದಲ್ಲಿ 2025ರ ಫೆಬ್ರವರಿಯಲ್ಲಿ ದುಬೈಯಲ್ಲಿ ನಡೆದ ‘ಬ್ಯಾರಿ ಸಮ್ಮೇಳನ’ವು ಇತಿಹಾಸವನ್ನು ಸೃಷ್ಟಿಸಿತ್ತು. ಇದೇ ವೇಳೆ ಪ್ರಧಾನ ಕಾರ್ಯದರ್ಶಿಯಾಗಿ ಮುಷ್ತಾಕ್ ಕದ್ರಿ, ಖಜಾಂಚಿಯಾಗಿ ಹಂಝಾ ಎ. ಖಾದರ್, ಸಂಚಾಲಕರಾಗಿ ಅಶ್ರಫ್ ಶಾ ಮಾಂತೂರು […]

Continue Reading