ಬಾವಿಯೊಳಗೆ ಉಸಿರುಗಟ್ಟಿ ರಿಂಗ್ ಕಾರ್ಮಿಕರಿಬ್ಬರ ದುರ್ಮರಣ.! ಕೇಪು ಗ್ರಾಮದ ಪಡಿಬಾಗಿಲು ವಿದ್ಯಾಗಿರಿ ಶಾಲಾ ಸಮಿಪದಲ್ಲಿ ದುರ್ಘಟನೆ.!

ವಿಟ್ಲ ಪಡ್ನೂರು ಗ್ರಾಮದ ಪರ್ತಿಪ್ಪಾಡಿ ನಿವಾಸಿ ಕುಕ್ಕಿಲ ಇಬ್ಬು@ಇಬ್ರಾಹಿಂ, ಸಾಲೆತ್ತೂರು ಸಮೀಪದ ಮಲಾರು ಅಲಿ ಮೃತ ಕಾರ್ಮಿಕರು. ಮೂವತ್ತು ಅಡಿ ಆಳದ ಕಾಂಕ್ರೀಟ್ ರಿಂಗ್ ಹಾಕಿದ್ದ ಅರ್ಧ ಮುಚ್ಚಿದ ಬಾವಿಯೊಳಗೆ ಇಳಿದಿದ್ದ ಕಾರ್ಮಿಕರು ಆಮ್ಲಜನಕ ಕೊರತೆಯಿಂದ ಉಸಿರುಗಟ್ಟಿ ಸಾವು.! ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ರಿಂಗ್ ಇಳಿಸುವ ಕಾರ್ಯದಲ್ಲಿ ಪರಿಣಿತರಾಗಿದ್ದ ಕುಕ್ಕಿಲ ಇಬ್ಬು@ಇಬ್ರಾಹಿಂ ಸಾವಿರಾರು ಕೆರೆ-ಬಾವಿಗಳ ಕೆಲಸ ಮಾಡಿದ್ದ ಕಾರ್ಮಿಕರು.! ಮುಚ್ಚಳ ತೆಗೆದ ಬಳಿಕ ಬಾವಿಯೊಳಗೆ ಇಳಿದಿದ್ದ ಕಾರ್ಮಿಕ ಅಸ್ವಸ್ಥನಾಗಿದ್ದ ಕಾರಣ ಆತನನ್ನು ಮೇಲಕ್ಕೆತ್ತಲು ಇಳಿದಿದ್ದ ಇನ್ನೊಬ್ಬನೂ ಅಸ್ವಸ್ಥನಾಗಿ […]

Continue Reading

ದ.ಕನ್ನಡ ಜಿಲ್ಲೆಯ ಸಮಾನ ಮನಸ್ಕ ಚಿಂತಕರು, ಪ್ರಾಧ್ಯಾಪಕರು, ಕವಿಗಳು, ಬರಹಗಾರರು ಮಂಗಳೂರಿನಲ್ಲಿ ಸಭೆ ನಡೆಸಿ, ಬಿಜೆಪಿಯನ್ನು ಸೋಲಿಸಲು, “ಇಂಡಿಯಾ” ಕೂಟದ ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಮನವಿ

ದಕ್ಷಿಣ ಕನ್ನಡ ಜಿಲ್ಲೆಯ ಸಮಾನ ಮನಸ್ಕ ಚಿಂತಕರು, ಪ್ರಾಧ್ಯಾಪಕರು, ಕವಿಗಳು, ಬರಹಗಾರರು ಸೇರಿದಂತೆ ಸಮಾನ ಮನಸ್ಕರು ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಮಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಸಭೆ ನಡೆಸಿ ದಕ್ಷಿಣ ಕನ್ನಡ, ಉಡುಪಿ ಲೋಕಸಭಾ ಕ್ಷೇತ್ರದ ಮತದಾರರಲ್ಲಿ ಬಿಜೆಪಿಯನ್ನು ಸೋಲಿಸಲು, “ಇಂಡಿಯಾ” ಕೂಟದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತಚಲಾಯಿಸಲು ಮನವಿ ಮಾಡಿದ್ದಾರೆ. ಚಿಂತಕರು, ಬರಹಗಾರರು ಮತ್ತು ಪ್ರಜ್ಞಾವಂತರಿಂದ ದಕ್ಷಿಣ ಕನ್ನಡ, ಉಡುಪಿ ಮತದಾರರಲ್ಲಿ ಮನವಿ ಭಾರತೀಯರೆಲ್ಲರಿಗೆ ಸಂವಿಧಾನದ ಆಶಯದಂತೆ ಸೂಕ್ತ ಯೋಜನೆಗಳ ಮೂಲಕ ಘನತೆಯಿಂದ ಬದುಕುವಂತೆ ಮಾಡಬೇಕಾದದ್ದು […]

Continue Reading

ಈ ಬಾರಿ ಕರಾವಳಿಯಲ್ಲಿ ಕೋಮುವಾದ ಸೋತರೆ ಅದಕ್ಕೆ ಕಾರಣ ಜನಾಂದೋಲನವೇ ಹೊರತು ಕಾಂಗ್ರೆಸ್ಸಿಗರಲ್ಲ. ಒಂದು ವೇಳೆ ಕೋಮುವಾದಿಗಳೇ ಗೆದ್ದರೆ ಅದು ಜನರ ಸೋಲಲ್ಲ, ಅದು ಕಾಂಗ್ರೆಸ್ ವೈಫಲ್ಯವಷ್ಟೆ

✍️. ನವೀನ್ ಸೂರಿಂಜೆ, ಪತ್ರಕರ್ತರು ಕರಾವಳಿಯಲ್ಲಿ ನಡೆದ ನಿರಂತರ ಜನಾಂದೋಲನದಿಂದ ಈ ಬಾರಿ ಜನ ಬದಲಾಗಿದ್ದಾರೆ. ಕೋಮುವಾದವನ್ನು ಸೋಲಿಸಬೇಕು ಎನ್ನುವ ಜನರ ಅತ್ಯುತ್ಸಾಹದ ಓಟಕ್ಕೆ ಪೂರಕವಾಗಿ ಕಾಂಗ್ರೆಸ್ ಹೆಜ್ಜೆ ಹಾಕುತ್ತಿಲ್ಲ ! ಈ ಬಾರಿ ಕೋಮುವಾದದ ಅಪಾಯಗಳ ಬಗ್ಗೆ ಜನರಿಗೆ ಖುದ್ದು ಅರಿವಾಗುತ್ತಿದೆ. “ಹಿಂದುತ್ವ ಎನ್ನುವುದು ನಮ್ಮ ಬದುಕಿನ ಅವಕಾಶಗಳು ಕಸಿಯುತ್ತಿದೆ. ಉದ್ಯೋಗ, ಶಿಕ್ಷಣ, ಹಸಿವು, ವಸತಿ ಸೇರಿದಂತೆ ಬದುಕಿನ ಮೂಲಭೂತ ಸಮಸ್ಯೆಗಳನ್ನು ಮರೆಮಾಚಲು ನಡೆಸುವ ರಾಜಕೀಯ ತಂತ್ರಗಾರಿಕೆಯೇ ಹಿಂದುತ್ವ” ಎಂದು ಕರಾವಳಿಗರಿಗೆ ಅರ್ಥ ಅಗುತ್ತಿದೆ‌.ಹಿಂದು ನಾವೆಲ್ಲ […]

Continue Reading

ಕಾರ್ಮಿಕ ವರ್ಗಕ್ಕೆ ಅನ್ಯಾಯವೆಸಗಿದ ನರೇಂದ್ರ ಮೋದಿ ಸರಕಾರವನ್ನು ಕಿತ್ತೆಸೆಯಿರಿ: ಜೆ.ಬಾಲಕೃಷ್ಣ ಶೆಟ್ಟಿ

ಸಮಾಜದ ಅರ್ಥಿಕ ಚಕ್ರ ತಿರುಗುವಲ್ಲಿ ಪ್ರಧಾನ ಪಾತ್ರ ವಹಿಸುವ ಕಾರ್ಮಿಕ ವರ್ಗದ ವಿರುದ್ದ ನೀತಿಗಳನ್ನು ಜಾರಿಗೊಳಿಸಿ ಬಂಡವಾಳ ಶಾಹಿಗಳ ಜೇಬು ತುಂಬಿಸುವ ನರೇಂದ್ರ ಮೋದಿ ಸರಕಾರದ ಅಚ್ಚೇದಿನ್ ಬಂದಿರುವುದು ಈ ದೇಶದ ಅಧಾನಿ ಅಂಬಾನಿಗಳಿಗೆ ಹೊರತು ಜನಸಾಮಾನ್ಯರಿಗಲ್ಲ ಎಂದು ಕಳೆದ 10 ವರ್ಷಗಳಲ್ಲಿ ಸಾಬೀತಾಗಿದೆ.ಇಂತಹ ಜನವಿರೋಧಿ ರೈತ ಕಾರ್ಮಿಕ ವಿರೋಧಿ ನರೇಂದ್ರ ಮೋದಿ ಸರಕಾರ ಮತ್ತೆ ಅಧಿಕಾರದ ಗದ್ದುಗೇರಿದರೆ ದೇಶ ಸರ್ವನಾಶವಾಗುತ್ತದೆ.ಬಿಜೆಪಿಕೂಟವನ್ನು ಸೋಲಿಸುವ ಮೂಲಕ ಜನತೆ ಗೆಲ್ಲುವಂತಾಗಬೇಕಾದರೆ ಇಂಡಿಯಾ ಕೂಟದ ಅಭ್ಯರ್ಥಿಯನ್ನು ಗೆಲ್ಲಿಸಲು ದ.ಕ.ಜಿಲ್ಲೆಯ ಕಾರ್ಮಿಕ ವರ್ಗ […]

Continue Reading

ಬಾಲ್ಯ ವಿವಾಹದ ಪ್ರಕರಣ: ಮಲತಾಯಿಯ ದೂರು, ಕೂರ್ನಡ್ಕ ಯು.ಟಿ ಅಬ್ದುಲ್ ಅಝೀಝ್ ಸಹಿತ ಆರೋಪಿತರ ಖುಲಾಸೆ

ಪುತ್ತೂರು : ಸಿಡಿಪಿಓ ಪುತ್ತೂರು ಇಲ್ಲಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶಾಂತಿ. ಟಿ ಹೆಗಡೆಯವರು ನೀಡಿದ ದೂರಿನ ಆಧಾರದಲ್ಲಿ ಬಾಲ್ಯ ವಿವಾಹಕ್ಕೆ ಉತ್ತೇಜಿಸಿದ್ದಾರೆ ಎನ್ನಲಾದ ಆರೋಪದಡಿಯಲ್ಲಿ ಪ್ರಕರಣ ಎದುರಿಸುತ್ತಿದ್ದ ಕೆಮ್ಮಿಂಜೆ ನಿವಾಸಿಗಳಾದ ಯು.ಟಿ. ಅಬ್ದುಲ್ ಅಜೀಜ್ ಮತ್ತು ಇತರರನ್ನು ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಪುತ್ತೂರು, ಸದ್ರಿ ಪ್ರಕರಣದಿಂದ ಖುಲಾಸೆಗೊಳಿಸಿರುತ್ತಾರೆ. ದಿನಾಂಕ 14/11/2018 ರಂದು ಉಪ್ಪಿನಂಗಡಿ ನೆಕ್ಕಿಲಾಡಿ ಆದರ್ಶ ನಗರದ ಸುಲೇಮಾನ್ ರವರ ಮಗನಾದ ಮಹಮದ್ ಸಾಧಿಕ್ ಎಂಬಾತನ ಜೊತೆ ಪುತ್ತೂರು […]

Continue Reading

ನಿರ್ಮಾಣ ಹಂತದ ಸೇತುವೆ ಕುಸಿದು ಬಿದ್ದು ಏಳು ಕಾರ್ಮಿಕರಿಗೆ ಗಾಯ; ವಿಟ್ಲ ಸಮೀಪದ ಪುಣಚ ಗ್ರಾಮದಲ್ಲಿ ದುರಂತ.!

ವಿಟ್ಲ: ಪುಣಚ ಗ್ರಾಮದ ಬರೆಂಜ – ಕುರುಡಕಟ್ಟೆ ಸಂಪರ್ಕ ರಸ್ತೆಯ ಮಲ್ಲಿಪ್ಪಾಡಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದುಬಿದ್ದು ಏಳು ಕಾರ್ಮಿಕರು ಗಾಯಗೊಂಡಿದ್ದಾರೆ. ಬರೆಂಜ-ಕುರುಡಕಟ್ಟೆ ಮೂಲಕ ಪುತ್ತೂರಿನ ಬಲ್ನಾಡುವಿಗೆ ಸಂಪರ್ಕವಾಗುವ ರಸ್ತೆಗೆ ಮಲ್ಲಿಪ್ಪಾಡಿಯಲ್ಲಿನ ಹೊಳೆಗೆ ಸೇತುವೆ ನಿರ್ಮಾಣವಾಗುತ್ತಿದೆ. ಸುಮಾರು ಎರಡು ಕೋಟಿ ವೆಚ್ಚದ ಸೇತುವೆ ನಿರ್ಮಾಣದ ಕಾಮಗಾರಿ ಆರು ತಿಂಗಳಿನಿಂದ ನಡೆಯುತ್ತಿದೆ. ಇಂದು ಕೊನೆಯ ಹಂತದ ಕಾಮಗಾರಿ ನಡೆಯುತ್ತಿದ್ದ ಸಂದರ್ಭ ಏಕಾಏಕಿ ಕುಸಿದು ಬಿದ್ದಿದೆ. ಆ ಸಂದರ್ಭ ಅವಶೇಷಗಳ ಅಡಿಯಲ್ಲಿ ಏಳು ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ತಕ್ಷಣವೇ ಸ್ಥಳೀಯರು ಮತ್ತು […]

Continue Reading

ಹಿಂದುತ್ವಕ್ಕೆ ಬಲಿಯಾದ ಕುಲಾಲ ಮತ್ತು ಸಣ್ಣ ಸಮುದಾಯಗಳ ಪ್ರಾತಿನಿಧ್ಯ.!

ಹಿಂದುತ್ವಕ್ಕಾಗಿ ಪ್ರಾಣ ಕೊಡಲು, ಸಂಘಟಿಸಲು ಕುಲಾಲರು ಬೇಕು. ಆದರೆ ಸ್ಥಾನಮಾನ ಮಾತ್ರ ಬಂಟರು ಮತ್ತು ಇತರರಿಗೆ.! ಇದು ಬಿಜೆಪಿ ಹಿಂದುತ್ವದ ನೀತಿ.! ✍️. ನವೀನ್‌ ಸೂರಿಂಜೆ,ಪತ್ರಕರ್ತರು ಬಿಜೆಪಿ ಮತ್ತು ಸಂಘಪರಿವಾರದಲ್ಲಿ ಕುಂಬಾರ/ಕುಲಾಲ್/ಮೂಲ್ಯ ಸಮುದಾಯಗಳ ಯುವಕರು ಇದ್ದರೂ ಅವರಿಗೆ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ. ಸಾಮಾಜಿಕವಾಗಿ ಹಿಡಿತ ಹೊಂದಿರುವ ಬಂಟರು, ಜನಸಂಖ್ಯೆಯಲ್ಲಿ ದೊಡ್ಡದಾಗಿರುವ ಬಿಲ್ಲವರು, ಸಂಘಪರಿವಾರವನ್ನು ನಡೆಸುತ್ತಿರುವ ಬ್ರಾಹ್ಮಣರು ಮಾತ್ರ ಈ ಹಿಂದುತ್ವ ರಾಜಕಾರಣದ ಫಲಾನುಭವಿಗಳಾಗಿದ್ದಾರೆ ಕರಾವಳಿಯಲ್ಲಿ ಈಗ ಬಂಟ-ಬಿಲ್ಲವ-ಬ್ರಾಹ್ಮಣ ಪ್ರಾತಿನಿಧ್ಯದ ಚರ್ಚೆ ನಡೆಯುತ್ತಿದೆ. ರಾಜಕೀಯ ಪ್ರಾತಿನಿಧ್ಯದ ಚರ್ಚೆ ಬಂದಾಗ […]

Continue Reading

ಮೀನನ್ನು ಕ್ರಿಮಿನಲೈಸ್ ಮಾಡಿದ್ರೆ ಮೋದಿಗೇನು ಲಾಭ ಗೊತ್ತಾ.?!

“ಸಮುದ್ರದಲ್ಲಿ ಮೀನು ಸಂತತಿ ನಾಶವಾದರೆ ಒಳ್ಳೆಯದೇ ಅಲ್ವಾ ? ಜನ ಆಗಲಾದರೂ ಮೀನು ತಿನ್ನೋದು ನಿಲ್ಲಿಸಿ ಸಸ್ಯಹಾರಿಗಳಾಗುತ್ತಾರೆ” ಬಾಬಾ ರಾಮ್ ದೇವ್; ಬಾಬಾ ರಾಮ್ ದೇವ್ ದು ಖಾಲಿ ತಲೆ ಎಂದು ನಾವಂದುಕೊಂಡೆವು. ಆದರೆ ಅದು ಖಾಲಿ ತಲೆಯಲ್ಲ, ಅದರ ಹಿಂದೆ ಒಂದು ವ್ಯಾಪಾರದ ತಲೆಯಿದೆ ಎಂದು ಮತ್ತೆ ತಿಳಿಯಿತು. ✍️. ನವೀನ್ ಸೂರಿಂಜೆ, ಪತ್ರಕರ್ತರು ಈಗ ಒಂದೈದು ವರ್ಷಗಳಲ್ಲಿ ಮೀನುಗಾರರ ಬದುಕಿನಲ್ಲಿ ಏನಾಗುತ್ತಿದೆ ? ಇಲ್ಲಿಯವರೆಗೂ ದಕ್ಷಿಣ ಕನ್ನಡ- ಉಡುಪಿಯ ಮೀನುಗಾರರು ಮೀನುಗಳನ್ನು ವಿದೇಶಗಳಿಗೆ ಕಳುಹಿಸುತ್ತಿದ್ದರೆ, […]

Continue Reading

ಎಪ್ರಿಲ್ 15 : ಮಂಗಳೂರಿನಲ್ಲಿ “ಇಂಡಿಯಾ” ಘಟಕ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳಿಂದ “ಬಿಜೆಪಿ ಸೋಲಿಸಿ” ಜನ ಸಮಾವೇಶ

ಕಾಂಗ್ರೆಸ್ ಹೊರತು ಪಡಿಸಿದ “ಇಂಡಿಯಾ” ಕೂಟದ ಘಟಕ ಪಕ್ಷಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಮಿಕ, ರೈತ, ದಲಿತ, ಯುವಜನ, ಅಲ್ಪಸಂಖ್ಯಾತ ಸಂಘಟನೆಗಳು ಸೇರಿದಂತೆ ಸಮಾನ ಮನಸ್ಕ ಜನಪರ ಸಾಮಾಜಿಕ ಸಂಘಟನೆಗಳು ಮಂಗಳೂರಿನ ಪುರಭವನದಲ್ಲಿ ಎಪ್ರಿಲ್ 15 ರಂದು “ಬಿಜೆಪಿ ಸೋಲಿಸಿ, ಭಾರತ ಉಳಿಸಿ” ಘೋಷಣೆಯಡಿ ಬೃಹತ್ “ಜನ ಸಮಾವೇಶ” ಹಮ್ಮಿಕೊಂಡಿವೆ. ಬೆಳಿಗ್ಗೆ 10 :00 ರಿಂದ ಮಧ್ಯಾಹ್ನ 1:00 ಗಂಟೆಯವರಗೆ ನಡೆಯಲಿರುವ ಈ ಸಮಾವೇಶದಲ್ಲಿ ಸುಮಾರು 40 ಸಂಘಟನೆಗಳು ಪಾಲ್ಗೊಳ್ಳಲಿವೆ ಎಂದು ಸಮಾವೇಶ ಆಯೋಜಿಸಿರುವ ಜಂಟಿ […]

Continue Reading

ನಾರಾಯಣ ಗುರುಗಳಿಗೆ ಮಾಲಾರ್ಪಣೆಗೂ ಮುನ್ನ ಮೋದಿ ಉತ್ತರಿಸಬೇಕಾಗಿದೆ.!

ನಾರಾಯಣ ಗುರುಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಮಾಲಾರ್ಪಣೆ ಮಾಡುವುದಕ್ಕೂ ಮೊದಲು ಕರಾವಳಿಯ ಬಹುಸಂಖ್ಯಾತರಾದ ನಾರಾಯಣ ಗುರು ಅನುಯಾಯಿಗಳ ಭಾವನೆಗಳಿಗೆ ಉತ್ತರ ಕೊಡಬೇಕು ✍️. ನವೀನ್ ಸೂರಿಂಜೆ, ಪತ್ರಕರ್ತರು ಎಪ್ರಿಲ್ 14 ರಂದು ಸಂಜೆ ಪ್ರಧಾನಿ ನರೇಂದ್ರ ಮೋದಿಯವರು ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಂಗಳೂರಿನಲ್ಲಿ ರೋಡ್ ಶೋ ಆರಂಭಿಸಲಿದ್ದಾರೆ. ಅದಕ್ಕೂ ಮುನ್ನ ನಾರಾಯಣ ಗುರುಗಳ ಬಗೆಗಿನ ನರೇಂದ್ರ ಮೋದಿಯವರ ನಿಲುವನ್ನು ಸ್ಪಷ್ಟಪಡಿಸಬೇಕು. 2022 ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು […]

Continue Reading