ಮೇಲ್ಮನೆ ಸ್ಥಾನಕ್ಕೆ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ರವರ ಹೆಸರು ಚಾಲ್ತಿಯಲ್ಲಿ.!

ಕೋಟ ಶ್ರೀನಿವಾಸ ಪೂಜಾರಿಯವರಿಂದ ತೆರವಾಗುವ ಮೇಲ್ಮನೆ ಸ್ಥಾನಕ್ಕೆ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ರವರ ಹೆಸರು ಕೇಳಿಬರುತ್ತಿದೆ. ಸದ್ಯದಲ್ಲೇ ವಿಧಾನಸಭೆಯ ಮೂಲಕ ವಿಧಾನಪರಿಷತ್ತಿಗೆ ಸದಸ್ಯರನ್ನು ಚುನಾಯಿಸಲಾಗುತ್ತದೆ. ಇದರ ಮೂಲಕ ಮೇಲ್ಮನೆ ಪ್ರವೇಶಿಸುವುದಕ್ಕೆ ಬಿಜೆಪಿಯಲ್ಲಿ ಪ್ರಯತ್ನ ಪ್ರಾರಂಭವಾಗಿದ್ದು, ನಳಿನ್‌ ಕುಮಾರ್‌ ಅವರಿಗೆ ಪರಿಷತ್‌ ಸ್ಥಾನ ಕಲ್ಪಿಸಬೇಕೆಂಬ ಚರ್ಚೆ ಪ್ರಾರಂಭವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರು ಉಡುಪಿ- ಚಿಕ್ಕಮಗಳೂರಿನಿಂದ ಗೆದ್ದರೆ ಪರಿಷತ್ತಿನಲ್ಲಿ ಅವರ ಸ್ಥಾನ ತೆರವಾಗುತ್ತದೆ. ಆ ಸ್ಥಾನಕ್ಕೆ ನಳಿನ್‌ ಅವರನ್ನು ಆಯ್ಕೆ ಮಾಡಬಹುದು ಎನ್ನಲಾಗುತ್ತಿದೆ. […]

Continue Reading

ಮಂಗಳೂರು: ಜುಗಾರಿ ಅಡ್ಡೆ ಮೇಲೆ ದಾಳಿ : 9 ಮಂದಿಯ ಬಂಧನ.

ಮಂಗಳೂರು ನಗರದ ಬೈಕಂಪಾಡಿ ಸಮೀಪ ಜೂಜಾಡುತ್ತಿದ್ದ ಆರೋಪದಲ್ಲಿ 9 ಮಂದಿಯನ್ನು ಸಿಸಿಬಿ ಮತ್ತು ಪಣಂಬೂರು ಪೊಲೀಸರು ಜಂಟಿಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರಿಂದ ಬಂಧನವಾದ ಆರೋಪಿಗಳು ಹನೀಫ್, ಝಾಕೀರ್ ಅಹಮ್ಮದ್, ವಿಲ್ಪ್ರೇಡ್ ಡಿಸೋಜಾ, ಅನಿಲ್ ಕುಮಾರ್, ಮುರ್ತೋಝ ಸಾಬ್, ಶಶಿ ದೇವಾಡಿಗ, ಮೈಲಾರಪ್ಪ, ರಾಯ್ ಡಯಾಸ್, ಜೋನ್ ರಾಬರ್ಟ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬೈಕಂಪಾಡಿ ರೈಲು ಮಾರ್ಗದ ಬದಿಯಲ್ಲಿ ಜೂಜಾಡುತ್ತಿದ್ದರು ಎನ್ನಲಾಗಿದೆ. ಬಂಧಿತರಿಂದ ಆಟಕ್ಕೆ ಬಳಸಿದ್ದ 11,265 ರೂ. ನಗದು ಹಾಗೂ ಇತರ ಸೊತ್ತುಗಳನ್ನು […]

Continue Reading

ಸ್ಮಾರ್ಟ್ ಸಿಟಿ ಹೆಸರಲ್ಲಿ ಸಿಆರ್ ಝೆಡ್ ನಿಯಮ ಉಲ್ಲಂಘನೆ ಆರೋಪ: ಕಾಮಗಾರಿ ತಡೆಗೆ ರಾಜ್ಯ ಸರಕಾರಕ್ಕೆ ಪತ್ರ

ಮಂಗಳೂರು ಸ್ಮಾರ್ಟ್ ಸಿಟಿ ಲಿ. ನ ನೇತ್ರಾವತಿ ಜಲಾಭಿಮುಖ ಯೋಜನೆ ( ವಾಟರ್ ಫ್ರಂಟ್) ಗೆ ಸಂಬಂಧಿಸಿ ಸಿಆರ್ ಝೆಡ್ ಕಾನೂನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ( ಎನ್ ಇಸಿಫ್) ಸಂಘಟನೆಯು ರಾಜ್ಯ ಸರಕಾರಕ್ಕೆ ಪತ್ರ ಬರೆದಿದೆ. ಯೋಜನೆಗಾಗಿ ನದಿಗೆ ಮಣ್ಣು ತುಂಬಿಸುವ ಹಾಗೂ ನದಿ ದಡದಲ್ಲಿ ಸಿಆರ್ ಝೆಡ್ ಕಾನೂನಿಗೆ ವಿರುದ್ಧವಾಗಿ ಕಾಂಡ್ಲಾ ಮರಗಳನ್ನು ಕಡಿದು ಶಾಶ್ವತ ಗೋಡೆ ಕಟ್ಟುವ ಕಾರ್ಯವನ್ನು ಸ್ಮಾರ್ಟ್ ಸಿಟಿ ಲಿ. ನಿಂದ ಮಾಡಲಾಗುತ್ತಿದೆ. ಈ […]

Continue Reading

ಮಂಗಳೂರಿನಲ್ಲಿ ಮತ್ತೆ ತಲೆ ಎತ್ತಿದ ಜೂಜು ರಿಕ್ರಿಯೇಷನ್ ಕ್ಲಬ್ ಗಳು

ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ತಣ್ಣನೆ ಮಲಗಿದ್ದ ಜುಗಾರಿ ಅಡ್ಡೆಗಳು ಮತ್ತೆ ತಲೆ ಎತ್ತಿ ರಾಜಾರೋಷವಾಗಿ ಕಾರ್ಯಾಚರಣೆಗೆ ಇಳಿದಿದ್ದು ನಗರಕ್ಕೆ ಕಪ್ಪು ಚುಕ್ಕೆಯಾಗಿದೆ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಮಧ್ಯಮವರ್ಗ ಹಾಗೂ ಬಡ ಕೂಲಿಕಾರ್ಮಿಕರು ಈ ಜುಗಾರಿ ಅಡ್ಡೆಯ ಖಾಯಂ ಗ್ರಾಹಕರು, ತಾವು ದಿನನಿತ್ಯ ಸಂಪಾದಿಸಿದ ದುಡಿದ ಹಣವನ್ನು ಜುಗಾರಿ ಅಡ್ಡೆಗೆ ತೊಡಗಿಸಿ ಕುಟುಂಬವನ್ನು ಬೀದಿಪಾಲು ಮಾಡುತ್ತಿದ್ದಾರೆ ಅನ್ನುವ ಆರೋಪ ಇದೀಗ ಕೇಳಿ ಬರುತ್ತಿದೆ. ಕೆಲವು ಸಮಯಗಳಿಂದ ಬಾಗಿಲು ಮುಚ್ಚಿದ್ದ ಜುಗಾರಿ ಅಡ್ಡೆಗಳು ಮತ್ತೆ ತಲೆ […]

Continue Reading

ಕೃಷ್ಣಾಪುರ, ಕಾಟಿಪಳ್ಳ ವಾರ್ಡ್ ಗಳಲ್ಲಿ ನೀರಿಗೆ ಆಹಾಕಾರ; ಸಂಜೆಯ ಹೊತ್ತಿಗೆ ನೀರು ಪೂರೈಸುವ ಭರವಸೆ, ಇಲ್ಲದಿದ್ದರೆ ಪಾಲಿಕೆ ಮುಂಭಾಗ ಖಾಲಿ ಕೊಡಗಳ ಸಹಿತ ಧರಣಿ: ಮುನೀರ್ ಕಾಟಿಪಳ್ಳ

ಸುರತ್ಕಲ್ ವಲಯದ ಕೃಷ್ಣಾಪುರ, ಕಾಟಿಪಳ್ಳ ವಾರ್ಡ್ ಗಳಿಗೆ ಸತತ ಐದು ದಿನಗಳಿಂದ ನಗರ ಪಾಲಿಕೆ ಕುಡಿಯುವ ನೀರು ಪೂರೈಸದೆ ಬೇಜವಾಬ್ದಾರಿ ಮೆರೆದ ಕಾರಣ ಬಹಿರಂಗಗೊಂಡಿದೆ. ಜಲಸಿರಿ ಯೋಜನೆಯ ಗುತ್ತಿಗೆದಾರರು ನಿರ್ಲಕ್ಷ್ಯದಿಂದ ಕಾಮಗಾರಿ ನಡೆಸಿ ಬಿರು ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆ ಜಾಲದ ಪ್ರಧಾನ ಕೊಳವೆಯೊಂದನ್ನು ಒಡೆದು ಹಾಕಿದೆ. ನಗರ ಪಾಲಿಕೆ ಅಧಿಕಾರಿಗಳೂ ಈ ಕುರಿತು ಜಲಸಿರಿ ಗುತ್ತಿಗೆದಾರರಿಗೆ ಸರಿಯಾದ ಎಚ್ಚರಿಕೆ ಕೊಟ್ಟು ತಕ್ಷಣವೇ ಕೊಳವೆ ರಿಪೇರಿಗೆ ಕ್ರಮ ಕೈಗೊಳ್ಳದಿರುವುದರಿಂದ ಈ ಭಾಗದ ಜನ ಕುಡಿಯುವ ನೀರಿನ ಪೂರೈಕೆ […]

Continue Reading

ಬಜಾಜ್ ಅಲಿಯನ್ಸ್ ಜನರಲ್ ಇನ್ಸೂರೆನ್ಸ್ ಕಂಪನಿಯ ಸೇವಾ ನ್ಯೂನ್ಯತೆ ಆರೋಪದ ಪ್ರಕರಣ; ಗ್ರಾಹಕರ ನ್ಯಾಯಾಲಯದಿಂದ ಪರಿಹಾರಕ್ಕೆ ಆದೇಶ

ನೊಂದವರ ಪರ ವಾದಮಂಡಿಸಿದ ನ್ಯಾಯವಾದಿ ಮಹೇಶ್ ಕಜೆ ಮಂಗಳೂರು : ಬಜಾಜ್ ಅಲಿಯನ್ಸ್ ಜನರಲ್ ಇನ್ಸೂರೆನ್ಸ್ ಕಂಪನಿಯ ಸೇವಾ ನ್ಯೂನ್ಯತೆ ಆರೋಪದ ಪ್ರಕರಣವೊಂದರ ವಿಚಾರಣೆ ನಡೆಸಿದ ಗ್ರಾಹಕರ ನ್ಯಾಯಾಲಯ ಪರಿಹಾರಕ್ಕೆ ಆದೇಶ ನೀಡಿದೆ. ಕೃಷಿಕರಾಗಿರುವ ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ನಿವಾಸಿ ಶ್ರೀನಿವಾಸ ಪೂಜಾರಿಯವರು ಬಜಾಜ್ ಅಲಿಯನ್ಸ್ ಜನರಲ್ ಇನ್ಸೂರೆನ್ಸ್ ವಿಮಾ ಕಂಪನಿಯ ಪಾಲಿಸಿ ಸಂಖ್ಯೆ OG-19-3125-6401-0000046 ಜೊತೆಗೆ ಮೆಡಿಕ್ಲೈಮ್ ಪಾಲಿಸಿಯನ್ನು ಹೊಂದಿದ್ದು, ಈ ಪಾಲಿಸಿಯುದಿನಾಂಕ 19.02.2019 ರಿಂದ ಪ್ರಾರಂಭವಾಗಿ, ನಂತರ ಕಾಲಕಾಲಕ್ಕೆ ಅಗತ್ಯವಾದ ಪ್ರೀಮಿಯಂ ಪಾವತಿಸುವ […]

Continue Reading

ನೆಲ್ಯಾಡಿ: ಗೋದಾಮಿಗೆ ನುಗ್ಗಿ ಅಡಿಕೆ ಕಳ್ಳತನ ಪ್ರಕರಣ; ಆರೋಪಿಗಳು ದೋಷಮುಕ್ತ

ಆರು ವರ್ಷಗಳ ಹಿಂದೆ ನಲ್ಯಾಡಿ ಜಂಕ್ಷನ್ ನಲ್ಲಿದ್ದ ಕೆ. ಮೊಹಮ್ಮದ್ ಹನೀಫ್ ಎಂಬವರ ಅಡಿಕೆ ಗೋದಾಮಿನ ಕೊಠಡಿಯ ಶಟರ್ ಮುರಿದು, ಸರಿ-ಸುಮಾರು 250 ಕೆಜಿ ಅಡಿಕೆಯನ್ನು ಆರೋಪಿಗಳು ಕಳ್ಳತನ ಮಾಡಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದರಿ ಪ್ರಕರಣವನ್ನು ತನಿಖೆ ನಡೆಸಿದ ಉಪ್ಪಿನಂಗಡಿ ಪೊಲೀಸರು, ಚಪ್ಪ ಯಾನೆ ಸರ್ಪರಾಜ್ ಮತ್ತು ಅಬ್ದುಲ್ ಅಸ್ಪರ್ ಯಾನೆ ಅಸ್ಫಕ್ ಎಂಬುವರನ್ನು ಆರೋಪಿಗಳೆಂದು ಪರಿಗಣಿಸಿ ದೋಷಾರೋಪಣ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸದ್ರಿ ಪ್ರಕರಣವನ್ನು ವಿಚಾರಣೆ ನಡೆಸಿದ ಮಾನ್ಯ […]

Continue Reading

ಕುಡುಪು ಗ್ರಾಮದ ಜಮೀನಿನ ಟಿ‌.ಡಿ.ಆರ್ ಪ್ರಕರಣ; ಭ್ರಷ್ಟಾಚಾರ, ನಿಯಮಗಳ ಉಲ್ಲಂಘನೆ ಎಂದು ಸಿಪಿಐಎಂ ಹಾಗೂ ಸಮಾನ ಮನಸ್ಕ ಸಂಘಟನೆಗಳು ಮಾಡಿದ್ದ ಆರೋಪ ಸಾಬೀತು: ಮುನೀರ್ ಕಾಟಿಪಳ್ಳ

ಕುಡುಪು ಬಳಿಯ 10.8 ಎಕರೆ ನಿರುಪಯೋಗಿ ಜಮೀನಿಗೆ ಹತ್ತಾರು ಕೋಟಿ ರೂ ಮೌಲ್ಯದ “ಟಿ‌.ಡಿ.ಆರ್ ನೀಡುವ ನಗರ ಪಾಲಿಕೆಯಿಂದ ಬಂದ ಫೈಲ್ ಕ್ಲಿಯರ್ ಮಾಡಲು ಮಂಗಳೂರು ” ಮುಡಾ” ಆಯುಕ್ತ ಮನ್ಸೂರ್ ಅಲಿ 25 ಲಕ್ಷ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದಾರೆ ಎಂದು ನಗರದ ಶಾಸಕ ವೇದವ್ಯಾಸ ಕಾಮತ್ ಆಪ್ತ, ರಿಯಲ್ ಎಸ್ಟೇಟ್ ಲಾಭಿಯ ಗಿರಿಧರ್ ಶೆಟ್ಟಿ ನೀಡಿದ ದೂರಿನ ಆಧಾರದಲ್ಲಿ ಲೋಕಾಯುಕ್ತ ಪೊಲೀಸರು ಮನ್ಸೂರ್ ಅಲಿಯನ್ನು ಬಂಧಿಸಿದ ಸಂದರ್ಭ ಸಿಪಿಐಎಂ ಹಾಗೂ ಸಮಾನ ಮನಸ್ಕ ಸಂಘಟನೆಗಳು […]

Continue Reading

ವಿನಾಯಕ ಬಾಳಿಗ ಹತ್ಯೆ ಗೆ ಬಳಸಿದ ಮಾಂಸ ಕಡಿಯುವ ಕತ್ತಿ ಗುರುತಿಸಿದ ಪ್ರತಿಕೂಲ ಸಾಕ್ಷಿ

✍️. ನವೀನ್ ಸೂರಿಂಜೆ. ಪತ್ರಕರ್ತರು ವಿನಾಯಕ ಬಾಳಿಗ ಹತ್ಯೆ ಗೆ ಬಳಸಿದ ಮಾಂಸ ಕಡಿಯುವ ಕತ್ತಿ ಗುರುತಿಸಿದ ಪ್ರತಿಕೂಲ ಸಾಕ್ಷಿಸಾಮಾಜಿಕ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣದ ವಿಚಾರಣೆ ಪ್ರಮುಖ ಘಟ್ಟ ಬಂದು ತಲುಪಿದೆ. ವಿನಾಯಕ ಬಾಳಿಗರನ್ನು ಕೊಲೆ ಮಾಡಲು ಬಳಸಿದ್ದ ‘ಮಾಂಸ ಕಡಿಯುವ ಕತ್ತಿ’ಯನ್ನು ಆರೋಪಿಗಳಿಗೆ ಮಾರಾಟ ಮಾಡಿದ್ದ ವ್ಯಾಪಾರಿ ಪಾಟಿಸವಾಲಿನಲ್ಲಿ ಗುರುತಿಸಿದ್ದು ಪ್ರಕರಣಕ್ಕೆ ಬಲ ಬಂದಿದೆ. ನಮೋ ಬ್ರಿಗೇಡ್ ನ ನರೇಶ್ ಶೆಣೈ ಪ್ರಮುಖ ಆರೋಪಿಯಾಗಿರುವ ಪ್ರಕರಣದಲ್ಲಿ ಒಟ್ಟು ಏಳು ಆರೋಪಿಗಳಿದ್ದಾರೆ. ಆರೋಪಿಗಳು ಪ್ರಭಾವಿಯಾಗಿದ್ದರಿಂದ […]

Continue Reading

ಕೆಲಸದ ಆಮಿಷವೊಡ್ಡಿ ಯುವತಿಯ ಅತ್ಯಾಚಾರಯತ್ನ ಪ್ರಕರಣ; ಪ್ರಮುಖ ಆರೋಪಿಗೆ ಜಾಮೀನು ಮಂಜೂರು

ಪುತ್ತೂರು: ಕೆಲಸದ ಆಮಿಷವೊಡ್ಡಿ ಯುವತಿಯನ್ನು ಕರೆಸಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆಗೆ ಸಂಬಂಧಿಸಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದ ಹರ್ಷಿತ್ ಎಂಬ ಆರೋಪಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಬನ್ನೂರು ಗ್ರಾಮದ ಬನ್ನೂರು ಬೈಲು ಎಂಬಲ್ಲಿನ ಬಾಡಿಗೆ ಮನೆಯೊಂದರಲ್ಲಿ ಕಳೆದ ಮಾ.13ರಂದು ಘಟನೆ ನಡೆದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ವಾಮಂಜೂರು ಮೂಲದ ಯುವತಿಗೆ ಪುತ್ತೂರಿನ ಯುವಕನೊಂದಿಗೆ ಇನ್‌ಸ್ಟಾಗ್ರಾಮ್ ಮೂಲಕ ಸಂಪರ್ಕವಿದ್ದು,ಆಕೆಯ ಕೋರಿಕೆಯಂತೆ ಯುವಕ ಪುತ್ತೂರಿನಲ್ಲಿ ಆಕೆಗೆ ಉದ್ಯೋಗಕ್ಕಾಗಿ ತನ್ನ ಸ್ನೇಹಿತರಿಗೆ ತಿಳಿಸಿದ್ದ.ಯುವಕನ […]

Continue Reading