ಕಲ್ಲಡ್ಕ ಭಟ್ಟ ಹೇಳಿದ್ದು ಹಿಂದೂ ಜಾತಿಗ್ರಸ್ತ ಸಮಾಜದ ‘ಅಲಿಖಿತ ಪದ್ಧತಿ’

ಆಂಧ್ರದಲ್ಲಿ ನಕ್ಸಲ್ ಚಳವಳಿ ಯಾಕೆ ಗಟ್ಟಿಯಾಗಿ ನೆಲೆ ಊರಿತ್ತು ಎಂಬುದನ್ನು ನೋಡಿದರೆ, ಭಟ್ಟರ ‘ದಿನಕ್ಕೊಬ್ಬ ಗಂಡ’ನ ಕಾನ್ಸೆಪ್ಟ್ ಅರ್ಥ ಆಗುತ್ತದೆ ✍️. ನವೀನ್ ಸೂರಿಂಜೆ,ಪತ್ರಕರ್ತ “ದಿನಕ್ಕೊಬ್ಬ ಗಂಡ” – ಸನಾತನ ಧರ್ಮದೊಳಗಿನ ಮಹಿಳಾ ದೌರ್ಜನ್ಯದ ಈ ಪಿಡುಗು ಮತ್ತು ಅದರ ವಿರುದ್ದದ ಬಂಡಾಯ ಚರಿತ್ರೆಯೇ ದೊಡ್ಡದಿದೆ. ‘ಮುಸ್ಲಿಂ ಮಹಿಳೆಯರಿಗೆ ದಿನಕ್ಕೊಬ್ಬ ಗಂಡ : ಪರ್ಮನೆಂಟ್ ಗಂಡನೇ ಇಲ್ಲ’ ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ಕೇವಲ ರಾಜಕೀಯ ಹಿನ್ನಲೆ ಹೊಂದಿದೆಯೇ ಹೊರತು ಮುಸ್ಲಿಮರ ಧಾರ್ಮಿಕ, ಸಾಮಾಜಿಕ ಇತಿಹಾಸದಲ್ಲಿ […]

Continue Reading

ರಾಜ್ಯದಲ್ಲಿ ಕಾನೂನು ಎಲ್ಲರಿಗೂ ಒಂದೇ ಅಲ್ಲವೇ..? ಕಾಂಗ್ರೆಸ್ ಸರಕಾರ ರಣಹೇಡಿತನ ಪ್ರದರ್ಶಿಸುತ್ತಿರುವುದೇತಕ್ಕೆ.?

ನರಸತ್ತ ಕಾಂಗ್ರೆಸ್ ಘಟಾನುಘಟಿ ನಾ(ಲ)ಯಕರು, ಅಲ್ಪಸಂಖ್ಯಾತ ಮುಖಂಡರು.! ಅರವತ್ತಕ್ಕೆ ಅರಳು ಮರಳು ಅನ್ನುತ್ತಾರೆ. ಈ ಮಾತು ಕಲ್ಲಡ್ಕ ಭಟ್ಟರಿಗೆ ಅನ್ವಯವಾಗುವಂತಿದೆ. ಬಾಯಿ ತೆರೆದರೆ ಅಲ್ಪಸಂಖ್ಯಾತರು, ಅದರಲ್ಲೂ ಮುಸ್ಲಿಮರ ವಿರುದ್ಧ ವಾಚಾಮಗೋಚರವಾಗಿ ಬೈಯುವುದೇ ಕಾಯಕವಾಗಿಬಿಟ್ಟಿದೆ. ಮುಸ್ಲಿಂ ಸಮುದಾಯದಲ್ಲಿ ಮಹಿಳೆಯರಿಗೆ ತ್ರಿವಳಿ ತಲಾಕ್ ಹೇಳುವ ಅವಕಾಶ ಇತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದಿಂದಾಗಿ ತ್ರಿವಳಿ ತಲಾಕ್ ರದ್ದಾಗಿದೆ. ಬಹು ಪತ್ನಿತ್ವ ಪಿಡುಗು ಮತ್ತು ತ್ರಿವಳಿ ತಲಾಕ್‌ ಕಾಟದಿಂದಾಗಿ ಈ ಹಿಂದೆ ಮುಸಲ್ಮಾನ ಹೆಣ್ಣು ಮಕ್ಕಳಿಗೆ ಪರ್ಮನೆಂಟ್ ಗಂಡ […]

Continue Reading

ಮದುವೆ ಎಂಬುದು ಗೌರವ, ನಂಬಿಕೆ, ವಿಶ್ವಾಸದ ಮೇಲೆ ನಿರ್ಮಿತವಾಗಿದೆ. ಪತಿ-ಪತ್ನಿ ಪರಸ್ಪರ ದೂಷಣೆ, ಅಗೌರವದಿಂದ ವರ್ತಿಸುವುದು ಅಕ್ಷಮ್ಯ ಅಪರಾಧ: ದೆಹಲಿ ಹೈಕೋರ್ಟ್

“ಸುಳ್ಳು ಆರೋಪಗಳ ಮೂಲಕ ಸಾರ್ವಜನಿಕವಾಗಿ ಪತಿಯನ್ನು ನಿಂದಿಸುವುದು, ಸ್ತ್ರೀಲೋಲ ಎಂದು ಪಟ್ಟ ಕಟ್ಟುವ ಪತ್ನಿಯ ನಡವಳಿಕೆ ಕ್ರೌರ್ಯದ ಪರಮಾವಧಿ” ಎಂದು ದಿಲ್ಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಆರು ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿಗೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಛೇದನ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಪತ್ನಿಯ ಅರ್ಜಿ ವಜಾಗೊಳಿಸಿದ ದಿಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈತ್, ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರಿದ್ದ ಪೀಠ “ಮದುವೆ ಎಂಬುದು ಗೌರವ, ನಂಬಿಕೆ, ವಿಶ್ವಾಸದ ತಳಹದಿಯ ಮೇಲೆ ನಿರ್ಮಿತವಾಗಿದೆ. ಪತಿಯಾಗಲಿ, ಪತ್ನಿಯಾಗಲಿ […]

Continue Reading

1200 ಎಕರೆ ಜಮೀನನ್ನು ಖಾಸಗಿಯವರಿಗೆ ಮಾರಾಟ ಮಾಡುವ ಹುನ್ನಾರದ ವಿರುದ್ದ ಬೃಹತ್ ಪ್ರತಿಭಟನೆ

ಉಡುಪಿ: ಪಡುಬಿದ್ರಿ, ಪಲಿಮಾರು, ನಂದಿಕೂರು ಪರಿಸರದಲ್ಲಿ ಸುಜ್ಲಾನ್ ಎನರ್ಜಿ ಇಂಡಿಯಾ ಪ್ರೈ ಲಿಮಿಟೆಡ್ ಗಾಗಿ ಕೆಐಎಡಿಬಿಯಿಂದ ಮಂಜೂರಾದ 1200 ಎಕರೆ ಜಮೀನನ್ನು ಖಾಸಗಿ ಕಂಪೆನಿ ಮತ್ತು ವ್ಯಕ್ತಿಗಳಿಗೆ ಮಾರಾಟ ಮಾಡುವ ಹುನ್ನಾರ ಮತ್ತು ಸರಕಾರಿ ಜಮೀನು ಉಳಿಸುವ ಹಾಗೂ ಭೂ ಅವ್ಯವಹಾರದ ವಿರುದ್ಧ ಪಡುಬಿದ್ರಿ ಸುಜ್ಲಾನ್ ಗೇಟ್ ಬಳಿ ಶನಿವಾರ ಮಾಜಿ ಸಚಿವ ವಿನಯ್ ಕುಮಾರ್‌ ಸೊರಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸೊರಕೆ, ಪಡುಬಿದ್ರಿಯಲ್ಲಿ ನಡೆಯುತ್ತಿರುವ ’ಭೂ’ ಮಾಫಿಯಾದಿಂದ ಸರಕಾರಿ ಜಮೀನು […]

Continue Reading

ಮಂಗಳೂರು: ಲಾಡ್ಜ್ ಗಳಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ

ಹೇಳಿ ಕೇಳಿ ಇದು ಸ್ಮಾರ್ಟ್ ಮಂಗಳೂರು. ಇಲ್ಲಿ ಏನುಂಟು.. ಏನಿಲ್ಲ? ಮಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಸುತ್ತಾಡಿದರೆ ಸಾಕು ರೋಡ್ ವೇಶ್ಯೆಯರು ಗಿರಾಕಿಗಳನ್ನು ಕೈ ಸನ್ನೆ ಮೂಲಕ ಸೆಟ್ ಮಾಡಿಕೊಳ್ಳುವ ದಂಧೆ ಒಂದು ಕಡೆಯಾದರೆ, ಇನ್ನು ರಾತ್ರಿಯಾಗುತ್ತಿದ್ದಂತೆ ಮಂಗಳಮುಖಿಯರ ಆರ್ಭಟ ಜೋರಾಗಿ ನಡೆಯುತ್ತಿದೆ. ಇದರ ಜೊತೆಗೆ ಬೀಗ ಹಾಕಿ ಕೂತಿದ್ದ ಲಾಡ್ಜ್ ಗಳಲ್ಲಿನ ಹೈಟೆಕ್ ವೇಶ್ಯಾವಾಟಿಕೆ ದಂಧೆ ಮತ್ತೆ ಚಿಗುತುಕೊಂಡು ಬಾಗಿಲು ತೆರೆದಿದೆ. ಮಂಗಳೂರು ನಗರದ ಪ್ರಮುಖ ಲಾಡ್ಜ್ ಗಳಲ್ಲಿ ಲಾಲನೆಯರನ್ನು ಇಟ್ಟು ಬ್ಯುಸಿನೆಸ್ ಮಾಡುವ ಕರಾಳ ದಂಧೆ […]

Continue Reading

ಮೊಗವೀರರ ‘ಶ್ರಮಧರ್ಮ’ವನ್ನು ರಕ್ಷಿಸಿದ್ದು ಬಪ್ಪ ಅಥವಾ ಬಬ್ಬರ್ಯ ಎಂಬ ಮುಸ್ಲೀಮನೇ ಹೊರತು ಹಿಂದೂ ಧರ್ಮದ ಪುರೋಹಿತಶಾಹಿ ವರ್ಗವಲ್ಲ.

✍️. ನವೀನ್ ಸೂರಿಂಜೆ, ಪತ್ರಕರ್ತ ಮಂಗಳೂರಿನ ಹೆಜಮಾಡಿ- ಮಟ್ಟು ಎಂಬ ಪುಟ್ಟ ಗ್ರಾಮದಲ್ಲಿ ಮೊಗವೀರರು ಮತ್ತು ಬಿಲ್ಲವರು ಜಂಟಿಯಾಗಿ ಹಿಂದೂ ಜನಜಾಗೃತಿ ಸಮಿತಿಯ ನೇತೃತ್ವದಲ್ಲಿ ‘ಹಿಂದೂ ರಾಷ್ಟ್ರ ಜಾಗೃತಿ ಸಭೆ’ ನಡೆಸುತ್ತಿದ್ದಾರೆ. ಶ್ರಮವನ್ನೇ ನಂಬಿ ಬದುಕುವ ಪ್ರಾಮಾಣಿಕ ಸಮುದಾಯವೊಂದನ್ನು ಕೋಮುವಾದಕ್ಕೆ ಬಳಸಿರುವ ಹಿಂದೂ ಜನಜಾಗೃತಿ ಸಮಿತಿಯು ‘ಹಿಂದೂಗಳೇ, ರಾಷ್ಟ್ರ ಮತ್ತು ಧರ್ಮ ರಕ್ಷಣೆಗಾಗಿ ಪ್ರತಿದಿನ ಒಂದು ಗಂಟೆ ನೀಡಿ’ ಎಂದು ಕರೆ ನೀಡಿದೆ. ಕರಾವಳಿಯ ಎಲ್ಲಾ ಜಾತಿ, ಧರ್ಮಗಳಿಗೆ ತಾಯಿಯಂತಹ ಸಮುದಾಯವಾಗಿರುವ ಮೊಗವೀರರ ಬೆವರನ್ನು ಕೋಮುದ್ವೇಷಕ್ಕೆ ಬಳಸಿಕೊಳ್ಳುತ್ತಿರುವುದು […]

Continue Reading

ಬಜಪೆ: ಮಾದಕ ವಸ್ತು MDMA ಸಮೇತ ಮೂರು ಮಂದಿ ಆರೋಪಿಗಳ ಬಂಧನ

ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ, ಶಾಂತಿಗುಡ್ಡೆ ಚೆಕ್ ಪಾಯಿಂಟ್ ಬಳಿ ಬಜಪೆ ಠಾಣಾ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಕಳವಾರು ಕಡೆಯಿಂದ ಕಪ್ಪು ಬಣ್ಣದ ಯಮಹಾ ಬೈಕಿನಲ್ಲಿ ಮೂರು ಜನರನ್ನು ಕೂರಿಸಿಕೊಂಡು ಬರುತ್ತಿದ್ದನ್ನು ಕಂಡ ಪೊಲೀಸರು ಬೈಕ್ ನಿಲ್ಲಿಸುವಂತೆ ಸೂಚನೆ ನೀಡಿದಾಗ ಬೈಕ್ ಸವಾರರು ಬೈಕ್ ನಿಲ್ಲಿಸಿ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸುವ ಸಮಯದಲ್ಲಿ ಬಜಪೆ ಪೊಲೀಸರು ಮೂರು ಮಂದಿಯನ್ನು ಹಿಡಿದು ವಿಚಾರಣೆಗೊಳಪಡಿಸಿದಾಗ ಆರೋಪಿಗಳು ಬೈಕಿನಲ್ಲಿ 30 ಸಾವಿರ ರೂಪಾಯಿ ಮೌಲ್ಯದ, 6.27 ಗ್ರಾಂ ಮಾದಕ ವಸ್ತು MDMA […]

Continue Reading

ಬೀದಿಬದಿ ವ್ಯಾಪಾರಿಗಳಿಂದ ಸೌಹಾರ್ದ ಕ್ರಿಸ್ಮಸ್ ಆಚರಣೆ

ಮಂಗಳೂರು : ಯೇಸು ಕ್ರಿಸ್ತರ ಪ್ರೀತಿ ಮತ್ತು ಕಾರುಣ್ಯದ ಸಂದೇಶ ಸಮಾಜಕ್ಕೆ ದಾರಿದೀಪವಾಗಿದೆ, ಹಬ್ಬಗಳನ್ನು ಎಲ್ಲ ಜನರು ಸೇರಿಕೊಂಡು ಆಚರಿಸಿದಾಗ ಸಮಾಜದಲ್ಲಿ ಶಾಂತಿ ಸಾಮರಸ್ಯವನ್ನು ಗಟ್ಟಿಯಾಗಿಡಲು ಸಾಧ್ಯ ಆಗಲಿದೆ ಎಂದು ಹಿರಿಯ ಪತ್ರಕರ್ತ ತಾರಾನಾಥ್ ಗಟ್ಟಿ ಕಾಪಿಕಾಡ್ ಹೇಳಿದರು ಅವರು ಇಂದು ಬೀದಿ ವ್ಯಾಪಾರಿಗಳ ಕಚೇರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘ ಮತ್ತು ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘ (ನಿ) ಇದರ ಸಹಾಭಾಗಿತ್ವದಲ್ಲಿ ನಡೆದ ಸೌಹಾರ್ದ ಕ್ರಿಸ್ಮಸ್ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ […]

Continue Reading

ಫಾತಿಮಾತುಲ್ ಆಶಿತಾ ಆತ್ಮಹತ್ಯೆ ಹಿಂದೆ ಅನುಮಾನದ ಹುತ್ತ.!

ಆ ಬೆದರಿಕೆ ಕರೆ ಯಾರದ್ದು.? ಅನುಮಾನ ಹುಟ್ಟಿಸುವ ಕೆಲ ಸಂಗತಿಗಳು.! ಇನ್ನೇನೂ ಎರಡು ತಿಂಗಳು ಕಳೆದಿದ್ದರೆ ಮದುವೆಯೆಂಬ ಮಧುಮಾಸಕ್ಕೆ ಕಾಲಿಡಬೇಕಾಗಿದ್ದ ಹದಿನೆಂಟರ ಕುವರಿ ಇದ್ದಕ್ಕಿದ್ದ ಹಾಗೆ ಆತ್ಮಹತ್ಯೆಗೆ ಶರಣಾಗುತ್ತಾಳೆ. ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಪ್ಪೆಪದವು ಬೊಳಿಯಾ ಎಂಬಲ್ಲಿ ನಿಗೂಢ ಆತ್ಮಹತ್ಯೆ ಪ್ರಕರಣ ನಡೆದಿದೆ. ಅಷ್ಟಕ್ಕೂ ಆತ್ಮಹತ್ಯೆಗೈದಾಕೆ ಹದಿನೆಂಟರ ಹರೆಯದ ಫಾತಿಮಾತುಲ್ ಆಶಿತಾ. ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಗೈದಿರುವುದಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಸಲಿಗೆ ಈ ಆತ್ಮಹತ್ಯೆ ಪ್ರಕರಣದಲ್ಲಿ ಹಲವಾರು ಅನುಮಾನ ಹುಟ್ಟಿಸುವ ಸಂಗತಿಗಳು ನಡೆದಿದ್ದು, ಸುಸೈಡ್ […]

Continue Reading

ಅಕ್ರಮ ಮರಳುಗಾರಿಕೆ ನಡೆಸಿದರೆ ಕಠಿಣ ಕ್ರಮಕ್ಕೆ ಸೂಚನೆ: ದ.ಕ ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಕಂಡುಬಂದಲ್ಲಿ ಯಾವುದೇ ತಡೆ ಇಲ್ಲದೆ ತಪ್ಪಿತಸ್ಥರ ವಿರುದ್ಧ ಸೂಕ್ತ ರೀತಿಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದ್ದಾರೆ. ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮರಳು ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಸಮುದ್ರದ ಮತ್ತು ನದಿಯ ಕಡಲ ತೀರದಲ್ಲಿ CRZ ಮರಳುಗಾರಿಕೆ ನಿಷೇಧ ಇರುವುದರಿಂದ ಅಕ್ರಮ ಮರಳುಗಾರಿಕೆ ಆಗದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಎಚ್ಚರ ವಹಿಸಬೇಕು. ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವ […]

Continue Reading