ಬಜ್ಪೆ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಒಂದು ಪಾಠ

ಕಾಂಗ್ರೆಸ್ ನಾಯಕತ್ವದ ಸ್ವಯಂಕೃತ ಅಪರಾಧಗಳಿಂದ ಉಂಟಾದ ಈ ಸ್ಥಿತಿಗೆ ಈಗ ಅನುಕಂಪ ತೋರುವವರು ಯಾರೂ ಉಳಿದಿಲ್ಲ: ಮುನೀರ್ ಕಾಟಿಪಳ್ಳ ಬಜ್ಪೆ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಒಂದು ಪಾಠ (ಕಲಿಯಲು/ಅರ್ಥ ಮಾಡಿಕೊಳ್ಳಲು ಸಿದ್ದರಿರುವುದು ಅನುಮಾನ) ಅಲ್ಪ ಸಂಖ್ಯಾತ ಸಮುದಾಯದ ಮತದಾರರು ನಿರ್ಣಾಯಕರಾಗಿದ್ದ ಈ ಪಟ್ಟಣ ಪಂಚಾಯತ್ ಗಳು ಎಲ್ಲಾ ಕಾಲದಲ್ಲೂ ಬಿಜೆಪಿ ಪಾಲಿಗೆ ಕಬ್ಬಿಣದ ಕಡಲೆಯಾಗಿತ್ತು. ಈ ಸಲದ ಚುನಾವಣೆಯಲ್ಲಿ‌ ಮಾತ್ರ ಯಾವ ಅಡತಡೆಯೂ ಇಲ್ಲದೆ ಗೆಲುವಿನ ಗೆರೆ ದಾಟಿದ್ದಾರೆ. ಈ ಸೋಲು […]

Continue Reading

ಬೆಳ್ತಂಗಡಿ: ಕುತ್ಲೂರು ಮಲೆಯಲ್ಲಿ ಪ್ರಥಮ ಮಲೆಕುಡಿಯ ಆದಿವಾಸಿ ಸಮಾವೇಶ

ಶೋಷಣೆಗೊಳಗಾದ ಸಮುದಾಯಗಳು ಸಮಾನತೆಯ ತತ್ವದ ಅಡಿಯಲ್ಲಿ ಒಂದಾಗಿ ನಿಲ್ಲಬೇಕು: ನವೀನ್ ಸೂರಿಂಜೆ ಬೆಳ್ತಂಗಡಿ: ಮಲೆಕುಡಿಯ ಸಮುದಾಯದ ಇತಿಹಾಸದಲ್ಲಿ ಮೊದಲ ಬಾರಿಗೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳ್ತಂಗಡಿಯ ಕುತ್ಲೂರು ಮಲೆಯಲ್ಲಿ ‘ಮಲೆಕುಡಿಯ ಆದಿವಾಸಿ ಸಮಾವೇಶ’ ಡಿಸೆಂಬರ್ 25 ಗುರುವಾರದಂದು ನಡೆಯಿತು. ನಕ್ಸಲ್ ಚಳವಳಿಯಿಂದ ಮುಕ್ತಗೊಂಡ ಬಳಿಕ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯೊಳಗಿನ ಗ್ರಾಮದಲ್ಲಿ ನಡೆದ ಮೊದಲ ಮಹತ್ವದ ಸಮಾವೇಶ ಇದಾಗಿದ್ದು, ಹಲವು ಗ್ರಾಮಗಳ ಮಲೆಕುಡಿಯ ಮುಖಂಡರು ಭಾಗವಹಿಸಿದ್ದರು. ಸಮಾವೇಶವನ್ನು ಪತ್ರಕರ್ತ ನವೀನ್ ಸೂರಿಂಜೆ ಉದ್ಘಾಟಿಸಿದರು. ದಮನಿತ ಸಮುದಾಯಗಳು […]

Continue Reading

ಸತ್ಯ, ನ್ಯಾಯದ ಪರ ಧ್ವನಿ ಎತ್ತಿದರೆ ಗೆಲುವು ಖಚಿತ; ಕಾಂಗ್ರೆಸಿನಲ್ಲಿ ಬಕೆಟ್ ಹಿಡಿಯುವ ಮುಸ್ಲಿಂ ರಾಜಕಾರಣಿಗಳಿಗೆ ದೊಡ್ಡ ಮೆಸೇಜ್ ಕೊಟ್ಟ ಬಜಪೆ ರಿಸಲ್ಟ್

ಅಂತೂ ಇಂತೂ ಬಜಪೆ ಪಟ್ಟಣ ಪಂಚಾಯತ್ ರಿಸಲ್ಟ್ ಹೊರಬಿದ್ದು 24 ಗಂಟೆ ಕಳೆದಿದೆ. ಆದರೆ ಈ ರಿಸಲ್ಟ್ ಜಿಲ್ಲೆಯ ಅಲ್ಪ ಸಂಖ್ಯಾತ ರಾಜಕಾರಣಕ್ಕೊಂದು ಹೊಸ ಸಂದೇಶ ಕಳುಹಿಸಿದೆ ಅಂದರೆ ತಪ್ಪಲ್ಲ. ಅದರಲ್ಲೂ ಜಿಲ್ಲೆಯ ಕಾಂಗ್ರೆಸ್ಸಿನ ಮುಸ್ಲಿಂ ನಾಯಕರಿಗೆ, ಕಾರ್ಯಕರ್ತರಿಗೆ ಸಿರಾಜ್ ಗೆಲುವು ದೊಡ್ಡ ಮೆಸೇಜ್ ಅನ್ನು ರವಾನಿಸಿದೆ. ಅಷ್ಟಕ್ಕೂ ಆ ಮೆಸೇಜ್ ಯಾವುದು ಗೊತ್ತಾ.? ಸಮುದಾಯದ ಪರ, ಸತ್ಯದ ಪರ, ನ್ಯಾಯದ ಪರ,ಅನ್ಯಾಯದ ವಿರುದ್ದ ಗಟ್ಟಿಯಾಗಿ ನಿಂತ ಕಾರಣಕ್ಕೆ ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತ ಸಿರಾಜ್ ಬಜಪೆ ಅವರನ್ನು […]

Continue Reading

ಬಂಡಾಯ ಅಭ್ಯರ್ಥಿಯ ಕುಕ್ಕರ್ ‘ಸೀಟಿ’ ಗೆ ಬೆವರಿಳಿದ ‘ಕೈ’.! ಬಜಪೆ, ಕಿನ್ನಿಗೋಳಿ ಕಮಲ ಅಧಿಪತ್ಯ: ಕಾಂಗ್ರೆಸ್ ಯುವ ನಾಯಕನಿಗೆ ಮುಖಭಂಗ

ಲೋಕಲ್ ಫೈಟಿಂಗ್ ನಲ್ಲಿ SDPI ಮಿಂಚಿಂಗ್.! ಈ ಪಲಿತಾಂಶ ಜಿಲ್ಲೆಯ ಕಾಂಗ್ರೆಸಿಗೊಂದು ಎಚ್ಚರಿಕೆ ಬಹು ನಿರೀಕ್ಷಿತ ಬಜಪೆ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ರಿಸಲ್ಟ್ ಕೊನೆಗೂ ಹೊರಬಿದ್ದಿದೆ. ಎರಡೂ ಪಟ್ಟಣ ಪಂಚಾಯತ್ ಬಿಜೆಪಿ ವಶವಾಗಿದೆ. ಕಾಂಗ್ರೆಸ್ ಗಟ್ಟಿ ಧ್ವನಿ, ನ್ಯಾಯದ ಪರ ಧ್ವನಿ ಎತ್ತುತ್ತಿದ್ದ ಸಿರಾಜ್ ಬಜಪೆ ಗೋಪಲ್ಕೆ ವಾರ್ಡ್ ನಲ್ಲಿ ಭರ್ಜರಿ ಜಯ ಗಳಿಸುವ ಮೂಲಕ ಕಾಂಗ್ರೆಸ್ ನಾಯಕರ ಬೆವರಿಳಿಸಿದ್ದಾರೆ. ಕಾಂಗ್ರೆಸ್ ಸ್ವಾರ್ಥ ನಾಯಕರ, ಬಕೆಟ್ ವೀರರಿಗೆ ಬಲಿಪಶುವಾಗಿದ್ದ ಸಿರಾಜ್ ಬಜಪೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ […]

Continue Reading

ನಕಲಿ ದಾಖಲೆ ಸೃಷ್ಟಿಸಿ ಪಾಸ್ ಪೋರ್ಟ್; ವಿಟ್ಲ ಠಾಣಾ ಸಿಬ್ಬಂದಿ ಪ್ರದೀಪ್ ಬಂಧನ

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವಿಳಾಸದಲ್ಲಿ ವಾಸಿಸುತ್ತಿರುವುದಾಗಿ ಶಕ್ತಿದಾಸ್ ಎಂಬ ಹೆಸರಿನ ವ್ಯಕ್ತಿಯು‌ 2025ನೇ ಫೆಬ್ರವರಿ ತಿಂಗಳಲ್ಲಿ ಪಾಸ್ ಪೊರ್ಟ್ ಗಾಗಿ ಅರ್ಜಿ ಸಲ್ಲಿಸಿದ್ದು, ಸದ್ರಿ ಅರ್ಜಿಯ ಬಗ್ಗೆ ಪೊಲೀಸ್ ವೆರಿಫಿಕೇಶನ್ ಮಾಡುವ ವೇಳೆ ಅರ್ಜಿದಾರರ ವಿಳಾಸವು ದಾಖಲಾತಿಗಳಲ್ಲಿನ ವಿಳಾಸಕ್ಕೆ ತಾಳೆಯಾಗದೆ ಇರುವುದರಿಂದ ಪಾಸ್ ಪೋರ್ಟ್ ಶಿಪಾರಸ್ಸನ್ನು ನಿರಾಕರಿಸಲಾಗಿತ್ತು. ಪೊಲೀಸರು ಕ್ಲಿಯರೆನ್ಸ್ ನೀಡದ ಕಾರಣ ಶಕ್ತಿದಾಸ್ 2025ನೇ ಇಸವಿಯ ಜೂನ್‌ ತಿಂಗಳಲ್ಲಿ ಮರು ಅರ್ಜಿಯನ್ನು ಸಲ್ಲಿಸಿರುತ್ತಾರೆ. ಶಕ್ತಿದಾಸ್ ರವರ ಪಾಸ್ ಪೋರ್ಟಿನ ಮರು ಅರ್ಜಿ ವಿಟ್ಲ ಪೊಲೀಸ್ […]

Continue Reading

ಆಂಬ್ಯುಲೆನ್ಸ್ ಕಳ್ಳತನ ಪ್ರಕರಣ: ಆರೋಪಿ ಶೋಧನ್ ಸೆರೆ ಹಿಡಿದ ಪೊಲೀಸರು

ಕಡಬದ ಶಿರಾಡಿ ನಿವಾಸಿ ಸುರೇಶ್ ಎಂಬವರು KA-19-C-7557 ಅಂಬ್ಯುಲೆನ್ಸ್‌ ಚಾಲಕರಾಗಿದ್ದು, ಪ್ರತಿ ದಿನ ರಾತ್ರಿ ಗುಂಡ್ಯ ಚೆಕ್‌ ಪೋಸ್ಟ್‌ ಬಳಿ ನಿಲ್ಲಿಸಿ ಲಾಕ್‌ ಮಾಡಿ ಮನೆಗೆ ಹೋಗುತ್ತಿದ್ದರು. ಡಿಸೆಂಬರ್ 19 ರಂದು ರಾತ್ರಿ ಕೂಡಾ ಗುಂಡ್ಯ ಚೆಕ್‌ ಪೋಸ್ಟ್‌ ಬಳಿ ನಿಲ್ಲಿಸಿ, ಅಪಘಾತದ ಬಗ್ಗೆ ತುರ್ತು ಕರೆ ಬಂದಾಗ ಬದಲಿ ಚಾಲಕರ ಅನುಕೂಲತೆಗಾಗಿ ಅಂಬ್ಯಲೆನ್ಸ್ ಕೀಯನ್ನು ಅಂಬ್ಯುಲೆನ್ಸ್ ನಲ್ಲಿ ಇಟ್ಟು ಹೋಗಿದ್ದರು. ಮರುದಿನ ಬೆಳಿಗ್ಗೆ, ಮನೆಯಿಂದ ಬಂದು ಅಂಬ್ಯುಲೆನ್ಸ್‌ ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೋಡಿದಾಗ, ಅಂಬ್ಯುಲೆನ್ಸ್‌ ಕಳವಾಗಿದ್ದು […]

Continue Reading

ವಿಟ್ಲ: ಅಕ್ರಮ ಕೋಳಿ ಅಂಕಕ್ಕೆ ಧಾಳಿ, 27 ಜನರ ವಿರುದ್ದ ಪ್ರಕರಣ ದಾಖಲು.

ಕೋಳಿ ಅಂಕದಲ್ಲೂ ರಾಜಕೀಯ; ನಿನ್ನೆ ಕಾಂಗ್ರೆಸ್ ಶಾಸಕರ ನಾಯಕತ್ವ, ಇಂದು ಬಿಜೆಪಿಯ ಸಂಜೀವ ಮಠಂದೂರು, ಜಿಲ್ಲಾಧ್ಯಕ್ಷ ಸತೀಶ ಕುಂಪಲ ನೇತ್ರತ್ವ ಬಂಟ್ವಾಳ ಕೇಪು ಗ್ರಾಮದ ಕೇಪು ಮುರಳೀಧರ ರೈ ಎಂಬವರ ಗದ್ದೆಯಲ್ಲಿ, ದಿನಾಂಕ 21-12-2025 ರಂದು ಬೆಳಿಗ್ಗೆ ಹಲವು ಜನರು‌ ಸೇರಿ ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ಬಂದ ಮಾಹಿತಿಯಂತೆ ವಿಟ್ಲ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಕೇಪು ಗ್ರಾಮದ ಕೇಪು ಮುರಳೀಧರ ರೈ ಎಂಬವರ ಗದ್ದೆಯಲ್ಲಿ, […]

Continue Reading

ವಿಟ್ಲ: ಅಕ್ರಮ ಕೋಳಿ ಅಂಕ; ಪುತ್ತೂರು ಶಾಸಕರು ಸೇರಿ 16 ಮಂದಿ ವಿರುದ್ದ ಪ್ರಕರಣ ದಾಖಲು:

ದಿನಾಂಕ 20-12-2025 ರಂದು ಮಧ್ಯಾಹ್ನ ಸಮಯ, ಬಂಟ್ವಾಳ ಕೇಪು ಗ್ರಾಮದ ಕೇಪು ಎಂಬಲ್ಲಿ, ಮುರಳೀಧರ ರೈ ಎಂಬವರ ಗದ್ದೆಯಲ್ಲಿ ದಿನಾಂಕ 20-12-2025 ರಂದು ಕಾನೂನುಬಾಹಿರವಾಗಿ ಕೋಳಿ ಅಂಕ ಆಡಲು ಮುಂದಾಗುತ್ತಿರುವ ಬಗ್ಗೆ ವಿಟ್ಲ ಪೊಲೀಸರಿಗೆ ಬಂದ ಮಾಹಿತಿ ಮೇರೆಗೆ, ವಿಟ್ಲ ಪೊಲೀಸ್‌ ಠಾಣಾ ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ಕೋಳಿ ಅಂಕದ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಹಲವು ಜನರು ಕೋಳಿ‌ ಅಂಕಕ್ಕೆ ಬಳಸುವ ಕೋಳಿಗಳನ್ನು ಹಿಡಿದುಕೊಂಡು ಗುಂಪು ಸೇರಿರುವುದು ಕಂಡುಬಂದಿದ್ದು, ಅಲ್ಲಿ ಸೇರಿದ್ದ ಜನರಿಗೆ ಕಾನೂನುಬಾಹಿರ ಕೋಳಿ ಅಂಕದ ಬಗ್ಗೆ […]

Continue Reading

ಕೈಕಂಬ: ಖಾಸಗಿ ನರ್ಸಿಂಗ್ ಹೋಮ್ ವೈದ್ಯರ ಕರ್ತವ್ಯ ಲೋಪಕ್ಕೆ ಬಾಣಂತಿ ದಿವ್ಯ ನವೀನ್ ಮಗು ಬಲಿ.

ಮಗು ಕಳೆದುಕೊಂಡ ಬಾಣಂತಿ ಕುಟುಂಬಕ್ಕೆ ಗರಿಷ್ಟ ಪ್ರಮಾಣದ ನಷ್ಟ ಪರಿಹಾರ ಒದಗಿಸಿ ಕೊಡಲು ಜಿಲ್ಲಾಧಿಕಾರಿಗಳಿಗೆ ಡಿವೈಎಫ್ಐ ಮನವಿ ಕೈಕಂಬ: ಬಂಟ್ವಾಳ ಭಾಗದ ಅಮ್ಮುಂಜೆ ಪ್ರದೇಶದ ನಿವಾಸಿ ದಿವ್ಯ ನವೀನ್ ದಿನಾಂಕ 28-11-2025 ರಂದು ಹೆರಿಗೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಗುರುಪುರ-ಕೈಕಂಬದ ವಿಜಯ ನರ್ಸಿಂಗ್ ಹೋಮ್ ನಲ್ಲಿ ಒಳರೋಗಿಯಾಗಿ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾಗುವ ಮೊದಲು ಕಳೆದ ಒಂಬತ್ತು ತಿಂಗಳ ಎಲ್ಲಾ ಬಗೆಯ ಪರೀಕ್ಷೆಗಳು ಅದೇ ನರ್ಸಿಂಗ್ ಹೋಮ್ ನಲ್ಲಿ ನಡೆಸಿದ್ದರು ಆ ಎಲ್ಲಾ ಪರೀಕ್ಷೆಗಳು ಸಹಜವಾಗಿರುವ (NORMAL) ವರದಿಗಳೇ […]

Continue Reading

ಶತ-ಶತಮಾನಗಳ ಕತ್ತಲ ಬದುಕಿಗೆ ಮುಕ್ತಿ. ಆದಿವಾಸಿ ಮಲೆಕುಡಿಯ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ, ವಿದ್ಯುತ್ ಸಂಪರ್ಕವಾದ ಬಳಿಕ ಚಿಮಿಣಿ ಮುಕ್ತ ಗ್ರಾಮವಾಗಿದೆ

ಶತಮಾನಗಳಿಂದ ಕತ್ತಲೆಯಲ್ಲಿ ಬದುಕು ಸಾಗಿಸುತ್ತಿದ್ದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸುಲ್ಕೇರಿಮೊಗ್ರು ಗ್ರಾಮದ ಮಾಲಿಗೆಬೈಲು ಪ್ರದೇಶದ ಆದಿವಾಸಿ ಮಲೆಕುಡಿಯ 11 ಕುಟುಂಬಗಳಿಗೆ ಇಂದು ವಿದ್ಯುತ್ ಸಂಪರ್ಕ ಕಲ್ಪಿಸುವ ಅವರ ಬದುಕಿನಲ್ಲಿ ಅಭಿವೃದ್ಧಿಯ ಹೊಸ ಬೆಳಕು ಚೆಲ್ಲಿತು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸುಲ್ಕೇರಿಮೊಗ್ರು ಗ್ರಾಮದ ಮಾಲಿಗೆ , ಪಂಜಲ ಪ್ರದೇಶವು ರಸ್ತೆ, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ವಂಚಿತಗೊಂಡ ಪ್ರದೇಶವಾಗಿದೆ. ಇಲ್ಲಿ 11 ಮಲೆಕುಡಿಯ ಕುಟುಂಬಗಳು ಸೇರಿದಂತೆ ಒಟ್ಟು 27 ಕುಟುಂಬಗಳು ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲೆಯಲ್ಲಿ ಜೀವನ […]

Continue Reading