NSUI ಜಿಲ್ಲಾ ಕಾರ್ಯದರ್ಶಿ ಮತ್ತು ಕಡಬ NSUI ಉಸ್ತುವಾರಿ ಸ್ಥಾನಕ್ಕೆ ತೌಫೀಕ್ ನೆಲ್ಯಾಡಿ ರಾಜಿನಾಮೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳು ಮತ್ತು ಅದನ್ನು ತಡೆಯುವಲ್ಲಿ ಆಡಳಿತ ಹಾಗೂ ರಾಜ್ಯ ಗೃಹ ಇಲಾಖೆಯ ವೈಫಲ್ಯ ಮತ್ತು ಜಿಲ್ಲೆಯ ಮುಸ್ಲಿಮರ ಕಡೆಗಣನೆ ಹಾಗೂ ಅಮಾಯಕ ಯುವಕ ಅಬ್ದುಲ್ ರಹಿಮಾನ್ ಕೊಳ್ತಮಜಲು ಹತ್ಯೆ ಆರೋಪಿಗಳಿಗೆ ಕಠಿಣ ಕ್ರಮ ಮತ್ತು ಬಲಿಯಾದ ಸಹೋದರನ ಕುಟುಂಬಕ್ಕೆ ಸೂಕ್ತ ರೀತಿಯಲ್ಲಿ ಪರಿಹಾರ ಕಲ್ಪಿಸಿಕೊಡಬೇಕಾಗಿ ಅಗ್ರಹಿಸಿ ಕಾಂಗ್ರೆಸ್ ಪಕ್ಷದ ಎಲ್ಲಾ ಚಟುವಟಿಕೆಗಳಿಂದ ದೂರವಿದ್ದು, NSUI ಜಿಲ್ಲಾ ಕಾರ್ಯದರ್ಶಿ ಮತ್ತು ಕಡಬ NSUI ಉಸ್ತುವಾರಿ ಸ್ಥಾನಕ್ಕೆ ರಾಜಿನಾಮೆಯನ್ನು ನೀಡಿದ್ದೇನೆ ಎಂದು ತೌಫೀಕ್ […]

Continue Reading

ದಕ್ಷಿಣ ಕನ್ನಡ ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟದ ಎಲ್ಲಾ ನಾಯಕರು, ಜನಪ್ರತಿನಿಧಿಗಳು ನಾಳೆ ಕಾಂಗ್ರೆಸ್ ಪಕ್ಷಕ್ಕೆ ಸಾಮೂಹಿಕ ರಾಜಿನಾಮೆಗೆ ಸಿದ್ದತೆ

ದಿನಾಂಕ: 29-05-25 ರ ನಾಳೆ ಮಧ್ಯಾಹ್ನ 2.30 ರ ಸಮಯಕ್ಕೆ ಬೋಳಾರದಲ್ಲಿರುವ ಶಾದಿಮಹಲ್ ಹಾಲ್ ನ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಮುಸ್ಲಿಂ ಮುಖಂಡರ ತುರ್ತು ಸಭೆಯನ್ನು ಕರೆಯಲಾಗಿದ್ದು, ಈ ಸಭೆಗೆ ವಿಶೇಷವಾಗಿ ದಕ್ಷಿಣ ಕನ್ನಡ ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟದ ಎಲ್ಲಾ ನಾಯಕರು, ಜನಪ್ರತಿನಿಧಿಗಳು ಭಾಗವಹಿಸಿ, ದಕ್ಷಿಣ ಕನ್ನಡದಲ್ಲಿ ಅಲ್ಪ ಸಂಖ್ಯಾತ ಮುಸ್ಲಿಮರಿಗೆ ಆಗುವ ಅನ್ಯಾಯ, ದೌರ್ಜನ್ಯ ಹಾಗೂ ಗೃಹ ಇಲಾಖೆಯ ವೈಪಲ್ಯವನ್ನು ಖಂಡಿಸಿ,ಪಕ್ಷದಲ್ಲಿ ನಿರ್ವಹಿಸುತ್ತಿರುವ ವಿವಿಧ ಹುದ್ದೆ ಮತ್ತು ಜನಪ್ರಧಿನಿಧಿಗಳ ಸ್ಥಾನಕ್ಕೆ ಸಾಮೂಹಿಕ […]

Continue Reading

ಜಾಗರಣಾ ವೇದಿಕೆಯ ಭಾಷಣಕಾರ “ಪ್ರತೀಕಾರ ನಡೆಸಿಯೇ ಸಿದ್ದ” ಎಂದು ಘೋಷಿಸುವಾಗ ಬಿಜೆಪಿ ಶಾಸಕರು ವೇದಿಕೆಯ ಮುಂಭಾಗ ಆ “ಪ್ರತಿಜ್ಞೆ” ಗೆ ಅಂಗೀಕಾರ ಒದಗಿಸಿದರು

ಘಂಟಾಘೋಷವಾಗಿ ಕರೆ ನೀಡಿದ ಶ್ರೀಕಾಂತ್ ಶೆಟ್ಟಿಯ ಬಂಧನ ಯಾವಾಗ.? ಖಡಕ್ ಅಧಿಕಾರಿಗಳನ್ನು ಜಿಲ್ಲೆಗೆ ತನ್ನಿ” ಎಂದು ಹೋರಾಟ ನಡೆಸಿದರೆ, ಹಠಕ್ಕೆ ಬಿದ್ದು ರಕ್ಷಿಸಿದರು. ಕೈ ಮೀರಿದಾಗ “ಪೊಲೀಸರ ವೈಫಲ್ಯವೇ ಕಾರಣ ಎಂದು ಗೂಬೆ ಕೂರಿಸಿದರು: ಮುನೀರ್ ಕಾಟಿಪಳ್ಳ ಕರಾವಳಿ ಜಿಲ್ಲೆಗಳ ಮುಸ್ಲಿಂ ಸಮುದಾಯದ ಅಸಹಾಯಕತೆಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಸುಹಾಸ್ ಶೆಟ್ಟಿ (ಫಾಸಿಲ್ ಹಾಗು ದಲಿತ ಯುವಕ ಕೀರ್ತಿ ಹತ್ಯೆಯ ಆರೋಪಿ) ಕೊಲೆಗೆ ಪ್ರತೀಕಾರ ಎಂದು ಅಮಾಯಕ ಮುಸ್ಲಿಂ ಗೃಹಸ್ಥನೊಬ್ಬನನ್ನು ಸಂಘಪರಿವಾರ ಬೆಂಬಲಿತ ಕ್ರಿಮಿನಲ್ ಗಳ ಗುಂಪು […]

Continue Reading

ಬಿಜೆಪಿ, ಸಂಘಪರಿವಾರದ ದ್ವೇಷ ಭಾಷಣ, ಸರಕಾರದ ಬೇಜವಾಬ್ದಾರಿ ನಡೆ ಇಂದಿನ ಸ್ಥಿತಿಗೆ ಕಾರಣ : ಸಿಪಿಐಎಂ ಆರೋಪ

ಬಂಟ್ವಾಳ ತಾಲೂಕಿನ ಕೊಳ್ತಮಜಲಿನಲ್ಲಿ ನಡೆದಿರುವ ಮುಸ್ಲಿಂ ಯುವಕನ ಬರ್ಬರ ಕೊಲೆಯನ್ನು ಸಿಪಿಐಎಂ ಬಲವಾಗಿ ಖಂಡಿಸಿದೆ, ಜನತೆ ಪ್ರಚೋದನೆಗೆ ಬಲಿಯಾಗದೆ ಶಾಂತಿ ಕಾಪಾಡುವಂತೆ ಮನವಿ ಮಾಡಿದೆ. ಚಾಲಕ ವೃತ್ತಿಯ ಅಮಾಯಕ ಮುಸ್ಲಿಂ ಯುವಕನನ್ನು ಮತೀಯ ದ್ವೇಷ, ಪ್ರತೀಕಾರದ ನೆಪದಲ್ಲಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದ್ದು, ಈ ಕೊಲೆ ಹಾಗು ಕರಾವಳಿ ಜಿಲ್ಲೆಯ ಇಂದಿನ ಈ ಸ್ಥಿತಿಗೆ ಬಿಜೆಪಿ ಶಾಸಕರುಗಳು ಹಾಗೂ ಸಂಘಪರಿವಾರದ ದ್ವೇಷ ಭಾಷಣ, ಪ್ರಚೋದನೆಯ ರಾಜಕಾರಣ ಹಾಗೂ ಪರಿಸ್ಥಿತಿಯ ಗಂಭೀರತೆಯ ಅರಿವಿದ್ದೂ ಬೇಜವಾಬ್ದಾರಿ ನಡೆ […]

Continue Reading

ಸಾಲೆತ್ತೂರು ಬಳಿ ಗೋಲ್ಮಾಲ್ ಕಿರು ಸೇತುವೆ. ಕಮಿಷನ್ ದಂಧೆಗೆ ಬಲಿಯಾಯಿತೇ ಸರ್ಕಾರದ ಮೂರು ಕೋಟಿ ಅನುದಾನ.?

ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಸಾಲೆತ್ತೂರು ಕಟ್ಟತ್ತಿಲ ಮಠ ಎಂಬಲ್ಲಿ ತೀರಾ ಅವೈಜ್ಞಾನಿಕ ರೀತಿಯಲ್ಲಿ 2.54ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಿರು ಸೇತುವೆಯಿಂದಾಗಿ ಹೊಳೆ ಬದಿಯ ಕೃಷಿಕರು, ಪರಿಸರವಾಸಿಗಳು, ಶಾಲಾ ವಿದ್ಯಾರ್ಥಿಗಳು ಪ್ರತಿನಿತ್ಯ ಹಿಂಸೆ ಅನುಭವಿಸುವಂತಾಗಿದೆ. ಕೊಳ್ನಾಡು ಗ್ರಾಮದ ಕಟ್ಟತ್ತಿಲ ಮಠ ಎಂಬಲ್ಲಿ ಸಣ್ಣ ನೀರಾವರಿ ಇಲಾಖೆಯ 2.54ಕೊಟಿ ಅನುದಾನದಲ್ಲಿ ಕಿಂಡಿ ಅಣೆಕಟ್ಟು ಮತ್ತು ಕಿರು ಸೇತುವೆ ನಿರ್ಮಾಣ ಆಗಿತ್ತು. ಕಿರು ಸೇತುವೆಯ ಎರಡೂ ಬದಿಯಲ್ಲಿ ಸಾಕಷ್ಟು ತಡೆಗೋಡೆ ನಿರ್ಮಾಣ ಮಾಡಬೇಕಿತ್ತು. ಸೇತುವೆಯ ಎರಡೂ ಬದಿಗಳ ಸಾರ್ವಜನಿಕ ರಸ್ತೆ […]

Continue Reading

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ. ಚಾಲಕ ಸ್ಥಳದಲ್ಲೇ ಸಾವು; ಬಿ.ಸಿ.ರೋಡು-ಪರ್ಲಿಯಾ ಬಳಿ ದುರ್ಘಟನೆ

ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡು-ಕೈಕಂಬ ನಡುವಿನ ಪರ್ಲಿಯಾ ಬಳಿ ಇಂದು ಮುಂಜಾನೆ ಮಾರುತಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಕೊಳ್ನಾಡು ಗ್ರಾಮದ ನೂಜಿಬೈಲು ಭಂಡಾರದಮನೆ ನಿವಾಸಿ ಜಯರಾಮ್ (50) ಮೃತಪಟ್ಟ ವ್ಯಕ್ತಿ.ಜಯರಾಮ್ ಅವರು ತುಂಬೆ ಖಾಸಗಿ ಆಸ್ಪತ್ರೆಯ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದು, ಮುಂಜಾನೆ 4.30ರ ಸುಮಾರಿಗೆ ಮನೆಯಿಂದ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ […]

Continue Reading

ಬೆಳ್ಳಂಬೆಳಗ್ಗೆ ಕಾರಿಗೆ ಡಿಕ್ಕಿ ಹೊಡೆದ ಖಾಸಗಿ ಬಸ್. ಪುತ್ತೂರು ಮುರ ಬಳಿ ಭೀಕರ ಅಪಘಾತ, ಮೂವರಿಗೆ ಗಂಭೀರ

ಬೆಂಗಳೂರಿನಿಂದ ಪುತ್ತೂರು, ವಿಟ್ಲ, ಸಾಲೆತ್ತೂರು, ಮುಡಿಪು ಮಾರ್ಗ ಮೂಲಕ ಮಂಗಳೂರಿಗೆ ಬರುತ್ತಿದ್ದ ಮರ್ಸಿ ಹೆಸರಿನ ಖಾಸಗಿ ಬಸೊಂದು ಮುರ ಬಳಿ ಮುಂದುಗಡೆ ಚಲಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪುತ್ತೂರಿನಿಂದ ಕೆದಿಲ ಕಡೆಗೆ ಬರುತ್ತಿದ್ದ ಕಾರಿನಲ್ಲಿ ಮೂವರು ಪ್ರಯಾಣಿಕರಿದ್ದರು. ಬಸ್ ಡಿಕ್ಕಿ ಹೊಡೆದ ತೀವ್ರತೆಗೆ ಮೂವರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳ ವಿವರ ತಿಳಿದು ಬಂದಿಲ್ಲ. ಅಪಘಾತದ ತೀವ್ರತೆಗೆ ಕಾರು ಗುರುತು ಹಿಡಿಯಲಾರದಷ್ಟು ಜಖಂಗೊಂಡಿದೆ. ಮಾರ್ಸಿ ಬಸ್ ಚಾಲಕನ ಹುಚ್ಚಾಟವೇ ಅಪಘಾತಕ್ಕೆ ಕಾರಣ. ಮಿತಿ ಮೀರಿದ ವೇಗ, ಬೇಜವಾಬ್ದಾರಿ […]

Continue Reading

ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ಹೊನ್ನಾವರ ಕವಲಕ್ಕಿಯಲ್ಲಿ ಯಕ್ಷಗಾನ ವಿಚಾರ ಸಂಕಿರಣ, ಯಕ್ಷಗಾನ ಪ್ರದರ್ಶನ

ಯಕ್ಷಗಾನವನ್ನು ಮನೆಮನಕ್ಕೆ ತಲುಪಿಸಲು ಯಕ್ಷಗಾನ ಅಕಾಡೆಮಿ ಪ್ರಯತ್ನ : ಡಾ.ತಲ್ಲೂರು ಉಡುಪಿ : ಒಂದು ಕಾಲದಲ್ಲಿ ರಾಜಾಶ್ರಯ ಪಡೆದು ಮೆರೆದಿದ್ದ ಕನ್ನಡ ಕರಾವಳಿಯ ಶ್ರೀಮಂತ ಯಕ್ಷಗಾನ ಕಲೆಯನ್ನು ಪ್ರತೀ ಮನೆಮನಕ್ಕೆ ತಲುಪಿಸಿ ಗತಿಸಿದ ವೈಭವವನ್ನು ಪುನರ್ ಪಡೆಯಲು ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಯತ್ನಿಸಲಿದೆ ಎಂದು ಅಕಾಡೆಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಭಾನುವಾರ ಹೊನ್ನಾವರ ತಾಲೂಕಿನ ಕವಲಕ್ಕಿ ಶ್ರೀ ಮಹಾಸತಿ ದೇವಳದ ಸಭಾಂಗಣದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ವತಿಯಿಂದ ಹಮ್ಮಿಕೊಂಡ ಎರಡು ದಿನಗಳ […]

Continue Reading

ಕಾನೂನು ವಿವಿ ಪರೀಕ್ಷಾ ವಿಧಾನ ಬಗ್ಗೆ ವ್ಯಾಪಕ ಮೆಚ್ಚುಗೆ; ಕುಲಪತಿ ಸಂತಸ

KSLUನಲ್ಲಿ ಅಮೂಲಾಗ್ರ ಸುಧಾರಣೆಯಾಗಿದೆ; ಕುಲಪತಿ ಪ್ರೊ.ಬಸವರಾಜು ಉಡುಪಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಶಿಕ್ಷಣದಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದು, ಪರೀಕ್ಷಾ ವಿಧಾನದಲ್ಲೂ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕುಲಪತಿ ಪ್ರೊ.ಸಿ.ಬಸವರಾಜು ತಿಳಿಸಿದ್ದಾರೆ. ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ನಡೆದ ವಾರ್ಷಿಕ ದಿನ ಮತ್ತು ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದರು. ಪ್ರತಿಭಾವಂತ ಕಾನೂನು ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿದ ಅವರು, ಶೈಕ್ಷಣಿಕ ಸಾಧನೆಗೆ ಪೂರಕವಾದ ಮಾತುಗಳನ್ನಾಡಿ ಗಮನಸೆಳೆದರು. ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯವೆನಿಸಿರುವ ಕರ್ನಾಟಕ ರಾಜ್ಯ ಕಾನೂನು ವಿವಿ […]

Continue Reading

ಪಿಲಿಕುಳ ಅಕ್ರಮ, ಅವ್ಯವಹಾರ, ಟೆಂಡರ್ ಪ್ರಕ್ರಿಯೆಯಲ್ಲಿ ಲೋಪ; ಮಂಗಳೂರು ಲೋಕಾಯುಕ್ತ ದಾಳಿ

ಮಂಗಳೂರು: ಪಿಲಿಕುಳ ನಿಸರ್ಗಧಾಮಕ್ಕೆ ಶುಕ್ರವಾರ ದಿಢೀರ್ ಲೋಕಾಯುಕ್ತ ಪೊಲೀಸರಿಂದ ದಾಳಿ ನಡೆದಿದೆ. ಲೋಕಾಯುಕ್ತ ಪೊಲೀಸರಿಗೆ ಇಲ್ಲಿನ ಆಡಳಿತದಲ್ಲಿ ಭಾರೀ ಲೋಪದೋಷ ಕಂಡು ಬಂದಿದೆ ಎನ್ನಲಾಗಿದೆ. ಮಂಗಳೂರು ಲೋಕಾಯುಕ್ತ ಉಪಾಧೀಕ್ಷಕರಾದ ಡಾ.ಗಾನ ಪಿ. ಕುಮಾರ್, ಸುರೇಶ್ ಕುಮಾರ್ ಪಿ. ಹಾಗೂ ಪೊಲೀಸ್ ನಿರೀಕ್ಷಕರಾದ ಭಾರತಿ ಜಿ., ಚಂದ್ರಶೇಖರ್ ಕೆ.ಎನ್. ಅವರು ಸಿಬ್ಬಂದಿಯೊಂದಿಗೆ ಮಂಗಳೂರಿನ ಪಿಲಿಕುಳಕ್ಕೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಡಳಿತದಲ್ಲಿ ಸಾಕಷ್ಟು ಲೋಪದೋಷಗಳು ಕಂಡುಬಂದಿದೆ. ಪಿಲಿಕುಳ ಜೈವಿಕ ಉದ್ಯಾನವನದಿಂದ […]

Continue Reading