ಮುನೀರ್ ಕಾಟಿಪಳ್ಳ ಮತ್ತು ಹಿರಿಯ ಪತ್ರಕರ್ತ ಅಬ್ದುಲ್ ಸಲಾಮ್ ಪುತ್ತಿಗೆ ಇವರ ವಿರುದ್ಧ ಪುತ್ತೂರು ವೈದ್ಯಕೀಯ ಸಂಘ ನೀಡಿರುವ ಖಾಸಾಗಿ ದೂರು, ಎಫ್ ಐ ಆರ್ ಪ್ರಕರಣ ಖಂಡನೀಯ: ಸಿಪಿಐ(ಎಂ) ದ.ಕ

ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮತ್ತು ಹಿರಿಯ ಪತ್ರಕರ್ತ, ಚಿಂತಕ ಅಬ್ದುಲ್ ಸಲಾಮ್ ಪುತ್ತಿಗೆ ಇವರ ವಿರುದ್ಧ ಪುತ್ತೂರು ವೈದ್ಯಕೀಯ ಸಂಘ (ಐಎಂಎ)ದ ಕಾರ್ಯದರ್ಶಿ ಯವರಿಂದ ನ್ಯಾಯಾಲಯದ ಮೂಲಕ ಎಫ್ ಐ ಆರ್ ದಾಖಲಾತಿ ಹತಾಶೆಯ ಪರಮಾವಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಧೋರಣೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾಕ್ರ್ಸ್‍ವಾದಿ) ದ.ಕ ಜಿಲ್ಲಾ ಸಮಿತಿ ತೀವ್ರವಾಗಿ ಟೀಕಿಸಿದೆ. ಭಾರತೀಯ ವೈದ್ಯಕೀಯ ಸಂಘ ಪುತ್ತೂರು ಇದರ ಘಟಕ ಕಾರ್ಯದರ್ಶಿಯವರು ಪ್ರಾರಂಭದಲ್ಲಿ ಸ್ಥಳಿಯ ಪೊಲೀಸ್ ಠಾಣೆಗೆ ದೂರು […]

Continue Reading

ಕಾನೂನು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಯತ್ನ ಪ್ರಕರಣ; ಅಭಿಯೋಜಕರಾಗಿ ಕೆ. ಶಿವಪ್ರಸಾದ್ ಆಳ್ವ ನೇಮಕ

ಮಂಗಳೂರಿನ ನ್ಯಾಯವಾದಿ ಕೆ.ಎಸ್.ಎನ್. ರಾಜೇಶ್ ವಿರುದ್ಧ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಪರ ವಾದಿಸಲು ವಿಶೇಷ ಸರಕಾರಿ ಅಭಿಯೋಜಕರಾಗಿ ಕೆ. ಶಿವಪ್ರಸಾದ್ ಆಳ್ವರನ್ನು ಸರಕಾರ ನೇಮಕಗೊಳಿಸಿದೆ. ಮಂಗಳೂರಿನಲ್ಲಿ ಕಾನೂನು ವಿದ್ಯಾರ್ಥಿನಿಯಾಗಿದ್ದ ಯುವತಿ ಕೆ.ಎಸ್.ಎನ್ ರಾಜೇಶ್ ರವರ ಕರಂಗಲ್ಪಾಡಿಯ ಕಚೇರಿಯಲ್ಲಿ ತರಬೇತಿಗೆ ಸೇರಿದ್ದಳು. ಈ ಸಮಯದಲ್ಲಿ ವಕೀಲ ರಾಜೇಶ್ ರವರು ತನ್ನ ಜೊತೆ ಸೆಕ್ಸ್ ನಡೆಸಲು ಸಹಕರಿಸುವಂತೆ ಯುವತಿಯನ್ನು ಒತ್ತಾಯಿಸುತ್ತಿದ್ದರು. ತನ್ನ ಛೇಂಬರಿಗೆ ಕರೆದು ಅಸಭ್ಯವಾಗಿ […]

Continue Reading

ಬೆಂಗಳೂರಿನಲ್ಲಿ ಕೆರೆಗಳ ಒತ್ತುವರಿ, ಅವೈಜ್ಞಾನಿಕ ಕಾಮಗಾರಿ, ಅಕ್ರಮ ಕಟ್ಟಡ, ಮೂಲಭೂತ ಸೌಕರ್ಯದ ಕೊರತೆಯೇ ಇಂದಿನ ಸ್ಥಿತಿಗೆ ಕಾರಣ.

ಬೆಂಗಳೂರು ಗಾರ್ಡನ್ ಸಿಟಿ ಬದಲಿಗೆ ಗಾರ್ಬೇಜ್ ಸಿಟಿ ಎಂಬ ಮಾತಿಗೆ ಪೂರಕವಾದಂತಿದೆ. ✍️. ಕೆ. ಎ ಹನೀಫ್ ಬೆಂಗಳೂರಿನಲ್ಲಿ ಕೆರೆಗಳ ಒತ್ತುವರಿ ಸೇರಿದಂತೆ ಅವೈಜ್ಞಾನಿಕ, ಅಕ್ರಮ ಕಟ್ಟಡಗಳಿಂದ ಕೂಡಿ ಚರಂಡಿಗಳ ಮೂಲಕ ಸರಿಯಾಗಿ ನೀರಿನ ಹರಿಯುವಿಕೆ ಇಲ್ಲದೆ ಪ್ರತಿ ಮಳೆಗಾಲದ ಸಂದರ್ಭ ಬೆಂಗಳೂರಿನ ಪರಿಸ್ಥಿತಿ ಶೋಚನೀಯವಾಗಿದ್ದು, ಇಂದು ಬೆಂಗಳೂರು ಗಾರ್ಡನ್ ಸಿಟಿ ಬದಲಿಗೆ ಗಾರ್ಬೇಜ್ ಸಿಟಿ ಎಂಬ ಮಾತಿಗೆ ಪೂರಕವಾದಂತಿದೆ. ಹಾಗೆಯೇ ದೇಶದಲ್ಲಿ ನಮ್ಮ ರಾಜ್ಯ ಹೆಚ್ಚಿನ ತೆರಿಗೆ ನೀಡುವ ರಾಜ್ಯಗಳಲ್ಲಿ ಒಂದಾಗಿದೆ. ಕೇಂದ್ರ ಸರ್ಕಾರದಲ್ಲಿ ಹೆಚ್ಚಿನ […]

Continue Reading

ಬ್ಯಾರಿ ಜಾನಪದ ಕಥೆಗಳ ಇಂಗ್ಲಿಷ್ ಅನುವಾದಿತ ಕೃತಿ ಬಿಡುಗಡೆ

ಬ್ಯಾರಿ ಭಾಷೆಯಲ್ಲಿ ಪ್ರಕಟಗೊಂಡ ಜಾನಪದ ಕತೆಗಳ ಸಂಕಲನವೊಂದು ಇದೇ ಮೊದಲ ಬಾರಿಗೆ ಇಂಗ್ಲಿಷ್‌ಗೆ ಅನುವಾದಗೊಂಡಿವೆ. ಕರಾವಳಿ ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಲೆಸಿರುವ ಬ್ಯಾರಿ ಮುಸ್ಲಿಂ ಜನಾಂಗಕ್ಕೆ ಸುಮಾರು 1400ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಈ ಜನರು ಆಡುವ ಮಾತೃಭಾಷೆಯು ಬ್ಯಾರಿಯಾಗಿದೆ. ಈ ಭಾಷೆಯ ಅಭಿವೃದ್ಧಿಗಾಗಿ 2007ರಲ್ಲೇ ರಾಜ್ಯ ಸರಕಾರ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿದೆ. 2017ರಲ್ಲೇ ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿ ಬ್ಯಾರಿ ಅಧ್ಯಯನ ಪೀಠವನ್ನು ಸ್ಥಾಪಿಸಿದೆ. ಇಂತಹ ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿ, […]

Continue Reading

ಕುಡುಪು ಮಾಬ್ ಲಿಂಚಿಂಗ್ ಪ್ರಕರಣದ ಕುರಿತು ನ್ಯಾಯಕ್ಕೆ ಆಗ್ರಹಿಸಿ ಕೇರಳ ಮುಖ್ಯಮಂತ್ರಿ ಭೇಟಿಯಾದ “ಜಸ್ಟಿಸ್ ಫಾರ್ ಅಶ್ರಫ್ ಯಾಕ್ಷನ್ ಕಮಿಟಿ” ಮತ್ತು ಸಿಪಿಐಎಂ ನಾಯಕರು

ಕೇರಳದ ವಯನಾಡ್ ನ ಸಿಪಿಐಎಂ ಪಕ್ಷಕ್ಕೆ ಸಾಧ್ಯವಾಗುವುದು, ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕತ್ವಕ್ಕೆ ಯಾಕೆ ಸಾಧ್ಯವಾಗುವುದಿಲ್ಲ: ಮುನೀರ್ ಕಾಟಿಪಳ್ಳ ಮಂಗಳೂರಿನಲ್ಲಿ ಮತಾಂಧ ಮನಸ್ಥಿತಿಯ ಗುಂಪಿನಿಂದ ಸಾಮೂಹಿಕ ಹಲ್ಲೆಗೊಳಗಾಗಿ ಮೃತ ಪಟ್ಟ ವಯನಾಡ್ ಅಶ್ರಫ್ ಗುಂಪು ಹತ್ಯೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ವಯನಾಡ್ ನಲ್ಲಿ ಹೋರಾಟ ಬಲಗೊಳ್ಳುತ್ತಿದೆ. ಇಂದು (ಮೇ 21, 2025) ಕೇರಳ ಸಿಪಿಐಎಂ ಸರಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಯನಾಡ್ ಜಿಲ್ಲಾ ಪ್ರವಾಸದಲ್ಲಿ ಇದ್ದರು. ಅವರ ವಯನಾಡ್ ಪ್ರವಾಸ ನಿಗದಿಯಾದ ತಕ್ಷಣವೆ, ಸಿಪಿಐಎಂ ವಯನಾಡ್ ಜಿಲ್ಲಾ […]

Continue Reading

ಕಂತ್ರಿ ಬ್ಯಾರಿಗಳು” ಎಂದಿದ್ದ ಶಾಸಕ ಹರೀಶ್ ಪೂಂಜಾ ವಿರುದ್ದ ದಾಖಲಾದ ಎಫ್ಐಆರ್ ರದ್ದತಿ ಕೋರಿದ್ದ ಅರ್ಜಿ ಇಂದು ವಿಚಾರಣೆ ನಡೆಯಿತು

ಹರೀಶ್ ಪೂಂಜಾ ಓರ್ವ ಹೆಬಿಚ್ಯುವಲ್ ಅಫೆಂಡರ್ ದ.ಕ ಜಿಲ್ಲೆಯ ಸೌಹಾರ್ದ ಜನತೆಯ ಪರವಾಗಿ ಉಚಿತವಾಗಿ ವಾದ ಮಂಡಿಸಿದ ಹಿರಿಯ ವಕೀಲ ಎಸ್. ಬಾಲನ್ ✍️. ನವೀನ್ ಸೂರಿಂಜೆ, ಪತ್ರಕರ್ತರು “ಕಂತ್ರಿ ಬ್ಯಾರಿಗಳು” ಎಂದಿದ್ದ ಶಾಸಕ ಹರೀಶ್ ಪೂಂಜಾ ವಿರುದ್ದ ದಾಖಲಾದ ಎಫ್ಐಆರ್ ರದ್ದತಿ ಕೋರಿದ್ದ ಅರ್ಜಿ ವಿಚಾರಣೆ ಇಂದು ನಡೆಯಿತು‌. ಹಿರಿಯ ವಕೀಲ ಎಸ್ ಬಾಲನ್ ಅವರು ದೂರುದಾರ ಬಿ ಎಸ್ ಇಬ್ರಾಹಿಂ ಪರವಾಗಿ ವಕಾಲತ್ತು ಹಾಕಿ ವಾದ ಮಂಡಿಸಿದರು. ಅದಕ್ಕೂ ಮೊದಲು ನಾವು ಒಂದು ಸಣ್ಣ […]

Continue Reading

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿ‌ ನೌಷಾದ್ ಮೇಲೆ ಮಂಗಳೂರು ಜೈಲಿನಲ್ಲಿ ಹಲ್ಲೆ. ಅಪಾಯದಿಂದ ಪಾರು.

ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿ‌ ನೌಷಾದ್ ಮೇಲೆ ಸೋಮವಾರ ಸಂಜೆ ಹಲ್ಲೆಗೆ ಯತ್ನ ನಡೆದಿದೆ. ನೌಷಾದ್ ಅಪಾಯದಿಂದ ಪಾರಾಗಿದ್ದಾನೆ. ಸೋಮವಾರದಂದು ನೌಷಾದ್ ನ ಪೊಲೀಸ್ ಕಸ್ಟಡಿ ಅಂತ್ಯವಾದ ಕಾರಣ ಪೊಲೀಸರು ಆತನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯ ನೌಶಾದ್ ನಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿದ ಹಿನ್ನಲೆಯಲ್ಲಿ ಆತನನ್ನು ಮೈಸೂರು ಜೈಲಿಗೆ ಶಿಫ್ಟ್ ಮಾಡಲು ಪೊಲೀಸರು ಉದ್ದೇಶಿಸಿದ್ದರು. ಈ ಮದ್ಯೆ ಮಂಗಳೂರು ಜೈಲಿನಲ್ಲಿ ಯಾರನ್ನೋ ನೋಡಬೇಕು ಎಂದು ನೌಷಾದ್ ಹೇಳಿದ್ದ ಎನ್ನಲಾಗಿದೆ. […]

Continue Reading

ವಿದ್ಯಾರ್ಥಿಗಳ ಕುಚ್..ಕುಚ್.. ವಿದ್ಯಾರ್ಥಿನಿ ಗರ್ಭಿಣಿ, ಠಾಣಾ ಮೆಟ್ಟಿಲೇರಿದ ಪೋಷಕರು, ದೂರು ದಾಖಲು.

ಪುತ್ತೂರು: ಎಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ನಡುವಿನ ಸುದೀರ್ಘ ಕಾಲದ ಪ್ರೇಮ ವಿವಾದಾತ್ಮಕ ತಿರುವು ಪಡೆದಿದೆ. ಇದೀಗ ವಿದ್ಯಾರ್ಥಿ ನಿ ಗರ್ಭವತಿಯಾಗಿದ್ದು ಮನೆಯವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಪುತ್ತೂರಿನ ಪ್ರಮುಖ ರಾಜಕೀಯ ಪಕ್ಷವೊಂದರ ಮುಖಂಡರ ಮಗ ಎಂಜಿನಿಯರಿಂಗ್ ಓದುತ್ತಿದ್ದು, ಅನೇಕ ವರ್ಷಗಳಿಂದ ವಿದ್ಯಾರ್ಥಿನಿ ಒಬ್ಬಳನ್ನು ಪ್ರೀತಿಸುತ್ತಿದ್ದ ಎಂದು ತಿಳಿದು ಬಂದಿದೆ. ಇಬ್ಬರ ಪ್ರೀತಿ, ಪ್ರೇಮವು ಪ್ರಣಯಕ್ಕೆ ತಿರುಗಿದ ಪರಿಣಾಮ ವಿದ್ಯಾರ್ಥಿನಿ ಗರ್ಭಧರಿಸಿದ್ದಾಳೆ. ವಿಷಯ ತಿಳಿಯುತ್ತಲೇ ಹುಡುಗಿ ಕಡೆಯವರು ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.ದೂರು ಸ್ವೀಕರಿಸಿದ ಪೊಲೀಸರು […]

Continue Reading

ಸ್ಪರ್ಧಾತ್ಮಕ ಪರೀಕ್ಷೆ ಮತ್ತು ವಿವಿಧ ವೃತ್ತಿ ಪರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಮ್ಯೂನಿಟಿ ಸೆಂಟರ್ ನ ಕೌನ್ಸಿಲ್ ಸದಸ್ಯ ವಿದ್ಯಾರ್ಥಿಗಳಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮ

ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಎಚ್.ಐ.ಎಫ್ ಮತ್ತು ಹಿಕ್ಮಾ ಎಜುಕೇಶನ್ ಫೌಂಡೇಶನ್ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಕೆರಿಯರ್ ಕೌನ್ಸಿಲಿಂಗ್ ಕಾರ್ಯಕ್ರಮದಲ್ಲಿ ಪುತ್ತೂರು ಕಮ್ಯೂನಿಟಿ ಸೆಂಟರ್ ನ ಕೌನ್ಸಿಲ್ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಕಲಿಕಾ ಕೌಶಲ್ಯ ಮತ್ತು ವೃತ್ತಿ ಮಾರ್ಗದರ್ಶನ ನೀಡಿದರು. ನೂರಾರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದರು. ಪಿಯುಸಿ ಫಲಿತಾಂಶ ಬಂದಾಗ ಎಜುಕೇಶನ್ ಮೇಳದಲ್ಲಿ ಸುಮಾರು 800 ಕ್ಕಿಂತ ಹೆಚ್ಚು ಪಿಯುಸಿ ವಿದ್ಯಾರ್ಥಿಗಳಿಗೆ ಸಾಮೂಹಿಕ ಕೌನ್ಸಿಲಿಂಗ್ ಮಾಡಿದ್ದ ಕೌನ್ಸಿಲ್ ಸದಸ್ಯರು, ಕಳೆದ ವಾರ […]

Continue Reading

ಮುಸ್ಲಿಂ ಯುವಕನೋರ್ವನಿಗೆ ನಾಲ್ಕು ಮಂದಿಯ ತಂಡವೊಂದು ಚೂರಿ ಇರಿದು ಪರಾರಿ

ಬಂಟ್ವಾಳ : ಮುಸ್ಲಿಂ ಯುವಕನೋರ್ವನಿಗೆ ನಾಲ್ಕು ಮಂದಿಯ ತಂಡವೊಂದು ಚೂರಿಯಿಂದ ಇರಿದು ಪರಾರಿಯಾದ ಘಟನೆ ಪಾಣೆಮಂಗಳೂರು ಸಮೀಪದ ಅಕ್ಕರಂಗಡಿ ಬಸ್ಸು ನಿಲ್ದಾಣ ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ. ಚೂರಿ ಇರಿತಕ್ಕೊಳಗಾದವರನ್ನು ಇಲ್ಲಿನ ನಿವಾಸಿ, ಪೈಂಟರ್ ವೃತ್ತಿಯ ಹಮೀದ್ ಯಾನೆ ಅಮ್ಮಿ ಎಂದು ಗುರುತಿಸಲಾಗಿದೆ. ಇರಿತದಿಂದ ಹಮೀದ್ ಅವರ ಕೈಗೆ ಗಂಭೀರ ಗಾಯವಾಗಿದ್ದು, ಅವರನ್ನು ಸ್ಥಳೀಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. […]

Continue Reading